ISIS Terrorist: ಭಾರತದ ಮಹಾನಾಯಕನ ಹತ್ಯೆಗೆ ಸ್ಕೆಚ್, ರಷ್ಯಾದಲ್ಲಿ ಐಸಿಸ್ ಬಾಂಬರ್ ಅರೆಸ್ಟ್!

ಭಾರತದಲ್ಲಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸುತ್ತಿದ್ದ ಇಸ್ಲಾಮಿಕ್ ಸ್ಟೇಟ್(ಐಸಿಸ್​) ಭಯೋತ್ಪಾದಕ ಗುಂಪಿನ ಸದಸ್ಯನೋರ್ವನನ್ನು ರಷ್ಯಾದ ಮಾಸ್ಕೋದಲ್ಲಿ  ಫಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ) ಅಧಿಕಾರಿಗಳು ಬಂಧಿಸಿದ್ದಾರೆ. ಈತ ಮಧ್ಯ ಏಷ್ಯಾ ಪ್ರದೇಶದ ದೇಶವೊಂದರ ಸ್ಥಳೀಯ ನಿವಾಸಿ ಎನ್ನಲಾಗಿದೆ.

ಐಸಿಸ್ ಉಗ್ರರು (ಇಂಟರ್‌ನೆಟ್ ಸಂಗ್ರಹ ಚಿತ್ರ)

ಐಸಿಸ್ ಉಗ್ರರು (ಇಂಟರ್‌ನೆಟ್ ಸಂಗ್ರಹ ಚಿತ್ರ)

  • Share this:
ಮಾಸ್ಕೋ, ರಷ್ಯಾ: ಐಸಿಸ್ ಉಗ್ರರು (ISIS Terrorist) ಭಾರತವನ್ನು ಟಾರ್ಗೆಟ್ (Target India) ಮಾಡುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ. ಭಾರತದ ಪ್ರಮುಖ ನಾಯಕರೊಬ್ಬರ (Main Leader) ಹತ್ಯೆಗೆ ಐಸಿಸ್ ಉಗ್ರರು ಸಂಚು ರೂಪಿಸಿದ್ದರು ಎಂಬ ಸ್ಫೋಟಕ ವಿಚಾರ ಇದೀಗ ಬೆಳಕಿಗೆ ಬಂದಿದೆ. ರಷ್ಯಾದಲ್ಲಿ (Russia) ಐಸಿಸ್ ಉಗ್ರ ಸಂಘಟನೆಗೆ ಸೇರಿದ ಭಯೋತ್ಪಾದಕನೊಬ್ಬನನ್ನು ಬಂಧಿಸಲಾಗಿದೆ. ಈತ ಆತ್ಮಾಹುತಿ ದಾಳಿಕೋರ (Suicide Bomber) ಎನ್ನಲಾಗಿದ್ದು, ಈತನನ್ನು ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವೀಸ್ ಘಟಕವು (Federal Security Service unit) ಬಂಧಿಸಿದ್ದು, ವಿಚಾರಣೆ ವೇಳೆ ಈತ ಸ್ಪೋಟಕ ವಿಚಾರ ಬಾಯ್ಬಿಟ್ಟಿದ್ದಾನೆ. ಭಾರತದ ಪ್ರಮುಖ ರಾಜಕೀಯ ನಾಯಕರೊಬ್ಬರ ಹತ್ಯೆಗೆ (Murder) ಐಸಿಸ್ ಉಗ್ರರು ಸಂಚು ರೂಪಿಸಿದ್ದಾರೆ ಅಂತ ಈತ ಹೇಳಿದ್ದಾನೆ.

ರಷ್ಯಾದಲ್ಲಿ ಐಸಿಸ್ ಉಗ್ರ ಅರೆಸ್ಟ್

ಭಾರತದಲ್ಲಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸುತ್ತಿದ್ದ ಇಸ್ಲಾಮಿಕ್ ಸ್ಟೇಟ್(ಐಸಿಸ್​) ಭಯೋತ್ಪಾದಕ ಗುಂಪಿನ ಸದಸ್ಯನೋರ್ವನನ್ನು ರಷ್ಯಾದ ಮಾಸ್ಕೋದಲ್ಲಿ  ಫಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ) ಅಧಿಕಾರಿಗಳು ಬಂಧಿಸಿದ್ದಾರೆ. ಈತ ಮಧ್ಯ ಏಷ್ಯಾ ಪ್ರದೇಶದ ದೇಶವೊಂದರ ಸ್ಥಳೀಯ ನಿವಾಸಿ ಎನ್ನಲಾಗಿದೆ.

ಐಸಿಸ್‌ನಲ್ಲಿ ಆತ್ಮಹತ್ಯಾ ಬಾಂಬರ್ ಆಗಿದ್ದ ಉಗ್ರ

ಈತನನ್ನು ಐಸಿಸ್ ಸಂಘಟನೆಯು ಟರ್ಕಿಯಲ್ಲಿ ಆತ್ಮಹತ್ಯಾ ಬಾಂಬರ್ ಆಗಿ ನೇಮಿಸಿಕೊಂಡಿತ್ತು. ಈ ಪ್ರಕರಣವು ಇನ್ನೂ ಹೆಚ್ಚಿನ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ. ISIS ಮತ್ತು ಅದರ ಎಲ್ಲಾ ಸಂಬಂಧಿತ ಸಂಘಗಳನ್ನು ಭಯೋತ್ಪಾದಕ ಸಂಘಟನೆ ಎಂದು ಗುರುತಿಸಲಾಗಿದೆ. ಇದನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 ರ ಮೊದಲ ಪಟ್ಟಿಯಲ್ಲೇ ಕೇಂದ್ರ ಸರ್ಕಾರವು ಸೇರಿಸಿದೆ.

ಇದನ್ನೂ ಓದಿ: Shocking News: ವಿಪರೀತ ಮದ್ಯ ಕುಡಿದ ವ್ಯಕ್ತಿಗೆ ಹೊಟ್ಟೆನೋವು; ಆಪರೇಷನ್​ ಮಾಡಿದಾಗ ವೈದ್ಯರೇ ಬೆಚ್ಚಿಬಿದ್ರು!

ಭಾರತದ ನಾಯಕನ ಹತ್ಯೆಗೆ ಸ್ಕೆಚ್

ಈ ಶಂಕಿತ ಭಾರತದ ಆಡಳಿತ ವಲಯದ ಪ್ರತಿನಿಧಿಯನ್ನು ಹತ್ಯೆ ಮಾಡುವ ಉದ್ದೇಶದಿಂದ ತನ್ನನ್ನು ತಾನು ಸ್ಫೋಟಿಸಿಕೊಳ್ಳುವ ಭಯೋತ್ಪಾದಕ ಕೃತ್ಯವನ್ನು ಎಸಗಲು ಯೋಜಿಸಿದ್ದ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎನ್ನುವುದು ತಿಳಿದು ಬಂದಿದೆ.

ಗೃಹಸಚಿವಾಲಯದಿಂದ ಹದ್ದಿನ ಕಣ್ಣು

ಗೃಹ ಸಚಿವಾಲಯದ ಪ್ರಕಾರ, ಐಎಸಿಸ್​ ಉಗ್ರ ಸಂಘಟನೆಯು ತನ್ನ ಸಿದ್ಧಾಂತವನ್ನು ಪ್ರಚಾರ ಮಾಡಲು ವಿವಿಧ ಇಂಟರ್ನೆಟ್ ಆಧಾರಿತ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಕೆ ಮಾಡುತ್ತಿದೆಯಂತೆ. ಈ ನಿಟ್ಟಿನಲ್ಲಿ ಸೈಬರ್‌ಸ್ಪೇಸ್ ಅನ್ನು ಸಂಬಂಧಪಟ್ಟ ಏಜೆನ್ಸಿಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ ಮತ್ತು ಕಾನೂನಿನ ಪ್ರಕಾರ ಕ್ರಮ ಕ್ರಮ ತೆಗೆದುಕೊಳ್ಳುತ್ತಿವೆ ಅಂತ ಮೂಲಗಳು ತಿಳಿಸಿವೆ.

ಲಿಬಿಯಾದಲ್ಲಿ ದಾಳಿ ಮಾಡಿದ್ದು ಕೇರಳದ ಯುವಕ!

ಲಿಬಿಯಾದಲ್ಲಿ ಐಸಿಸ್ ನಡೆಸಿದ ಮೊದಲ ಮಾರಾಣಾಂತಿಕ ಉಗ್ರ ದಾಳಿಯನ್ನು ನಡೆಸಿದ್ದು ಕೇರಳದ ಯುವಕ ಎಂಬ ಆಘಾತಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ತನ್ನ ಮುಖವಾಣಿ ವಾಯ್ಸ್ ಆಫ್ ಖುರಾಸನ್‌ನಲ್ಲಿ ಐಸಿಸ್ ಬರೆದುಕೊಂಡಿದೆ. ಈ ದಾಳಿಯಲ್ಲಿ ಭಾರತೀಯ ಮೂಲದ ಐಸಿಸ್ ಉಗ್ರ ಹತನಾಗಿದ್ದಾನೆ ಎಂದು ಖುರಾಸನ್‌ನಲ್ಲಿ ಹೇಳಿದೆ. ಈತನ ಹೆಸರನ್ನು ಐಸಿಸ್ ಬಹಿರಂಗ ಪಡಿಸಿಲ್ಲ. ಆದರೆ ಈತ ಐಸಿಸ್ ಸಂಘಟನೆಯಲ್ಲಿ ಅಬು ಬಕರ್ ಅಲ್ ಹೈದ್ ಹೆಸರಿನಲ್ಲಿ ಗುರುತಿಸಿಕೊಂಡಿದ್ದ. ಇಷ್ಟೇ ಅಲ್ಲ ಈತ ಕೇರಳದ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದ ಯುವಕ ಅಂತ ಐಸಿಸ್ ಮೂಲಗಳೇ ತಿಳಿಸಿವೆ.

ಇದನ್ನೂ ಓದಿ: National Flag: ರಾಷ್ಟ್ರಧ್ವಜದ ಮೇಲೆ “ಜೀಸಸ್, ಭಾರತವನ್ನು ಆಶೀರ್ವದಿಸಿ" ಎಂದು ಬರೆದ ಶಿಕ್ಷಕ ಅರೆಸ್ಟ್

ಗಲ್ಫ್‌ನಲ್ಲಿ ಉದ್ಯೋಗಿಯಾಗಿದ್ದ ಭಯೋತ್ಪಾದಕ

ಈತ  ಗಲ್ಫ್ ರಾಷ್ಟ್ರದಲ್ಲಿ  ಉದ್ಯೋಗಿಯಾಗಿದ್ದ. ಐಸಿಸ್‌ನಿಂದ ಪ್ರಭಾವಿತನಾಗಿ ಇಸ್ಲಾಮ್ ಧರ್ಮ ಸ್ವೀಕರಿಸಿದ್ದ ಎನ್ನಲಾಗಿದೆ. ಬಳಿಕ ಐಸಿಸ್ ಸಂಘಟನೆ ಸೇರಿಕೊಂಡಿದ್ದ. ಈತನೇ ಲಿಬಿಯಾದಲ್ಲಿನ ಮೊದಲ ಭಯೋತ್ಪಾದಕ ದಾಳಿ ನಡೆಸಿದ್ದಾನೆ. ಈ ದಾಳಿಯಲ್ಲಿ ಅಬು ಬಕರ್ ಅಲ್ ಹೈದ್ ಮೃತಪಟ್ಟಿದ್ದಾನೆ ಎಂದು ವಾಯ್ಸ್ ಆಫ್ ಖುರಾಸನ್‌ನಲ್ಲಿ ಹೇಳಲಾಗಿದೆ.
Published by:Annappa Achari
First published: