Mobile Blast: ಮೊಬೈಲ್ ಚಾರ್ಜ್ ಹಾಕುವಾಗ ಹುಷಾರ್, ಬ್ಯಾಟರಿ ಸ್ಫೋಟಗೊಂಡು ಸಾವನ್ನಪ್ಪಿತು ಕಂದಮ್ಮ!

ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜಿಂಗ್‌ನಲ್ಲಿ ಇರಿಸಲಾಗಿದ್ದ ಮೊಬೈಲ್ ಫೋನ್‌ನ ಬ್ಯಾಟರಿ ಸ್ಫೋಟಗೊಂಡು 8 ತಿಂಗಳ ಶಿಶುವೊಂದು ಸಾವನ್ನಪ್ಪಿದೆ. ನೇಹಾ ಎಂಬ ಎಂಟು ತಿಂಗಳ ಮಗು ಮಲಗಿದ್ದ ಮಂಚದ ಮೇಲೆ ಲಾವಾ ಕಂಪನಿಯ ಮೊಬೈಲ್ ಫೋನ್ ಸ್ಫೋಟಗೊಂಡು, ದುರಂತ ಸಂಭವಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬರೇಲಿ, ಉತ್ತರ ಪ್ರದೇಶ: ಮೊಬೈಲ್‌ನಿಂದ (Mobile) ಎಷ್ಟು ಅನುಕೂಲ ಇದೆಯೋ ಅಷ್ಟೇ ಅನಾನುಕೂಲವೂ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೆಷ್ಟೋ ಬಾರಿ ಮೊಬೈಲ್‌ ಸ್ಪೋಟಗೊಂಡು (Mobile Blast) ಮೊಬೈಲ್ ಬಳಕೆದಾರರು (Mobile Users) ಗಾಯಗೊಂಡಿರುವ, ಅವರ ಜೀವಹಾನಿಯಾದ ಉದಾಹರಣೆಯೂ ಇದೆ. ಅದೆಷ್ಟೋ ಬಾರಿ ಮಾತನಾಡುವಾಗ, ಚಾರ್ಜ್‌ (Charge) ಹಾಕುವಾಗ ಸ್ಫೋಟಗೊಂಡ ಉದಾಹರಣೆಯೂ ಇದೆ. ಇದೀಗ ಉತ್ತರ ಪ್ರದೇಶದ (Uttara Pradesh) ಬರೇಲಿಯಲ್ಲಿ (Bareilly) ಸೋಲಾರ್ (Solar) ಪ್ಯಾನೆಲ್ ಮೂಲಕ ಚಾರ್ಜಿಂಗ್‌ನಲ್ಲಿ ಇರಿಸಲಾಗಿದ್ದ ಮೊಬೈಲ್ ಫೋನ್‌ನ ಬ್ಯಾಟರಿ (Battery) ಸ್ಫೋಟಗೊಂಡು (Blast) 8 ತಿಂಗಳ ಶಿಶುವೊಂದು (Child) ಸಾವನ್ನಪ್ಪಿದೆ. ನೇಹಾ ಎಂಬ ಎಂಟು ತಿಂಗಳ ಮಗು ಮಲಗಿದ್ದ ಮಂಚದ ಮೇಲೆ ಲಾವಾ ಕಂಪನಿಯ ಮೊಬೈಲ್ ಫೋನ್ (Lava Company mobile phone) ಸ್ಫೋಟಗೊಂಡು, ದುರಂತ ಸಂಭವಿಸಿದೆ.

ಸೋಲಾರ್‌ ಪ್ಯಾನಲ್‌ಗೆ ಚಾರ್ಜ್‌ ಹಾಕಿದ್ದ ಮೊಬೈಲ್ ಸ್ಫೋಟ

ಸೋಲಾರ್‌ ಪ್ಯಾನಲ್‌ಗೆ ಚಾರ್ಜ್‌ ಹಾಕಿದ್ದ ಲಾವಾ ಕಂಪನಿಯ ಮೊಬೈಲ್ ಒಂದು ಸ್ಫೋಟಗೊಂಡು ಅಲ್ಲಿಯೇ ಹತ್ತಿರದಲ್ಲಿ ಮಲಗಿದ್ದ 10 ತಿಂಗಳ ಮಗುವೊಂದು ಸಾವನ್ನಪ್ಪಿರೋ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಕೇವಲ ಆರು ತಿಂಗಳ ಹಿಂದೆ ಖರೀದಿಸಿದ ಮೊಬೈಲ್ ಫೋನ್, ಚಾರ್ಜ್ ಮಾಡಲು ಪ್ಲಗ್ ಮಾಡುವಾಗ ಹೆಚ್ಚು ಬಿಸಿಯಾದ ನಂತರ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಸ್ಫೋಟಗೊಂಡಿದೆ ಎನ್ನಲಾಗಿದೆ.

ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಿಸದೇ ಮಗು ಸಾವು

ಮೃತ ಮಗು ನೇಹಾ ತಾಯಿ ಕುಸುಮ್ ಬಟ್ಟೆ ಒಗೆಯಲು ಹೋದಾಗ ಮಗುವನ್ನು ಮಂಚದ ಮೇಲೆ ಮಲಗಿಸಿ ಹೋಗಿದ್ದರು. ಈ ವೇಳೆ ಅಲ್ಲೇ ಹತ್ತಿರದಲ್ಲಿದ್ದ ಮೊಬೈಲ್ ಸ್ಫೋಟಗೊಂಡಿದೆ, ಆಗ ದೊಡ್ಡ ಶಬ್ದ ಮತ್ತು ಅಳುವನ್ನು ಕೇಳಿದ ತಾಯಿ  ಮಗುವಿನ ಬಳಿ ಓಡಿ ಬಂದಿದ್ದಾರೆ. ಒಳಗೆ ಬರುವಷ್ಟರಲ್ಲಿ ಮಗುವಿನ ಕೈ ಮತ್ತು ಬೆನ್ನು ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ವೈದ್ಯರು ಬಾಲಕಿಯನ್ನು ರಕ್ಷಿಸಲು ಯತ್ನಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ.

ಇದನ್ನೂ ಓದಿ: Tongue Cut: ತನ್ನ ನಾಲಿಗೆಯನ್ನೇ ಕತ್ತರಿಸಿ ದೇವಿ ಮುಂದಿಟ್ಟ ಭಕ್ತ! ಅಂಧಭಕ್ತಿಯ ಕಥೆ ಕೇಳಿದ್ರೆ ಶಾಕ್ ಆಗ್ತೀರಿ

ಮಗುವಿಗೆ ಸ್ನಾನ ಮಾಡಿಸಿ, ಮೊಬೈಲ್ ಬಳಿ ಮಲಗಿಸಿದ್ದ ತಾಯಿ

ಕೂಲಿ ಕೆಲಸ ಮಾಡುವ ಮಗುವಿನ ತಂದೆ ಸುನೀಲ್ ಕುಮಾರ್ ಮಾತನಾಡಿ, ಮೊಬೈಲ್‌ಗೆ ದೀಪ ಹಚ್ಚಲು ಮತ್ತು ಚಾರ್ಜ್ ಮಾಡಲು ಸೋಲಾರ್ ಪ್ಯಾನೆಲ್‌ಗಳನ್ನು ತಂದಿದ್ದರು. "ನನ್ನ ಹೆಂಡತಿ ನಮ್ಮ ಮಗಳಿಗೆ ಸ್ನಾನ ಮಾಡಿಸಿ, ಫೋನ್ ಇಟ್ಟಿದ್ದ ಮಂಚದ ಮೇಲೆ ಮಲಗಿಸಿದ್ದಳು. ನಾನು ಮಗುವಿಗೆ ಬಟ್ಟೆಗಳನ್ನು ಹಾಕಿ, ಆ ಕಡೆ ಹೋಗಿದ್ದೆ. ಆಗ ಮೊಬೈಲ್ ಸ್ಫೋಟಗೊಂಡಿದೆ ಅಂತ ಮಗುವಿನ ತಂದೆ ಸುನೀಲ್ ಹೇಳಿದ್ದಾರೆ.

ಗಾಯಗೊಂಡು ಸಾವನ್ನಪ್ಪಿದ ಮಗು

ಆ ನಂತರ ಸುನೀಲ್ ಮನೆಯಿಂದ ಹೊರಟು ಹೋಗಿದ್ದು, ಕುಸುಮ ಕೂಡ ಚಾರ್ಜ್ ಮಾಡಲು ಪ್ಲಗ್ ಇನ್ ಮಾಡಿದ್ದ ಫೋನ್ ಅನ್ನು ಮರೆತಿದ್ದಾಳೆ. ಮಗುವಿನ ಶಬ್ಧ ಮತ್ತು ಅಳುವುದು ಕೇಳಿದ ಅವರು ಮನೆಗೆ ಓಡಿ ಬಂದಿದ್ದಾರೆ. ಅಷ್ಟರಲ್ಲಾಗಲೇ ಮೊಬೈಲ್ ಸ್ಫೋಟಗೊಂಂಡು, ಆಕೆ ಮಲಗಿದ್ದ ಮಂಚಕ್ಕೆ ಬೆಂಕಿ ತಗುಲಿತ್ತು. ಇದರಿಂದ 8 ತಿಂಗಳ ಮಗು ತೀವ್ರವಾಗಿ ಗಾಯಗೊಂಡಿತ್ತು.

ಇದನ್ನೂ ಓದಿ: Dead Rat: ಬೀಟ್ರೂಟ್ ಪಲ್ಯದಲ್ಲಿ ಸಿಕ್ತು ಸತ್ತ ಇಲಿ! ಹೋಟೆಲ್‌ ಊಟ ಮಾಡೋ ಮುನ್ನ ಹುಷಾರಪ್ಪ

ಪೋಸ್ಟ್ ಮಾರ್ಟಮ್ ಇಲ್ಲ

ಇದುವರೆಗೆ ಪೋಷಕರು ಯಾರ ವಿರುದ್ಧವೂ ದೂರು ದಾಖಲಿಸಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೂ ಕಳುಹಿಸಿಲ್ಲ. ಹಾಗೆಯೇ ಮಗುವಿನ ಅಂತ್ಯ ಸಂಸ್ಕಾರ ಮಾಡಲಾಗಿದೆ.
Published by:Annappa Achari
First published: