ಹೆಸರಾಂರ ಉದ್ಯಮಿ, ಮಹಿಂದ್ರಾ ಕಂಪನಿ ಮಾಲೀಕ ಆನಂದ್ ಮಹಿಂದ್ರಾ ಸರಳ, ಕ್ರಿಯಾತ್ಮಕ ವ್ಯಕ್ತಿ. ಸ್ಥಳೀಯ ಪ್ರತಿಭೆಯನ್ನು ಗುರಿತಿಸಿ ಅವರಿಗೆ ಉದ್ಯೋಗ ಕಲ್ಪಿಸುವ ಇವರಿಗೆ ಅಪಾರ ಅಭಿಮಾನ ಬಳಗವೇ ಇದೆ.
ಟ್ವಿಟರ್ನಲ್ಲಿ ಸದಾ ಕ್ರಿಯಾಶೀಲರಾಗಿರುವ ಉದ್ಯಮಿ ಆನಂದ್ ಮಹಿಂದ್ರಾ ಎದುರು ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿರುವ ಅವರ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟು ದೊಡ್ಡ ಕಂಪನಿಯ ಮಾಲೀಕನಾಗಿ ತಮ್ಮ ಅಭಿಮಾನಿಗಳ ಟ್ವೀಟ್ಗೆ ಜಾಣ್ಮೆಯಿಂದ ಉತ್ತರಿಸುರವ ಅವರ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟಕ್ಕೂ ಅಭಿಮಾನಿಗೆ ಬೇಡಿಕೆ ಏನು ಗೊತ್ತಾ? ಒಂದು ಜೀಪ್.
ಅಚ್ಚರಿಯಾದರೂ ಹೌದು. ದಿನಕ್ಕೆ ನೂರಾರು ಕಾರುಗಳನ್ನು ಉತ್ಪಾದಿಸುವ ತಮ್ಮ ಮಹಿಂದ್ರಾ ಕಂಪನಿಯಿಂದ 10 ಲಕ್ಷದ ಮಹಿಂದ್ರಾ ಥಾರ್ ಜೀಪ್ನ್ನು ಅಭಿಮಾನಿ ಬೇಡಿಕೆ ಇಟ್ಟಿದ್ದಾರೆ.
ನಾನು ನಿಮ್ಮ ಅಭಿಮಾನಿಯಾಗಿದ್ದು, ನನ್ನ ಹುಟ್ಟುಹಬ್ಬದ ಸಲುವಾಗಿ ಮಹಿಂದ್ರಾ ಥಾರ್ ಕಾರ್ ನೀಡಿ ಎಂದು ವಿಪುಲ್ ಚಟ್ಜ್ಪಾ ಎಂಬ ವ್ಯಕ್ತಿ ಕೋರಿಕೊಂಡಿದ್ದಾನೆ.
Word lesson of the day:
CHUTZPAH
/ˈxʊtspə,ˈhʊtspə/
noun
extreme self-confidence or audacity (usually used approvingly).
"love him or hate him, you have to admire Vipul’s chutzpah"
Full marks for chutzpah, Vipul, but unfortunately I can’t say yes. Mera dhandha bund ho jayega! 😊 https://t.co/wzsUsCZBkM
— anand mahindra (@anandmahindra) August 16, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ