• Home
  • »
  • News
  • »
  • national-international
  • »
  • Superhighway: ಸಮುದ್ರತೀರದಲ್ಲಿ ಪ್ರಾಚೀನ ಸೂಪರ್ ಹೈವೇ ಪತ್ತೆ!

Superhighway: ಸಮುದ್ರತೀರದಲ್ಲಿ ಪ್ರಾಚೀನ ಸೂಪರ್ ಹೈವೇ ಪತ್ತೆ!

ಸೂಪರ್​ಹೈವೆ

ಸೂಪರ್​ಹೈವೆ

ಈ ಅಧ್ಯಯನದ ತೀರ್ಮಾನವು ಪುರಾತತ್ತ್ವಶಾಸ್ತ್ರ ಮತ್ತು ಭೌಗೋಳಿಕತೆಯನ್ನು ಮೀರಿದ ಅಧ್ಯಯನವಾಗಿದೆ.

  • Share this:

ಸಮುದ್ರ ತೀರವೆಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಇನ್ನು ಕೆಲವರಿಗೆ ಸಮುದ್ರ ತೀರದ ಮರಳಿನಲ್ಲಿ ಆಟವಾಡುವುದು, ಮನೆ ಕಟ್ಟೊದು, ಓಡಾಡೋದು ಅಂದ್ರೆ ಬಹಳ ಇಷ್ಟ. ಇದೆಲ್ಲ ಓಕೆ. ಆ ಮರಳಿನಲ್ಲಿ ನಡೆದು ಕೆಲವೇ ಸೆಕೆಂಡ್‌ಗಳಲ್ಲಿ ನಿಮ್ಮ ಹೆಜ್ಜೆ ಗುರುತೇ ನಿಮಗೆ ಕಾಣಿಸಲ್ಲ, ಹೌದು ತಾನೇ? ಆದರೆ ನಾವಿಂದು ಹೇಳಲು ಹೊರಟಿರೋದು ಎಷ್ಟೊ ಸಾವಿರ ವರ್ಷಗಳ ಹಿಂದೆ ಮರಳಿನ ಮೇಲೆ ನಡೆದ ಹೆಜ್ಜೆಗಳು ಇಂದಿಗೂ ಹಾಗೆ ಇವೆ ಎಂದ್ರೆ ಆಶ್ಚರ್ಯವಾಗುತ್ತೆ ಅಲ್ವಾ? ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದ (University Of Manchester) ಸಂಶೋಧಕರು ಯುಕೆಯ ಮರ್ಸಿಸೈಡ್‌ನ ಫೋರಂಬಿ ಬೀಚ್‌ನಲ್ಲಿ ಅದ್ಭುತವಾಗಿ ಸಂರಕ್ಷಿಸಲ್ಪಟ್ಟ ಮಾನವ ಮತ್ತು ಪ್ರಾಣಿಗಳ ಹೆಜ್ಜೆಗುರುತುಗಳಂತಹ ಕರಾವಳಿ ತೀರದ ಸೂಪರ್‌ಹೈವೇಯನ್ನು(Superhighway) ಕಂಡುಹಿಡಿದಿದ್ದಾರೆ. 


ಸಾವಿರಾರು ವರ್ಷಗಳ ಹಿಂದೆ ಆ ಮರಳಿನಲ್ಲಿ ನಡೆದ ಹೆಜ್ಜೆಗುರುತುಗಳು ಹಾಗೇ ಸಂರಕ್ಷಿಸಲ್ಪಟ್ಟಿವೆ, ಅದು ಹೇಗೆ ಎಂಬುದನ್ನು ಈಗ ತಿಳಿಯೋಣ.


ಮಧ್ಯ ಶಿಲಾಯುಗಗಳಿಗಿಂತ ಹಳೆಯದು
ಇವುಗಳಲ್ಲಿ ಕೆಲವು ಮಧ್ಯ ಶಿಲಾಯುಗಗಳಿಗಿಂತ (ಕ್ರಿ.ಪೂ. 15,000 ರಿಂದ ಕ್ರಿ.ಪೂ. 50) ಹಿಂದಿನವು ಆಗಿದ್ದರೆ, ಇನ್ನು ಕೆಲವು ಮಧ್ಯಕಾಲೀನ ಯುಗದ (ಕ್ರಿ.ಶ. 476 ಕ್ರಿ.ಶ. 1450) ಗುರುತುಗಳಾಗಿವೆ.


ಈ ಹೆಜ್ಜೆಗುರುತುಗಳ ವಿಶಿಷ್ಟತೆ ಏನು?
"ಈ ವಿಶಿಷ್ಟ ಹೆಜ್ಜೆ ಗುರುತುಗಳನ್ನು ಮೊದಲ ಬಾರಿಗೆ 1970 ರ ದಶಕದಲ್ಲಿ ಕಂಡುಹಿಡಿಯಲಾಯಿತು, ಆದರೆ ಅವು 1990 ರ ದಶಕದಲ್ಲಿ ಸಂಪೂರ್ಣವಾಗಿ ಮುನ್ನೆಲೆಗೆ ಬಂದವು. ನಿವೃತ್ತ ಶಿಕ್ಷಕರೊಬ್ಬರು ಅವುಗಳಲ್ಲಿ ಕೆಲವು ಹೆಜ್ಜೆಗುರುತುಗಳು ಪುರಾತನ ಕಾಲದವು ಎಂದು ಅರಿತುಕೊಂಡ ನಂತರ ಅವುಗಳ ಕುರಿತು ಸಂಶೋಧನೆ ನಡೆಸಲು ಸಜ್ಜಾದರು. ಅದಕ್ಕೂ ಮೊದಲು, ಜನರು ಅವುಗಳು ವಿಶೇಷ ಮತ್ತು ಪುರಾತನ ಕಾಲದ್ದು ಎಂದು ತಿಳಿದಿರಲಿಲ್ಲ” ಎಂದು ಸಂಶೋಧನೆ ಪತ್ರಿಕೆಯ ಸಹ ಲೇಖಕ ಅಲಿಸನ್ ಬರ್ನ್ಸ್ ಹೇಳಿದ್ದಾರೆ.


ಪ್ರಪಂಚದ ಇತರ ಹಲವಾರು ಸ್ಥಳಗಳಲ್ಲಿ ಹೆಜ್ಜೆಗುರುತು ಹಾದಿಯನ್ನು ಕಂಡುಹಿಡಿಯಲಾಗಿದೆ. ಆದರೂ ಫೋರಂಬಿ ಹೆಜ್ಜೆಗುರುತುಗಳು ಇತಿಹಾಸಪೂರ್ವ ಹೊಲೊಸೀನ್ ಕಶೇರುಕ ಟ್ರ್ಯಾಕ್‌ಗಳ ವಿಶ್ವದ ಅತಿದೊಡ್ಡ ಸಾಲುಗಳಲ್ಲಿ ಒಂದಾಗಿವೆ.


ರೋಚಕ ಕಥೆ ಹೇಳುತ್ತೆ ಈ ಸಂಶೋಧನೆ
ವಾಸ್ತವವಾಗಿ, ಈ ಪ್ರದೇಶದಲ್ಲಿ ಪರಿಸರ ವ್ಯವಸ್ಥೆ ಮತ್ತು ಭೂದೃಶ್ಯವು ಹೇಗೆ ವಿಕಸನಗೊಂಡಿತು ಮತ್ತು ಸಾವಿರಾರು ವರ್ಷಗಳಿಂದ ಈ ಮಧ್ಯಂತರ ಪರಿಸರದಲ್ಲಿ ಮಾನವರು ಮತ್ತು ಪ್ರಾಣಿಗಳು ಹೇಗೆ ಅಸ್ತಿತ್ವದಲ್ಲಿವೆ ಎಂಬ ರೋಚಕ ಕಥೆಯನ್ನು ಹೆಜ್ಜೆ ಗುರುತುಗಳು ನಮಗೆ ತಿಳಿಸುತ್ತವೆ.


ಜೀವ ವೈವಿಧ್ಯದ ವಿಕಾಸ, ಮರಳಿನಲ್ಲಿ ರೂಪ ಪಡೆದಿದೆ
ಫೋರಂಬಿ ಪಾಯಿಂಟ್‌ನ ದಕ್ಷಿಣಕ್ಕೆ ಇರುವ ಅತ್ಯಂತ ಹಳೆಯ ಫುಟ್‌ಪ್ರಿಂಟ್‌ಗಳು ಸುಮಾರು 8,000 ವರ್ಷಗಳ ಹಿಂದೆ ಮೆಸೊಲಿಥಿಕ್ ಯುಗದಿಂದ ಬಂದಿವೆ. ಕೊನೆಯ ಹಿಮಯುಗದ ನಂತರ (9,000-6,000 ವರ್ಷಗಳ ಹಿಂದೆ) ಭೂಮಿ ಮತ್ತು ಸಮುದ್ರದ ನಡುವಿನ ಗಡಿಗಳು ಸ್ಥಳಾಂತರಗೊಂಡಂತೆ, ಮಾನವರು ಮತ್ತು ಪ್ರಾಣಿಗಳು ಮರ್ಸಿಸೈಡ್ ಬೀಚ್‌ನಂತಹ ಸಂಪನ್ಮೂಲ ಸಮೃದ್ಧ ಪ್ರದೇಶಗಳ ಒಳನಾಡಿಗೆ ಸ್ಥಳಾಂತರಗೊಂಡವು.


ಮಾನವನ ಹೆಜ್ಜೆಗುರುತುಗಳ ಜೊತೆಗೆ, ಅಧ್ಯಯನವು ಇತರ ದೊಡ್ಡ ಸಸ್ತನಿಗಳಾದ ಆರೋಚ್‌ಗಳು (ಅಳಿವಿನಂಚಿನಲ್ಲಿರುವ ಎತ್ತಿನ ಜಾತಿಗಳು), ಕೆಂಪು ಜಿಂಕೆ, ರೋ ಜಿಂಕೆ, ಕಾಡು ಹಂದಿ ಮತ್ತು ಬೀವರ್ ಜೊತೆಗೆ ತೋಳ ಮತ್ತು ಲಿಂಕ್ಸ್‌ನಂತಹ ಪರಭಕ್ಷಕಗಳ ಕುರುಹುಗಳನ್ನು ಸಹ ಕಂಡುಹಿಡಿದಿದೆ.


ಇದನ್ನೂ ಓದಿ: Kargil: ಕಾರ್ಗಿಲ್‌ನಲ್ಲಿ ಯೋಧರೊಂದಿಗೆ 'ವಂದೇ ಮಾತರಂ' ಹಾಡಿದ ಪ್ರಧಾನಿ ನರೇಂದ್ರ ಮೋದಿ


ಆದರೆ ನಾವು ಆರಂಭಿಕ ನವಶಿಲಾಯುಗದ ಹೊಸ ಫುಟ್‌ಪ್ರಿಂಟ್‌ಗಳ ಕಡೆಗೆ ವಾಲಿದಾಗ ಅಲ್ಲಿ ನಮಗೆ ಕೆಲವು ಬದಲಾವಣೆಗಳು ಆಗಿರುವುದು ಸ್ಪಷ್ಟವಾಗುತ್ತವೆ. ಈ ಸಮಯದಲ್ಲಿ, ಬ್ರಿಟಿಷ್ ದ್ವೀಪಗಳಲ್ಲಿ ಕೃಷಿಯ ಪರಿಚಯದೊಂದಿಗೆ ಈ ಪ್ರದೇಶವು ಸಾಮಾಜಿಕವಾಗಿ ಮತ್ತು ಪರಿಸರೀಯವಾಗಿ ಆಳವಾದ ಬದಲಾವಣೆಯನ್ನು ಕಂಡಿದೆ.


ಈ ಬದಲಾವಣೆಗಳು ಆವಾಸಸ್ಥಾನದ ವಿಘಟನೆ ಮತ್ತು ಕೃಷಿ ಸಮಾಜಗಳ ಅಭಿವೃದ್ಧಿಯೊಂದಿಗೆ ಸಂಭವಿಸಬಹುದಾದ ಭೂ ಬಳಕೆಯ ಬದಲಾವಣೆಗಳಿಗೆ ಕಾರಣವಾಗಿದೆ.


ಇದನ್ನೂ ಓದಿ: Ukraine Crisis: ಕಾರಿಗೆ​ ಡಿಕ್ಕಿ ಹೊಡೆಯಲಿದ್ದ ಹೆಲಿಕಾಪ್ಟರ್, ಕೂದಲೆಳೆ ಅಂತರದಲ್ಲಿ ತಪ್ಪಿತು ಭಾರೀ ಅನಾಹುತ!


ಈ ಅಧ್ಯಯನದ ಸಂಶೋಧನೆಗಳನ್ನು ನೇಚರ್ ಎಕಾಲಜಿ ಅಂಡ್ ಎವಲ್ಯೂಷನ್ ನಿಯತಕಾಲಿಕದ ಅಕ್ಟೋಬರ್ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನದ ತೀರ್ಮಾನವು ಪುರಾತತ್ತ್ವ ಶಾಸ್ತ್ರ ಮತ್ತು ಭೌಗೋಳಿಕತೆಯನ್ನು ಮೀರಿದ ಅಧ್ಯಯನವಾಗಿದೆ.

Published by:ಗುರುಗಣೇಶ ಡಬ್ಗುಳಿ
First published: