Nita Mukesh Ambani Cultural Centre: ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ರಾಧಿಕಾ ಮರ್ಚೆಂಟ್, ಅನಂತ್ ಅಂಬಾನಿ

ರಾಧಿಕಾ ಮರ್ಚೆಂಟ್, ಅನಂತ್ ಅಂಬಾನಿ

ರಾಧಿಕಾ ಮರ್ಚೆಂಟ್, ಅನಂತ್ ಅಂಬಾನಿ

ಎನ್‌ಎಂಎಸಿಸಿ ಉದ್ಘಾಟನಾ ಸಮಾರಂಭದಲ್ಲಿ ಶೀಘ್ರದಲ್ಲೇ ಅನಂತ್ ಅಂಬಾನಿ ಮತ್ತು ಭಾವಿ ಪತ್ನಿ ರಾಧಿಕಾ ಮರ್ಚೆಂಟ್ ವಿಶೇಷ ಆಕರ್ಷಣೆಯಾಗಿದ್ದರು. ದಂಪತಿಗಳು ಕಪ್ಪು ಬಣ್ಣದ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು. ಕುರ್ತಾ-ಪೈಜಾಮ ಕಾಂಬೊದಲ್ಲಿ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಕಪ್ಪು ಸೀರೆಯಲ್ಲಿ ಕಂಗೊಳಿಸಿದರು.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Mumbai, India
  • Share this:

ಮುಂಬೈ: ಮುಂಬೈನಲ್ಲಿ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMACC) ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಸಹ, ನೀತಾ ಅಂಬಾನಿ (Nita Ambani), ಆಕಾಶ್ ಅಂಬಾನಿ, ಶ್ಲೋಕಾ, ಇಶಾ ಮತ್ತು ಅನಂತ್ ಅಂಬಾನಿ ಒಟ್ಟಿಗೆ ಸೇರಿದ್ದಾರೆ. ಈ ಕಾರ್ಯಕ್ರಮಕ್ಕೆ ಕೈಗಾರಿಕೋದ್ಯಮಿ ಅಜಯ್ ಪಿರಾಮಲ್ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು. ಹಾಲಿವುಡ್ ನಟರಾದ ಟಾಮ್ ಹಾಲೆಂಡ್, ನಟಿ ಝೆಂಡಯಾ, ಅನುಷ್ಕಾ ದಾಂಡೇಕರ್, ಉದ್ಧವ್ ಠಾಕ್ರೆ ಅವರ ಕುಟುಂಬ, ಯುವರಾಜ್ ಸಿಂಗ್ ಮತ್ತು ಅವರ ಪತ್ನಿ ಹೇಜಲ್ ಕೀಚ್, ರಾಹುಲ್ ವೈದ್ಯ, ದಿಶಾ ಪರ್ಮಾರ್, ನಟಿ ಸೋನಮ್ ಕಪೂರ್, ನೀತು ಕಪೂರ್, ಸೂಪರ್ ಸ್ಟಾರ್ ರಜನಿಕಾಂತ್, ಉದ್ಯಮಿ ಆನಂದ್ ಮಹೀಂದ್ರ ಸಹ ಈ ಸಮಾರಂಭದಲ್ಲಿ ಗಣ್ಯಾತಿಗಣ್ಯರು ಭಾಗವಹಿಸಿದ್ದರು.


ಕಾರ್ಯಕ್ರಮದ ಆಕರ್ಷಣೆಯಾಗಿದ್ದ ಅನಂತ್ - ರಾಧಿಕಾ ಮರ್ಚೆಂಟ್


ಎನ್‌ಎಂಎಸಿಸಿ ಉದ್ಘಾಟನಾ ಸಮಾರಂಭದಲ್ಲಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿಶೇಷ ಆಕರ್ಷಣೆಯಾಗಿದ್ದರು. ಈ ಜೋಡಿ ಕಪ್ಪು ಬಣ್ಣದ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು. ಕುರ್ತಾ-ಪೈಜಾಮ ಕಾಂಬೊದಲ್ಲಿ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಕಪ್ಪು ಸೀರೆಯಲ್ಲಿ ಕಂಗೊಳಿಸಿದರು.


ಅವರಿಗಿಂತ ಮೊದಲು ಮುಕೇಶ್ ಅಂಬಾನಿ ಮತ್ತು ಅವರ ಪುತ್ರಿ ಇಶಾ ಕಾರ್ಯಕ್ರಮಕ್ಕೆ ಬಂದಿದ್ದರು. ತಂದೆ ಮತ್ತು ಮಗಳು ಸಹ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು. ಇಶಾ ಸುಂದರವಾದ ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡರೆ, ಆಕೆಯ ತಂದೆ ಕಪ್ಪು ಸೂಟ್‌ನಲ್ಲಿ ಮಿಂಚಿದರು. ಆಕಾಶ್ ಅಂಬಾನಿ, ಶ್ಲೋಕಾ ಮೆಹ್ತಾ ಸುಂದರವಾದ ಉಡುಗೆಯನ್ನು ಧರಿಸಿದ್ದರು. ಆಕಾಶ್ ಹಸಿರು ಕುರ್ತಾ ಕಾಂಬೋ ತೊಟ್ಟಿದ್ದರೆ, ಶ್ಲೋಕಾ ಸೀರೆ ಉಟ್ಟಿದ್ದರು.




ಜನವರಿಯಲ್ಲಿ ನಿಶ್ಚಿತಾರ್ಥ


ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ಎನ್ಕೋರ್ ಹೆಲ್ತ್‌ಕೇರ್ ಸಿಇಒ ವೀರೆನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ನಿಶ್ಚಿತಾರ್ಥ ಸಮಾರಂಭವು ಜನವರಿ 19, 2023 ರಂದು ಮುಂಬೈನಲ್ಲಿ ನಡೆದಿತ್ತು.


ಬಾಲಿವುಡ್ ನಟರ ಸಮಾಗಮ


ಇನ್ನೂ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನಾ ಸಮಾರಂಭಕ್ಕೆ ಹಲವಾರು ಬಾಲಿವುಡ್ ಮತ್ತು ಅಂತರಾಷ್ಟ್ರೀಯ ಸಿನಿ ತಾರೆಯರು ಸಹ ವಿಶೇಷ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದರಲ್ಲಿ ಶಾರುಖ್ ಖಾನ್, ಕರಣ್ ಜೋಹರ್, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್, ಟಾಮ್ ಹಾಲೆಂಡ್, ಝೆಂಡಯಾ ಮತ್ತು ಹೆಚ್ಚಿನವರು ಸೇರಿದ್ದಾರೆ. ಉದ್ಘಾಟನಾ ಕಾರ್ಯಕ್ರಮಕ್ಕೂ ಮೊದಲೇ ಅಮೀರ್ ಖಾನ್ ಮತ್ತು ಕುಟುಂಬ ಆಗಮಿಸಿದೆ. ಲಾಲ್ ಸಿಂಗ್ ಚಡ್ಡಾ ಚಿತ್ರದ ನಟ ಈವೆಂಟ್‌ನಲ್ಲಿ ತಮ್ಮ ಹೊಸ ಲುಕ್​ನಲ್ಲಿ ಆಗಮಿಸಿದ್ದಾರೆ.


ಇದನ್ನೂ ಓದಿ: Nita Mukesh Ambani Cultural Centre: ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆಯಲ್ಲಿ ಗಣ್ಯರ ಸಮಾಗಮ


ಕುಟುಂಬ ಸಮೇತರಾಗಿ ಆಗಮಿಸಿದ ಅಮೀರ್​ ಖಾನ್


ಅಮೀರ್ ಖಾನ್ ಈ ವಿಶೇಷ ಕಾರ್ಯಕ್ರಮಕ್ಕೆ ತುಂಬಾ ಸಿಂಪಲ್ ಆಗಿ ಆಗಮಿಸಿದ್ದಾರೆ. ಹಸಿರು ಕುರ್ತಾ, ಡೆನಿಮ್ ಪ್ಯಾಂಟ್ ಜೊತೆಗೆ ಕ್ಲಾಸಿ ಶೂ ಧರಿಸಿದ್ದರು. ಇನ್ನು ಅವರ ಮಗಳು ಇರಾ ಖಾನ್ ಕಪ್ಪು ಮತ್ತು ಬಿಳಿ ಉಡುಗೆಯನ್ನು ಮತ್ತು ಆಕೆಯ ಭಾವಿ ಪತಿ ನೂಪುರ್ ಶಿಕಾರೆ ಟುಕ್ಸೆಡೊವನ್ನು ಧರಿಸಿದ್ದರು. ಅಮೀರ್ ಅವರ ಮಕ್ಕಳಾದ ಜುನೈದ್ ಖಾನ್ ಮತ್ತು ಆಜಾದ್ ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.


ಸೂಪರ್ ಸ್ಟಾರ್ ರಜನಿಕಾಂತ್ ಭಾಗಿ


ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಅಮೀರ್ ಮತ್ತು ರಜನಿಕಾಂತ್ ಜೊತೆಗೆ, ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪತ್ನಿ ಅಂಜಲಿ ತೆಂಡೂಲ್ಕರ್ ಮತ್ತು ಅವರ ಮಗಳು ಸಾರಾ ತೆಂಡೂಲ್ಕರ್ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸಚಿನ್ ನೀಲಿ ಸೂಟ್‌ನಲ್ಲಿ ಧರಿಸಿದ್ದರೆ, ಪತ್ನಿ ಸಾಂಪ್ರದಾಯಿಕ ನೀಲಿ ಉಡುಗೆಯನ್ನು ಮಿಂಚಿದರು..


ಈ ಕಾರ್ಯಕ್ರಮದಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳಾದ ಏಕ್ತಾ ಕಪೂರ್, ಜೀತೇಂದ್ರ ಮತ್ತು ತುಷಾರ್ ಕಪೂರ್ , ವಿದ್ಯಾ ಬಾಲನ್, ಆಲಿಯಾ ಭಟ್ ಕೂಡ ಇದ್ದರು.

First published: