News18 India World Cup 2019

ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಐವರು ಭಾರತೀಯ ಯೋಧರು ಹುತಾತ್ಮ

ಭಾರತ ಸೇನೆಯೂ ಇಬ್ಬರು ಉಗ್ರ ಪೈಕಿ ಓರ್ವನನ್ನು ಹೊಡೆದುರುಳಿಸಿದೆ. ಅಲ್ಲದೇ ಮತ್ತೋರ್ವ ಉಗ್ರನಿಗಾಗಿ ಕಾರ್ಯಾಚರಣೆ ಮುಂದುವರೆದಿದೆ ಎನ್ನಲಾಗಿದೆ.

news18
Updated:June 12, 2019, 7:57 PM IST
ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಐವರು ಭಾರತೀಯ ಯೋಧರು ಹುತಾತ್ಮ
ಸಿಆರ್​ಪಿಎಫ್​​ ಯೋಧರು
news18
Updated: June 12, 2019, 7:57 PM IST
ಶ್ರೀನಗರ(ಜೂನ್ 12): ಪುಲ್ವಾಮಾ ಘಟನೆಯ ಬಳಿಕ ಕಾಶ್ಮೀರದಲ್ಲಿ ಮತ್ತೊಮ್ಮೆ ಉಗ್ರರ ಅಟ್ಟಹಾಸ ನಡೆದಿದೆ. ಕಾಶ್ಮೀರದ ದಕ್ಷಿಣ ಭಾಗದಲ್ಲಿರುವ ಅನಂತನಾಗ್ ಜಿಲ್ಲೆಯಲ್ಲಿ ಉಗ್ರರು ದಾಳಿ ನಡೆಸಿ ಐದಕ್ಕೂ ಹೆಚ್ಚು ಯೋಧರನ್ನು ಬಲಿ ಪಡೆದಿದ್ದಾರೆ. ಈ ಘಟನೆಯಲ್ಲಿ ಮೂರಕ್ಕೂ ಹೆಚ್ಚು ಪೊಲೀಸರಿಗೆ ಗಾಯವಾಗಿದೆ. ಭದ್ರತಾ ಪಡೆಗಳ ಪ್ರತಿದಾಳಿಯಲ್ಲಿ ಒಬ್ಬ ಭಯೋತ್ಪಾದಕ ಹತನಾಗಿದ್ದಾನೆ. ಗಾಯಗೊಂಡವರಲ್ಲಿ ಅನಂತನಾಗ್ ಪೊಲೀಸ್ ಠಾಣೆಯ ಮುಖ್ಯಸ್ಥ ಅರ್ಷದ್ ಅಹ್ಮದ್ ಅವರೂ ಸೇರಿದ್ದಾರೆ.

ಅನಂತನಾಗ್​ ನಗರದ ಜನಸಂದಣಿ ಇರುವ ಕೆಪಿ ರಸ್ತೆಯಲ್ಲಿ ಬೈಕ್​ನಲ್ಲಿ ಬಂದ ಉಗ್ರರು ಸಿಆರ್​ಪಿಫ್ ಮತ್ತು ಪೊಲೀಸರ ತುಕಡಿಗಳ ಮೇಲೆ ಆಟೋಮ್ಯಾಟಿಕ್ ರೈಫಲ್​ಗಳ ಮೂಲಕ ಗುಂಡು ಮತ್ತು ಗ್ರೆನೇಡ್ ದಾಳಿ ನಡೆಸಿದರೆನ್ನಲಾಗಿದೆ. ಆದರೆ, ದಾಳಿ ನಡೆಸಿದ ಉಗ್ರರು ಎಷ್ಟು ಮಂದಿ ಇದ್ದರೆಂಬ ಖಚಿತ ಮಾಹಿತಿ ಲಭ್ಯವಿಲ್ಲ. ಕೆಲ ವರದಿಗಳ ಪ್ರಕಾರ ಇಬ್ಬರು ಉಗ್ರರು ಈ ಕೃತ್ಯ ಎಸಗಿದ್ದಾರೆ. ಇನ್ನೂ ಕೆಲ ವರದಿಗಳ ಪ್ರಕಾರ ಎರಡಕ್ಕಿಂತ ಹೆಚ್ಚು ಉಗ್ರರಿದ್ದರೆನ್ನಲಾಗಿದೆ.

ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿ ಒಬ್ಬ ಉಗ್ರನನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಉಗ್ರರನ್ನು ಹಿಡಿಯಲು ಕಾರ್ಯಾಚರಣೆ ನಡೆದಿದೆ.

ಇನ್ನಷ್ಟೂ ಮಾಹಿತಿಗಾಗಿ ನಿರೀಕ್ಷಿಸಿ...........
--------------
First published:June 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...