Anand Mahindra: ಗ್ರಾಮೀಣ ರಸ್ತೆಗಳಲ್ಲಿ 'ಟ್ರನೆಲ್' ನಿರ್ಮಿಸಿ! ನಿತಿನ್ ಗಡ್ಕರಿಗೆ ಆನಂದ್ ಮಹೀಂದ್ರಾ ಸಲಹೆ

ಗ್ರಾಮೀಣ ರಸ್ತೆಗಳ ಎರಡು ಬದಿಗಳಲ್ಲಿ ಮರಗಳನ್ನು ಸಾಲು ಸಾಲಾಗಿ ನೆಡಬಹುದೇ ಎಂಬುದು ಆನಂದ್ ಮಹೀಂದ್ರಾ ಅವರ ಪ್ರಶ್ನೆ.

 ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾ

  • Share this:
ನಾವು ಒಂದು ರಸ್ತೆಯ (Road) ಮೇಲೆ ಕಾರಿನಲ್ಲೋ ಅಥವಾ ಬಸ್​ನಲ್ಲಿಯೋ ಕುಳಿತುಕೊಂಡು ಹೋಗುತ್ತಿದ್ದಾಗ, ಆ ರಸ್ತೆಯ ಎರಡೂ ಬದಿಗಳಲ್ಲಿ ಸಾಲಾಗಿ ಮರಗಳು ಇದ್ದು, ಅದರಲ್ಲೂ ಆ ಎರಡು ಬದಿಯ ಮರಗಳ (Tree) ಕೊಂಬೆಗಳು ಒಂದಕ್ಕೊಂದು ಅಂಟಿಕೊಂಡಿದ್ದರೆ ನೋಡಲು ಎಷ್ಟು ಚೆನ್ನಾಗಿ ಕಾಣುತ್ತಿರುತ್ತದೆ ಮತ್ತು ಆ ರಸ್ತೆಯಲ್ಲಿ ಹಾದು ಹೋಗುವಾಗ ಮನಸ್ಸಿಗೆ ಎಷ್ಟೊಂದು ನೆಮ್ಮದಿ ಸಿಗುತ್ತದೆ ಅಲ್ಲವೇ? ಹೌದು, ನಾವು ಪ್ರಯಾಣಿಸುವ ರಸ್ತೆಗಳಲ್ಲಿ ನೆರಳು ಇದ್ದರೆ ಎಲ್ಲರಿಗೂ ಇಷ್ಟವಾಗುತ್ತದೆ. ರಸ್ತೆಯ ಎರಡು ಬದಿಯಲ್ಲಿರುವ ಮರಗಳು ನೀಡುವ ಛಾಯೆಗಳು ಸುಡುವ ಶಾಖದಿಂದ ಸ್ವಲ್ಪ ವಿರಾಮವನ್ನು (Rest) ನೀಡುತ್ತವೆ. ಹೀಗೇಕೆ ಇದರ ಬಗ್ಗೆ ನಾವು ಮಾತಾಡುತ್ತಿದ್ದೇವೆ ಅಂತ ನಿಮಗೆ ಪ್ರಶ್ನೆಯೊಂದು ಕಾಡುತ್ತಿದ್ದರೆ ಈ ಸ್ಟೋರಿ ಒಮ್ಮೆ ಓದಿ.

ಮಹೀಂದ್ರಾ ಕಂಪನಿಯ ಮುಖ್ಯಸ್ಥರಾದ ಆನಂದ್ ಮಹೀಂದ್ರಾ ಅವರು ಸದಾ ಒಂದಲ್ಲ ಒಂದು ಸ್ವಾರಸ್ಯಕರವಾದ ಮತ್ತು ಕಣ್ಣಿಗೆ ಮತ್ತು ಮನಸ್ಸಿಗೆ ಹಿತ ಎನ್ನಿಸುವ ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಯ ಪುಟಗಳಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ.

ಆನಂದ್ ಮಹೀಂದ್ರಾ ಅವರು ನಿತಿನ್ ಗಡ್ಕರಿ ಅವರಲ್ಲಿ ಕೇಳಿಕೊಂಡಿದ್ದೇನು?
ಈಗ ರಸ್ತೆಯೊಂದರ ಎರಡೂ ಬದಿಗಳಲ್ಲಿ ಮರಗಳ ಉದ್ದನೆಯ ಸಾಲುಗಳನ್ನು ತೋರಿಸುವ ವಿಡಿಯೋದಿಂದ ಆಕರ್ಷಿತರಾದ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಟ್ವಿಟರ್ ನಲ್ಲಿ ಟ್ಯಾಗ್ ಮಾಡಿ, ನಿರ್ಮಿಸಲಾಗುತ್ತಿರುವ ಗ್ರಾಮೀಣ ರಸ್ತೆಗಳ ಎರಡು ಬದಿಗಳಲ್ಲಿ ಮರಗಳನ್ನು ಸಾಲು ಸಾಲಾಗಿ ನೆಡಬಹುದೇ ಎಂದು ಕೇಳಿದ್ದಾರೆ.

ಇದನ್ನೂ ಓದಿ: Education: ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ! ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದೇ ಉದ್ಯಮಿಯ ಉದ್ದೇಶ

ಮಹೀಂದ್ರಾ ಮತ್ತು ಮಹೀಂದ್ರಾದ ಅಧ್ಯಕ್ಷರು "ಟ್ರನೆಲ್" ಎಂಬ ಪದವನ್ನು ಟ್ವೀಟ್ ಮಾಡಿದರು ಮತ್ತು ಈ "ಟ್ರನೆಲ್" ಅನ್ನು ಅವರು ಇಷ್ಟಪಟ್ಟಿದ್ದಾರೆ ಎಂದು ಹೇಳಿದರು. "ನಾನು ಈ ರೀತಿಯ ಸುರಂಗ ಮಾರ್ಗಗಳನ್ನು ತುಂಬಾನೇ ಇಷ್ಟಪಡುತ್ತೇನೆ, ಆದರೆ ಪ್ರಾಮಾಣಿಕವಾಗಿ ಹೇಳುವುದಾದರೆ, ನಾನು ಸದಾ ಈ ರೀತಿಯ 'ಟ್ರನೆಲ್' ಮೂಲಕ ಹೋಗಲು ಬಯಸುತ್ತೇನೆ. ನಿತಿನ್ ಗಡ್ಕರಿ ಅವರನ್ನು ಟ್ಯಾಗ್ ಮಾಡಿ, ನೀವು ನಿರ್ಮಿಸುತ್ತಿರುವ ಹೊಸ ಗ್ರಾಮೀಣ ರಸ್ತೆಗಳಲ್ಲಿ ಈ ಟ್ರನೆಲ್ ಗಳನ್ನು ಉದ್ದೇಶಪೂರ್ವಕವಾಗಿ ಮಾಡಲು ನಾವು ಯೋಜಿಸಬಹುದೇ?" ಎಂದು ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ.

ಮಹೀಂದ್ರಾ ಅವರು ಹಂಚಿಕೊಂಡಿರುವ ಕ್ಲಿಪ್ ನಲ್ಲಿ ಏನಿದೆ?
ಮಹೀಂದ್ರಾ ಅವರು ಹಂಚಿಕೊಂಡಿರುವ ಕ್ಲಿಪ್ ಅನ್ನು ಚಲಿಸುತ್ತಿರುವ ವಾಹನದಿಂದ ಸೆರೆಹಿಡಿಯಲಾಗಿದೆ. ವಾಹನವು ಟಾರ್ ಮಾಡಿದ ರಸ್ತೆಯ ಮೂಲಕ ಹಾದು ಹೋಗುತ್ತದೆ ಮತ್ತು ಮುಂದೆ ಹೆಚ್ಚಿನ ಸಂಖ್ಯೆಯ ಮರಗಳು ಕಂಡುಬರುತ್ತವೆ. ದೂರದಿಂದ, ಇದು ಮರಗಳ ನೆರಳಿನ ಕೆಳಗೆ ಕತ್ತಲೆಯಂತೆ ಕಾಣುತ್ತದೆ. ಆದಾಗ್ಯೂ, ವಾಹನವು ಛಾವಣಿಯ ಮೂಲಕ ಹಾದು ಹೋಗುವಾಗ, ಅದು ಪ್ರಕಾಶಮಾನವಾಗಿ ಕಾಣುತ್ತದೆ ಮತ್ತು ಸೊಂಪಾದ ಹಸಿರು ಮರಗಳು ಕಣ್ಣಿಗೆ ದೃಶ್ಯಾತ್ಮಕ ಔತಣವನ್ನು ನೀಡುತ್ತವೆ.ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಹೀಗೆ 
ಟ್ವಿಟರ್ ಬಳಕೆದಾರ ಬಿಲ್ಟೆಕ್ ಪ್ಲಸ್ ಪ್ರಕಾರ, ಈ ವಿಡಿಯೋವನ್ನು ಥೈಲ್ಯಾಂಡ್ ನ ಸೂರತ್ ಥಾನಿಯಿಂದ ಸೆರೆ ಹಿಡಿಯಲಾಗಿದೆ. ಮಹೀಂದ್ರಾ ಅವರ ಟ್ವೀಟ್ ನಿಂದ ಪ್ರೇರೇಪಿತರಾದ ಅನೇಕ ಬಳಕೆದಾರರು ಭಾರತದಿಂದ ಅಂತಹ ರಸ್ತೆಗಳ ಇಣುಕು ನೋಟವನ್ನು ಹಂಚಿಕೊಂಡಿದ್ದಾರೆ. "ಸರ್, ಪೌಂಟಾ ಸಾಹೇಬ್ ಮತ್ತು ಡೆಹ್ರಾಡೂನ್ ನಡುವೆ ಒಂದು ರಸ್ತೆ ಇದೆ. ಅದು ಮರಗಳಿಂದ ಆವೃತವಾಗಿದೆ. ನಾನು ಅದರ ಮೂಲಕ ಅನೇಕ ಬಾರಿ ಹಾದು ಹೋಗಿದ್ದೇನೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು "ಮಳೆ ಅಥವಾ ಭಾರಿ ಗಾಳಿಯ ಸಮಯದಲ್ಲಿ ನಿರ್ವಹಣೆಯು ಒಂದು ಪ್ರಮುಖ ಸಮಸ್ಯೆಯಾಗಲಿದೆ” ಎಂದು ಹೇಳಿ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:  Kannada: ವಿದೇಶಿ ಪ್ರಜೆಗಳ ಕನ್ನಡ ಕಲಿಯುವ ಪ್ರಯತ್ನ; ವೈರಲ್ ಆಗ್ತಿದೆ ಸುಂದರ ವಿಡಿಯೋ

“ಈಗಾಗಲೇ ಗ್ರಾಮದ ಹೆಚ್ಚಿನ ರಸ್ತೆಗಳು ಸರಿಯಾದ ನಿರ್ವಹಣೆಯನ್ನು ಹೊಂದಿಲ್ಲ, ಇದು ಹೆಚ್ಚುವರಿ ಹೊರೆಯಾಗಲಿದೆ. ಮರಗಳು ಉರುಳಿದಾಗ ಅಪಘಾತಗಳು ಸಂಭವಿಸುವ ಸಾಧ್ಯತೆಯೂ ಇದೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
Published by:Ashwini Prabhu
First published: