• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Turkey Earthquake: ಪ್ರಾಣಿ-ಪಕ್ಷಿಗಳು ಭೂಕಂಪವನ್ನು ಮೊದಲೇ ಗ್ರಹಿಸುತ್ತವೆಯೇ? ಇಲ್ಲಿದೆ ಟರ್ಕಿಯ ನೈಜ ಘಟನೆಯ ವರದಿ

Turkey Earthquake: ಪ್ರಾಣಿ-ಪಕ್ಷಿಗಳು ಭೂಕಂಪವನ್ನು ಮೊದಲೇ ಗ್ರಹಿಸುತ್ತವೆಯೇ? ಇಲ್ಲಿದೆ ಟರ್ಕಿಯ ನೈಜ ಘಟನೆಯ ವರದಿ

ಪಕ್ಷಿಗಳ ಅಸಹಜ ಹಾರಾಟ

ಪಕ್ಷಿಗಳ ಅಸಹಜ ಹಾರಾಟ

ಅಂದಹಾಗೆ ಪಕ್ಷಿಗಳು ಹೀಗೆ ದಿಕ್ಕಾಪಾಲಾಗಿ ಓಡುತ್ತಿರುವ ವಿಡಿಯೋ ಭೂಕಂಪ ಸಂಭವಿಸುವುದಕ್ಕೂ ಮುನ್ನ ನಡೆದ ಘಟನೆ ಎಂದು ಹೇಳಲಾಗ್ತಿದ್ದು, ಭೂಕಂಪ ಸೇರಿದಂತೆ ಇನ್ನಿತರ ಪ್ರಕೃತಿ ವಿಕೋಪಗಳು ಸಂಭವಿಸುವ ಮುನ್ನವೇ ಪಕ್ಷಿಗಳಿಗೆ ಅವುಗಳನ್ನು ಊಹಿಸುವ ಸಾಮರ್ಥ್ಯ ಇದೆ ಎಂದು ಹೇಳಲಾಗ್ತಿದೆ.

  • Share this:

ಇಸ್ತಾಂಬುಲ್: ಭಯಾನಕ ಭೂಕಂಪಕ್ಕೆ (Turkey Earthquake) ಟರ್ಕಿ ಮತ್ತು ಸಿರಿಯಾ (Syria) ದೇಶಗಳು ಅಕ್ಷರಶಃ ನಲುಗಿ ಹೋಗಿವೆ. ಸಾವಿರಾರು ಜನ ಮನೆ ಮಠ, ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. 2,400ಕ್ಕೂ ಹೆಚ್ಚು ಜನರು ಈಗಾಗಲೇ (Death) ಭೂಕಂಪದ ಅಟ್ಟಹಾಸಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಮನುಷ್ಯರೇ ಇಷ್ಟೊಂದು ಭೀಕರತೆಗೆ ಗುರಿಯಾದ ಮಾತು ಬಾರದ ಪ್ರಾಣಿ ಪಕ್ಷಿಗಳ (Animals And Birds) ಪರಿಸ್ಥಿತಿಯಂತೂ ನಿಜಕ್ಕೂ ಶೋಚನೀಯ.


ಹೌದು.. ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪ ದುರಂತಕ್ಕೆ ಗುರಿಯಾದ ಒಂದೊಂದು ದೃಶ್ಯಗಳು ಕೂಡ ಹೃದಯ ವಿದ್ರಾವಕವಾಗಿದ್ದು, ಸಾವಿರಾರು ಮನುಷ್ಯರು ಪ್ರಾಣ ಕಳೆದುಕೊಳ್ಳುತ್ತಿರೋದು ಒಂದು ಕಡೆಯಾದರೆ, ಪಕ್ಷಿಗಳು ಕೂಡ ದಿಕ್ಕೇ ತೋಚದಂತೆ ದಿಕ್ಕಾಪಾಲಾಗಿ ಓಡುತ್ತಿವೆ. ಎಲ್ಲಿಗೆ ಹಾರಬೇಕು ಅನ್ನೋ ಸ್ಪಷ್ಟತೆಯೇ ಸಿಗದೆ ಎಲ್ಲೆಂದರಲ್ಲಿ ಪಕ್ಷಿಗಳು ಓಡಾಡುತ್ತಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಇದನ್ನೂ ಓದಿ: Turkey Earthquake: ಭೂಕಂಪಕ್ಕೆ ಉರುಳಿಬಿದ್ದ ಕಟ್ಟಡದ ಅವಶೇಷಗಳಡಿ ಮಗುವಿಗೆ ಜನ್ಮ ನೀಡಿ ಮಹಿಳೆ ಮೃತ್ಯು!


ಅಂದಹಾಗೆ ಪಕ್ಷಿಗಳು ಹೀಗೆ ದಿಕ್ಕಾಪಾಲಾಗಿ ಓಡುತ್ತಿರುವ ವಿಡಿಯೋ ಭೂಕಂಪ ಸಂಭವಿಸುವುದಕ್ಕೂ ಮುನ್ನ ನಡೆದ ಘಟನೆ ಎಂದು ಹೇಳಲಾಗ್ತಿದ್ದು, ಭೂಕಂಪ ಸೇರಿದಂತೆ ಇನ್ನಿತರ ಪ್ರಕೃತಿ ವಿಕೋಪಗಳು ಸಂಭವಿಸುವ ಮುನ್ನವೇ ಪಕ್ಷಿಗಳಿಗೆ ಅವುಗಳನ್ನು ಊಹಿಸುವ ಸಾಮರ್ಥ್ಯ ಇದೆ ಎಂದು ಹೇಳಲಾಗ್ತಿದೆ.


ಏನಂತಾರೆ ಜನ?


ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಕ್ಕೊಂದು ವಿಶಿಷ್ಟ ಕಾಮೆಂಟ್ ಹಾಕಿರುವ ನೆಟ್ಟಿಗರು ‘ಎಲ್ಲಾ ಪ್ರಾಣಿಗಳು ಮತ್ತು ಪಕ್ಷಿಗಳು, ಸಮುದ್ರ ಜೀವಿಗಳು ಪ್ರತಿ ನೈಸರ್ಗಿಕ ವಿಕೋಪವನ್ನು ಗ್ರಹಿಸಬಹುದು, ಆದರೆ ಮಾನವರು ಆ ಪ್ರಜ್ಞೆಯನ್ನು ಕಳೆದುಕೊಂಡಿದ್ದಾರೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ಇದು ಪ್ರತಿನಿತ್ಯದ ಘಟನೆಯಾಗಿದ್ದು, ಪಕ್ಷಿಗಳು ಸಂಜೆ ವೇಳೆ ವಿಶ್ರಾಂತಿಗಾಗಿ ಮರದ ಮೇಲೆ ಕುಳಿತುಕೊಳ್ಳುವ ಮುನ್ನ ಹೀಗೆ ಹಾರಾಟ ನಡೆಸುತ್ತವೆ ಎಂದು ಟ್ವೀಟ್ ಮಾಡಿದ್ದಾರೆ.


ಪ್ರಾಣಿಗಳು ಮತ್ತು ಪಕ್ಷಿಗಳು ಮೊದಲೇ ಭೂಕಂಪವನ್ನು ಊಹಿಸುತ್ತವೆಯೇ?


ಸಾಮಾನ್ಯವಾಗಿ ಇದು ಎಲ್ಲರನ್ನೂ ಕಾಡುವ ಪ್ರಶ್ನೆ. ತಮ್ಮ ಮನೆಯಲ್ಲೋ ಅಥವಾ ಪಕ್ಕದ ಮನೆಯಲ್ಲೋ ಹಿರಿಯರು ಯಾವಾಗಲೋ ಈ ರೀತಿ ಹೇಳಿರುವುದನ್ನು ಖಂಡಿತವಾಗಿಯೂ ಕೇಳಿರುತ್ತಾರೆ ಅದು ಅನುಭವಕ್ಕೆ ಬಂದಿರುವುದಿಲ್ಲ. ಭೂಕಂಪ, ಸುನಾಮಿ ಸೇರಿದಂತೆ ಯಾವುದೇ ಪ್ರಾಕೃತಿ ವೈಪರೀತ್ಯಗಳು ಸಂಭವಿಸುವ ಮುನ್ನ ಅದರ ಮುನ್ಸೂಚನೆ ಪ್ರಾಣಿ ಪಕ್ಷಿಗಳಿಗೆ ಸಿಕ್ಕಿರುತ್ತದೆಯೇ? ಎಂದು ಅನೇಕು ಕೇಳುತ್ತಾರೆ. ಒಂದಷ್ಟು ಜನ ಇದಕ್ಕೆ ಹೌದು ಎಂದರೆ ಮತ್ತೊಂದಷ್ಟು ಜನ ಇಲ್ಲ ಎನ್ನುತ್ತಾರೆ.


ಇದನ್ನೂ ಓದಿ: Turkey Earthquake: ಭೂಕಂಪದ ತೀವ್ರತೆಗೆ ಒಡೆದು ಎರಡು ತುಂಡಾದ ಟರ್ಕಿಯ ಏರ್‌ಪೋರ್ಟ್‌ ರನ್‌ವೇ!


ಆದರೆ ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪ ಸಂಭವಿಸುವ ಮುನ್ನ ಅದರ ಮುನ್ಸೂಚನೆ ಪ್ರಾಣಿ ಪಕ್ಷಿಗಳಿಗೆ ಸಿಕ್ಕಿದೆಯೇ ಎಂದು ಕೇಳಿದ್ರೆ ಹೌದು ಎನ್ನುತ್ತದೆ ವರದಿ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸಮೀಕ್ಷೆಯ ವರದಿ ಪ್ರಕಾರ, ಟರ್ಕಿಯಲ್ಲಿ ಬೃಹತ್ ಭೂಕಂಪ ಸಂಭವಿಸುವ ಮುನ್ನ ಪ್ರಾಣಿಗಳು ವಿಚಿತ್ರ ನಡವಳಿಕೆ ತೋರಿರುವುದನ್ನು ಪತ್ತೆ ಮಾಡಲಾಗಿದೆ. ಇಲಿಗಳು, ಮುಂಗುಸಿಗಳು, ಹಾವುಗಳು ಮತ್ತು ಶತಪದಿಗಳು ಸೇರಿದಂತೆ ಇನ್ಜಿತರ ಜೀವಿಗಳು ಭೂಕಂಪ ಸಂಭವಿಸುವ ಹಲವು ದಿನಗಳ ಮುಂಚಿತವಾಗಿಯೇ ತಮ್ಮ ಬಿಲಗಳನ್ನು ಬಿಟ್ಟು ಓಡಿ ಹೋಗಿವೆ ಎಂದು ವರದಿಯಾಗಿದೆ.


ಹವಾಮಾನ ವೈಪರೀತ್ಯ ತಿಳಿಯುತ್ತದೆ


ಹೀಗಾಗಿ ಪ್ರಾಣಿಗಳು ಮತ್ತು ಪಕ್ಷಿಗಳು ಭೂಕಂಪ ನಡೆಯಲಿದೆ ಎನ್ನುವುದನ್ನು ವಿವಿಧ ರೀತಿಯಲ್ಲಿ ಗ್ರಹಿಸುತ್ತವೆ. ಕೆಲವು ಪ್ರಾಣಿಗಳು ಭೂಕಂಪ ಸಂಭವಿಸುವ ಮುನ್ನ ವಿದ್ಯುತ್ಕಾಂತೀಯ ಕ್ಷೇತ್ರದಲ್ಲಿ ಉಂಟಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಪತ್ತೆ ಮಾಡುತ್ತವೆ. ಕೆಲವು ಪ್ರಾಣಿಗಳು ವಾತಾವರಣ, ವಾಯುಭಾರದಲ್ಲಿ ಉಂಟಾಗುವ ಒತ್ತಡಗಳಿಂದಲೂ ಪ್ರಾಕೃತಿಕ ವಿಕೋಪ ನಡೆಯುವುದನ್ನು ಮುಂಚಿತವಾಗಿ ಗ್ರಹಿಸುತ್ತವೆ ಎಂದು ತಜ್ಞರು ಹೇಳಿದ್ದಾರೆ.


ಬಿಲಗಳು ಅಥವಾ ನೆಲದಡಿಯಲ್ಲಿ ವಾಸಿಸುವ ಪ್ರಾಣಿಗಳು ಭೂಕಂಪಕ್ಕೂ ಮುನ್ನ ನೆಲದಲ್ಲಿ ಉಂಟಾಗುವ ಅಸಮತೋಲನದ ಚಲನೆಯನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಭೂಕಂಪಗಳು ಕಡಿಮೆ-ಆವರ್ತನ ಕಂಪನಗಳನ್ನು ಉಂಟುಮಾಡುವುದರಿಂದ ಅದು ಮನುಷ್ಯರಿಗಿಂತಲೂ ಮೊದಲು ನಾಯಿಗಳಂತಹ ಕೆಲವು ಪ್ರಾಣಿಗಳಿಗೆ ತಿಳಿಯುತ್ತದೆ. ಆಗ ಆ ಪ್ರಾಣಿಗಳು ಎಂದಿಗಿಂತ ವಿಚಿತ್ರವಾಗಿ ವರ್ತಿಸಿದಾಗ ನಾವು ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಹಿಂದಿನ ಕಾಲದ ಹಿರಿಯರು ಇಂತಹ ವರ್ತನೆಗಳನ್ನು ಗ್ರಹಿಸಿ ಮುಂದಾಗಬಹುದಾದ ಅನಾಹುತಗಳನ್ನು ತಿಳಿದುಕೊಳ್ಳುತ್ತಿದ್ದರು.

Published by:Avinash K
First published: