ಜಗತ್ತಿನಲ್ಲಿ ಕೋವಿಡ್ (Corona Virus)) ಆರಂಭವಾದಾಗಿನಿಂದ ಹಲವಾರು ರೂಪಾಂತರಗಳು ಪತ್ತೆಯಾಗಿದೆ. ಹಾಗೆಯೇ ರೂಪಾಂತರಿ ವೈರಸ್ (CoronaVariant) ಜೊತೆಗೆ ಇದರ ರೋಗಲಕ್ಷಣಗಳು ಕೂಡ ಬದಲಾಗುತ್ತಿವೆ. ಆರಂಭದಲ್ಲಿ ಕಾಣಿಸಿಕೊಂಡ ಕೋವಿಡ್ ಗೆ ಹೋಲಿಸಿದರೆ ಈಗಿನ ಕೋವಿಡ್ ರೋಗಲಕ್ಷಣಗಳು (Corona Virus Symptoms) ಮತ್ತಷ್ಟು ಹೆಚ್ಚಾಗಿವೆ. ಕೋವಿಡ್ ಸಾಂಕ್ರಾಮಿಕ ಆರಂಭವಾದಾಗಿನಿಂದಲೂ ಅದರ ರೋಗ ಲಕ್ಷಣಗಳು ಬದಲಾಗುತ್ತಲೇ ಇವೆ. ಮೊದಲಿನ ಲಕ್ಷಣಗಳಿಗಿಂತಲೂ ಬೇರೆಯಾಗಿರುವ ರೋಗ ಲಕ್ಷಣಗಳನ್ನು ನಾವಿಂದು ನೋಡಬಹುದು. ಈಗಾಗಲೇ ಕೋವಿಡ್ (Covid-19) ವೈರಸ್ನ ಹಲವಾರು ಹೊಸ ರೂಪಾಂತರಗಳು ಹೊರಹೊಮ್ಮಿವೆ ಮತ್ತು ಮತ್ತಷ್ಟು ಬದಲಾಗಿವೆ. ಇದರ ಕೆಲವು ರೋಗಲಕ್ಷಣಗಳು ಸೌಮ್ಯವಾಗಿದ್ದರೆ ಮತ್ತೆ ಕೆಲವು ಅತ್ಯಂತ ಗಂಭೀರವಾಗಿದೆ.
ಕೋವಿಡ್ ರೋಗ ಲಕ್ಷಣಗಳಲ್ಲೂ ಬದಲಾವಣೆ
ಈ ಹಿಂದೆ ಕೋವಿಡ್ ಬಂದರೆ ಜ್ವರ, ಕೆಮ್ಮು, ವಾಸನೆ ಮತ್ತು ರುಚಿ ಗೊತ್ತಾಗದೇ ಇರುವುದು, ಎದೆ ನೋವು ಇಂತಹ ಲಕ್ಷಣಗಳು ಸಾಮಾನ್ಯವಾಗಿದ್ದವು. ವಿಶೇಷವಾಗಿ ಆಲ್ಫಾ ಮತ್ತು ಡೆಲ್ಟಾ ರೂಪಾಂತರಗಳಲ್ಲೂ ಹೀಗೆಯೇ ಇದ್ದವು.
ಆ ನಂತರ ಕೋವಿಡ್ ಒಮಿಕ್ರಾನ್ ನಂತರ ಕೋವಿಡ್ ರೋಗಲಕ್ಷಣಗಳು ಹೆಚ್ಚಾದವು. ಗಂಟಲು ನೋವು , ಮೂಗು ಸೋರಿಕೆ, ತಲೆನೋವು ಮತ್ತು ಆಯಾಸ ಇಂಥವುಗಳು ಸಾಮಾನ್ಯ ಲಕ್ಷಣಗಳಾದವು.
ಈ ಮಧ್ಯೆ, ವರದಿಗಳ ಪ್ರಕಾರ, ಕೋವಿಡ್ನ ರೋಗಲಕ್ಷಣಗಳು ಮತ್ತೊಮ್ಮೆ ಬದಲಾಗಿದೆ. ಅದರಲ್ಲಿ ಮೈಯಾಲ್ಜಿಯಾ ಅಥವಾ ಸ್ನಾಯು ನೋವು ಅತ್ಯಂತ ಸಾಮಾನ್ಯವಾಗಿದೆ.
ಮೈಯಾಲ್ಜಿಯಾ ಆರಂಭಿಕ ಲಕ್ಷಣವಾಗಿರಬಹುದು
ಜೋಯಿ ಕೋವಿಡ್ ಅಧ್ಯಯನದ ವರದಿಗಳು ಹೇಳುವ ಪ್ರಕಾರ, ಮೈಯಾಲ್ಜಿಯಾ "ಉನ್ನತ" ಕೋವಿಡ್ನ ಲಕ್ಷಣವಾಗಿದೆ. ಮೈಯಾಲ್ಜಿಯಾವನ್ನು ಸ್ನಾಯು ನೋವು ಎಂದೂ ಕರೆಯುತ್ತಾರೆ.
ಇದು ವೈರಸ್ ದಾಳಿಗೆ ಪ್ರತಿಯಾಗಿ ಪ್ರತಿರಕ್ಷಣಾ ಕೋಶಗಳಿಂದ ಬಿಡುಗಡೆಯಾಗುವ ಉರಿಯೂತದ ಅಣುಗಳಿಂದಾಗಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. 2021 ರಲ್ಲಿ ಒಮಿಕ್ರಾನ್ ರೂಪಾಂತರಿ ಹೊರಹೊಮ್ಮಿದ ಬಳಿಕ ಈ ರೋಗಲಕ್ಷಣವು ಅತ್ಯಂತ ಪ್ರಬಲವಾದ ರೋಗಲಕ್ಷಣಗಳಲ್ಲಿ ಒಂದಾಗಿದೆ.
ಕೋವಿಡ್ ಸ್ನಾಯು ನೋವು ಎಲ್ಲೆಲ್ಲಿ ಉಂಟಾಗುತ್ತದೆ?
ಮೈಯಾಲ್ಜಿಯಾ ಅಥವಾ ಸ್ನಾಯು ನೋವು ಹೆಚ್ಚು ನೋವನ್ನು ಉಂಟುಮಾಡಬಹುದು. ಇದು ವಿಶ್ರಾಂತಿ ತೆಗೆದುಕೊಳ್ಳುವಾಗ ಅಥವಾ ನಡೆಯುವಾಗ ಸ್ನಾಯುಗಳಲ್ಲಿ ನೋವು ಉಂಟು ಮಾಡುತ್ತದೆ. ಈ ನೋವು ದೀರ್ಘಕಾಲದ್ದೂ ಆಗಿರಬಹುದು ಅಥವಾ ಅಲ್ಪಾವಧಿಯದ್ದು ಆಗಿರಬಹುದಾಗಿದೆ.
ಜೊಯಿ ವರದಿಯ ಪ್ರಕಾರ, COVID-ಸಂಬಂಧಿತ ಸ್ನಾಯು ನೋವು ಸಾಮಾನ್ಯವಾಗಿ ಭುಜಗಳು ಅಥವಾ ಕಾಲುಗಳಲ್ಲಿ ಉಂಟಾಗುತ್ತದೆ. ಹಾಗಾಗಿ ಜನರು ಹೆಚ್ಚು ಸಮಸ್ಯೆ ಅನುಭವಿಸುತ್ತಾರೆ.
ಈ ಕೋವಿಡ್-ಸಂಬಂಧಿತ ಸ್ನಾಯು ನೋವುಗಳು ಕೆಲವೊಬ್ಬರಿಗೆ ಸ್ವಲ್ಪ ಮಟ್ಟಿಗೆ ಇದ್ದರೆ ಇನ್ನೂ ಕೆಲವರಿಗೆ ಹೆಚ್ಚಿನ ನೋವು ಉಂಟುಮಾಡುತ್ತದೆ. ಕೆಲವರಿಗೆ, ಈ ಸ್ನಾಯು ನೋವು ದಿನನಿತ್ಯದ ಕೆಲಸಗಳನ್ನು ಮಾಡುವುದಕ್ಕೂ ತೊಂದರೆ ಕೊಡಬಹುದು.
ಕೋವಿಡ್ ಸ್ನಾಯು ನೋವನ್ನು ತಿಳಿಯುವುದು ಹೇಗೆ?
COVID ನಿಂದ ಉಂಟಾಗುವ ಮೈಯಾಲ್ಜಿಯಾ ಅಥವಾ ಸ್ನಾಯು ನೋವು, ಸರಾಸರಿ ಎರಡರಿಂದ ಮೂರು ದಿನಗಳವರೆಗೆ ಇರುತ್ತದೆ ಎಂದು ಹೇಳಲಾಗುತ್ತದೆ.
ಆದರೆ ಸರಿಹೋಗಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ನೀವು ಸೋಂಕಿಗೆ ಒಳಗಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು COVID ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಅದರ ಹೊರತಾಗಿ, COVID-19ನ ಇತರ ರೋಗಲಕ್ಷಣಗಳನ್ನು ಗಮನಿಸಲು ಸೂಚಿಸಲಾಗುತ್ತದೆ.
ಗಮನಿಸಬೇಕಾದ ಕೋವಿಡ್ ಸಾಮಾನ್ಯ ಲಕ್ಷಣಗಳು
COVID ನ ಕೆಲವು ಸಾಮಾನ್ಯ ರೋಗಲಕ್ಷಣಗಳಲ್ಲಿ ಇವು ಪ್ರಮುಖವಾಗಿವೆ.
ಆರೋಗ್ಯ ಸಮಸ್ಯೆ ಹೊಂದಿರುವವರಿಗೆ, ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಅಥವಾ ವಯಸ್ಸಾದವರಿಗೆ ಕೋವಿಡ್ ಹೆಚ್ಚಿನ ಸಮಸ್ಯೆ ಉಂಟುಮಾಡುತ್ತದೆ.
ಇದಕ್ಕಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಆಗಾಗ್ಗೆ ಕೈಗಳನ್ನು ತೊಳೆಯುವುದು ಮತ್ತು ಕೋವಿಡ್ನಂತಹ ರೋಗಲಕ್ಷಣಗಳ ಸಂದರ್ಭದಲ್ಲಿ ಪ್ರತ್ಯೇಕವಾಗಿರುವುದು ಬಹಳ ಒಳ್ಳೆಯದು. ಇದರಿಂದ ಅಂಥವರು ಸ್ವಲ್ಪ ಮಟ್ಟಿಗಾದರೂ ಸೋಂಕಿನಿಂದ ರಕ್ಷಣೆ ಪಡೆಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ