• Home
 • »
 • News
 • »
 • national-international
 • »
 • Anant Ambani-Radhika Merchant: ರಾಧಿಕಾ ಜೊತೆ ಅನಂತ್ ಅಂಬಾನಿ ಎಂಗೇಜ್, ಅದ್ಧೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಗಣ್ಯರು

Anant Ambani-Radhika Merchant: ರಾಧಿಕಾ ಜೊತೆ ಅನಂತ್ ಅಂಬಾನಿ ಎಂಗೇಜ್, ಅದ್ಧೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಗಣ್ಯರು

ಅನಂತ್-ರಾಧಿಕಾ ಎಂಗೇಜ್

ಅನಂತ್-ರಾಧಿಕಾ ಎಂಗೇಜ್

ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ತಮ್ಮ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಮುಂಬೈನ ಆಂಟಿಲಿಯಾ ನಿವಾಸದಲ್ಲಿ ಇಂದು ಅದ್ಧೂರಿ ಸಮಾರಂಭ ನಡೆದಿದೆ.

 • News18 Kannada
 • 2-MIN READ
 • Last Updated :
 • Mumbai, India
 • Share this:

ಮುಂಬೈ: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಹಾಗೂ ನೀತಾ ಅಂಬಾನಿ (Nita Ambani) ದಂಪತಿ ಪುತ್ರ ಅನಂತ್ ಅಂಬಾನಿ (Anant Ambani) ಎಂಗೇಜ್ ಆಗಿದ್ದಾರೆ. ತಮ್ಮ ಗೆಳತಿ, ಭರತನಾಟ್ಯ ಕಲಾವಿದೆಯೂ ಆಗಿರುವ ಎನ್ಕೋರ್ ಹೆಲ್ತ್‌ಕೇರ್ ಸಿಇಒ ವೀರೆನ್ ಮರ್ಚೆಂಟ್ (Viren Merchant) ಮತ್ತು ಶೈಲಾ ಮರ್ಚೆಂಟ್ (Shaila Merchant) ಅವರ ಪುತ್ರಿ ರಾಧಿಕಾ ಮರ್ಚೆಂಟ್ (Radhika Merchant) ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿರುವ ಅಂಬಾನಿಯವರ ನಿವಾಸ ಆಂಟಿಲಿಯಾದಲ್ಲಿ (Antilia) ನಡೆದ ಅದ್ಧೂರಿ ಸಮಾರಂಭದಲ್ಲಿ ರಾಧಿಕಾ-ಅನಂತ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಅದ್ಧೂರಿ ಸಮಾರಂಭದಲ್ಲಿ ಮುಕೇಶ್ ಅಂಬಾನಿ, ನೀತಾ ಅಂಬಾನಿ ಕುಟುಂಬಸ್ಥರು, ಮರ್ಚೆಂಟ್ ಕುಟುಂಬಸ್ಥರು, ಆಪ್ತರು, ಸ್ನೇಹಿತರು, ಸಂಬಂಧಿಕರು ಹಾಗೂ ಗಣ್ಯಾತಿಗಣ್ಯರು ಹಾಜರಿದ್ದರು.


ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥ


ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ತಮ್ಮ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಮುಂಬೈನ ಆಂಟಿಲಿಯಾ ನಿವಾಸದಲ್ಲಿ ಇಂದು ಅದ್ಧೂರಿ ಸಮಾರಂಭ ನಡೆದಿದೆ. ಈ ಅದ್ಧೂರಿ ಸಮಾರಂಭಕ್ಕೆ ಮುಕೇಶ್ ಅಂಬಾನಿ-ನೀತಾ ಅಂಬಾನಿ ದಂಪತಿ, ಆಕಾಶ್ ಅಂಬಾನಿ ದಂಪತಿ, ಇಶಾ ಅಂಬಾನಿ ದಂಪತಿ, ಮರ್ಚೆಂಟ್ ಫ್ಯಾಮಿಲಿ ಸದಸ್ಯರು, ಆಪ್ತರು, ಸ್ನೇಹಿತರು ಹಾಗೂ ಗಣ್ಯಾತಿಗಣ್ಯರು ಸಾಕ್ಷಿಯಾದರು.
ಸಮಾರಂಭಕ್ಕೆ ಸಾಕ್ಷಿಯಾದ ಗಣ್ಯಾತಿಗಣ್ಯರು


ರಾಧಿಕಾ-ಅನಂತ್ ನಿಶ್ಚಿತಾರ್ಥ ಸಮಾರಂಭವು ಮುಂಬೈನ ನಿವಾಸದಲ್ಲಿ ಗೋಲ್ ಧನ ಸಮಾರಂಭದೊಂದಿಗೆ ನಡೆಯಿತು. ರಾಧಿಕಾ ಮರ್ಚೆಂಟ್ ಗೋಲ್ಡನ್ ಲೆಹೆಂಗಾ ಧರಿಸಿದ್ದರೆ, ಅನಂತ್ ಅಂಬಾನಿ ನೀಲಿ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ್ರು. ಐಶ್ವರ್ಯಾ ರೈ ಬಚ್ಚನ್, ವಿಧು ವಿನೋದ್ ಚೋಪ್ರಾ, ಸಚಿನ್ ತೆಂಡೂಲ್ಕರ್ - ಅಂಜಲಿ ತೆಂಡೂಲ್ಕರ್ ದಂಪತಿ, ನಟ, ನಿರ್ಮಾಪಕ ಆಮೀರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ಸೇರಿದಂತೆ ಗಣ್ಯಾತಿಗಣ್ಯರು ಹಾಜರಿದ್ದರು.


ಅಂಬಾನಿ ಕುಟುಂಬಸ್ಥರು


ಇದನ್ನೂ ಓದಿ: Anant Ambani-Radhika Merchant Engagement: ಮಗನ ನಿಶ್ಚಿತಾರ್ಥದಲ್ಲಿ ಅಂಬಾನಿ ದಂಪತಿ ಸಂಭ್ರಮ! ಮುಕೇಶ್-ನೀತಾ ಅಂಬಾನಿ ಫೋಟೋಸ್ ಇಲ್ಲಿವೆ


ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಮಾರಂಭ


ಸಂಜೆ ಅನಂತ್ ಅವರ ಸಹೋದರಿ ಇಶಾ ಮತ್ತು ಅಂಬಾನಿ ಕುಟುಂಬದ ಇತರ ಸದಸ್ಯರು ರಾಧಿಕಾ ಅವರ ಕುಟುಂಬದ ಮನೆಗೆ ಭೇಟಿ ನೀಡಿ ಅವರನ್ನು ಔಪಚಾರಿಕವಾಗಿ ಆಹ್ವಾನಿಸಿದರು. ಮಂತ್ರಘೋಷಗಳ ಮೂಲಕ ಅವರನ್ನು ಸ್ವಾಗತಿಸಲಾಯಿತು. ಬಳಿಕ ಶ್ರೀಕೃಷ್ಣನ ಆಶೀರ್ವಾದ ಪಡೆಯಲು ಭಾವೀ ದಂಪತಿಗಳು ಮತ್ತು ಕುಟುಂಬಸ್ಥರು ದೇವಸ್ಥಾನಕ್ಕೆ ತೆರಳಿದರು. ಗಣೇಶನ ಪೂಜೆಯೊಂದಿಗೆ ಮುಖ್ಯ ಕಾರ್ಯಗಳು ಪ್ರಾರಂಭವಾದವು.


ರಾಧಿಕಾ-ಅನಂತ್ ಅಂಬಾನಿ


ಪರಸ್ಪರ ಉಂಗುರ ವಿನಿಮಯ


ಗುಜರಾತಿ ಸಂಪ್ರದಾಯದಂತೆ ಗೋಲ್ ಧನ ಕಾರ್ಯಕ್ರಮ ನಡೆಯಿತು. ಮದುವೆಯ ಪೂರ್ವ ಸಮಾರಂಭದಲ್ಲಿ ಬೆಲ್ಲ ಮತ್ತು ಕೊತ್ತಂಬರಿ ಬೀಜಗಳನ್ನು ಸಾಂಕೇತಿಕವಾಗಿ ವಿನಿಮಯ ಮಾಡಿಕೊಳ್ಳಲಾಗುತ್ತದೆ ಮತ್ತು ಚುನರಿ ವಿಧಿಯಂತಹ ಸಮಾರಂಭಗಳು ನಡೆದವು. ಅಂಬಾನಿ ಕುಟುಂಬದವರು ಮಗನ ನಿಶ್ಚಿತಾರ್ಥ ಸಮಾರಂಭದ ನಿಮಿತ್ತ ವಿಶೇಷವಾಗಿ ನೃತ್ಯ ಪ್ರದರ್ಶನ ನೀಡಿದ್ರು. ಮಂತ್ರಘೋಷ, ಗಣ್ಯಾತಿಗಣ್ಯರ ಶುಭ ಹಾರೈಕೆಗಳು ಮತ್ತು ಹಿರಿಯರಕ ಆಶೀರ್ವಾದಗಳ ನಡುವೆ ಭಾವೀ ದಂಪತಿಗಳು ಉಂಗುರಗಳನ್ನು ವಿನಿಮಯ ಮಾಡಿಕೊಂಡರು.


ರಾಧಿಕಾ ಮರ್ಚೆಂಟ್ ಯಾರು?


ರಾಧಿಕಾ ಮರ್ಚೆಂಟ್ ಎನ್ಕೋರ್ ಹೆಲ್ತ್‌ಕೇರ್ ಸಿಇಒ ವೀರೆನ್ ಮರ್ಚೆಂಟ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ. ರಾಧಿಕಾ ಮರ್ಚೆಂಟ್ ಡಿಸೆಂಬರ್ 18, 1994 ರಂದು ಮುಂಬೈನಲ್ಲಿ ಜನಿಸಿದರು. ಗುಜರಾತ್‌ನ ಕಚ್‌ ಮೂಲದ ರಾಧಿಕಾ ಹಲವು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದಾರೆ. ಅವರು ಮುಂಬೈನ ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಶಾಲೆ ಮತ್ತು ಜುಹುದಲ್ಲಿನ ಎಕೋಲ್ ಮೊಂಡಿಯೇಲ್ ವರ್ಲ್ಡ್ ಸ್ಕೂಲ್‌ಗೆ ಸೇರಿದರು. ನಂತರ ಅವರು BD ಸೋಮಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಿಂದ ಇಂಟರ್‌ನ್ಯಾಶನಲ್ ಬ್ಯಾಕಲೌರಿಯೇಟ್ ಡಿಪ್ಲೋಮಾವನ್ನು ಪಡೆದರು.


ಇದನ್ನೂ ಓದಿ: Anant Ambani-Radhika Merchant Engagement: ಅನಂತ್ ಅಂಬಾನಿ-ರಾಧಿಕಾ ಎಂಗೇಜ್​ಮೆಂಟ್, ಅದ್ದೂರಿ ಸಮಾರಂಭದ ಕಲರ್​ಫುಲ್ ಫೋಟೋಸ್


ಭರತ ನಾಟ್ಯ ಕಲಾವಿದೆ ರಾಧಿಕಾ


ರಾಧಿಕಾ ಎಂಟು ವರ್ಷಗಳಿಂದ ಭರತನಾಟ್ಯ ನೃತ್ಯಗಾರ್ತಿಯಾಗಿದ್ದು, ಗುರು ಭಾವನಾ ಠಾಕರ್ ಅವರ ಮಾರ್ಗದರ್ಶನದಲ್ಲಿ ಮುಂಬೈನ ಶ್ರೀ ನಿಭಾ ಆರ್ಟ್ಸ್‌ನಲ್ಲಿ ತರಬೇತಿ ಪಡೆದಿದ್ದಾರೆ.

Published by:Annappa Achari
First published: