ಎರಡು ಗಂಟೆಯಲ್ಲಿ ಒಂಬತ್ತು ಬಾರಿ ಕಂಪಿಸಿದ ಭೂಮಿ; ಆತಂಕದಲ್ಲಿ ಅಂಡಮಾನ್-ನಿಕೋಬಾರ್ ಜನತೆ

ಭೂಕಂಪದ ವೇಳೆ ಯಾವುದೇ ಹಾನಿ ಉಂಟಾದ ಬಗ್ಗೆ ವರದಿಯಾಗಿಲ್ಲ. ಇದು ಲಘು ಭೂಕಂಪವಾದ್ದರಿಂದ ಯಾವುದೇ ಕಟ್ಟಡಗಳು ನೆಲಕ್ಕೆ ಉರುಳಿಲ್ಲ. ಪ್ರಾಣ ಹಾನಿ ಕೂಡ ಉಂಟಾಗಿಲ್ಲ.

news18
Updated:April 1, 2019, 1:17 PM IST
ಎರಡು ಗಂಟೆಯಲ್ಲಿ ಒಂಬತ್ತು ಬಾರಿ ಕಂಪಿಸಿದ ಭೂಮಿ; ಆತಂಕದಲ್ಲಿ ಅಂಡಮಾನ್-ನಿಕೋಬಾರ್ ಜನತೆ
ಸಾಂದರ್ಭಿಕ ಚಿತ್ರ
  • News18
  • Last Updated: April 1, 2019, 1:17 PM IST
  • Share this:
ನವದೆಹಲಿ (ಏ.1): ಬೆಳಗಿನ ಜಾವದ ಸುಖ ನಿದ್ರೆಯಲ್ಲಿದ್ದ ಅಂಡಮಾನ್​ ಮತ್ತು ನಿಕೋಬಾರ್​ ಜನತೆ ಒಮ್ಮೆಲೆ ಬೆಚ್ಚಿ ಬಿದ್ದಿದೆ. ಕೇವಲ ಎರಡು ಗಂಟೆ ಅವಧಿಯಲ್ಲಿ ಬರೋಬ್ಬರಿ ಒಂಬತ್ತು ಬಾರಿ ಭೂಮಿ ಕಂಪಿಸಿದೆ. ಈ ವೇಳೆ ಯಾವುದೇ ಹಾನಿ ಆಗಿಲ್ಲ ಎನ್ನಲಾಗಿದೆ.

ಬೆಳಗ್ಗೆ 5.14ಕ್ಕೆ ಮೊದಲ ಬಾರಿ ಭೂಮಿ ಕಂಪಿಸಿದೆ. ರಿಕ್ಟರ್​ ಮಾಪಕದಲ್ಲಿ ಭೂಕಂಪದ ತೀವ್ರತೆ 4.9 ದಾಖಲಾಗಿದೆ. ಇದಾದ ಕೆಲವೇ ನಿಮಿಷಗಳಲ್ಲಿ 5 ತೀವ್ರತೆಯ ಕಂಪನ ಉಂಟಾಗಿದೆ. ನಂತರ ಸಾಲು ಸಾಲು ಕಂಪನಗಳು ಸಂಭವಿಸಿವೆ.

ಬೆಳಗ್ಗೆ 6.54ಕ್ಕೆ ಭೂಮಿ ಒಂಬತ್ತನೇ ಬಾರಿ ಕಂಪಿಸಿದೆ. ಈ ವೇಳೆ ರಿಕ್ಟರ್​ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಅಂಡಮಾನ್​-ನಿಕೋಬಾರ್​ನಲ್ಲಿ ದಿನಕ್ಕೆ ಎರಡು ಮೂರು ಬಾರಿ ಭೂಕಂಪ ಸಂಭವಿಸುವುದು ಅಪರೂಪ. ಇದು ಜನರಲ್ಲಿ ಆತಂಕ ಮೂಡಲು ಮುಖ್ಯ ಕಾರಣ.

ಭೂಕಂಪದ ವೇಳೆ ಯಾವುದೇ ಹಾನಿ ಉಂಟಾದ ಬಗ್ಗೆ ವರದಿಯಾಗಿಲ್ಲ. ಇದು ಲಘು ಭೂಕಂಪವಾದ್ದರಿಂದ ಯಾವುದೇ ಕಟ್ಟಡಗಳು ನೆಲಕ್ಕೆ ಉರುಳಿಲ್ಲ. ಪ್ರಾಣ ಹಾನಿ ಕೂಡ ಉಂಟಾಗಿಲ್ಲ.

ಇದನ್ನೂ ಓದಿ: ಆಪ್​ ಜೊತೆ ಕೈ ಜೋಡಿಸಲು ರಾಹುಲ್​ ಗಾಂಧಿ ಒಪ್ಪಿಲ್ಲ; ಊಹಾಪೋಹಗಳಿಗೆ ತೆರೆ ಎಳೆದ ಸಿಎಂ ಅರವಿಂದ್​ ಕೇಜ್ರಿವಾಲ್

First published:April 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ