UPSC Exam: ಬಡ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಬೋಧಿಸಲು ಉದ್ಯೋಗವನ್ನೇ ತೊರೆದ IAS ಅಧಿಕಾರಿ!

ಮಾಜಿ ಐಎಎಸ್ ಅಧಿಕಾರಿಯಾಗಿದ್ದ ಅರುಣ್ ಕುಮಾರ್ ಬಿಹಾರದ ಪಾಟ್ನಾದಲ್ಲಿರುವ ಹಿಂದುಳಿದ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಬೋಧಿಸುವ ಸಲುವಾಗಿ ತಮ್ಮ ಪ್ರತಿಷ್ಠಿತ ಕೆಲಸವನ್ನು ತೊರೆದರು. ಅವರ ನಿಸ್ವಾರ್ಥತೆ ಮತ್ತು ಪರಹಿತಚಿಂತನೆಯು ಈಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಪ್ರಶಂಸೆ ಮತ್ತು ಮೆಚ್ಚುಗೆಯನ್ನು ಗಳಿಸುತ್ತಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

ಇಂದಿನ ದಿನಗಳಲ್ಲಿ ಲಂಚ (Bribe) ಕೊಟ್ಟು ಸರಕಾರಿ ಉದ್ಯೋಗಕ್ಕೆ (Government Job) ಸೇರುವವರಿದ್ದಾರೆ. ಇದಕ್ಕೆ ಕಾರಣ ಸರಕಾರಿ ಉದ್ಯೋಗದಿಂದ ದೊರೆಯುವ ಅನೇಕ ಪ್ರಯೋಜನಗಳು. ರಜೆ, ಭತ್ಯೆ, ಬಡ್ತಿ ಹೀಗೆ ಬೇರೆ ಬೇರೆ ಕಾರಣಗಳಿಂದ ಜನರು ಸರಕಾರಿ ಉದ್ಯೋಗದತ್ತ ಚಿತ್ತ ನೆಟ್ಟಿದ್ದಾರೆ. ಅದರಲ್ಲೂ ಯುಪಿಎಸ್‌ಸಿ ಪರೀಕ್ಷೆಗಳೆಂದರೆ (UPSC Exam) ಕಬ್ಬಿಣದ ಕಡಲೆ ಎಂಬ ಮಾತೇ ಇದೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕೆಂದರೆ ಅಷ್ಟೇ ತಯಾರಿ ಕೂಡ ಮುಖ್ಯ. ಇಂದಿನ ಲೇಖನದಲ್ಲಿ ನಾವು ಪ್ರಸ್ತಾಪಿಸುತ್ತಿರುವ ವ್ಯಕ್ತಿ ಅರುಣ್ ಕುಮಾರ್ (Arun Kumar) ಅವರ ಕುರಿತಾಗಿದ್ದು ಹಿಂದುಳಿದ ಯುಪಿಎಸ್‌ಸಿ ಆಕಾಂಕ್ಷಿಗಳಿಗಾಗಿಯೇ ತಮ್ಮ ಐಎಎಸ್ ಸ್ಥಾನಕ್ಕೆ ರಾಜೀನಾಮೆ (Resignation) ನೀಡಿ ಬೋಧಿಸುವ ಕಾಯಕಕ್ಕೆ ಮುನ್ನುಡಿ ಬರೆದರು.


ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಬೋಧಿಸಲು ಉದ್ಯೋಗವನ್ನೇ ತೊರೆದ ಐಎಎಸ್ ಅಧಿಕಾರಿ
ಸ್ವಂತ ಸುಖಕ್ಕಿಂತ ಸೇವೆಯೇ ಮೊದಲು ಎಂಬ ಮನೋಭಾವವನ್ನು ಮೈಗೂಡಿಸಿಕೊಂಡಿರುವ ಒಬ್ಬ ಅಸಾಧಾರಣ ವ್ಯಕ್ತಿಯ ಕಥೆ ಇದು. ಮಾಜಿ ಐಎಎಸ್ ಅಧಿಕಾರಿಯಾಗಿದ್ದ ಅರುಣ್ ಕುಮಾರ್ ಬಿಹಾರದ ಪಾಟ್ನಾದಲ್ಲಿರುವ ಹಿಂದುಳಿದ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಬೋಧಿಸುವ ಸಲುವಾಗಿ ತಮ್ಮ ಪ್ರತಿಷ್ಠಿತ ಕೆಲಸವನ್ನು ತೊರೆದರು. ಅವರ ನಿಸ್ವಾರ್ಥತೆ ಮತ್ತು ಪರಹಿತಚಿಂತನೆಯು ಈಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಪ್ರಶಂಸೆ ಮತ್ತು ಮೆಚ್ಚುಗೆಯನ್ನು ಗಳಿಸುತ್ತಿದೆ.


ಯುಪಿಎಸ್‌ಸಿ ಕೋಚಿಂಗ್ ತರಗತಿಯ ಹೆಚ್ಚುವರಿ ಶುಲ್ಕವನ್ನು ಭರಿಸಲಾಗದೇ ಇರುವ ವಿದ್ಯಾರ್ಥಿಗಳಿಗೆ 1994 ರ ಬ್ಯಾಚ್‌ನ IAS ಅಧಿಕಾರಿ, ಅರುಣ್ ಕುಮಾರ್ ಉಚಿತ ತರಗತಿಗಳನ್ನು ನಡೆಸುತ್ತಾರೆ ಎಂಬುದಾಗಿ  ಮಾಧ್ಯಮವೊಂದು ವರದಿ ಮಾಡಿದೆ.


ಪರೀಕ್ಷೆ ಬರೆಯಲು ಆರ್ಥಿಕ ಸ್ಥಿತಿ ಅಡಚಣೆಯಾಗಿರಬಾರದು ಎಂಬುದೇ ಇವರ ಉದ್ದೇಶ 
ಗಂಗಾ ನದಿಯ ದಡದಲ್ಲಿ ತಮ್ಮ ಪತ್ನಿ ರಿತು ಜೈಸ್ವಾಲ್ ಮುಕ್ತ ತರಗತಿಗಳನ್ನು ನಡೆಸುತ್ತಿದ್ದಾಗ ಅದರಿಂದ ಸ್ಫೂರ್ತಿ ಪಡೆದ ಅರುಣ್ ಕುಮಾರ್ ಯಾವುದೇ ವಿದ್ಯಾರ್ಥಿಗೂ UPSC ನಾಗರಿಕ ಸೇವೆಗಳ ಪರೀಕ್ಷೆಯನ್ನು ಭೇದಿಸಲು ಆರ್ಥಿಕ ಸ್ಥಿತಿ ಅಡಚಣೆಯಾಗಿರಬಾರದು ಎಂಬುದಾಗಿ ತಿಳಿಸಿದ್ದಾರೆ.


ಇದನ್ನೂ ಓದಿ:  Elon Musk-Jennifer Pics: ಮಗನ ಓದಿಗಾಗಿ ಮಾಜಿ ಬಾಯ್​ಫ್ರೆಂಡ್​ ಜೊತೆಗಿನ ಫೋಟೋವನ್ನ ಹರಾಜಿಗೆ ಹಾಕಿದ ಜೆನ್ನಿಫರ್ ಗ್ವಿನ್ನೆ

ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ ವಿಶ್ವದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದೆನಿಸಿದೆ. ಸತ್ಯ ಸಂಗತಿ ಎಂದರೆ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಪ್ರತಿಷ್ಟಿತ ಹುದ್ದೆಯನ್ನು ತ್ಯಜಿಸುವುದು ತುಂಬಾ ಅಪರೂಪದ ಸಂಗತಿ. ಏಕೆಂದರೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಂದರ್ಶನಗಳಲ್ಲಿಉತ್ತೀರ್ಣರಾಗಲು ಅದೆಷ್ಟೋ ಕಠಿಣ ಪರಿಶ್ರಮಗಳನ್ನು ಆಕಾಂಕ್ಷಿಗಳು ನಡೆಸುತ್ತಾರೆ. ಈ ಪರೀಕ್ಷೆಗೆ ಸ್ವಯಂ ಸಿದ್ಧತೆ ಮಾಡಿಕೊಂಡಿದ್ದ ಅರುಣ್ ಅವರು ಮೂಲಸೌಕರ್ಯ ವೆಚ್ಚವನ್ನು ಉಳಿಸಲು ಬಯಲು ತರಗತಿಗಳನ್ನು ನಡೆಸಲು ನಿರ್ಧರಿಸಿದರು.


UPSC ಆಕಾಂಕ್ಷಿಗಳಿಗೆ ಬೋಧಿಸುವ ವಿಡಿಯೋ ವೈರಲ್ 
ಅರುಣ್ ಅವರ ಈ ಸಾಧನೆಯನ್ನು ಬಣ್ಣಿಸಿದವರಲ್ಲಿ ನಾರ್ವೆಯ ರಾಜತಾಂತ್ರಿಕ ಸೋಲ್ಹೈಮ್ ಕೂಡ ಒಬ್ಬರು. ಮಾಜಿ ಐಎಎಸ್ ಅಧಿಕಾರಿ ಆಕಾಂಕ್ಷಿಗಳಿಗೆ ಬೋಧಿಸುವ ವಿಡಿಯೋವನ್ನು ಸೋಲ್ಹೈಮ್ ಹಂಚಿಕೊಂಡಿದ್ದಾರೆ. ನಿಜಕ್ಕೂ ಅರುಣ್ ಅವರ ಈ ಕೆಲಸ ಮೆಚ್ಚುವಂತಹದ್ದು. ಬಿಹಾರದ ಪಾಟ್ನಾದ ಗಂಗಾ ನದಿಯ ದಡದಲ್ಲಿ ಸುಮಾರು 3,500 ಆಕಾಂಕ್ಷಿಗಳು ಉಚಿತ ತರಬೇತಿ ಪಡೆಯುತ್ತಾರೆ.




ಇದನ್ನೂ ಓದಿ:  Viral News: ಮದುವೆ ದುಡ್ಡಲ್ಲಿ ರಸ್ತೆ ನಿರ್ಮಿಸಿದ ಟೆಕ್ಕಿ! ಈತನೇ ನಿಜವಾದ ಶ್ರೀಮಂತ!

ಪರೀಕ್ಷೆಗಳಿಗೆ ಹಾಜರಾಗಲು ದುಬಾರಿ ತರಗತಿ ವೆಚ್ಚ ಭರಿಸಲು ಸಾಧ್ಯವಾಗದವರಿಗಾಗಿ ಅರುಣ್ ಅವರು ತಮ್ಮ ಉದ್ಯೋಗವನ್ನೇ ತೊರೆದರು ಎಂಬುದು ಸೋಲ್ಹೈಮ್ ಮಾತಾಗಿದೆ. ದಿ ಬೆಟರ್ ಇಂಡಿಯಾ ಪ್ರಕಾರ, ಕುಮಾರ್ ಅವರಿಂದ ಕಲಿತುಕೊಂಡಿರುವ ಅನೇಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ. ಟ್ವಿಟರ್‌ನಲ್ಲಿ, ಹಂಚಿಕೊಂಡಿರುವ ವೀಡಿಯೊವನ್ನು ನೋಡಿದ ನಂತರ ಹೆಚ್ಚಿನವರು ಅರುಣ್ ಕುಮಾರ್ ಅವರ ಕೆಲಸವನ್ನು ಮೆಚ್ಚುತ್ತಿದ್ದಾರೆ.

Published by:Ashwini Prabhu
First published: