ಅತ್ಯಾಚಾರ ಅಪರಾಧಿಗೆ 21 ದಿನದಲ್ಲಿ ಶಿಕ್ಷೆ ವಿಧಿಸುವ ದಿಶಾ ಕಾನೂನಿಗೆ ಆಂಧ್ರಪ್ರದೇಶ ವಿಧಾನಸಭೆ ಒಪ್ಪಿಗೆ

ಅಷ್ಟೇ ಅಲ್ಲದೇ, ಮಹಿಳೆಯರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಕಾಮೆಂಟ್​ ಮಾಡಿದರೂ ಅವರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮೊದಲ ಬಾರಿಗೆ ಈ ಅಪರಾಧ ಎಸಗುವವರಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ಎರಡನೇ ಬಾರಿ ಮಾಡುವವರಿಗೆ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗುತ್ತದೆ.

HR Ramesh | news18
Updated:December 13, 2019, 4:33 PM IST
ಅತ್ಯಾಚಾರ ಅಪರಾಧಿಗೆ 21 ದಿನದಲ್ಲಿ ಶಿಕ್ಷೆ ವಿಧಿಸುವ ದಿಶಾ ಕಾನೂನಿಗೆ ಆಂಧ್ರಪ್ರದೇಶ ವಿಧಾನಸಭೆ ಒಪ್ಪಿಗೆ
ಅಷ್ಟೇ ಅಲ್ಲದೇ, ಮಹಿಳೆಯರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಕಾಮೆಂಟ್​ ಮಾಡಿದರೂ ಅವರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮೊದಲ ಬಾರಿಗೆ ಈ ಅಪರಾಧ ಎಸಗುವವರಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ಎರಡನೇ ಬಾರಿ ಮಾಡುವವರಿಗೆ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗುತ್ತದೆ.
  • News18
  • Last Updated: December 13, 2019, 4:33 PM IST
  • Share this:
ಹೈದರಾಬಾದ್: ಅತ್ಯಾಚಾರ ಆಪಾದಿತರು, ಮಹಿಳೆಯರ ಮೇಲೆ ಅಪರಾಧ ಕೃತ್ಯ ಎಸಗುವವರಿಗೆ 21 ದಿನದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಪಡಿಸುವ ಮಸೂದೆಗೆ ಆಂಧ್ರಪ್ರದೇಶ ವಿಧಾನಸಭೆ ಶುಕ್ರವಾರ ಅಂಗೀಕಾರ ನೀಡಿದೆ. ಪಕ್ಕದ ತೆಲಂಗಾಣ ರಾಜ್ಯದಲ್ಲಿ ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ನಡೆದ ಒಂದು ವಾರದ ಬಳಿಕ ಆಂಧ್ರ ಪ್ರದೇಶ ದಿಶಾ ಮಸೂದೆ ಹೆಸರಿನಲ್ಲಿ ಕಾನೂನು ಜಾರಿಗೆ ಮುಂದಾಗಿದೆ. 

ಆಂಧ್ರಪದೇಶ ಅಪರಾಧ ಕಾನೂನು (ತಿದ್ದುಪಡಿ) ಕಾಯ್ದೆಯೂ ಅತ್ಯಾಚಾರ ಹಾಗೂ ಆ್ಯಸಿಡ್ ದಾಳಿ ಪ್ರಕರಣಗಳಲ್ಲಿ ಅಪರಾಧಿ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ತ್ವರಿತವಾಗಿ ವಿಚಾರಣೆ ನಡೆಸಿ, ತೀರ್ಪು ನೀಡಲಿದೆ. ಈ ಬಗ್ಗೆ ಕಳೆದ ವಾರ ಮುಖ್ಯಮಂತ್ರಿ ಜಗನ್ ರೆಡ್ಡಿ ಘೋಷಿಸಿದ್ದರು. 14 ದಿನಗಳಲ್ಲಿ ವಿಚಾರಣೆ ಪೂರ್ಣಗೊಂಡು, 21 ದಿನದಲ್ಲಿ ತೀರ್ಪು ಹೊರಬೀಳಲಿದೆ.

ಕಳೆದ ವಾರ ಹೈದರಾಬದ್​ನಲ್ಲಿ ಪಶುವೈದ್ಯೆ ಮೇಲೆ ನಾಲ್ವರು ಕಾಮುಕರು ಅತ್ಯಾಚಾರ ಎಸಗಿ, ಕೊಂದು ಬಳಿಕ ಆಕೆಯ ದೇಹವನ್ನು ಸುಟ್ಟಿದ್ದರು. ಬಳಿಕ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಸ್ಥಳ ಮಹಜರಿಗೆ ಕರೆದೊಯ್ದದಾಗ ತಪ್ಪಿಸಿಕೊಳ್ಳಲು ಯತ್ನಿಸಿದಾಗ ನಾಲ್ವರನ್ನು ಎನ್​ಕೌಂಟರ್​ ಮಾಡಿದ್ದರು. ಈ ಎಲ್ಲಾ ಬೆಳವಣಿಗಳು ನಡೆದ ಒಂದು ವಾರದ ಬಳಿಕ ಆಂಧ್ರ ಪ್ರದೇಶ ಸರ್ಕಾರ ಈ ಕಾನೂನು ಜಾರಿಗೆ ಮುಂದಾಗಿದೆ.

ಆಂಧ್ರ ಪ್ರದೇಶ ಸಚಿವ ಸಂಪುಟ ಮಹಿಳಾ ಮತ್ತು ಮಕ್ಕಳ ಅಪರಾಧ ತಡೆ ವಿಶೇಷ ನ್ಯಾಯಾಲಯ ಕಾಯ್ದೆಗೂ ಅನುಮೋದನೆ ನೀಡಿದೆ. ಈ ಮೂಲಕ ಮಹಿಳೆ ಮತ್ತು ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ಪ್ರತಿ ಜಿಲ್ಲೆಯಲ್ಲಿ ವಿಶೇಷ ನ್ಯಾಯಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಇದನ್ನು ಓದಿ: ನಿರ್ಭಯಾ ಕೇಸ್​​: ಮರಣದಂಡನೆ ಪಶ್ನಿಸಿ ಅತ್ಯಾಚಾರಿ ಸಲ್ಲಿಸಿದ ಮೇಲ್ಮನವಿ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಸಂತ್ರಸ್ತೆ ತಾಯಿ

ಅಷ್ಟೇ ಅಲ್ಲದೇ, ಮಹಿಳೆಯರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಕಾಮೆಂಟ್​ ಮಾಡಿದರೂ ಅವರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮೊದಲ ಬಾರಿಗೆ ಈ ಅಪರಾಧ ಎಸಗುವವರಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ಎರಡನೇ ಬಾರಿ ಮಾಡುವವರಿಗೆ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗುತ್ತದೆ.
First published: December 13, 2019, 4:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading