ನವದೆಹಲಿ: 2024 ರ ರಾಷ್ಟ್ರೀಯ ಚುನಾವಣೆಯ (Elections) ಮೊದಲು ಈ ಬಾರಿಯ ಬಜೆಟ್ (budget) ಹೆಚ್ಚಿನ ನಿರೀಕ್ಷೆಗಳು ಹಾಗೂ ಭರವಸೆಗಳಿಂದ ತುಂಬಿದೆ ಎಂಬುದಂತೂ ನಿಜ. ಕೃಷಿಕರು, ಉದ್ಯೋಗಿ ವರ್ಗ, ರೈಲ್ವೇ ಕ್ಷೇತ್ರ, ಆಡಳಿತ ವರ್ಗ ಹೀಗೆ ಪ್ರತಿಯೊಂದು ವಿಭಾಗಗಳೂ ಈ ಬಾರಿಯ ಬಜೆಟ್‌ನಿಂದ (Union Budget 2023) ತಮಗೆ ಏನಾದರೊಂದು ಪ್ರಯೋಜನ ಇದ್ದೇ ಇದೆ ಎಂಬ ನಿಖರ ಆಶಯದಲ್ಲಿವೆ. ಈ ಕುರಿತಾಗಿ ಸಮೀಕ್ಷೆ ನಡೆಸಲಾಗಿದ್ದು ಕಳೆದ ನಾಲ್ಕು ಚುನಾವಣಾ ಪೂರ್ವ ಬಜೆಟ್‌ಗಳಲ್ಲಿ ಗ್ರಾಮೀಣ ಕ್ಷೇತ್ರಕ್ಕೆ (Rural Area) ಆದ್ಯತೆ ನೀಡಿದ್ದು, ಒಂದು ಬಜೆಟ್‌ನಲ್ಲಿ ಸಾಮಾಜಿಕ ವಲಯಕ್ಕೆ ಆದ್ಯತೆ ನೀಡಲಾಗಿದೆ.
ಮೊದಲ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ ಪ್ರಕಾರ 2008 ರ ಬಜೆಟ್ ಮಾತ್ರ ಚುನಾವಣೆಗೆ ಮುಂಚಿತವಾಗಿ ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ಪ್ರಕಟಿಸಿದೆ.
ರಕ್ಷಣೆ ಮತ್ತು ಮೂಲಸೌಕರ್ಯಗಳ ಮೇಲಿನ ವೆಚ್ಚ
ವಿಶ್ಲೇಷಣೆಯು ಕಳೆದ 20 ವರ್ಷಗಳಲ್ಲಿ ಲೋಕಸಭೆ ಚುನಾವಣೆಯ ಹಿಂದಿನ ಪೂರ್ಣ ವರ್ಷದ ಬಜೆಟ್‌ನಲ್ಲಿ ಗ್ರಾಮೀಣ ಮತ್ತು ಸಾಮಾಜಿಕ ಕ್ಷೇತ್ರಗಳ ಮೇಲಿನ ವೆಚ್ಚದ ಪಾಲನ್ನು ಮತ್ತು ರಕ್ಷಣೆ ಮತ್ತು ಮೂಲಸೌಕರ್ಯಗಳ ಮೇಲಿನ ವೆಚ್ಚವನ್ನು ಹೋಲಿಸಿದೆ.
ಬಜೆಟ್‌ನಲ್ಲಿ ಹೆಚ್ಚಳ ಇಳಿಕೆ ವಿಶ್ಲೇಷಣೆ
ಈ ಹೋಲಿಕೆಗಳನ್ನು ಇತರ ನಾಲ್ಕು ವರ್ಷಗಳ ಬಜೆಟ್ ವೆಚ್ಚದಲ್ಲಿ ಹೆಚ್ಚಳ ಅಥವಾ ಇಳಿಕೆಯಾಗಿದೆಯೇ ಎಂದು ನಿರ್ಣಯಿಸಲು ಬಳಸಲಾಗುತ್ತದೆ.
2003-04 ರಲ್ಲಿ, ಮೊದಲ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA-1) ಸರ್ಕಾರದ ಅಡಿಯಲ್ಲಿ, ರಕ್ಷಣಾ ವೆಚ್ಚವು FY2000-FY03 ಸರಾಸರಿ 18% ರಿಂದ ಬಜೆಟ್ ಗಾತ್ರದ 15.2% ಗೆ ಕುಸಿಯಿತು. ಆದರೆ ಗ್ರಾಮೀಣ ಮತ್ತು ಅಭಿವೃದ್ಧಿ ವೆಚ್ಚದ ಪಾಲು ಇದರಲ್ಲಿದ್ದು, ಮೂಲಸೌಕರ್ಯ ವೆಚ್ಚ ಸ್ವಲ್ಪಮಟ್ಟಿಗೆ ಹೆಚ್ಚಿದೆ.
ವರದಿಯ ಸಮೀಕ್ಷೆಗಳೇನು?
ಮೊದಲ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (UPA-I) ಆಡಳಿತದಲ್ಲಿ, ಗ್ರಾಮೀಣ ಯೋಜನೆಗಳ ಮೇಲಿನ ವೆಚ್ಚವು 9.2% (FY05-FY08 ಸರಾಸರಿ) ನಿಂದ 2008-09 ರಲ್ಲಿ 16.2% ಕ್ಕೆ ಏರಿತು ಹಾಗೂ ರಕ್ಷಣಾ ಮತ್ತು ಮೂಲಸೌಕರ್ಯ ವೆಚ್ಚಗಳು ಕುಸಿಯಿತು ಎಂಬುದಾಗಿ ಸಮೀಕ್ಷೆ ವರದಿ ಮಾಡಿದೆ.
UPA-II ಅಡಿಯಲ್ಲಿ (2013 ರಲ್ಲಿ), ಗ್ರಾಮೀಣ ವಲಯದ ವೆಚ್ಚಗಳು ಗಣನೀಯವಾಗಿ ಕುಸಿದವು (FY10-FY13 ಸರಾಸರಿ 12.4% ರಿಂದ 10% ವರೆಗೆ), ಆದರೆ ಸಾಮಾಜಿಕ ವೆಚ್ಚವು ಬದಲಾಗದೆ ಉಳಿದಿದೆ.
2018 ರ ಬಜೆಟ್‌ನಲ್ಲಿ, NDA-II ಸರ್ಕಾರವು ಮೂಲಸೌಕರ್ಯಕ್ಕೆ ಪ್ರಧಾನತೆ ನೀಡಿತು ಮತ್ತು ಗ್ರಾಮೀಣ ಖರ್ಚು ಸ್ವಲ್ಪಮಟ್ಟಿಗೆ ಏರಿಕೆಯಾಗಿದೆ. ವಿಶ್ಲೇಷಣೆಯಲ್ಲಿ ಒಳಗೊಂಡಿರುವ ನಾಲ್ಕು ಬಜೆಟ್‌ಗಳಲ್ಲಿ ರಕ್ಷಣಾ ವೆಚ್ಚವು 2018 ರ ಬಜೆಟ್‌ನಲ್ಲಿ ಮಾತ್ರ ಹೆಚ್ಚಾಗಿದೆ.
ಜನಪರ ಘೋಷಣೆ
ಬಜೆಟ್ ಜನಪ್ರಿಯ ಘೋಷಣೆಗಳಿಗೆ ದೊಡ್ಡ ವೇದಿಕೆಯಾಗಿದೆ ಅಂತೆಯೇ ಹಲವಾರು ಕ್ಷೇತ್ರಗಳ ನಿರೀಕ್ಷೆಯನ್ನು ಹೆಚ್ಚಿಸುತ್ತದೆ. ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಫ್ರಾಸ್ಟ್ರಕ್ಚರ್ ಮಿಷನ್, ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, ಯೂನಿಯನ್ ಬಜೆಟ್ ಭಾಷಣದಲ್ಲಿ ಘೋಷಿಸಲಾಗಿದೆ.
ಇದು 2021-22 ರಿಂದ 2025-26 ರವರೆಗೆ ಐದು ವರ್ಷಗಳವರೆಗೆ ವಿಸ್ತಾರಣೆಯಾದ ಯೋಜನೆಗಳಾಗಿವೆ. ಸರಕಾರಗಳು ಬಜೆಟ್ ಅಲ್ಲದ ಜನಪರ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ.
ಆರ್ಥಿಕತೆಯ ಕೊರತೆ
ದೇಶದಲ್ಲಿ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆ ಇರುವುದರಿಂದ ಬಜೆಟ್‌ನಲ್ಲಿ ಗ್ರಾಮೀಣ ಭಾಗಗಳಿಗೆ ಆದ್ಯತೆ ನೀಡುವುದು ಸಾಮಾನ್ಯವಾಗಿದೆ ಎಂಬುದು ಆರ್ಥಿಕ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಮೂಲಸೌಕರ್ಯಗಳ ಅಭಿವೃದ್ಧಿಗೂ ಬಜೆಟ್ ಆದ್ಯತೆ ನೀಡುವುದು ಪ್ರಮುಖವಾಗಿದೆ. ಈ ಪ್ರವೃತ್ತಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಎಂಕೆ ಗ್ಲೋಬಲ್ ಫೈನಾನ್ಶಿಯಲ್ ಸರ್ವಿಸಸ್‌ನ ಪ್ರಮುಖ ಅರ್ಥಶಾಸ್ತ್ರಜ್ಞೆ ಮಾಧವಿ ಅರೋರಾ ತಿಳಿಸಿದ್ದಾರೆ.
ಇದನ್ನೂ ಓದಿ: Budget 2023: ಮಂಡನೆಗೂ ಮುನ್ನವೇ ಲೀಕ್ ಆಗಿತ್ತು ಬಜೆಟ್ ಪ್ರತಿ! ಇಲ್ಲಿದೆ ನೋಡಿ ಕುತೂಹಲಕರ ಸಂಗತಿ
ಇದೇ ಸಮಯದಲ್ಲಿ ಹಣಕಾಸಿನ ಬಲವರ್ಧನೆ, ಹೆಚ್ಚಿನ ಸಾಲಗಳು, ತೆರಿಗೆ ಆದಾಯದಲ್ಲಿ ನಿರೀಕ್ಷಿತ ಮಿತಗೊಳಿಸುವಿಕೆ ಮತ್ತು ಹೆಚ್ಚಿನ ಮಟ್ಟದ ಬದ್ಧತೆಯ ವೆಚ್ಚಗಳ ಬಗ್ಗೆಯೂ ಬಜೆಟ್ ಗಮನಹರಿಸಬೇಕಾಗಿರುವುದರಿಂದ ಜನಪ್ರಿಯ ಬಜೆಟ್ ಘೋಷಣೆಗೆ ಹಣಕಾಸಿನ ಮಿತಿಯನ್ನು ನೋಡಬೇಕಾಗಿದೆ ಎಂಬುದು ಆರ್ಥಿಕ ಶಾಸ್ತ್ರಜ್ಞರ ಅಭಿಪ್ರಾಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ