ಒಂದು ರೂಪಾಯಿಗೆ ಒಂದು ಇಡ್ಲಿ ಮಾರುತ್ತಿದ್ದ ಮಹಿಳೆಗೆ ಮನೆ ನಿರ್ಮಿಸಿಕೊಡುತ್ತಿರುವ ಆನಂದ್ ಮಹಿಂದ್ರಾ

ಒಂದು ವರ್ಷದ ಹಿಂದೆ ಮಹಿಂದ್ರಾ ಗ್ರೂಪ್ನ ಚೇರ್ಮನ್ ಆನಂದ್ ಮಹಿಂದ್ರಾ ತಮಿಳುನಾಡಿನ ಇಡ್ಲಿ ಅಮ್ಮನಿಗೆ ಸ್ವಂತ ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದರು. ಈಗ ಆ ಮನೆ ನಿರ್ಮಾಣ ಆರಂಭವಾಗಿದೆ. ತಮಿಳುನಾಡಿನ ವಡಿವೇಲಂಪಾಲಯಂ ಗ್ರಾಮದ 80 ವರ್ಷ ವಯಸ್ಸಿನ ಕಮಲತ್ತಾಳ್ ಇಡ್ಲಿ ಅಮ್ಮ ಎಂದೇ ಖ್ಯಾತಿ ಪಡೆದಿದ್ದಾರೆ. ಒಂದು ರೂಪಾಯಿಗೆ ಒಂದು ಇಡ್ಲಿ ಜೊತೆಗೆ ಚಟ್ನಿ ಮತ್ತು ಸಾಂಬಾರ್ ಮಾರುತ್ತಾರೆ ಆಕೆ.

ಫೋಟೋ ಕೃಪೆ: ಆನಂದ್ ಮಹಿಂದ್ರಾ ಟ್ವಿಟರ್ ಪೋಸ್ಟ್

ಫೋಟೋ ಕೃಪೆ: ಆನಂದ್ ಮಹಿಂದ್ರಾ ಟ್ವಿಟರ್ ಪೋಸ್ಟ್

  • Share this:
ಕೊಯಮತ್ತೂರು (ಏಪ್ರಿಲ್ 04): ಸುಮಾರು ಒಂದು ವರ್ಷದ ಹಿಂದೆ ಮಹಿಂದ್ರಾ ಗ್ರೂಪ್​ನ ಚೇರ್​ಮನ್ ಆನಂದ್ ಮಹಿಂದ್ರಾ ತಮಿಳುನಾಡಿನ ಇಡ್ಲಿ ಅಮ್ಮನಿಗೆ ಸ್ವಂತ ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದರು. ಈಗ ಆ ಮನೆ ನಿರ್ಮಾಣ ಆರಂಭವಾಗಿದೆ. ತಮಿಳುನಾಡಿನ ವಡಿವೇಲಂಪಾಲಯಂ ಗ್ರಾಮದ 80 ವರ್ಷ ವಯಸ್ಸಿನ ಕಮಲತ್ತಾಳ್ ಇಡ್ಲಿ ಅಮ್ಮ ಎಂದೇ ಖ್ಯಾತಿ ಪಡೆದಿದ್ದಾರೆ. ಒಂದು ರೂಪಾಯಿಗೆ ಒಂದು ಇಡ್ಲಿ ಜೊತೆಗೆ ಚಟ್ನಿ ಮತ್ತು ಸಾಂಬಾರ್ ಮಾರುತ್ತಾರೆ ಆಕೆ.

ಒಂದು ರೂಪಾಯಿಗೆ ಒಂದು ಇಡ್ಲಿ ಮಾರುವ ಈಕೆಯ ವಿಡಿಯೋ ವೈರಲ್ ಆಗಿತ್ತು. ಆಗ ಆ ವಿಡಿಯೋ ಶೇರ್ ಮಾಡಿದ್ದ ಆನಂದ್ ಮಹಿಂದ್ರಾ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದ ಆಕೆಗೆ ಸಹಾಯವಾಗಲೆಂದು ಎಲ್​ಪಿಜಿ ಸ್ಟೌವ್ ಕೊಡಿಸುವುದಾಗಿ ಟ್ವಿಟರ್ ನಲ್ಲಿ ಹೇಳಿದ್ದರು. ಅವರ ಟ್ವೀಟ್ ಗಮನಿಸಿದ್ದ ಕೊಯಂಬತೂರಿನ ಭಾರತ್ ಗ್ಯಾಸ್ ಸಂಸ್ಥೆ ಆಕೆಗೆ ಉಚಿತವಾಗಿ ಎಲ್​ಪಿಜಿ ಕನೆಕ್ಷನ್ ನೀಡಿತ್ತು.

ಇಡ್ಲಿ ಅಮ್ಮನ ಒಂದು ರೂಪಾಯಿ ಇಡ್ಲಿ ವಹಿವಾಟಿನಲ್ಲಿ ಹೂಡಿಕೆ ಮಾಡಲು ಆನಂದ್ ಮಹಿಂದ್ರಾ ನಿರ್ಧರಿಸಿದ್ದರು. ಆದ್ರೆ ತಾವು ಹೇಗೆ ಆಕೆಯ ವ್ಯಾಪಾರದಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಆಕೆಯೇ ಇವರಿಗೆ ಮನದಟ್ಟು ಮಾಡಿಕೊಟ್ಟಿದ್ದಾರಂತೆ.

ಹಾಗಾಗಿ ಆಕೆಯ ಅಪೇಕ್ಷೆಯಂತೆ ಆರಾಮಾಗಿ ಹೆಚ್ಚು ಇಡ್ಲಿಗಳನ್ನು ಮಾಡಲು ಅನುಕೂಲಕರವಾಗಿರುವಂತೆ ದೊಡ್ಡ ಅಡುಗೆಮನೆ ಇರುವ ಸ್ವಂತ ಮನೆಯ ಅಪೇಕ್ಷೆ ವ್ಯಕ್ತಪಡಿಸಿದ್ದರಂತೆ ಕಮಲತ್ತಾಳ್. ಇದರಿಂದ ತಾನು ಹೆಚ್ಚು ಇಡ್ಲಿಗಳನ್ನು ಮಾಡಿ ಮಾರುವುದು ಮಾತ್ರವಲ್ಲ, ಉದ್ಯೋಗವನ್ನೂ ಸೃಷ್ಟಿಸಬಹುದು ಎಂದು ತಮ್ಮ ಅಭಿಪ್ರಾಯ ಹೇಳಿದ್ದರು ಆಕೆ.

ಅದರಂತೆ ಮಹಿಂದ್ರಾ ರೈಸ್ ಎನ್ನುವ ತಮ್ಮದೇ ಅಂಗಸಂಸ್ಥೆಯ ಮೂಲಕ ಆಕೆಗೆ ಮನೆ ನಿರ್ಮಿಸಿಕೊಡಲು ಸೂಕ್ತ ಸ್ಥಳವನ್ನು ಈಗಾಗಲೇ ಕೊಂಡು ಆಕೆಯ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ. ಇನ್ನೇನಿದ್ದರೂ ಇಡ್ಲಿ ಅಮ್ಮನಿಗೆ ಬೇಕಾಗಿರುವ ಮನೆ ಕಮ್ ಹೋಟೆಲಿನ ಕಟ್ಟಡ ನಿರ್ಮಾಣವಷ್ಟೇ ಬಾಕಿ ಇದೆ. ಯಾರೂ ಹಸಿದುಕೊಂಡು ಇರಬಾರದು ಎನ್ನುವ ಉದ್ದೇಶದಿಂದ ಒಂದು ರೂಪಾಯಿಗೆ ಇಡ್ಲಿ ಮಾರಾಟ ಮಾಡುತ್ತಾರೆ ಕಮಲತ್ತಾಳ್. ಶೀಘ್ರದಲ್ಲೇ ತಮ್ಮದೇ ಸ್ವಂತ ಮನೆಗೆ ತೆರಳುವ ಖುಷಿಯಲ್ಲಿದ್ದಾರಾಕೆ.
Published by:Soumya KN
First published: