Ancient Burial Cave: ಕಂಚಿನ ಯುಗದ ಪ್ರಾಚೀನ ಸಮಾಧಿಯಿರುವ ಗುಹೆ ಪತ್ತೆ! ರೋಚಕ ಸಂಗತಿ ಬಯಲು

ನಿರ್ಮಾಣ ಕೆಲಸಗಳು ನಡೆಯುವಾಗ ಭೂಮಿಯನ್ನು ಅಗೆಯುತ್ತಿರುವಾಗ ಆಕಸ್ಮಿಕವಾಗಿ ಇಸ್ರೇಲ್‌ನಲ್ಲಿ ಕಂಚಿನ ಯುಗದ ಪ್ರಾಚೀನ ಸಮಾಧಿ ಗುಹೆಯನ್ನು ಪತ್ತೆ ಹಚ್ಚಿ ಆ ವಿಷಯವನ್ನು ಈಗ ಬಹಿರಂಗಪಡಿಸಿದ್ದಾರೆ.

ಪ್ರಾಚೀನ ಗುಹೆ ಪತ್ತೆ

ಪ್ರಾಚೀನ ಗುಹೆ ಪತ್ತೆ

  • Share this:
ವಿಶ್ವದ ಎಲ್ಲ ಕಡೆಯೂ ಇತಿಹಾಸದ (History) ಮೂಲಧಾರಗಳು ಆಗಾಗ ಭೂಮಿ ಅಗೆಯುವಾಗ ಸಿಗುತ್ತಲೇ ಇರುತ್ತವೆ. ಪ್ರತಿ ಸಲ ಏನಾದರೂ ಇತಿಹಾಸದ ಹಳೆಯ ವಸ್ತುಗಳು ಸಿಕ್ಕಾಗಲೂ ಅವುಗಳನ್ನು ಇತಿಹಾಸ ತಜ್ಞರು ಅಧ್ಯಯನಕ್ಕೆ  (Study) ಒಳಪಡಿಸುತ್ತಾರೆ. ಆ ನಂತರ ಅವುಗಳು ಯಾವ ಕಾಲದಲ್ಲಿ ಅಸ್ತಿತ್ವದಲ್ಲಿದ್ದವು ಎಂಬುದನ್ನು ವರದಿ ಮಾಡುತ್ತಾರೆ. ಅದರಿಂದ ಇತಿಹಾಸವನ್ನು ಮತ್ತಷ್ಟು ತಿಳಿಯಲು ಅವಕಾಶ ಆಗುತ್ತದೆ ಎಂದು ಇತಿಹಾಸ ತಜ್ಞರು ಹೇಳುತ್ತಲೇ ಇರುತ್ತಾರೆ. ಇತಿಹಾಸದಿಂದ ನಮ್ಮ ಪೂರ್ವಿಕರು ಹೇಗೆ ಜೀವನ ನಡೆಸುತ್ತಿದ್ದರು ಎಂಬುದು ತಿಳಿದು ಬರುತ್ತದೆ. ಹೀಗೆ, ಈಗ ಇಲ್ಲೊಂದು ಪ್ರಾಚೀನ (Ancient) ಕಾಲದ ಇತಿಹಾಸದ ಒಂದು ಆಧಾರ ಬೆಳಕಿಗೆ ಬಂದಿದೆ. ಅದು ಎಲ್ಲಿಯದು? ಹೇಗೆ ದೊರಕಿದೆ? ಮುಂತಾದ ವಿಷಯಗಳನ್ನು ನಾವಿಂದು ಈ ಲೇಖನದಲ್ಲಿ ತಿಳಿಯೋಣ ಮಾಡೋಣ ಬನ್ನಿ.

ಕಂಚಿನ ಯುಗದ ಪ್ರಾಚೀನ ಸಮಾಧಿ ಗುಹೆ ಪತ್ತೆ
ಒಬ್ಬ ವ್ಯಕ್ತಿಯು ನಿರ್ಮಾಣ ಕೆಲಸಗಳು ನಡೆಯುವಾಗ ಭೂಮಿಯನ್ನು ಅಗೆಯುತ್ತಿರುವಾಗ ಆಕಸ್ಮಿಕವಾಗಿ ಇಸ್ರೇಲ್‌ನಲ್ಲಿ ಕಂಚಿನ ಯುಗದ ಪ್ರಾಚೀನ ಸಮಾಧಿ ಗುಹೆಯನ್ನು ಪತ್ತೆ ಹಚ್ಚಿ ಆ ವಿಷಯವನ್ನು ಈಗ ಬಹಿರಂಗಪಡಿಸಿದ್ದಾನೆ. ಇಸ್ರೇಲ್ ನೇಚರ್ ಅಂಡ್ ಪಾರ್ಕ್ಸ್ ಅಥಾರಿಟಿಯಿಂದ ಪಾಲ್ಮಾಚಿಮ್ ಬೀಚ್ ನ್ಯಾಷನಲ್ ಪಾರ್ಕ್‌ನಲ್ಲಿ ನಿರ್ಮಾಣ ಕಾರ್ಯಗಳು ನಡೆಯುವ ಸಮಯದಲ್ಲಿ ಈ ಆವಿಷ್ಕಾರವು ಬಹಿರಂಗಗೊಂಡಿದೆ.

ಈ ಬಗ್ಗೆ ಇಸ್ರೇಲ್ ಆಂಟಿಕ್ವಿಟಿ ಅಥಾರಿಟಿಗೆ (IAA) ಸೂಚಿಸಿದ ನಂತರ, ಪುರಾತತ್ತ್ವ ಶಾಸ್ತ್ರಜ್ಞರ ತಂಡವೊಂದು ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಿದೆ. ನಂತರ 3,300 ವರ್ಷಗಳ ಹಿಂದೆ ಧಾರ್ಮಿಕವಾಗಿ ಠೇವಣಿ ಮಾಡಲಾದ ಕಲಾಕೃತಿಗಳ "ಟೈಮ್-ಕ್ಯಾಪ್ಸುಲ್" ಅನ್ನು ಪುರಾತತ್ತ್ವ ತಂಡವು ಬಹಿರಂಗಪಡಿಸಿತು. ಈ ಟೈಮ್‌ ಕ್ಯಾಪ್ಸೂಲ್‌ ಅಂದರೆ ಆಗೀನ ಕಾಲದ ಸಂಸ್ಕೃತಿ ಬಗ್ಗೆ ತಿಳಿಸುವ ಆಧಾರಗಳು ಎಂದರ್ಥ.

ಕುಂಬಾರಿಕೆ ಪಾತ್ರೆ ಹಾಗೂ ಕಂಚಿನ ಕಲಾಕೃತಿ ಪತ್ತೆ 
ಕಲ್ಲುಬಂಡೆಯಲ್ಲಿ ಕೆತ್ತಿದ ಗುಹೆಯು ಮರಣಾನಂತರದಲ್ಲಿ ಬೇಕಾಗುವ ಮತ್ತು ಮರಣ ಹೊಂದಿದವರ ಜೀವನಕ್ಕೆ ಶಾಂತಿ ಸಿಗಲು ಅವರಿಗೆ ಸೇವೆ ಸಲ್ಲಿಸಲು ಹಲವಾರು ಅಖಂಡ ಕುಂಬಾರಿಕೆ ಪಾತ್ರೆಗಳು ಮತ್ತು ಕಂಚಿನ ಕಲಾಕೃತಿಗಳನ್ನು ಈ ಗುಹೆಯು ಒಳಗೊಂಡಿದೆ.

ಇದನ್ನೂ ಓದಿ: Fish Skeleton: 380 ಮಿಲಿಯನ್‌ ವರ್ಷ ಹಳೆಯ ಮೀನಿನ ಹೃದಯದ ಪಳೆಯುಳಿಕೆ ಪತ್ತೆ

ಈ ಗುಹೆಯಲ್ಲಿ ಆಳವಾದ ಬಟ್ಟಲುಗಳು, ಸಣ್ಣ ಗಾತ್ರದ ಬಟ್ಟಲುಗಳು, ನೀರು ಕುಡಿಯುವ ಸಣ್ಣ ಗಾತ್ರ ಗ್ಲಾಸ್‌ಗಳು ಮತ್ತು ಶೇಖರಣಾ ಜಾರ್‌ಗಳು ಕಂಡು ಬಂದಿವೆ. ಅವುಗಳಲ್ಲಿ ಕೆಲವು ಲೆಬನಾನಿನ ಕರಾವಳಿಯಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ಪುರಾತತ್ತ್ವ ತಜ್ಞರು ಹೇಳಿದ್ದಾರೆ. ಟೈರ್, ಸಿಡಾನ್ ಮತ್ತು ಲೆಬನಾನಿನ ಮತ್ತು ಇಸ್ರೇಲಿ ಕರಾವಳಿಯ ಬಂದರುಗಳಿಂದ ಈ ಎಲ್ಲ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಅದರಲ್ಲಿ ಪ್ರಮುಖವಾಗಿ ಜಗ್‌ಗಳು ಮತ್ತು ಜಗ್ಲೆಟ್‌ಗಳಂತಹ ಸಣ್ಣ ಬಟ್ಟಲುಗಳು ಕೂಡ ಸೇರಿವೆ.

"ಗುಹೆಯಲ್ಲಿನ ಆವಿಷ್ಕಾರಗಳು ಕ್ರಿ.ಪೂ. ಹದಿಮೂರನೇ ಶತಮಾನಕ್ಕೆ ಅಂದ್ರೆ ಕಂಚಿನ ಯುಗ IIB ಕ್ಕಿಂತ ಪ್ರಾಚೀನ ಕಾಲದವು ಆಗಿವೆ" ಎಂದು IAA ಯಿಂದ ಡಾ. ಎಲಿ ಯನ್ನೈ ಅವರು ಹೇಳುತ್ತಾರೆ. "ಈ ಅವಧಿಯಲ್ಲಿ, ಹತ್ತೊಂಬತ್ತನೆಯ ಈಜಿಪ್ಟಿನ ರಾಜವಂಶದ ದೀರ್ಘ ಆಳ್ವಿಕೆಯಲ್ಲಿ, ಫರೋ ರಮೆಸೆಸ್ II ರಾಜನ ಆಳ್ವಿಕೆಯ ಈಜಿಪ್ಟ್ ಸಾಮ್ರಾಜ್ಯವು ಕೆನಾನ್ ಅನ್ನು ನಿಯಂತ್ರಣ ಮಾಡುತ್ತಿತ್ತು. ಈಜಿಪ್ಟಿನ ಆಡಳಿತವು ವ್ಯಾಪಕವಾದ ಅಂತರರಾಷ್ಟ್ರೀಯ ವ್ಯಾಪಾರಕ್ಕಾಗಿ ಸುರಕ್ಷಿತ ಪರಿಸ್ಥಿತಿಗಳನ್ನು ಒದಗಿಸಿತು" ಎಂದು ಡಾ. ಎಲಿ ಹೇಳಿದರು.

ಇಲ್ಲಿನ ಹಲವಾರು ವಸ್ತುಗಳನ್ನು ಕಳವು ಮಾಡಲಾಗಿದ್ಯಂತೆ !
ಇಲ್ಲಿ ನಡೆಸಲಾದ ಪ್ರಾಥಮಿಕ ಅಧ್ಯಯನಗಳಲ್ಲಿ ದೀಪಗಳು ಮತ್ತು ಕಂಚಿನ ಬಾಣದ ತಲೆಗಳು ಅಥವಾ ಸ್ಪಿಯರ್‌ಹೆಡ್‌ಗಳನ್ನು ಸಹ ಕಂಡು ಬಂದಿವೆ. ಗುಹೆಯ ಮೂಲೆಯಲ್ಲಿರುವ ಎರಡು ಆಯತಾಕಾರದ ಪ್ಲಾಟ್‌ಗಳಲ್ಲಿ ಮಾನವ ಅವಶೇಷಗಳು ಕಂಡುಬಂದಿವೆ. ಈ ಗುಹೆಯನ್ನು ಮತ್ತೆ ತೆರೆಯಲಾಗಿದೆ. ಅದರ ಉತ್ಖನನದ ಯೋಜನೆಯ ಸಂಪೂರ್ಣ ಕೆಲಸ ಮುಗಿಯವರೆಗೂ ಆ ಗುಹೆಯನ್ನು ಕಾವಲಗಾರರಿಂದ ಕಾಯಲಾಗುತ್ತಿದೆ. ಈ ಕಾವಲು ಏಕೆಂದರೆ ಆವಿಷ್ಕಾರ ನಡೆಯುವ ಆರಂಭದಲ್ಲಿ ಹಲವು ವಸ್ತುಗಳನ್ನು ಕಳ್ಳರು ಲೂಟಿ ಮಾಡಿದ್ದಾರೆ.

ಅದರ ಜೊತೆಗೆ ಐಎಎ ಪುರಾತತ್ವಶಾಸ್ತ್ರಜ್ಞರ ಆಗಮನದ ಮೊದಲು ಕೆಲವು ಸಮಾಧಿ ವಸ್ತುಗಳನ್ನು ಕೂಡ ಲೂಟಿ ಮಾಡಲಾಯಿತು. ಆ ಪ್ರಾಚೀನ ವಸ್ತುಗಳು ಬಹು ಬೇಡಿಕೆಯ ವಸ್ತುಗಳು ಆಗಿರುತ್ತವೆ. ಆದ್ದರಿಂದ ಅವುಗಳನ್ನು ಕದಿಯಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಅದನ್ನು ಈಗ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.

ಇದನ್ನೂ ಓದಿ:  Meghalaya: ಮೇಘಾಲಯದ ಈ ವಿಶ್ವವಿಖ್ಯಾತ ಏಕಶಿಲೆಗಳ ಇತಿಹಾಸ ಗೊತ್ತಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ

“ಗುಹೆಯನ್ನು ಈಗ ಮುಚ್ಚಿದ್ದೇವೆ. ಮುಚ್ಚಿದ ನಂತರದ ಅವಧಿಗಳಲ್ಲಿ ಲೂಟಿ ಮಾಡಲಾಗಿಲ್ಲ. ಇಂದು ಲಭ್ಯವಿರುವ ಆಧುನಿಕ ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಳ್ಳಲು ನಮಗೆ ಅನುಮತಿ ನೀಡಲಾಗಿದೆ" ಡಾ ಯನ್ನೈ  ಅವರು ಹೇಳಿದ್ದಾರೆ .  ಕಲಾಕೃತಿಗಳಿಂದ ಮತ್ತು ವಿವಿಧ ಜಾರ್‌ಗಳ ಮೇಲೆ ಇರುವ ಅವಶೇಷಗಳಿಂದ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಇವೆಲ್ಲವೂ ಸಾದ್ಯವಾಗುತ್ತವೆ. ಗುಹೆಯು ಕಂಚಿನ ಯುಗದಲ್ಲಿದ್ದ ಅಂತ್ಯಕ್ರಿಯೆಯ ಪದ್ಧತಿಗಳ ಬಗ್ಗೆ ಸಂಪೂರ್ಣ ಚಿತ್ರವನ್ನು ನೀಡಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
Published by:Ashwini Prabhu
First published: