ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಆಂಧ್ರ ಸರ್ಕಾರ ರಮ್ಮಿ, ಪೋಕರ್ ಆನ್ಲೈನ್ ಗೇಮ್ ಅನ್ನು ಬ್ಯಾನ್ ಮಾಡಿತ್ತು. ಜನರು ಆನ್ಲೈನ್ ಗೇಮ್ಗಳ ಜೂಜಾಟಕ್ಕೆ ಸಿಲುಕದಂತೆ ಈ ನಿರ್ಧಾರವನ್ನು ಕೈಗೊಂಡಿತ್ತು. ಇದೀಗ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರ ಮತ್ತೆ 132 ಆನ್ಲೈನ್ ಗೇಮಿಂಗ್ ವೆಬ್ಸೈಟ್ಗಳನ್ನು ತಮ್ಮ ರಾಜ್ಯದಲ್ಲಿ ನಿಷೇಧ ಮಾಡಲು ಮುಂದಾಗಿದೆ.
ಗೇಮಿಂಗ್ ವೆಬ್ಸೈಟ್ಗಳಾದ EA.com, ಮಿನಿಕ್ಲಿಪ್ ಮತ್ತು ಜಪಾಕ್ ಸೇರಿದಂತೆ 130 ವೆಬ್ಸೈಟ್ಗಳನ್ನು ನಿರ್ಬಂಧಿಸುವಂತೆ ಜಗನ್ ಮೋಹನ್ ರೆಡ್ಡಿ ಅವರು ಕೇಂದ್ರ ಸಚಿವ ಆರ್ಎಸ್ ಪ್ರಸಾದ್ ಅವರಲ್ಲಿ ಕೋರಿದ್ದಾರೆ.
ಐಟಿ ಮಿನಿಸ್ಟರ್ಗೆ ಪತ್ರ ಬರೆದಿರುವ ಜಗನ್ ಮೋಹನ್ ರೆಡ್ಡಿ, ಹಲವಾರು ಗೇಮಿಂಗ್ ಸೈಟ್ಗಳಿದ್ದು, ಅದರಲ್ಲಿ ಕೆಲವು ಆನ್ಲೈನ್ ಮೂಲಕ ಜೂಜಾಟ ನಡೆಸುತ್ತಿವೆ. ಇನ್ನು EA.com ಅತಿದೊಡ್ಡ ಗೇಮಿಂಗ್ ಡೆವಲಪರ್ ಆಗಿದೆ. ಇದು ಜೂಜಾಟಕ್ಕೆ ಪ್ರಚೋದನೆ ನೀಡದಿದ್ದರು ಸಿರೀಸ್ ಸ್ಪೊರ್ಟ್ಸ್ ಗೇಮ್ಸ್ಗಳಾದ ಫೀಪಾ, ಎನ್ಹೆಚ್ಎಲ್ ಮತ್ತು ಮೊಬೈಲ್ ಗೇಮ್ಗಳಾದ ಬೆಜೆವಲ್ಡ್ ಮತ್ತು ಸಿಮ್ಸಿಟಿ ಆಟಗಳಿಗೆ ಹೆಸರುವಾಸಿಯಾಗಿದೆ.
ಕಳೆದ ಜೂನ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಚೀನಾ ಮೂಲದ 224 ಆ್ಯಪ್ಗಳನ್ನು ಭಾರತದಲ್ಲಿ ಬ್ಯಾನ್ ಮಾಡಿತ್ತು. ಆಂತರಿಕ ಮತ್ತು ಬಾಹ್ಯ ದೃಷ್ಠಿಕೋನದಿಂದಾಗಿ ಈ ನಿರ್ಣಯವನ್ನು ಕೈಗೊಂಡಿತ್ತು. ಇದೀಗ ಆಂಧ್ರ ಪ್ರದೇಶದ ಮುಖ್ಯಮಂತ್ರಿ 132 ಗೇಮಿಂಗ್ ವೆಬ್ಸೈಟ್ಗಳನ್ನು ಮತ್ತು ಆನ್ಲೈನ್ ಜೂಜಾಟಕ್ಕೆ ಪ್ರೇರಿಪಿಸುವ ಗೇಮ್ಗಳನ್ನು ಬ್ಯಾನ್ ಮಾಡಬೇಕು ಎಂದು ಪತ್ರಬರೆದಿದ್ದಾರೆ. ಯುವಜನರು ಸ್ಮಾರ್ಟ್ಫೋನ್ನಲ್ಲಿ ಮತ್ತು ಕಂಪ್ಯೂಟರ್ಗಳ ಮೂಲಕ ಜೂಜಾಟ ಮತ್ತು ಬೆಟ್ಟಿಂಗ್ನಂತಹ ದುಷ್ಕೃತ್ಯದಲ್ಲಿ ತೊಡಗಿಸಿಕೊಳ್ಳಲು ಇದು ಮೂಲಕ ಕಾರಣವಾಗಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ