• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Pakistan: ಅಣುಬಾಂಬ್ ಹಿಡಿದು ಜಗತ್ತಿನಿಂದ ಹಣ ವಸೂಲಿ ಮಾಡಿ! ಪಾಕಿಸ್ತಾನಕ್ಕೆ ಮುಸ್ಲಿಂ ನಾಯಕನ ಬಿಟ್ಟಿ ಸಲಹೆ

Pakistan: ಅಣುಬಾಂಬ್ ಹಿಡಿದು ಜಗತ್ತಿನಿಂದ ಹಣ ವಸೂಲಿ ಮಾಡಿ! ಪಾಕಿಸ್ತಾನಕ್ಕೆ ಮುಸ್ಲಿಂ ನಾಯಕನ ಬಿಟ್ಟಿ ಸಲಹೆ

ಇಸ್ಲಾಮಿಸ್ಟ್ ನಾಯಕ ಸಾದ್ ರಿಜ್ವಿ-ಪಾಕ್ ಪ್ರಧಾನಿ ಶಹಬಾಜ್ ಶರೀಫ್

ಇಸ್ಲಾಮಿಸ್ಟ್ ನಾಯಕ ಸಾದ್ ರಿಜ್ವಿ-ಪಾಕ್ ಪ್ರಧಾನಿ ಶಹಬಾಜ್ ಶರೀಫ್

"ಜಗತ್ತಿನ ಇತರ ದೇಶಗಳ ಮುಂದೆ ಭಿಕ್ಷೆ ಬೇಡುವುದನ್ನು ನಿಲ್ಲಿಸಿ" ಅಂತ ಪಾಕಿಸ್ತಾನಕ್ಕೆ ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ್ (ಟಿಎಲ್‌ಪಿ) ಪಕ್ಷದ ನಾಯಕ ಸಾದ್ ರಿಜ್ವಿ ಸಲಹೆ ನೀಡಿದ್ದಾನೆ. ಭಿಕ್ಷೆ ಬೇಡುವ ಬದಲಿಗೆ ಪರಮಾಣು ಬೆದರಿಕೆ ಹಾಕುವಂತೆ ಪಾಕಿಸ್ತಾನ ಸರ್ಕಾರಕ್ಕೆ ಈತ ಸಲಹೆ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮುಂದೆ ಓದಿ ...
  • Share this:

ಪಾಕಿಸ್ತಾನ: ಆರ್ಥಿಕ ಕುಸಿತದಿಂದ ನೆರೆಯ ದೇಶ ಪಾಕಿಸ್ತಾನ (Pakistan) ತೀವ್ರ ಕಂಗೆಟ್ಟಿದೆ. ಜನರ ದಿನಬಳಕೆಗೆ ಬೇಕಾದ ಅಗತ್ಯ ವಸ್ತುಗಳೆ ಬೆಲೆಯೆಲ್ಲ ಗಗನಕ್ಕೆ ತಲುಪಿದೆ. ರಾತ್ರಿ ಸಾರ್ವಜನಿಕ ರಸ್ತೆಗಳಲ್ಲೂ ವಿದ್ಯುತ್ ಇಲ್ಲದಂತೆ (no electricity) ಆಗಿದ್ದು, ಪಾಕಿಸ್ತಾನದ ಆಡಳಿತ ಹಿಡಿದಿರುವ ಪಾಕಿಸ್ತಾನ ಮುಸ್ಲಿಂ ಲೀಗ್ (Pakistan Muslim League) ಹಾಗೂ ಪ್ರಧಾನಿ ಶೆಹಬಾಜ್ ಷರೀಫ್‌ಗೆ (Prime Minister Shehbaz Sharif) ಜನರು ಹಿಡಿಶಾಪ ಹಾಕುತ್ತಿದ್ದಾರೆ. ಪಾಕಿಸ್ತಾನ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ವಿದೇಶಿ ವಿನಿಮಯ ಸಂಗ್ರಹ 25,461 ಕೋಟಿ ರೂಪಾಯಿಗಳಿಗೆ ಕುಸಿದಿದೆ ಎಂದು ಪಾಕಿಸ್ತಾನದ ಕೇಂದ್ರೀಯ ಬ್ಯಾಂಕ್ (Central Bank of Pakistan) ಇತ್ತೀಚೆಗೆ ಹೇಳಿತ್ತು. ಈ ನಡುವೆ ಜಗತ್ತಿನ ಎದುರು ಅಸಾಹಾಯಕನಾಗಿ ನಿಂತು, ಸಹಾಯದ ನಿರೀಕ್ಷೆಯಲ್ಲಿ ಪಾಕಿಸ್ತಾನ ಇದೆ. ಪರಿಸ್ಥಿತಿ ಹೀಗಿರುವಾಗ ಪಾಕಿಸ್ತಾನಕ್ಕೆ ಇಸ್ಲಾಮಿಕ್ ನಾಯಕನೊಬ್ಬ (Islamic leader) ಬಿಟ್ಟಿ ಸಲಹೆ ನೀಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ್ (TLP) ಪಕ್ಷದ ನಾಯಕ ಸಾದ್ ರಿಜ್ವಿ  (Saad Rizvi) ಎಂಬಾತ ಪಾಕಿಸ್ತಾನ ಸರ್ಕಾರಕ್ಕೆ ಸಲಹೆ ನೀಡಿದ್ದಾನೆ. 'ಜಗತ್ತಿನ ಎದುರು ಭಿಕ್ಷೆ ಬೇಡಬೇಡಿ, ಒಂದು ಕೈಯಲ್ಲಿ ಅಣುಬಾಂಬ್ ಮತ್ತು ಇನ್ನೊಂದು ಕೈಯಲ್ಲಿ ಕುರಾನ್ ಹಿಡಿದು ಹೋಗಿ. ಅಣುಬಾಂಬ್ ಮೂಲಕ ಹಣಕ್ಕಾಗಿ ಬೇಡಿಕೆಯಿಡಲು ಅಣುಬಾಂಬ್ ಮೂಲಕ ದೇಶಗಳಿಗೆ ಬೆದರಿಕೆ ಹಾಕಿ, ಹಣ ವಸೂಲಿ ಮಾಡಿ ಅಂತ ಹೇಳಿದ್ದಾನೆ.


“ಜಗತ್ತಿನ ಎದುರು ಭಿಕ್ಷೆ ಬೇಡಬೇಡಿ”


ಜಗತ್ತಿನ ಇತರ ದೇಶಗಳ ಮುಂದೆ 'ಭಿಕ್ಷೆ ಬೇಡುವುದನ್ನು' ನಿಲ್ಲಿಸಿ ಅಂತ ಪಾಕಿಸ್ತಾನಕ್ಕೆ ತೆಹ್ರೀಕ್-ಇ-ಲಬ್ಬೈಕ್ ಪಾಕಿಸ್ತಾನ್ (ಟಿಎಲ್‌ಪಿ) ಪಕ್ಷದ ನಾಯಕ ಸಾದ್ ರಿಜ್ವಿ ಸಲಹೆ ನೀಡಿದ್ದಾನೆ. ಭಿಕ್ಷೆ ಬೇಡುವ ಬದಲಿಗೆ ಪರಮಾಣು ಬೆದರಿಕೆ ಹಾಕುವಂತೆ ಪಾಕಿಸ್ತಾನ ಸರ್ಕಾರಕ್ಕೆ ಈತ ಸಲಹೆ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.


ವಿಡಿಯೋದಲ್ಲಿ ಆತ ಹೇಳಿದ್ದೇನು?


ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಅವರು ತಮ್ಮ ಸಂಪೂರ್ಣ ಕ್ಯಾಬಿನೆಟ್ ಮತ್ತು ಸೇನಾ ಮುಖ್ಯಸ್ಥರನ್ನು ಆರ್ಥಿಕ ಸಹಾಯಕ್ಕಾಗಿ ಭಿಕ್ಷೆ ಬೇಡಲು ಇತರ ದೇಶಗಳಿಗೆ ಕಳುಹಿಸುತ್ತಿದ್ದಾರೆ. ಆದರೆ ಅವರು ಈ ರೀತಿ ಯಾಕೆ ಮಾಡುತ್ತಿದ್ದಾರೆ ಅಂತ ನಾನು ಕೇಳುತ್ತೇನೆ. ಪಾಕಿಸ್ತಾನದ ಆರ್ಥಿಕತೆಯು ಅಪಾಯದಲ್ಲಿದೆ ಎಂದು ಅವರು ಹೇಳಿದರು ಅಂತ ಆತ ಹೇಳಿದ್ದಾನೆ.


ಇದನ್ನೂ ಓದಿ: Explained: ಭಾರತಕ್ಕೆ ಚಿಂತೆ ತಂದೊಡ್ಡಿದೆ ಹದಗೆಟ್ಟಿರುವ ಪಾಕಿಸ್ತಾನದ ಆರ್ಥಿಕತೆ!


“ಅಣುಬಾಂಬ್ ಹಿಡಿದು ಹಣ ವಸೂಲಿ ಮಾಡಿ”


ಆಗ ನಾನು ಅವರಿಗೆ ಒಂದು ಕೈಯಲ್ಲಿ ಕುರಾನ್ ಮತ್ತು ಇನ್ನೊಂದು ಕೈಯಲ್ಲಿ ಅಣುಬಾಂಬ್ ಸೂಟ್‌ಕೇಸ್ ತೆಗೆದುಕೊಂಡು ಕ್ಯಾಬಿನೆಟ್ ಅನ್ನು ಸ್ವೀಡನ್‌ಗೆ ತೆಗೆದುಕೊಂಡು ಹೋಗುವಂತೆ ಸಲಹೆ ನೀಡಿದ್ದೇನೆ. ನಾವು ಕುರಾನ್‌ನ ಭದ್ರತೆಗಾಗಿ ಬಂದಿದ್ದೇವೆ ಎಂದು ಹೇಳಿ. ನಾನು ಹೇಳಿದಂತೆ ಮಾಡಿದರೆ ಇಡೀ ಜಗತ್ತೇ ನಿಮ್ಮ ಪಾದದ ಕೆಳಗೆ ಬೀಳದಿದ್ದರೆ, ನೀವು ನನ್ನ ಹೆಸರನ್ನು ಬದಲಾಯಿಸಬಹುದು ಎಂದು ರಿಜ್ವಿ ಆ ವೈರಲ್ ವಿಡಿಯೋದಲ್ಲಿ ಹೇಳಿದ್ದಾನೆ.




ಪ್ರತಿಭಟನೆ ವೇಳೆ ಮಾತನಾಡಿದ್ದ ರಿಜ್ವಿ


ಜನವರಿ 21, 2023 ರಂದು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಅಲ್ಲಿನ ರಾಜಕಾರಣಿ ರಾಸ್ಮಸ್ ಪಲುಡಾನ್ ಎಂಬಾತ ಕುರಾನ್ ಪ್ರತಿಯನ್ನು ಸುಟ್ಟುಹಾಕಿದ್ದ. ಈ ಘಟನೆಯನ್ನು ವಿರೋಧಿಸಿ ರಿಜ್ವಿ ಮಾತನಾಡಿದ್ದಾನೆ. ಈ ಬಗ್ಗೆ ಮೃದುವಾಗಿ ನಡೆದುಕೊಳ್ಳುತ್ತಿರುವುದಕ್ಕೆ TLP ಮುಖ್ಯಸ್ಥರು ತಮ್ಮ ಭಾಷಣದ ಸಮಯದಲ್ಲಿ ಪಾಕಿಸ್ತಾನಿ ಸರ್ಕಾರವನ್ನು ದೂಷಿಸಿದರು. ಪವಿತ್ರ ಗ್ರಂಥವನ್ನು ಸುಟ್ಟವರಿಗೆ ತಕ್ಕ ಪಾಠ ಕಲಿಸಲು ಜನವರಿ 27, 2023 ರಂದು ಲಾಹೋರ್‌ನಲ್ಲಿ TLP ಸದಸ್ಯರು ನಡೆಸಿದ ರ್ಯಾಲಿಯಲ್ಲಿ ಈತ ಈ ರೀತಿಯ ವಿವಾದ್ಮಕ ಹೇಳಿಕೆ ನೀಡಿದ್ದಾನೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು