ಹಕ್ಕಿಗಳ ಹಿಕ್ಕೆ ಕಾಟಕ್ಕೆ ಭಾರತೀಯ ಕುಟುಂಬಕ್ಕೆ ಸೇರಿದ ಮರದ ಅರ್ಧ ಭಾಗಕ್ಕೆ ಕೊಡಲಿ ಹಾಕಿಸಿದ ನೆರೆಮನೆಯವರು..!

ಮರದಲ್ಲಿರುವ ಹಕ್ಕಿಗಳ ಹಿಕ್ಕೆಯಿಂದ ಮನೆಯಂಗಳದಲ್ಲಿ ಗಲೀಜು ಆಗುತ್ತದೆ ಎಂದು ಮರದ ಅರ್ಧ ಭಾಗಕ್ಕೆ ಕೊಡಲಿ ಹಾಕಿಸಿದ ನೆರೆಮನೆಯವರು. ಈಗ ಆ ಮನೆಯೇ ಸ್ಥಳೀಯರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಉತ್ತರ ಇಂಗ್ಲೆಂಡ್‍ನ ಪಟ್ಟಣವೊಂದರಲ್ಲಿ ಭಾರತೀಯ ಮೂಲದ ಕುಟುಂಬ ವಾಸವಿರುವ ಮನೆಯ ಅಂಗಳದಲ್ಲಿರುವ ಮರವಿದೆ. ಈಗ ಅದು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಹೌದು, ಅದಕ್ಕೂ ಕಾರಣವಿದೆ  ಆ ಮರದಲ್ಲಿ ಹಕ್ಕಿಗಳು ಗೂಡು ಕಟ್ಟಿದ್ದು, ಅವುಗಳ  ಹಿಕ್ಕೆ ತಮ್ಮ ಅಂಗಳಕ್ಕೆ ಬೀಳುತ್ತದೆ ಎಂದು ಸಿಟ್ಟಿಗೆದ್ದ ನೆರೆಮನೆಯವರು, ಆ ಮರದ ಅರ್ಧ ಭಾಗಕ್ಕೆ ಕೊಡಲಿ ಹಾಕಿಸಿದ್ದು, ಆ ಮರವೀಗ ಸ್ಥಳೀಯರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ವಾಟರ್‌ಥೋರ್ಪ್‌, ಶೆಫೀಲ್ಡ್‌ನಲ್ಲಿರುವ ತಮ್ಮ ಪಕ್ಕದ ಮನೆಯವರು ಪಾರಿವಾಳಗಳು ಆ ಮರದ ಕೊಂಬೆಗಳಲ್ಲಿ ಗೂಡು ಕಟ್ಟಿದ್ದು, ಅವುಗಳ ಹಿಕ್ಕೆಯಿಂದ ತಮ್ಮ ಮನೆಯ ಅಂಗಳ ಗಲೀಜಾಗುತ್ತದೆ ಎಂದು ದೂರು ನೀಡಿದ್ದಾರೆ ಎಂದು ಭರತ್ ಮಿಸ್ತ್ರಿ ಅವರು ಹೇಳಿದ್ದಾರೆ. ಈ ಸಮಸ್ಯೆಯ ಕುರಿತು ಸೌಹಾರ್ದಯುತ ಪರಿಹಾರವನ್ನು ಪಡೆಯುವ ಪ್ರಯತ್ನ ಸಫಲವಾಗಲಿಲ್ಲ, ಹಾಗಾಗಿ ನೆರೆಯವರು ಮರ ಕಡಿಯುವವರನ್ನು ಕರೆಸಿದರು ಎಂದು 56 ವರ್ಷದ ಭರತ್ ಮಿಸ್ತ್ರಿ ತಿಳಿಸಿದ್ದಾರೆ.

ಅವರು ಮೊದಲು ಹಾಗೆ ಮಾಡಿದಾಗ ನಾನು ಕೋಪಗೊಂಡಿದ್ದೆವು ಎಂಬುದನ್ನು ನೀವು ಊಹಿಸಬಹುದು. ಒಂದೆರಡು ದಿನಗಳ ಬಳಿಕ ನಾವು ಶಾಂತಗೊಂಡೆವು ಎಂದು ಮಿಸ್ತ್ರಿ ಬಿಬಿಸಿಗೆ ಹೇಳಿದ್ದಾರೆ. 70 ವರ್ಷ ವಯೋಮಾನದ ಪಕ್ಕದ ಮನೆಯ ದಂಪತಿ, ಕಳೆದ ಮಾರ್ಚ್‍ನಲ್ಲಿ ಆ ಮರವನ್ನು ಕಡಿದು ಉರುಳಿಸುವಂತೆ ಹೇಳಿದ್ದರು.

16 ಅಡಿ ಎತ್ತರದ ಆ ಮರದ ಕೊಂಬೆಗಳನ್ನು ಕತ್ತರಿಸುವುದು ಅಥವಾ ಹಕ್ಕಿಗಳು ಗೂಡು ಕಟ್ಟದಂತೆ ಬಲೆ ಹಾಕುವುದು ಸೇರಿದಂತೆ ಹಲವಾರು ಚರ್ಚೆಗಳು ನಡೆದವು ಎಂದು ಮಿಸ್ತ್ರಿ ವಿವರಿಸಿದ್ದಾರೆ.

ಇದನ್ನೂ ಓದಿ: Bigg Boss 8: ಪರಿಸ್ಥಿತಿಯ ಲಾಭ ಪಡೆದು ದಿವ್ಯಾ ಸುರೇಶ್- ಮಂಜು​ ಕಣ್ಣೀರಿಗೆ ಕಾರಣವಾದ್ರ ಪ್ರಶಾಂತ್​ ಸಂಬರಗಿ..!

ಈ ಕುರಿತು ಮಿಸ್ತ್ರಿ ಹಲವಾರು ಟ್ರೀ ಸರ್ಜನ್‍ಗಳು ಮತ್ತು ಗಾರ್ಡನರ್‌ಗಳನ್ನು ವಿಚಾರಿಸಿದ್ದರು. ಆದರೆ ಅವರ 28 ವರ್ಷದ ನೆರೆಯಾತ ಆ ಜವಾಬ್ಧಾರಿಯನ್ನು ತಾನೇ ವಹಿಸಿಕೊಂಡು, ಟ್ರೀ ಸರ್ಜನ್ ಅನ್ನು ಕರೆಸಿದ್ದರು. ಇದು ಇಲ್ಲಿಗೆ ಬಂದು ತಲುಪಿದ್ದಕ್ಕೆ ನನಗೆ ನಿಜಕ್ಕೂ ತುಂಬಾ ಬೇಸರವಾಗಿದೆ ಎಂದು ಶ್ರೀಮತಿ ಮಿಸ್ತ್ರಿ ಹೇಳಿದ್ದಾರೆ.

ನೆರೆಯವರಿಗೆ ಅವರ ಆಸ್ತಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಇದೆ ಎಂಬುದನ್ನು ಮಿಸ್ತ್ರಿಯವರು ಒಪ್ಪುತ್ತಾರೆ. ಆದರೆ, ಇಷ್ಟು ವರ್ಷಗಳ ಅಕ್ಕಪಕ್ಕದಲ್ಲೇ ವಾಸವಿದ್ದೂ, ಅವರು ಅದನ್ನು ಮಾಡಿದ ರೀತಿ ಮಿಸ್ತ್ರಿ ಕುಟುಂಬಕ್ಕೆ ನೋವು ತಂದಿದೆ.

ಇದನ್ನೂ ಓದಿ: Devaraj: ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಟ ದೇವರಾಜ್​ ದಂಪತಿ: ಇಲ್ಲಿವೆ ಕುಟುಂಬದ ಅಪರೂಪದ ಚಿತ್ರಗಳು..!

ಮರದ ಅರ್ಧ ಭಾಗವನ್ನು ಕಡಿದಿರುವುದರಿಂದ, ಮರ ಬದುಕುಳಿಯುವುದು ಕಷ್ಟವಾದರೆ ಅದನ್ನು ಕಡಿಯಬೇಕಾಗಿ ಬರಬಹುದು ಎಂಬುವುದು ಅವರ ಭಯ. ಆದರೂ ಅದನ್ನು ಬದುಕಿಸಬಹುದು ಎಂಬ ನಿರೀಕ್ಷೆ ಅವರದ್ದು.

ಇನ್ನು, ನನಗೆ ಅವರಿಬ್ಬರ ಬಗೆಗೂ ಅನುಕಂಪ ಇದೆ. ಇದು ಬೇಸರದ ಸಂಗತಿ. ಆಗಿದ್ದು ಆಗಿ ಹೋಯಿತು, ನಾವೇನು ಮಾಡುವಂತಿಲ್ಲ ಎಂದು ಮತ್ತೊಬ್ಬ ನೆರೆಯಾತ ಬ್ರಿಯಾನ್ ಪರ್ಕ್ಸ್‌ ಹೇಳಿದ್ದಾರೆ.

ಇದನ್ನೂ ಓದಿ: Sonam Kapoor: ಕಪ್ಪು ಬಣ್ಣದ ಡ್ರೆಸ್​ನಲ್ಲಿ ಟ್ರೆಂಡಿ ಲುಕ್​ನಲ್ಲಿ ಸೋನಮ್​ ಕಪೂರ್​..!

ಈ ಮರದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆಯಾಗುತ್ತಿವೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಈ ಮರ ಸ್ಥಳೀಯ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಮಿಸ್ತ್ರಿಯವರ ಪಕ್ಕದ ಮನೆಯವರನ್ನು ಯಾವತ್ತಿಗೂ ಚಿಲ್ಲರೆ ನೆರೆಯವರು ಎಂದು ನೆಟ್ಟಿಗರು ವ್ಯಂಗ್ಯವಾಗಿ ಕರೆಯತೊಡಗಿದ್ದಾರೆ.ಈ ಬಗ್ಗೆ ಆ ಪಕ್ಕದ ಮನೆಯವರು ಇನ್ನೂ ಯಾವುದೇ ಹೇಳಿಕೆ ಕೊಟ್ಟಿಲ್ಲ.
Published by:Anitha E
First published: