ಮಹಾರಾಷ್ಟ್ರದ (Maharashtra) ವಾರ್ಧಾ ಜಿಲ್ಲೆಯಲ್ಲಿ 13 ವರ್ಷಗಳಿಂದ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆ (Asha Worker) ಭಾರತವು ನೂರನೇ ಸಂವತ್ಸರಕ್ಕೆ ಕಾಲಿಟ್ಟ ಸಮಯದಲ್ಲಿ ಭಾರತದ ಪ್ರತಿ ಹಳ್ಳಿಯು ಆಸ್ಪತ್ರೆಯನ್ನು (Hospital) ಹೊಂದಿರಬೇಕು ಎಂದು ಬಯಸಿದ್ದಾರೆ. ಮುಂದಿನ 25 ವರ್ಷಗಳ ಗುರಿಯು ಗ್ರಾಮೀಣ ಭಾರತಕ್ಕೆ ಸಂಪನ್ಮೂಲಗಳನ್ನು ಒದಗಿಸುವುದು ಮತ್ತು ಸೂಕ್ತವಾದ ಗಮನವನ್ನು ಅರಿಸಬೇಕು ಎಂದು ಆಕೆ ತಿಳಿಸಿದ್ದಾರೆ. ತಮ್ಮ ಕಾರ್ಯನಿರ್ವಹಣೆಯ ಸಮಯದಲ್ಲಿ ಹಳ್ಳಿಗಳು (Village) ಎದುರಿಸುತ್ತಿರುವ ವೈದ್ಯಕೀಯ ಸಹಾಯದ ಕೊರತೆಯನ್ನು ಕಂಡಿರುವ ಆಕೆ ಸ್ವತಃ ಅದನ್ನು ಅನುಭವಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮಾಹಿತಿಯ ಕೊರತೆ
ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿರುವುದಕ್ಕೆ ಕಾರಣ ಮಾಹಿತಿಯ ಕೊರತೆಯಾಗಿದೆ. ಕೋವಿಡ್-19 ಸಮಯದಲ್ಲಿ ಜನರನ್ನು ಕ್ವಾರಂಟೈನ್ ಮಾಡುವ ಜವಾಬ್ದಾರಿಯನ್ನು ಆಶಾ ಕಾರ್ಯಕರ್ತರಿಗೆ ವಹಿಸಲಾಯಿತು.
ಪೌನಾ ಗ್ರಾಮದಲ್ಲಿ ಹೆಚ್ಚಿನವರು ಈ ನಿಯಮಕ್ಕೆ ತಿರುಗಿಬಿದ್ದರು. ಕ್ವಾರಂಟೈನ್ ಭಯದಿಂದ ಅಲ್ಲಿನ ಗ್ರಾಮಸ್ಥರು ಆಶಾಕಾರ್ಯಕರ್ತರನ್ನು ಮನೆಗೂ ಬರಲು ಬಿಡುತ್ತಿರಲಿಲ್ಲ ಹಾಗೂ ನಿಂದನೀಯ ಪದಗಳನ್ನು ಬಳಸುತ್ತಿದ್ದರು ಎಂದು ಆಶಾಕಾರ್ಯಕರ್ತೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಕೊರೋನಾ ಮೊದಲ ಅಲೆಯ ಸಮಯದಲ್ಲಿ ರೋಗಿಯೊಬ್ಬನನ್ನು ಅಲ್ಲಿಂದ ಬೇರೆಡೆಗೆ ಕರೆದುಕೊಂಡು ಹೋಗುವಂತೆ ಒತ್ತಡ ಹೇರಲಾಯಿತು. ಆಕೆ ಇದು ನಿಯಮಕ್ಕೆ ವಿರುದ್ಧವಾಗಿರುವುದರಿಂದ ಹಾಗೆ ಮಾಡುವುದಿಲ್ಲ ಎಂದು ಗ್ರಾಮಸ್ಥರಿಗೆ ತಿಳಿಸಿದರು.
ಇದರಿಂದ ಕ್ರೋಧಗೊಂಡ ಗ್ರಾಮಸ್ಥರು ಆಕೆಯ ಮನೆಯನ್ನು ಮುರಿದು ಹಾಕಿ, ಚಾಕು ಹಿಡಿದು ಆಕೆಯನ್ನು ಬೆದರಿಸಿದ್ದಾರೆ. ಇನ್ನೊಂದು ಘಟನೆಯಲ್ಲಿ ಆಶಾಕಾರ್ಯಕರ್ತೆ ಹಾಗೂ ಅವರ ಪತಿಯನ್ನು ಥಳಿಸಿದ್ದೂ ಇದೆ ಎಂದು ಅವರ ಸಹೋದ್ಯೋಗಿಯೊಬ್ಬರು ತಿಳಿಸಿದ್ದಾರೆ.
ಸಂವಹನ ದೃಢ ಹಾಗೂ ಸ್ಪಷ್ಟವಾಗಿರಬೇಕು
ಸರಕಾರ ಹಾಗೂ ಗ್ರಾಮೀಣ ಜನರ ನಡುವಿನ ಸಂವಹನಗಳು ದೃಢ ಹಾಗೂ ಸ್ಪಷ್ಟವಾಗಿರಬೇಕು ಎಂಬುದು ಕಾರ್ಯಕರ್ತೆಯರ ಅಭಿಪ್ರಾಯವಾಗಿದೆ. ಜನರಿಗೆ ಹೆಚ್ಚು ವಿವರವಾಗಿ ಮಾಹಿತಿಗಳನ್ನು ತಲುಪಿಸಬೇಕು ಹಾಗೂ ಸರಕಾರ ಕೈಗೊಂಡಿರುವ ಯೋಜನೆಗಳ ಸ್ಪಷ್ಟತೆ ಹಾಗೂ ಪ್ರಯೋಜನವನ್ನು ಅವರಿಗೆ ತಿಳಿಯಪಡಿಸಬೇಕು ಎಂಬುದು ಕಾರ್ಯಕರ್ತೆಯರ ಹೇಳಿಕೆಯಾಗಿದೆ.
ಸರಕಾರದ ಉದ್ದೇಶವನ್ನು ಜನರಿಗೆ ತಿಳಿಸುವ ಪ್ರಮುಖ ಜವಬ್ದಾರಿಯನ್ನು ಹೊತ್ತಿರುವ ಆಶಾಕಾರ್ಯರ್ತೆಯರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಆದರೆ ಅವರುಗಳು ತಿಳಿಸಿರುವಂತೆ ಗ್ರಾಮೀಣ ಪ್ರದೇಶಗಳಲ್ಲಿ ಮಾಹಿತಿಯ ಕೊರತೆ ಇರುವುದರ ಜೊತೆಗೆ ಗ್ರಾಮಸ್ಥರಿಗೆ ಕೆಲವೊಂದು ರೋಗಗಳ ಕುರಿತು ಮತ್ತು ಅವುಗಳ ಹಾನಿಯ ಕುರಿತು ಮನಮುಟ್ಟುವಂತೆ ತಿಳಿಸಲು ಕೆಲವೊಂದು ಹೊಸ ವ್ಯವಸ್ಥೆಗಳ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ತುರ್ತು ಸೌಕರ್ಯಗಳಿಲ್ಲ
ಸಂಪನ್ಮೂಲಗಳ ಕೊರತೆ ಕೂಡ ಗ್ರಾಮಗಳಲ್ಲಿ ಹೆಚ್ಚು ಸಮಸ್ಯೆಯನ್ನುಂಟು ಮಾಡುತ್ತಿದೆ ಎಂಬುದು ಕಾರ್ಯರ್ತೆಯರ ಅಭಿಪ್ರಾಯವಾಗಿದೆ. ಆಸ್ಪತ್ರೆಗಳು ತುಂಬಾ ದೂರದಲ್ಲಿರುವುದರಿಂದ ಆ್ಯಂಬುಲೆನ್ಸ್ಗಳು ಸರಿಯಾದ ಸಮಯಕ್ಕೆ ಪ್ರತಿಕ್ರಿಯಿಸುವುದಿಲ್ಲ.
ಆ ಸಂದರ್ಭದಲ್ಲಿ ಆಟೋರಿಕ್ಷಾದಲ್ಲಿ ಕೂಡ ಗರ್ಭಿಣಿ ಸ್ತ್ರೀಯರನ್ನು, ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಕರೆದೊಯ್ದಿದ್ದು ಇದೆ ಎಂದು ತಿಳಿಸಿರುವ ಕಾರ್ಯರ್ತೆಯರು, ಗ್ರಾಮಗಳಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ಸಲಕರಣೆಗಳ ಕೊರತೆ ಇದೆ ಎಂದು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಸಿಕಲ್ ಸೆಲ್ ಅನೀಮಿಯಾ ಮತ್ತು HIV ನಂತಹ ಸರಳ ಪರೀಕ್ಷೆಗಳನ್ನು ಆಯಾ ಸ್ಥಳಗಳಲ್ಲಿ ನಡೆಸಲಾಗುತ್ತಿಲ್ಲ ಇದಕ್ಕೆ ಕಾರಣ ವೈದ್ಯಕೀಯ ಸೌಲಭ್ಯಗಳ ಕೊರತೆಯಾಗಿದೆ. ನಿರ್ಲಕ್ಷ್ಯದಿಂದ ಗ್ರಾಮಸ್ಥರನ್ನು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ ಎಂಬುದು ಅವರ ಮಾತಾಗಿದೆ.
ವೇತನ ಸರಿಯಾಗಿ ದೊರೆಯುತ್ತಿಲ್ಲ
ಯಾವುದೇ ವಿವರವಾದ ಮಾಹಿತಿ ಇಲ್ಲದೆ ತಾನು ಆಶಾ ಕಾರ್ಯರ್ತೆಯಾಗಿ ಉದ್ಯೋಗ ಪ್ರಾರಂಭಿಸಿರುವುದಾಗಿ ಹೇಳಿಕೊಂಡಿದ್ದು 2009 ರಲ್ಲಿ ರೂ 250 ಅನ್ನು ವೇತನವಾಗಿ ನೀಡಲಾಗುತ್ತಿತ್ತು. ಜೀವನ ನಿರ್ವಹಣೆಗೆ ಈ ಮೊತ್ತ ಸಾಕಾಗುವುದಿಲ್ಲವೆಂದು ಒಕ್ಕೂಟ ರಚಿಸಿ ಹೋರಾಟ ನಡೆಸಿರುವುದಾಗಿ ಆಕೆ ಹೇಳಿಕೊಂಡಿದ್ದಾರೆ.
ಹದಿಮೂರು ವರ್ಷಗಳ ನಂತರ ತಿಂಗಳಿಗೆ ರೂ 4000 ವೇತನ ಪಡೆಯುತ್ತಿದ್ದು ನಾಲ್ಕು ಜನರಿರುವ ಕುಟುಂಬವನ್ನು ಪೋಷಿಸಲು ಈ ವೇತನ ಸಾಕಾಗುವುದಿಲ್ಲ ಎಂಬುದು ಆಶಾಕಾರ್ಯರ್ತೆಯ ಮಾತಾಗಿದೆ. ಸಾಂಕ್ರಾಮಿಕ ರೋಗದಲ್ಲಿ ತಮ್ಮ ಪತಿ ಕೆಲಸವನ್ನು ಕಳೆದುಕೊಂಡು ಕೃಷಿಗೆ ಮರಳಿದ್ದನ್ನು ನೆನಪಿಸಿಕೊಂಡ ಆಕೆ, ಮಳೆಯಿಂದಾಗಿ ಬೆಳೆ ಕೂಡ ಕೈಗೆ ಬಂದಿಲ್ಲ ಎಂದು ಅಲವತ್ತುಕೊಂಡಿದ್ದಾರೆ.
ಇದನ್ನೂ ಓದಿ: Dhoni: ಫಿಫಾ ಫುಟ್ಬಾಲ್ ವಿಶ್ವಕಪ್ನಲ್ಲೂ ಧೋನಿಯದೇ ಹವಾ! ಇಲ್ಲಿದೆ ವೈರಲ್ ಫೋಟೋ
ಕುಟುಂಬದಲ್ಲಿ ದುಡಿಯುವ ವ್ಯಕ್ತಿ ಇದೀಗ ನಾನೇ ಆಗಿದ್ದು ನನ್ನನ್ನೇ ಕುಟುಂಬ ನಂಬಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಿಂಗಳಾನುಗಟ್ಟಲೆ ಪಾವತಿಗಾಗಿ ಕಾಯುವ ಪರಿಸ್ಥಿತಿ ನಮ್ಮದಾಗಿದೆ. ಉದ್ಯೋಗದ ಹತಾಶೆಯಿಂದ ಕೆಲಸದಲ್ಲಿ ಕೂಡ ಗಮನವಿಡಲು ಸಾಧ್ಯವಾಗುತ್ತಿಲ್ಲ ಎಂದು ಆಕೆ ತಮ್ಮ ಕೊರಗನ್ನು ಹಂಚಿಕೊಂಡಿದ್ದಾರೆ.
ಆಶಾ ಕಾರ್ಯರ್ತರ ಸಮಸ್ಯೆಗಳು
ಆಶಾ ಕಾರ್ಯಕರ್ತರಿಗೆ ಎರಡು ಸಮಸ್ಯೆಗಳು ಅತ್ಯಂತ ನಿರ್ಣಾಯಕವಾಗಿದ್ದು ಮೊದಲನೆಯದು ಸ್ಥಿರ ಆದಾಯವನ್ನು ಹೊಂದುವುದಾಗಿದೆ. ಎರಡನೆಯದು ಸ್ವಯಂಸೇವಕರು ಎಂದು ಪ್ರಸ್ತುತ ಇವರನ್ನು ಗುರುತಿಸಲಾಗಿರುವುದರಿಂದ ಅವರ ಉದ್ಯೋಗ ಸ್ಥಿತಿಯನ್ನು ಔಪಚಾರಿಕಗೊಳಿಸಬೇಕು ಎಂದಾಗಿದೆ. ನಮ್ಮನ್ನು ಸರಕಾರಿ ಉದ್ಯೋಗಿಗಳು ಎಂದು ಗುರುತಿಸುವುದು ನಮಗೆ ಗೌರವವನ್ನು ನೀಡುತ್ತದೆ ಹಾಗೂ ಸಂರಕ್ಷಣೆಯನ್ನು ಒದಗಿಸುತ್ತದೆ ಎಂಬುದು ಇವರುಗಳ ಅಭಿಪ್ರಾಯವಾಗಿದೆ.
ಆಶಾಕಾರ್ಯರ್ತೆಯ ಪ್ರಕಾರ ತಾವು ಮಾಡುತ್ತಿರುವ ಕೆಲಸ ಅವರಿಗೆ ಅತ್ಯಂತ ಸಂತೋಷದಾಯಕ ಹಾಗೂ ಹೆಮ್ಮೆಯನ್ನುಂಟು ಮಾಡುತ್ತದೆ ಎಂಬುದಾಗಿದೆ. ಮನೆ ಮನೆಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಸಂವಹನ ನಡೆಸುವುದು ಅವರ ಕಷ್ಟ ಸುಖಗಳ ವಿಚಾರಣೆ ಒಂದು ರೀತಿಯ ಸಾಮಾಜಿಕ ಸ್ನೇಹವನ್ನು ಗಟ್ಟಿಗೊಳಿಸುತ್ತದೆ ಎಂಬುದು ಇವರ ಅಭಿಪ್ರಾಯವಾಗಿದೆ.
ತಮ್ಮ ಸಂದರ್ಶನದ ಸಮಯದಲ್ಲಿ ಕೂಡ ಕೇಳಲಾಗುವ ಪ್ರಶ್ನೆಯೆಂದರೆ ಜನರ ಸೇವೆ ಮಾಡುವುದು ನಿಮಗೆ ಇಷ್ಟವೇ ಎಂದೇ ಆಗಿದೆ ಎಂದು ಹೇಳುವ ಆಶಾಕಾರ್ಯರ್ತೆ ಇಷ್ಟಪಟ್ಟೇ ಈ ಸೇವೆಗೆ ತಮ್ಮನ್ನು ಮೀಸಲಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ನಮಗೂ ಸರಿಯಾದ ಮನ್ನಣೆ ಹಾಗೂ ಗೌರವವನ್ನು ನೀಡುವುದು ಗ್ರಾಮೀಣ ಭಾರತದ ಅಗತ್ಯತೆಗಳನ್ನು ಪೂರೈಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ