Avani Lekhara: ಚಿನ್ನ ಗೆದ್ದ ಅವನಿ ಲೇಖರಾಗೆ 'ವಿಶೇಷ SUV' ಉಡುಗೊರೆ ಘೋಷಿಸಿದ ಆನಂದ್​ ಮಹೀಂದ್ರಾ

ಈ ವಿಶೇಷ ಕಾರನ್ನು ವಿಶೇಷ ಚೇತನರು ಕೂಡ ಸುಲಭವಾಗಿ, ಆರಾಮದಾಯಕವಾಗಿ ಚಾಲನೆ ಮಾಡಬಹದು. ಇದೇ ಉದ್ದೇಶದಿಂದ ಈ ವಿಶೇಷ ಎಸ್​ಯುವಿ ವಾಹನ ನಿರ್ಮಾಣ ಮಾಡಲಾಗಿದೆ

ಆನಂದ್​ ಮಹೀಂದ್ರಾ- ಅವನಿ ಲೇಖರಾ

ಆನಂದ್​ ಮಹೀಂದ್ರಾ- ಅವನಿ ಲೇಖರಾ

 • Share this:
  ನವದೆಹಲಿ (ಆ. 30):  ಟೋಕಿಯೋ ಪ್ಯಾರಾಲಂಪಿಕ್​ನಲ್ಲಿ (Tokyo Paralympics) ಚಿನ್ನದ ಪದಕ ಗೆಲ್ಲುವ ಮೂಲಕ ಅವನಿ ಲೇಖರಾ (Avani Lekhara ) ಹೊಸ ದಾಖಲೆ ಬರೆದಿದ್ದಾರೆ ಏರ್​ ರೈಫಲ್​ ಸ್ಟ್ಯಾಂಡಿಂಗ್​ ಎಸ್​ಎಚ್​1 (Air Rifle Standing SH1) ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಮಹಿಳೆ ಎಂಬ ಕೀರ್ತಿ ಕೂಡ ಹೊಂದಿದ್ದಾರೆ. ಅವರ ಈ ಸಾಧನೆಗೆ ಮೆಚ್ಚಿ ದೇಶಾದ್ಯಂತ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಪ್ಯಾರಾಲಂಪಿಕ್ಸ್​​ನಲ್ಲಿ ಇತಿಹಾಸ ಸೃಷ್ಟಿಸಿರುವ ಅವನಿಗೆ ಉದ್ಯಮಿ ಆನಂದ್​ ಮಹೀಂದ್ರ (Anand Mahindra ) ವಿಶೇಷ ಉಡುಗೊರೆಯನ್ನು ಘೋಷಿಸಿದ್ದಾರೆ. ಮಹೀಂದ್ರ ಗ್ರೂಪ್​ನ ಅಧ್ಯಕ್ಷರಾಗಿರುವ ಆನಂದ್​ ಮಹಿಂದ್ರ, ಅವರಿಗಾಗಿ ವಿಶೇಷ ಎಸ್​ಯುವಿ ವಾಹನವನ್ನು ಘೋಷಿಸಿದ್ದಾರೆ.

  ಈ ಕುರಿತು ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, ಅವನಿ ಲೆಖಾರಾ ಅವರಿಗಾಗಿ ಮೊದಲ ಕಸ್ಟಮೈಸಡ್​​​ ಎಸ್​ಯುವಿ (SUV) ವಾಹನ ನೀಡುವುದಾಗಿ ತಿಳಿಸಿದ್ದಾರೆ. ಈ ರೀತಯು ವಾಹನವನ್ನು ನಿರ್ಮಾಣ ಮಾಡುವ ಪರಿಕಲ್ಪನೆಯನ್ನು ಭಾರತದ ಪ್ಯಾರಾಲಿಂಪಿಕ್​​ ಕಮಿಟಿಯ ಅಧ್ಯಕ್ಷೆ ದೀಪಾ ಮಲಿಕ್​ ನೀಡಿದ್ದಾರೆ ಎಂದು ಕೂಡ ಅವರು ತಿಳಿಸಿದ್ದಾರೆ.  ಈ ವಿಶೇಷ ಕಾರನ್ನು ವಿಶೇಷ ಚೇತನರು ಕೂಡ ಸುಲಭವಾಗಿ, ಆರಾಮದಾಯಕವಾಗಿ ಚಾಲನೆ ಮಾಡಬಹದು. ಇದೇ ಉದ್ದೇಶದಿಂದ ಈ ವಿಶೇಷ ಎಸ್​ಯುವಿ ವಾಹನ ನಿರ್ಮಾಣ ಮಾಡಲಾಗಿದೆ ಎಂದರು

  ಕಳೆದೊಂದು ವಾರದ ಹಿಂದೆ ದೀಪಾ ಮಲಿಕ್ ಟೋಕಿಯೋದಲ್ಲಿ ತಾವು ಬಳಸಿದಂತೆ ವಿಶೇಷ ಚೇತನರಿಗಾಗಿ ಎಸ್​ಯುವಿ ಕಾರನ್ನು ಅಭಿವೃದ್ಧಿಪಡಿಸುವಂತೆ ​ಸಲಹೆ ನೀಡಿದ್ದರು. ಈ ಕುರಿತು ತಮ್ಮ ಅಭಿವೃದ್ಧಿ ಮುಖ್ಯಸ್ಥ ವೇಲು ಅವರಿಗೆ ನಾನು ತಿಳಿಸಿದೆ. ವೇಲು ನಿರ್ಮಾಣ ಮಾಡುತ್ತಿರುವ ಈ ವಿಶೇಷ ಕಾರನ್ನು ಅವನಿ ಲೆಖಾರಾ ಅವರಿಗೆ ಮೊದಲು ಉಡುಗೊರೆಯಾಗಿ ನೀಡಲು ನಾನು ಬಯಸುತ್ತೇನೆ ಎಂದಿದ್ದಾರೆ.

  ಇದನ್ನು ಓದಿ: ಆವನಿ ಲೇಖರಗೆ ಚಿನ್ನ; ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಇಂದು 4 ಪದಕ

  ಮಹೀಂದ್ರಾ ಅವರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕೆಲವರು, ಕ್ರೀಡಾಪಟುಗಳಿಗೆ ಇಂತಹ ಮೆಚ್ಚುಗೆ ಕಾರ್ಯಗಳು ಅತ್ಯಗತ್ಯ ಎಂದಿದ್ದಾರೆ. ಇದೊಂದು ಅಭೂತ ಪೂರ್ವ ನಿರ್ಣಯ ಎಂದು ಕೆಲವರು ಶ್ಲಾಘಿಸಿದ್ದಾರೆ.

  ಮಹೀಂದ್ರಾ ಅವರು ಕ್ರೀಡಾಪಟುಗಳಿಗೆ ತಮ್ಮ ಕಂಪನಿಯ ಕಾರನ್ನು ಉಡುಗೊರೆ ನೀಡುತ್ತಿರುವುದು ಇದೇ ಮೊದಲಲ್ಲ. ಟೋಕಿಯೋ ಒಲಂಪಿಕ್ಸ್​ನಲ್ಲಿ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ವಿಜೇತ ನೀರಜ್​ ಚೋಪ್ರಾ ಅವರಿಗೆ ಕೂಡ ತಮ್ಮ ಹೊಸ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ತಿಳಿಸಿದ್ದರು ಅಕ್ಟೋಬರ್​ನಲ್ಲಿ ಬಿಡುಗಡೆಯಾಗಲಿರುವ SUV, XUV 700 aನ್ನು ಉಡುಗೊರೆಯಾಗಿ ಅವರು ನೀಡಲಿದ್ದಾರೆ.  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Seema R
  First published: