Viral Video: ರೋಬೋಟ್​ಗಳಿಗಿಂತ ವೇಗವಾಗಿ ದೋಸೆ ಮಾಡುವ ವ್ಯಕ್ತಿಯ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ

Anand Mahindra: ಈ ಉದ್ಯಮಿ ಸಾಮಾನ್ಯವಾಗಿ ಒಳನೋಟವುಳ್ಳ ಪೋಸ್ಟ್‌ಗಳನ್ನು, ಸಂತೋಷದಾಯಕ ವಿಡಿಯೋ ಸೇರಿದಂತೆ ಹಲವು ವಿಡಿಯೋಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಆನಂದ ಮಹೇಂದ್ರ

ಆನಂದ ಮಹೇಂದ್ರ

  • Share this:
ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅವರ ಟ್ವಿಟ್ಟರ್ ಖಾತೆಯನ್ನು ಜನರು ಆಸಕ್ತಿದಾಯಕ ವೀಡಿಯೊಗಳು ಮತ್ತು ಪೋಸ್ಟ್‌ಗಳ ಚಿನ್ನದ ಗಣಿ ಎಂದು ಕರೆಯುತ್ತಾರೆ. ಅವರು ಯಾವಾಗೂ ತಮ್ಮ ಫಾಲೋವರ್ಸ್ಗಳೊಂದಿಗೆ ವಿಶೇಷ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ, ಮಹೀಂದ್ರ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ಟ್ವಿಟ್ಟರ್ ನಲ್ಲಿ ಮಿಂಚಿನಂತೆ ವೇಗವಾಗಿ ದೋಸೆ ಮಾಡುತ್ತಿದ್ದ ವ್ಯಕ್ತಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ತುಂಬಾ ವೇಗವಾಗಿ ದೋಸೆ ಮಾಡುತ್ತಿದ್ದ ವ್ಯಕ್ತಿಯ ವಿಡಿಯೋ ಹಂಚಿಕೊಳ್ಳುವುದರ ಜೊತೆಗೆ ಆ ವ್ಯಕ್ತಿಯ ಅಸಾಧಾರಣ ಕೌಶಲ್ಯವನ್ನು ಪ್ರಶಂಸಿಸಿದ್ದಾರೆ. ಈ ವ್ಯಕ್ತಿಯೂ ರೋಬೋಟ್ಗಿಂತ ಹೆಚ್ಚು ವೇಗವಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಹೊಗಳಿದ್ದಾರೆ. 28 ಸೆಕೆಂಡ್‌ಗಳ ಕ್ಲಿಪ್‌ನಲ್ಲಿ, ರೋಬೋಟ್‌ಗಳು ಸಹ ನಾಚಿಸುವಂತೆ ಬಹಳ ವೇಗದಲ್ಲಿ ವ್ಯಕ್ತಿಯೊಬ್ಬ ಒಂದು ಪ್ಯಾನ್‌ನಲ್ಲಿ ಬಿಸಿ ದೋಸೆಗಳನ್ನು ಹಾಕುವುದನ್ನ ನೋಡಬಹುದು. ಅಲ್ಲದೇ ಪ್ಯಾನ್ನಲ್ಲಿ ದೋಸೆ ಬೆಂದ ನಂತರ ಅದನ್ನು ತೆಗೆದು ವಿಶಿಷ್ಟವಾದ ಶಂಕುವಿನಾಕಾರದ ದೋಸೆ  ಮಡಚಿ ಮತ್ತು ದೋಸೆಯನ್ನು ತುಂಡುಗಳಾಗಿ ವಿಭಜಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ನೋಡುಗರಲ್ಲಿ ಆಶ್ಚರ್ಯ ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.



ಅಲ್ಲದೆ, ನಾನು ಈತನ ಕೆಲಸವನ್ನು ನೋಡಿ ಸುಸ್ತಾಗಿದ್ದೇನೆ ಜೊತೆಗೆ ನನಗೆ ಖಂಡಿತವಾಗಿ ಹಸಿವಾಗಿದೆ ಎಂದಿದ್ದಾರೆ. ಇಲ್ಲಿಯವರೆಗೆ, ಈ ವಿಡಿಯೋಗೆ ಸುಮಾರು 18,000 ಲೈಕ್‌ಗಳು ಬಂದಿದ್ದು, ಮತ್ತು 1,500 ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಮಾಡಲಾಗಿದೆ.

ಈ ಉದ್ಯಮಿ ಸಾಮಾನ್ಯವಾಗಿ ಒಳನೋಟವುಳ್ಳ ಪೋಸ್ಟ್‌ಗಳನ್ನು, ಸಂತೋಷದಾಯಕ ವಿಡಿಯೋ ಸೇರಿದಂತೆ ಹಲವು ವಿಡಿಯೋಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೇ ಈ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಸಂಶೋಧನೆಗೆ ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡಲು ಸಹ ಪ್ರೋತ್ಸಾಹ ನೀಡುತ್ತಾರೆ.

ಇದನ್ನೂ ಓದಿ: ಮಳೆಗಾಲದಲ್ಲಿ ನವಜಾತ ಶಿಶುಗಳ ಚರ್ಮದ ರಕ್ಷಣೆಗೆ ಇಲ್ಲಿದೆ ಟಿಪ್ಸ್

ಕಳೆದ ವಾರ, ಮಹೀಂದ್ರ ಅವರು ಎಳನೀರು ವ್ಯಾಪಾರಿಯೊಬ್ಬ ತನ್ನ ಯಂತ್ರದ ಮೂಲಕ ತೆಂಗಿನ ನೀರನ್ನು ಮಾರಾಟ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಯಂತ್ರವೊಂದು ತೆಂಗಿನಕಾಯಿಯೊಳಗೆ ರಂಧ್ರವನ್ನು ಕೊರೆದು ಎಳನೀರು ಕುಡಿಯಲು ಸಹಾಯವಾಗುವಂತೆ ಮಾಡುತ್ತದೆ. ಅಲ್ಲದೆ ರಂಧ್ರ ಕೊರೆದ ನಂತರ ನೀರನ್ನು ಯಂತ್ರದ ಮೂಲಕ ಪ್ಲಾಸ್ಟಿಕ್ ಕಪ್‌ಗೆ ಫಿಲ್ಟರ್ ಮಾಡಲಾಗುತ್ತದೆ.

ಈ ವಿಡಿಯೋವನ್ನು ಮಾರಾಟಗಾರರನ್ನು ಮತ್ತು ಸಂಶೋಧಕರನ್ನು ಉತ್ತೇಜಿಸುವ ಸಲುವಾಗಿ ಹಂಚಿಕೊಂಡಿದ್ದೆ, ಆದರೆ ಆ ಪೋಸ್ಟ್ಗೆ ವಿವಿಧ ರೀತಿಯ ಪ್ರತಿಕ್ರಿಯೆಗಳು ಲಭಿಸಿದ್ದವು ಎಂದಿದ್ದಾರೆ. ಅವರು ಹಂಚಿಕೊಂಡಿದ್ದ ಆ ವಿಡಿಯೋಗೆ ಕೆಲ ಜನರು,ಸಾಮಾನ್ಯವಾಗಿ ವ್ಯಾಪಾರಿಗಳು ಕೇವಲ ಒಂದು ಕತ್ತಿಯ ಮೂಲಕ ವೇಗದಿಂದ ಎಳನೀರು ಕತ್ತರಿಸುತ್ತಾರೆ, ಅಲ್ಲದೆ ಅವರು ಪ್ಲಾಸ್ಟಿಕ್ ಬಳಸದೆ ಸ್ವಚ್ಛತೆಯನ್ನು ಕಾಪಾಡುತ್ತಾರೆ ಎಂದು ಪ್ರತಿಕ್ರಿಯಿಸಿದ್ದರು ಎಂದು ಆನಂದ ಮಹೀಂದ್ರ ಹೇಳಿಕೊಂಡಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: