ಗುಬ್ಬಚ್ಚಿ ಗೂಡಿನ ರಕ್ಷಣೆಗಾಗಿ ಬೆಳೆ ಕಟಾವು ಮಾಡದ ರೈತ; ಆನಂದ್ ಮಹೀಂದ್ರಾ ಮೆಚ್ಚುಗೆ

ತಮಿಳುನಾಡು ಮೂಲದ ರೈತನ ಈ ನಡೆಯನ್ನು ಉದ್ಯಮಿ ಆನಂದ್ ಮಹೀಂದ್ರಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇಂದಿನ ಸಮಯದಲ್ಲಿ ಇದು ಗ್ರಹಕ್ಕೆ ಬೇಕಾಗಿರುವುದು.’ ಎಂದು ಅವರು ಹೇಳಿದ್ದಾರೆ. ಗುಬ್ಬಚ್ಚಿ ಗೂಡಿಗೆ ಮತ್ತು ಮೊಟ್ಟೆಗಳಿಗೆ ತೊಂದರೆಯಾಗಬಾರದೆಂದು ಕೊಯ್ಲು ಮಾಡದಿರಲು ನಿರ್ಧರಿಸಿದ ರೈತನನ್ನು ‘ಪರಿಸರ ವೀರ’ ಎಂದು ಅವರು ಕರೆದಿದ್ದಾರೆ.

ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾ

 • Share this:
  ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಳ್ಳುತ್ತಾ ತಮ್ಮ ಅಭಿಮಾನಿಗಳ ಜೊತೆ ಚರ್ಚಿಸುತ್ತಿರುತ್ತಾರೆ. ಇದೀಗ ತಮ್ಮ ಟ್ವಿಟರ್ ಖಾತೆಯಲ್ಲಿ ಅವರೊಂದು ಹೃದಯ ಮಿಡಿಯುವ ವಿಡಿಯೋ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋ ಕ್ಲಿಪ್ ನಲ್ಲಿ ಒಬ್ಬ ರೈತ ತನ್ನ ಜಮೀನಿನಲ್ಲಿ ಗುಬ್ಬಚ್ಚಿ ಗೂಡು ಕಟ್ಟಿ ಮೊಟ್ಟೆಗಳನ್ನಿಟ್ಟಿರುವುದನ್ನು ಗಮನಿಸುತ್ತಾನೆ. ಗುಬ್ಬಚ್ಚಿಗೆ ತೊಂದರೆಯಾಗದಿರಲಿ ಎಂದು ಆ ಭಾಗದ ಬೆಳೆಯನ್ನು ಕೊಯ್ಲು ಮಾಡದಿರಲು ನಿರ್ಧರಿಸುತ್ತಾನೆ.

  ತಮಿಳುನಾಡು ಮೂಲದ ರೈತನ ಈ ನಡೆಯನ್ನು ಉದ್ಯಮಿ ಆನಂದ್ ಮಹೀಂದ್ರಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇಂದಿನ ಸಮಯದಲ್ಲಿ ಇದು ಗ್ರಹಕ್ಕೆ ಬೇಕಾಗಿರುವುದು.’ ಎಂದು ಅವರು ಹೇಳಿದ್ದಾರೆ. ಗುಬ್ಬಚ್ಚಿ ಗೂಡಿಗೆ ಮತ್ತು ಮೊಟ್ಟೆಗಳಿಗೆ ತೊಂದರೆಯಾಗಬಾರದೆಂದು ಕೊಯ್ಲು ಮಾಡದಿರಲು ನಿರ್ಧರಿಸಿದ ರೈತನನ್ನು ‘ಪರಿಸರ ವೀರ’ ಎಂದು ಅವರು ಕರೆದಿದ್ದಾರೆ. 18 ಸೆಕೆಂಡುಗಳಿರುವ ರೈತನ ಈ ಸೆಲ್ಫಿ ವಿಡಿಯೋದಲ್ಲಿ ಗುಬ್ಬಚ್ಚಿ ಮೊಟ್ಟೆ ಇಟ್ಟಿರುವ ಗೂಡು ಹಾಗೂ ಕೊಯ್ಲು ಮಾಡದೆ ಬಿಟ್ಟಿರುವ ಬೆಳೆಯನ್ನು ತೋರಿಸಲಾಗಿದೆ.





  ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿರುವ ಈ ವಿಡಿಯೋಗೆ ಸಾವಿರಾರು ನೆಟಿಜನ್‌ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಪಕ್ಷಿಗಳು ಮತ್ತು ಪ್ರಾಣಿಗಳಿಗೆ ಸಹಾಯ ಮಾಡುವ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ನಮ್ಮ ದೇಶದ ಮತ್ತು ಪರಿಸರದ ನಿಜವಾದ ವೀರರು ರೈತರು’ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ತಮ್ಮ ಜಮೀನಿನಲ್ಲಿದ್ದ ಜೇನುಗೂಡನ್ನು ಗಮನಿಸಿ, ಅದನ್ನು ರಕ್ಷಿಸಿರುವ ಬಗ್ಗೆ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

  ‘ಪ್ರತಿಯೊಬ್ಬ ರೈತ ಕೂಡ ಪ್ರಾಣಿ-ಪಕ್ಷಿಗಳ ವಿಚಾರದಲ್ಲಿ ಇದೇ ರೀತಿ ಮಾಡುತ್ತಾರೆ. ಇದು ಇತ್ತೀಚಿಗೆ ಸಾಮಾನ್ಯ ಸಂಗತಿಯಾಗಿದೆ. ನಾನು ನನ್ನ ಜೀವನದಲ್ಲಿ ಈ ರೀತಿಯ ಅನೇಕ ಘಟನೆಗಳನ್ನು ಗಮನಿಸಿದ್ದೇನೆ. ನಾನೂ ಕೂಡ ಜೇನುಗೂಡನ್ನು ರಕ್ಷಿಸಲು ನಮ್ಮ ಜಮೀನಿನ ಒಂದು ಭಾಗದ ಬೆಳೆಯನ್ನು ಕೊಯ್ಲು ಮಾಡದೆ ಹಾಗೆ ಬಿಟ್ಟಿದ್ದೆ’ ಎಂದು ಅವರು ಬರೆದುಕೊಂಡಿದ್ದಾರೆ. ‘ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಕೂಡ ಪರಿಸರ ಸುಧಾರಣೆಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಮತ್ತೊಬ್ಬರು ಸೂಚಿಸಿದ್ದಾರೆ.

  ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, 40 ವರ್ಷ ವಯಸ್ಸಿನ ಈ ರೈತನ ಹೆಸರು ಜೆ.ರಂಗನಾಥನ್. ಇವರು ತಮಿಳುನಾಡಿನ ತಂಜಾವೂರಿನ ಕುಂಬಕೋಣಂ ಬಳಿಯ ಹಳ್ಳಿಯವರು. ರಂಗನಾಥನ್ ಅವರ ಜಮೀನಿನ ಬೆಳೆ ಕೊಹ್ಲಿಗೆ ಸಿದ್ಧವಾಗಿದ್ದ ವೇಳೆ ಈ ವಿಡಿಯೋ ತೆಗೆಯಲಾಗಿದೆ. ಮಷಿನ್ ಮೂಲಕ ಕೊಯ್ಲು ಮಾಡುತ್ತಿದ್ದ ಅವರು ಗೂಡು ಇರುವುದನ್ನು ಗಮನಿಸಿದ್ದರು. ಕೂಡಲೇ ಆ ಭಾಗದ ಕೊಯ್ಲು ಮಾಡುವುದು ಬೇಡವೆಂದು ಸೂಚಿಸಿದ್ದರು. ಬಳಿಕ ಗೂಡು ಪರಿಶೀಲಿಸಿದ ಅವರು 4 ಗುಬ್ಬಚ್ಚಿ ಮೊಟ್ಟೆಗಳು ಇರುವುದನ್ನು ಕಂಡುಕೊಂಡರು. ‘ಗೂಡನ್ನು ಬೇರೆಡೆಗೆ ಸ್ಥಳಾಂತರಿಸಲು ಆಗುವುದಿಲ್ಲ. ಹೀಗಾಗಿ ಜಮೀನಿನ ಆ ನಿರ್ದಿಷ್ಟ ಭಾಗವನ್ನು ಕಟಾವು ಮಾಡದೆ ಹಾಗೆ ಬಿಟ್ಟಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.
  Published by:Latha CG
  First published: