• Home
  • »
  • News
  • »
  • national-international
  • »
  • Passport: ಆರು ವರ್ಷ ಪಾಸ್‌ಪೋರ್ಟ್‌ಗಾಗಿ ಹೋರಾಟ, ಕೊನೆಗೂ ಗೆದ್ದ ಅನಾಥ ಬಾಲಕ!

Passport: ಆರು ವರ್ಷ ಪಾಸ್‌ಪೋರ್ಟ್‌ಗಾಗಿ ಹೋರಾಟ, ಕೊನೆಗೂ ಗೆದ್ದ ಅನಾಥ ಬಾಲಕ!

ವಿಶಾಲ ಮೃದುಲ್ ಮಂಡಲ್

ವಿಶಾಲ ಮೃದುಲ್ ಮಂಡಲ್

ಅನಾಥ ಬಾಲಕನು ಯೂಟ್ಯೂಬ್ ವಿಡಿಯೋಗಳ ಸಹಾಯ ಪಡೆದುಕೊಂಡು ಆರು ವರ್ಷಗಳ ಅಧಿಕಾರಶಾಹಿ ಜಟಿಲತೆಯನ್ನು ಸಮರ್ಥವಾಗಿ ನಿಭಾಯಿಸಿ ಪಾಸ್‌ಪೋರ್ಟ್ ಪಡೆದುಕೊಂಡ ರೋಚಕ ವಿವರ ಈ ಲೇಖನದಲ್ಲಿದೆ. ವಿಶಾಲಮೃದುಲ್ ಮಂಡಲ್ ಎಂಬ ಅನಾಥ ಬಾಲಕ ದೆಹಲಿಯ ಆರೈಕೆ ಸಂಸ್ಥೆಯಲ್ಲಿರುವ ಮಕ್ಕಳಿಗೆ ಅರ್ಹವಾಗಿರುವ ಅಧಿಕೃತ ಮಾನ್ಯತೆಯನ್ನು ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಮುಂದೆ ಓದಿ ...
  • Share this:

8ನೇ ತರಗತಿಯವರೆಗೆ ಓದಿದ ಅನಾಥ ಬಾಲಕನು ಯೂಟ್ಯೂಬ್ (YouTube) ವಿಡಿಯೋಗಳ ಸಹಾಯ ಪಡೆದುಕೊಂಡು ಆರು ವರ್ಷಗಳ ಅಧಿಕಾರಶಾಹಿ ಜಟಿಲತೆಯನ್ನು ಸಮರ್ಥವಾಗಿ ನಿಭಾಯಿಸಿ ಪಾಸ್‌ಪೋರ್ಟ್ ಪಡೆದುಕೊಂಡ ರೋಚಕ ವಿವರ ಈ ಲೇಖನದಲ್ಲಿದೆ. ವಿಶಾಲಮೃದುಲ್ ಮಂಡಲ್ ಎಂಬ ಅನಾಥ ಬಾಲಕ (orphan boy) ದೆಹಲಿಯ ಆರೈಕೆ ಸಂಸ್ಥೆಯಲ್ಲಿರುವ ಮಕ್ಕಳಿಗೆ ಅರ್ಹವಾಗಿರುವ ಅಧಿಕೃತ ಮಾನ್ಯತೆಯನ್ನು ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅನಾಥಾಶ್ರಮದಲ್ಲಿ ಬೆಳೆದ ಮಂಡಲ್ ಸೂಕ್ತ ಉದ್ಯೋಗದ (employment) ಬಯಕೆಯನ್ನಿಟ್ಟುಕೊಂಡು ವಿದೇಶಕ್ಕೆ ಪ್ರಯಾಣಿಸಲು ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸುತ್ತಾರೆ. ಆದರೆ ಬೇರೆ ಬೇರೆ ಕಾರಣಗಳನ್ನು ನೀಡಿ ಅವರ ಪಾಸ್‌ಪೋರ್ಟ್ (Passport) ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.


ವಿದೇಶಕ್ಕೆ ಹೋಗುವ ಬಯಕೆ
ಕ್ರೂಸ್‌ನಲ್ಲಿ ಉತ್ತಮ ಉದ್ಯೋಗವನ್ನು ಅನ್ವೇಷಿಸಿ ಹೋಟೆಲ್‌ನಲ್ಲಿರುವ ಉದ್ಯೋಗಿಗಳು ಹೊರಟಾಗ ಮಂಡಲ್ ತಾನೂ ಕೂಡ ಪಾಸ್‌ಪೋರ್ಟ್ ಮಾಡಿಸಿ ಅವರಂತೆ ಕ್ರೂಸ್‌ನಲ್ಲಿ ಕೆಲಸ ಮಾಡುವ ಹಂಬಲವನ್ನಿಟ್ಟುಕೊಂಡರು. 2014 ರಲ್ಲಿ ಮುಂಬೈಲ್‌ಗೆ ಬಂದಿಳಿದ ಮಂಡಲ್ ಮುಂಬೈಯ ಸೆಂಟ್ರಲ್ ರೈಲ್ವೇ ಸ್ಟೇಶನ್‌ನಲ್ಲಿರುವ ಎನ್‌ಜಿಒ ಒಂದರಲ್ಲಿ ತಂಗಿದರು. ಮಕ್ಕಳ ಸಹಾಯವಾಣಿ ವಿಭಾಗದಲ್ಲಿ ಸ್ವಯಂಸೇವಕರಾಗಿ ಮಂಡಲ್ ಕಾರ್ಯನಿರ್ವಹಿಸಿದರು ಹಾಗೂ ಹಗಲು ಹೊತ್ತಿನಲ್ಲಿ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಹೌಸ್‌ಕೀಪರಾಗಿದ್ದರು. ಅವರೊಂದಿಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು ಕ್ರೂಸ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡು ವಿದೇಶಕ್ಕೆ ಹೊರಡಲಾರಂಭಿಸಿದರು.


ನನಗೂ ಪಾಸ್‌ಪೋರ್ಟ್ ದೊರೆಯುತ್ತದೆ ಎಂಬ ಆಸೆಯಿಂದಲೇ ಮಂಡಲ್ ನಿರ್ಧರಿಸಿಕೊಂಡು ಎನ್‌ಜಿಒದಲ್ಲಿನ ವಿಳಾಸದಿಂದ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಪಾಸ್‌ಪೋರ್ಟ್ ಕಚೇರಿ ಅವರ ದಾಖಲೆಗಳನ್ನು ತೆರವುಗೊಳಿಸಿ ನಂತರ ಪೊಲೀಸ್ ಪರಿಶೀಲನೆ ಹಂತ ಆರಂಭವಾಯಿತು. ಪರಿಶೀಲನೆಗೆ ಬಂದ ಸಂದರ್ಭದಲ್ಲಿ ಮಂಡಲ್ ವಾಸ್ತವ್ಯ ಹೂಡಿರುವ ಕಟ್ಟಡ ಸರಕಾರಿ ಆಸ್ತಿಯಾಗಿರುವುದರಿಂದ ಅದನ್ನು ಮಂಡಲ್ ಅವರ ನಿವಾಸವೆಂದು ಸ್ವೀಕರಿಸಲಾಗುವುದಿಲ್ಲವೆಂದು ಪೊಲೀಸರು ಹೇಳುತ್ತಾರೆ.


ಪಾಸ್‌ಪೋರ್ಟ್ ಕಚೇರಿ ಅವರ ದಾಖಲೆಗಳನ್ನು ತೆರವುಗೊಳಿಸಿತಾದರೂ ಪೊಲೀಸರು ಮಂಡಲ್‌ನ ವಾಸ್ತವ್ಯ ದಾಖಲೆಗಳನ್ನು ಪರಿಶೀಲಿಸಲಿಲ್ಲ ಹಾಗೂ ಹುಟ್ಟೂರಿನ ದಾಖಲೆಗಳನ್ನು ತರುವಂತೆ ತಿಳಿಸಿದರು. ಒಟ್ಟಿನಲ್ಲಿ ಮಂಡಲ್‌ನ ಅಗ್ನಿಪರೀಕ್ಷೆ ದಿನಗಳೆದಂತೆ ಹೆಚ್ಚಾಗತೊಡಗಿತು.


ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿಗಳು
ಈ ಸಮಯದಲ್ಲಿ ಲಂಚಕ್ಕಾಗಿ ಬೇಡಿಕೆ ಇಟ್ಟಾಗ ಮಂಡಲ್ ಅದನ್ನು ನಿರಾಕರಿಸುತ್ತಿದ್ದರು. ಏಕೆಂದರೆ ಅನಾಥಾಶ್ರಮದಲ್ಲಿ ಮಂಡಲ್ ಬೆಳೆದದ್ದಾದರೂ ಅಲ್ಲಿನ ಪರಿಸರ ಅವರಿಗೆ ನಿಷ್ಟೆ, ಪ್ರಾಮಾಣಿಕತೆ ಹಾಗೂ ನ್ಯಾಯದಲ್ಲಿ ಬದುಕುವುದನ್ನು ತಿಳಿಸಿಕೊಟ್ಟಿತ್ತು. ಮಂಡಲ್‌ಗೆ 18 ವರ್ಷದವರೆಗೆ ಅವರು ಎಲ್ಲಿ ಜನಿಸಿದರು ಎಂಬುದು ಕೂಡ ಗೊತ್ತಿರಲಿಲ್ಲ. 2010 ರಲ್ಲಿ ದೆಹಲಿಯ ಮಕ್ಕಳ ಕಲ್ಯಾಣ ಸಮಿತಿಯ ಫೈಲ್‌ಗಳಿಂದ ಜನನ ವಿವರಗಳನ್ನು ಪಡೆದುಕೊಂಡರು.


ಇದನ್ನೂ ಓದಿ: ಗ್ರಾಮೀಣ ಭಾರತವನ್ನು ಭವಿಷ್ಯಕ್ಕೆ ಸಶಕ್ತಗೊಳಿಸಲು Tata Powerನ ಸೌರ ಶಕ್ತಿ ಪರಿಹಾರೋಪಾಯಗಳು ಸಜ್ಜಾಗಿವೆ

ಮಂಡಲ್ ಹೇಳುವ ಪ್ರಕಾರ ದೆಹಲಿಯಲ್ಲಿ ಇವರು ಜನಿಸಿದ್ದು ತಾಯಿ ಮನೆಗೆಲಸ ಮಾಡಿಕೊಂಡಿದ್ದರು ಹಾಗೂ ತಂದೆ ದರಿಯಾಗಂಜ್‌ನಲ್ಲಿ ರಿಕ್ಷಾ ಎಳೆಯುವವರಾಗಿದ್ದರು. ಯಮುನಾ ನದಿಯ ದಡದ ದತ್ತಾರಾಮ್ ಬಸ್ತಿಯಲ್ಲಿ ವಾಸಿಸುತ್ತಿದ್ದರು ಎಂಬುದು ಅವರ ಚಿಕ್ಕಮ್ಮನಿಂದ ತಿಳಿದುಬಂದಿತು.


2018 ರಲ್ಲಿ ತಾಜ್ ಹೋಟೆಲ್‌ನಲ್ಲಿ ಕೆಲಸಮಾಡಲು ಮಂಡಲ್ ದೆಹಲಿಗೆ ಮರಳಿದರು. ಜಹಾಂಗೀರ್‌ಪುರಿಯಲ್ಲಿ ಅವರು ವಾಸಿಸುತ್ತಿದ್ದ ಕೊನೆಯ ಅನಾಥಾಶ್ರಮವನ್ನು ನಡೆಸುತ್ತಿದ್ದ NGO ಪ್ರಯಾಸ್ ಜುವೆನೈಲ್ ಏಡ್ ಸೆಂಟರ್ ಅವರಿಗೆ ಪಾಸ್‌ಪೋರ್ಟ್ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತು. ವಯಸ್ಕರು ಮಕ್ಕಳ ವಸತಿ ಗೃಹದಿಂದ ಅರ್ಜಿ ಸಲ್ಲಿಸಬಾರದು ಎಂದು ಪೊಲೀಸರು ಇದನ್ನೂ ನಿರಾಕರಿಸಿದರು.


ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಹೇಗೆ ?
ಸಾಂಕ್ರಾಮಿಕ ಆರಂಭಗೊಂಡ ನಂತರ ದಕ್ಷಿಣ 24 ಪರಗಣ ಜಿಲ್ಲೆಯ ಜಿಬಂತಲಾ ಎಂಬ ತಾಯಿಯ ಸ್ಥಳೀಯ ಗ್ರಾಮದಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ತಂಗಿದರು ಹಾಗೂ ಅಲ್ಲಿಂದಲೇ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಈ ಸಮಯದಲ್ಲಿ ಪರಿಶೀಲನೆ ನಡೆಸಿದ ಪೊಲೀಸರು ಅಲ್ಲಿದ್ದ ಗ್ರಾಮಸ್ಥರನ್ನು ಪ್ರಶ್ನಿಸಿದರು. ಅಧಿಕಾರಿಗಳು ತಿಳಿಸಿರುವಂತೆ ಮಂಡಲ್ ಅವರ ಚಿಕ್ಕಮ್ಮ ಮಂಡಲ್‌ನ ನಿವಾಸವನ್ನು ದೃಢೀಕರಿಸುವ ನ್ಯಾಯಾಂಗ ಮ್ಯಾಜಿಸ್ಟ್ರೇಟ್, ಪ್ರಥಮ ದರ್ಜೆ ಅಫಿಡವಿಟ್ ಅನ್ನು ಸಲ್ಲಿಸಿದರು.


ಜಿಬಂತಲಾದಲ್ಲಿ, ಮಂಡಲ್ ಅವರ ಕುಟುಂಬದ ಹಿನ್ನೆಲೆಯ ಆಧಾರದ ಮೇಲೆ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಸಹ ಮಂಡಲ್ ಪಡೆದರು ಮತ್ತು ಕಂದಾಯ ಅಧಿಕಾರಿಗಳು ಪರಿಶೀಲಿಸಿದರು. ಮಂಡಲ್‌ನ ಜನ್ಮ ವಿವರಗಳು ಸ್ಪಷ್ಟವಾಗಿಲ್ಲ ಎಂಬ ಕಾರಣ ನೀಡಿ ಪುನಃ ಅವರ ಅರ್ಜಿಯನ್ನು ತಿರಸ್ಕರಿಸಿದರು. ಆದರೆ ಸಚಿವಾಲಯ ಸೂಚಿಸಿರುವಂತೆ ಜನನ ಪ್ರಮಾಣಪತ್ರಗಳಿಲ್ಲದವರು ಶಾಲಾ ಪ್ರಮಾಣ ಪತ್ರ, ಆಧಾರ್, ವೋಟರ್ ಐಡಿ ಇಲ್ಲವೇ ಅನಾಥಾಶ್ರಮದಂತಹ ಪರ್ಯಾಯ ಪುರಾವೆಗಳನ್ನು ಪಾಸ್‌ಪೋರ್ಟ್ ಅರ್ಜಿ ಸಮಯಲ್ಲಿ ಸಲ್ಲಿಸಬಹುದು ಎಂಬುದನ್ನು ಮಂಡಲ್ ತಿಳಿದುಕೊಂಡರು.ಪುನಃ ದೆಹಲಿಗೆ ತೆರಳಿ ಅದೃಷ್ಟ ಪರೀಕ್ಷಿಸುವಂತೆ ಬೆಂಗಾಳದ ಪೊಲೀಸರು ಮಂಡಲ್‌ಗೆ ಹೇಳಿದರು.


ಅಗ್ನಿಪರೀಕ್ಷೆ
ಮಂಡಲ್ ತಮ್ಮ ಪ್ರಯತ್ನವನ್ನು ಮುಂದುವರಿಸಿದರು. 2021 ರಲ್ಲಿ ತಮಗಾದ ಅನ್ಯಾಯವನ್ನು ಸಾರ್ವಜನಿಕ ಕುಂದುಕೊರತೆ ವಿಭಾಗಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರು. ಕೇಂದ್ರ ಮತ್ತು ಬಂಗಾಳದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಮಧ್ಯಪ್ರವೇಶಿಸಿ, ಮಂಡಲ್ ಪರವಾಗಿ ಪೊಲೀಸರು ಹಾಗೂ ಸರಕಾರಿ ಅಧಿಕಾರಿಗಳಿಗೆ ಪತ್ರ ಬರೆದರು ಅದಾಗ್ಯೂ ಪಾಸ್‌ಪೋರ್ಟ್ ದೊರೆಯುವ ಯಾವುದೇ ಲಕ್ಷಣ ಇರಲಿಲ್ಲ.


ಇದನ್ನೂ ಓದಿ: Traffic Rules Break: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಬ್ರಿಟನ್‌ ದಳಪತಿ, ಖಡಕ್ ತೀರ್ಪು ನೀಡಿದ ನ್ಯಾಯಾಲಯ

ಕೊನೆಯದಾಗಿ ಮಂಡಲ್ ದೆಹಲಿಯಲ್ಲಿರುವ CWC ಅನ್ನು ಸಂಪರ್ಕಿಸಿದರು. CWC ಹಾಗೂ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನೊಂದಿಗೆ ಹಲವು ಪ್ರಯತ್ನಗಳನ್ನು ನಡೆಸಿದ ನಂತರ ಜನನ ಪ್ರಮಾಣ ಪತ್ರ ಪಡೆಯುತ್ತಾರೆ. ಆದರೆ ಅದರಲ್ಲಿ ಉಪನಾಮ ಇರಲಿಲ್ಲ ಹಾಗಾಗಿ ಅದನ್ನು ಸೇರಿಸಲು ಮತ್ತೊಮ್ಮೆ ಅರ್ಜಿ ಸಲ್ಲಿಸಲಾಯಿತು. ಕಳೆದ ವರ್ಷ ಜಿಬಂತಲಾದಿಂದ ಮತ್ತೆ ಪಾಸ್‌ಪೋರ್ಟ್‌ಗಾಗಿ ಮಂಡಲ್ ಅರ್ಜಿ ಸಲ್ಲಿಸಿದ್ದರು. ಈ ಸಮಯದಲ್ಲಿ ನೀವು ಭಾರತೀಯರೇ ಇಲ್ಲವೇ ಬಾಂಗ್ಲಾದೇಶದವರೇ ಎಂದು ಪೊಲೀಸರು ಮಂಡಲ್ ಅವರನ್ನು ಪ್ರಶ್ನಿಸಿದರು.


ಆಗ ಮಂಡಲ್ ತಾವು ಹುಟ್ಟಿದ್ದು ಜಿಬಂತಲಾದಲ್ಲಾದರೂ ಅಪ್ಪ ಅಮ್ಮ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರು ಎಂದು ಹೇಳಿದರು. ದೆಹಲಿ ಸರಕಾರದ ಮೇಲ್ವಿಚಾರಣೆಯಲ್ಲಿದ್ದ ಅನಾಥಾಶ್ರಮದಲ್ಲಿ ಬೆಳೆದಿರುವುದಾಗಿ ಮಂಡಲ್ ಪೊಲೀಸರಿಗೆ ತಿಳಿಸುತ್ತಾರೆ. ಮಂಡಲ್ ತಮ್ಮ ದಾಖಲೆಗಳನ್ನೆಲ್ಲಾ ಜಿಬಂತಲಾಗೆ ಬದಲಾಯಿಸಿಕೊಂಡಿದ್ದರು. ನಾನು ಭಾರತೀಯ ಎಂಬುದಕ್ಕೆ ಇನ್ನೇನು ಪುರಾವೆ ಕೊಡಲು ಸಾಧ್ಯ? ಎಂಬುದು ಮಂಡಲ್ ಅವರ ಪ್ರಶ್ನೆಯಾಗಿದೆ.


ಮಂಡಲ್‌ಗೆ ಸಹಾಯ ಮಾಡಿದವರು ಯಾರು ಗೊತ್ತಾ?
ಈ ಸಮಯದಲ್ಲಿ ಅವರ ನೆರವಿಗೆ ಬಂದದ್ದು ಯೂಟ್ಯೂಬ್ ಆಗಿತ್ತು. ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ವಿಡಿಯೋಗಳ ಮೂಲಕ ಅರಿತುಕೊಂಡರು. ಜುವೆನೈಲ್ ಜಸ್ಟೀಸ್ ಆಕ್ಟ್ ಮತ್ತು ಪಾಸ್‌ಪೋರ್ಟ್‌ಗಳ ಕುರಿತು ಆನ್‌ಲೈನ್‌ನಲ್ಲಿ ಕಂಡುಕೊಳ್ಳಬಹುದಾದ ಎಲ್ಲಾ ನಿಯಮಗಳನ್ನು ಅರಿತುಕೊಂಡರು. ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮನವಿ ಮಾಡಲು ಪ್ರಾರಂಭಿಸಿದರು.


ಬಂಗಾಳದಲ್ಲಿ ಯಾವುದೇ ಸಹಾಯ ದೊರಕದೆ ಮಂಡಲ್ ಪುನಃ ದೆಹಲಿಗೆ ಮರಳಿದರು. CWC ಮಂಡಲ್ ಪ್ರಕರಣವನ್ನು ಹೊಸದಾಗಿ ಕೈಗೆತ್ತಿಕೊಳ್ಳಲು ನಿರ್ಧರಿಸಿತು ಮತ್ತು ಅಧ್ಯಕ್ಷರಾದ ವರುಣ್ ಪಾಠಕ್ ಅವರು ಪ್ರತಿ ಹಂತದಲ್ಲೂ ಮಂಡಲ್‌ಗೆ ಸಹಾಯ ಮಾಡಿದರು.


ಮಂಡಲ್ ವಾಸಿಸಿದ್ದ ಎಲ್ಲಾ ಅನಾಥಾಶ್ರಮಗಳಿಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮ್ಯಾಜಿಸ್ಟ್ರೇಟ್‌ಗಳ CWC ಬೆಂಚ್ ಅವರು ಅನಾಥರು ಎಂಬ ಪ್ರಮಾಣಪತ್ರವನ್ನು ನೀಡಿತು. ಮಂಡಲ್, ಖಜೂರಿ ಖಾಸ್‌ನಲ್ಲಿರುವ ನಿಶಾ ದುಬೆ ತನ್ನ ಚಿಕ್ಕಮ್ಮ ಅವರ ವಿಳಾಸದಿಂದ ಪಾಸ್‌ಪೋರ್ಟ್‌ಗಾಗಿ ಪುನಃ ಅರ್ಜಿ ಸಲ್ಲಿಸಿದರು.


ಕೊನೆಗೂ ಸಿಕ್ಕಿದ ಗೆಲುವು
ಸುದ್ದಿಪತ್ರಿಕೆಗೆ ತಮ್ಮ ಪರಿಶ್ರಮವನ್ನು ವಿವರಿಸಿದ ಮಂಡಲ್, ನಮ್ಮ ವ್ಯವಸ್ಥೆ ಎಷ್ಟು ಕಠಿಣವಾಗಿದೆ ಎಂದರೆ ನಮಗೆ ಬೇಕಾದ್ದನ್ನು ಪಡೆಯಲು ಹೋರಾಡಬೇಕಾಗಿದೆ. ಶಿಶುಪಾಲನಾ ಸಂಸ್ಥೆಯಲ್ಲಿದ್ದಾಗ ಯಾರಾದರೂ ಜನನ ಪ್ರಮಾಣಪತ್ರ ಮತ್ತು ಅನಾಥ ಪ್ರಮಾಣಪತ್ರವನ್ನು ಪಡೆದಿರಬೇಕು ಎಂದು ನವದೆಹಲಿ ಮತ್ತು ಕೇಂದ್ರ ದೆಹಲಿಯ CWC ಅಧ್ಯಕ್ಷ ಪಾಠಕ್ ತಿಳಿಸಿದ್ದಾರೆ. ನಮ್ಮ ವ್ಯವಸ್ಥೆಯ ವೈಫಲ್ಯ ಇದಾಗಿದ್ದು ಮಂಡಲ್ ಅವರ ಪ್ರಕರಣದ ನಂತರ, ದೆಹಲಿಯ CCI ಗಳಲ್ಲಿ (ಮಕ್ಕಳ ಆರೈಕೆ ಸಂಸ್ಥೆಗಳು) ಎಲ್ಲಾ ಮಕ್ಕಳು ತಮ್ಮ ಜನನ ಪ್ರಮಾಣಪತ್ರಗಳನ್ನು ಪಡೆದಿರುವುದನ್ನು ಇದೀಗ ಸಂಸ್ಥೆ ಖಚಿತಪಡಿಸಿಕೊಳ್ಳುತ್ತಿದೆ.


ಪೋಷಕರ ಹೆಸರು ಗೊತ್ತಿರದ ಮಕ್ಕಳನ್ನು ದಾಖಲಾತಿಯನ್ನು ಪುರಸಭೆಯ ಶಾಲೆಗಳು ಮಾಡುವುದನ್ನು ಪಾಠಕ್ ಖಚಿತಪಡಿಸಿಕೊಂಡಿದ್ದಾರೆ. CWC ಮಧ್ಯಪ್ರವೇಶಿಸಿದ ನಂತರ ಮಂಡಲ್ ಅವರ ಪೊಲೀಸ್ ಪರಿಶೀಲನೆ ಸುಸೂತ್ರವಾಗಿ ನಡೆಯಿತು ಹಾಗೂ ಅವರನ್ನು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಕರೆಯಿಸಲಾಯಿತು. ಈ ಸಮಯದಲ್ಲಿ ಅರ್ಜಿನಿರಾಕರಣೆಯ ಕಾರಣವನ್ನು ಕೇಳಲಾಯಿತು ಹಾಗೂ ನಾನು ಭಾರತದ ಪೌರನೇ ಎಂಬುದನ್ನು ಕೇಳಲಾಯಿತು ಹಾಗೂ ವಿದೇಶಕ್ಕೆ ಏಕೆ ಹೋಗಬೇಕೆಂದು ಬಯಸುತ್ತಾರೆ ಎಂದು ಕಚೇರಿಯ ಅಧಿಕಾರಿಗಳು ಮಂಡಲ್ ಅವರನ್ನು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: Indians in Canada: ಕೆನಡಾದಲ್ಲಿ ಹೆಚ್ಚುತ್ತಿರುವ ದ್ವೇಷ ಅಪರಾಧ; ಭಾರತೀಯ ಪ್ರಜೆಗಳಿಗೆ ಕೇಂದ್ರ ಎಚ್ಚರಿಕೆ

ತಾವು ಪಟ್ಟ ಎಲ್ಲಾ ಪರಿಶ್ರಮ ಹಾಗೂ ಎದುರಿಸಿದ ಸವಾಲುಗಳನ್ನು ಅವರು ಅಧಿಕಾರಿಗಳ ಮುಂದೆ ತಿಳಿಸುತ್ತಾರೆ. ಕೊನೆಗೂ ಅವರಿಗೆ ಪಾಸ್‌ಪೋರ್ಟ್ ವಿತರಿಸಲಾಯಿತು. ಮಂಡಲ್ ಅವರ ಘಟನೆಯ ನಂತರ CWC ಈಗ ಎಲ್ಲಾ ಅನಾಥಾಶ್ರಮಗಳಲ್ಲಿ ಜನನ ಪ್ರಮಾಣಪತ್ರಗಳನ್ನು ನೀಡಲು ವಿಶೇಷ ಶಿಬಿರಗಳನ್ನು ನಡೆಸಲು ಪ್ರಾರಂಭಿಸಿದೆ ಎಂದು ಮಂಡಲ್ ಹೇಳಿದ್ದಾರೆ. ಮಂಡಲ್ ಈಗ ಗುರ್‌ಗಾವ್‌ನಲ್ಲಿರುವ ಬೆಲ್ಜಿಯನ್ ಕುಟುಂಬಕ್ಕೆ ಮನೆಕೆಲಸಗಾರರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಮುಕ್ತ ಶಾಲೆಗೆ ಸೇರಿಕೊಂಡಿದ್ದಾರೆ.

Published by:Ashwini Prabhu
First published: