Sad News: ಮೊಬೈಲ್‌ ರೀಚಾರ್ಜ್‌ ಖಾಲಿ! ಆನ್‌ಲೈನ್‌ ಗೇಮ್ ಆಡಲಾಗದೆ ಮನನೊಂದ ಬಾಲಕ ಆತ್ಮಹತ್ಯೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಮ್ಮ ಮೊಬೈಲ್ ರೀಚಾರ್ಜ್ ಮಾಡಲ್ಲ ಎಂದು ಬೈದ ದಿನವೇ ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡ ಗುಗನ್, ತಾಯಿಯ ಸೀರೆಯನ್ನು ಫ್ಯಾನ್‌ಗೆ ಹಾಕಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿದ್ದಾನೆ. ಬಳಿಕ ತಾಯಿ ಬಂದು ನೋಡಿದಾಗ ಮಗ ಸಾವನ್ನಪ್ಪಿರುವುದನ್ನು ಕಂಡು ಆಕೆಗೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಗಿದೆ.

ಮುಂದೆ ಓದಿ ...
  • Local18
  • 5-MIN READ
  • Last Updated :
  • Thoothukkudi, India
  • Share this:

ತೂತುಕುಡಿ: ಪೋಷಕರ ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಇಲ್ಲದ ಕಾರಣ ಆನ್‌ಲೈನ್ ಗೇಮ್‌ಗಳನ್ನು (Online Game) ಆಡಲು ಸಾಧ್ಯವಾಗದೆ ಮನನೊಂದ ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ (Suicide Case) ಮಾಡಿಕೊಂಡಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.


13 ವರ್ಷದ ವಿದ್ಯಾರ್ಥಿ ಗುಗನ್ ಎಂಬಾತ ಮೃತಪಟ್ಟ ವಿದ್ಯಾರ್ಥಿಯಾಗಿದ್ದು, ಈತ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕೋವಿಲ್ಪಟ್ಟಿಗೆ ಸಮೀಪವಿರುವ ಇಲುಪ್ಪೈಯುರಾಣಿ ಪೆರುಮಾಳ್ ಪಟ್ಟಣದ ಸುಶಿಕರನ್ ಮತ್ತು ವಿದ್ಯಾ ಸರಸ್ವತಿ ದಂಪತಿಯ ಪುತ್ರನಾಗಿದ್ದ. ಈತ ಕಳೆದ ಕೆಲ ದಿನಗಳಿಂದ ತನ್ನ ಪೋಷಕರ ಮೊಬೈಲ್‌ನಲ್ಲಿ ಇಂಟರ್‌ನೆಟ್ ಮುಗಿದ ಕಾರಣ ಆನ್‌ಲೈನ್‌ ಗೇಮ್‌ಗಳನ್ನು ಆಡಲಾಗದೆ ಹತಾಶೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.


ಪೋಷಕರ ಎಚ್ಚರಿಕೆಗೂ ಬಗ್ಗದ ವಿದ್ಯಾರ್ಥಿ!


ಮೃತ ಬಾಲಕ ತಂದೆ ಸುಶಿಕರನ್ ಅವರು ತಮ್ಮ ತಮ್ಮ ಮನೆಯ ಸಮೀಪದ ಮಸೀದಿಯ ಬಳಿ ಸ್ವಂತ ಅಂಗಡಿಯನ್ನು ಹೊಂದಿದ್ದಾರೆ. ಅವರ ಮಗ ಮುನ್ಸಿಪಲ್ ಮಿಡಲ್ ಸ್ಕೂಲ್‌ನಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದ. ಈತ ಶಾಲೆ ಮುಗಿಸಿ ಬಂದ ನಂತರ ಪ್ರತಿನಿತ್ಯ ಹೆಚ್ಚಿನ ಸಮಯವನ್ನು ತನ್ನ ಪೋಷಕರ ಮೊಬೈಲ್‌ನಲ್ಲಿ ಆನ್‌ಲೈನ್‌ ಗೇಮ್‌ಗಳನ್ನು ಆಡುವ ಮೂಲಕ ಕಳೆಯುತ್ತಿದ್ದ ಎಂದು ತಿಳಿದು ಬಂದಿದೆ. ಇದಕ್ಕಾಗಿ ಆತನಿಗೆ ಈ ಹಿಂದೆ ಪೋಷಕರು ಹಲವಾರು ಬಾರಿ ಮೊಬೈಲ್‌ನಲ್ಲಿ ಆಡದಂತೆ ಎಚ್ಚರಿಕೆಯನ್ನು ನೀಡಿದ್ದರು. ಅದಾಗ್ಯೂ ಆತ ಮೊಬೈಲ್‌ನಲ್ಲಿ ಆಡುವುದನ್ನು ಮುಂದುವರಿಸಿದ್ದ ಎಂದು ತಿಳಿದು ಬಂದಿದೆ.


ಇದನ್ನೂ ಓದಿ: Sad News: ‘ಅಪ್ಪಾ ಐ ಹೇಟ್‌ ಯೂ’ ಎಂದು ಪತ್ರ ಬರೆದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ! ಕರುಳು ಹಿಂಡುವ ಸ್ಟೋರಿ


ಮೃತ ಬಾಲಕ ಗುಗನ್‌ನ ತಾಯಿ ಹೇಳುವ ಪ್ರಕಾರ, ಮಾರ್ಚ್‌ 27ರಂದು ಮನೆಯಲ್ಲಿದ್ದ ಎರಡು ಮೊಬೈಲ್‌ ಫೋನ್‌ಗಳಲ್ಲೂ ಇಂಟರ್‌ನೆಟ್ ಖಾಲಿ ಆಗಿತ್ತು. ಇದರಿಂದ ಆತನಿಗೆ ಪಬ್‌ಜಿ ಮತ್ತು ಫ್ರೀಫೈರ್‌ ಗೇಮ್‌ಗಳನ್ನು ಆಡೋಕೆ ಸಾಧ್ಯವಾಗಿರಲಿಲ್ಲ. ಇದಲ್ಲದೆ ಆತ ಮೊಬೈಲ್‌ಗೆ ನೆಟ್‌ ಪ್ಯಾಕ್ ರೀಚಾರ್ಜ್‌ ಮಾಡುವಂತೆ ತಂದೆಗೆ ತಿಳಿಸಲು ನನಗೆ ಒತ್ತಾಯಿಸುತ್ತಿದ್ದ. ಆದರೆ ನಾನು ಪತಿಗೆ ತಿಳಿಸಲು ನಿರಾಕರಿಸಿ ಓದಿನ ಕಡೆ ಗಮನ ಕೊಡುವಂತೆ ಎಚ್ಚರಿಕೆ ಕೊಟ್ಟಿದ್ದೆ ಎಂದು ಹೇಳಿದ್ದಾರೆ.


ಅಮ್ಮ ಬೈದಿದ್ದಕ್ಕೆ ಬದುಕೇ ಅಂತ್ಯ!


ಅಮ್ಮ ಮೊಬೈಲ್ ರೀಚಾರ್ಜ್ ಮಾಡಲ್ಲ ಎಂದು ಬೈದ ದಿನವೇ ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡ ಗುಗನ್, ತಾಯಿಯ ಸೀರೆಯನ್ನು ಫ್ಯಾನ್‌ಗೆ ಹಾಕಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿದ್ದಾನೆ. ಬಳಿಕ ತಾಯಿ ಬಂದು ನೋಡಿದಾಗ ಮಗ ಸಾವನ್ನಪ್ಪಿರುವುದನ್ನು ಕಂಡು ಆಕೆಗೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಗಿದೆ. ಘಟನೆ ಸಂಬಂಧ ಕೋವಿಲ್‌ಪಟ್ಟಿ ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಗುಗನ್ ಶವವನ್ನು ವಶಪಡಿಸಿಕೊಂಡು ಕೋವಿಲ್‌ಪಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಇದನ್ನೂ ಓದಿ: Crime News: ಸಂಸದ ಅಸಾದುದ್ದೀನ್ ಒವೈಸಿ ಸಂಬಂಧಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ!

top videos


    ತನ್ನ ಮಗನನ್ನು ಚೆನ್ನಾಗಿ ಓದಿಸಬೇಕು ಎಂದು ಕನಸು ಕಂಡಿದ್ದ ಗುಗನ್ ತಂದೆ, ಆತ ವಿದ್ಯಾಭ್ಯಾಸದಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಅಂಕ ಪಡೆಯದಿದ್ದರೂ ಕೂಡ ಆತನಿಗೆ ಯಾವುದೇ ರೀತಿ ಒತ್ತಡ ಕೊಟ್ಟಿರಲಿಲ್ಲ. ಅಲ್ಲದೇ ಆತ ಮೊಬೈಲ್‌ನಲ್ಲಿ ಹೆಚ್ಚು ಕಳೆಯುತ್ತಿದ್ದನ್ನು ಕೂಡ ತಂದೆ ಆತನ ಕಡೆಗೆ ಗಮನ ಹರಿಸಿರಲಿಲ್ಲ. ಇದೀಗ ತನ್ನ ಮಗನನ್ನು ಕಳೆದುಕೊಂಡಿರುವ ಗುಗನ್‌ ತಂದೆ, ನನ್ನ ಮಗನ ರೀತಿ ಯಾವ ತಂದೆ ತಾಯಿಗೂ ಆಗಬಾರದು. ತಮಿಳುನಾಡು ಸರ್ಕಾರ ಇಂತಹ ಆಟಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.

    First published: