• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Drug Use In Movies: ಸಿನಿಮಾದಲ್ಲಿ ಡ್ರಗ್ಸ್‌ ಬಳಸಿದ ಮಾತ್ರಕ್ಕೆ ನಟರು ಮಾದಕ ವಸ್ತು ಸೇವಿಸಿದ್ದಾರೆ ಎಂದು ಹೇಳಲಾಗದು: ಹೈಕೋರ್ಟ್‌

Drug Use In Movies: ಸಿನಿಮಾದಲ್ಲಿ ಡ್ರಗ್ಸ್‌ ಬಳಸಿದ ಮಾತ್ರಕ್ಕೆ ನಟರು ಮಾದಕ ವಸ್ತು ಸೇವಿಸಿದ್ದಾರೆ ಎಂದು ಹೇಳಲಾಗದು: ಹೈಕೋರ್ಟ್‌

ಡ್ರಗ್ಸ್ ಮಾಫಿಯಾ

ಡ್ರಗ್ಸ್ ಮಾಫಿಯಾ

‘ನಲ್ಲ ಸಮಯ’ (ಒಳ್ಳೆಯ ಸಮಯ) ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದ ತ್ರಿಶೂರಿನ ಒಮರ್ ಅಬ್ದುಲ್ ವಹಾಬ್ ಅಲಿಯಾಸ್ ಒಮರ್ ಲುಲು ಮತ್ತು ಮಂಗಳೂರಿನ ಕಲಂದೂರು ಕುಂಞಿ ಅಹಮದ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ವಿಜಿ ಅರುಣ್ ಅವರು ಈ ತೀರ್ಪು ನೀಡಿದ್ದಾರೆ.

 • Local18
 • 4-MIN READ
 • Last Updated :
 • Share this:

ತಿರುವನಂತಪುರಂ: ಸಿನಿಮಾದಲ್ಲಿ ಡ್ರಗ್ಸ್ ಬಳಸಿರುವುದು (Drug Use in Film) ಕಂಡುಬಂದರೆ, ಮಾದಕ ವಸ್ತು ಸೇವಿಸಿದ್ದಾರೆ ಎಂದು ಭಾವಿಸಲಾಗದು, ಹೀಗಾಗಿ ಮಾದಕ ದ್ರವ್ಯ ಸೇವನೆ ಆರೋಪದಡಿ ಪ್ರಕರಣ ದಾಖಲಿಸುವಂತಿಲ್ಲ ಎಂದು ಕೇರಳ ಹೈಕೋರ್ಟ್ (Kerala High Court) ಅಭಿಪ್ರಾಯಪಟ್ಟಿದೆ. ಒಂದು ವೇಳೆ ಸಿನಿಮಾದಲ್ಲಿ ಡ್ರಗ್ಸ್ ಸೇವನೆಯ ದೃಶ್ಯ ತೋರಿಸಿದ್ದಕ್ಕೆ ಪ್ರಕರಣ ದಾಖಲಿಸುವುದಾದರೆ ಖಳನಾಯಕನ ಪಾತ್ರಗಳಲ್ಲಿ ನಟಿಸುವ ನಟರು ‘ಕೊಲೆ, ಬೆಂಕಿ ಹಚ್ಚುವುದು ಅಥವಾ ಅತ್ಯಾಚಾರ ಸೇರಿದಂತೆ ನಟರು ಚಲನಚಿತ್ರದಲ್ಲಿ ಎಸಗುವಂತಹ ಅಪರಾಧ ಕೃತ್ಯಗಳ ಮೇಲೂ ಪ್ರಕರಣವನ್ನು ದಾಖಲಿಸಬೇಕಾಗುತ್ತದೆ ಎಂದು ನ್ಯಾಯಾಲಯವು ಹೇಳಿದೆ.


‘ನಲ್ಲ ಸಮಯ’ (ಒಳ್ಳೆಯ ಸಮಯ) ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದ ತ್ರಿಶೂರಿನ ಒಮರ್ ಅಬ್ದುಲ್ ವಹಾಬ್ ಅಲಿಯಾಸ್ ಒಮರ್ ಲುಲು ಮತ್ತು ಮಂಗಳೂರಿನ ಕಲಂದೂರು ಕುಂಞಿ ಅಹಮದ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ವಿಜಿ ಅರುಣ್ ಅವರು ಈ ತೀರ್ಪು ನೀಡಿದ್ದಾರೆ.


ಇದನ್ನೂ ಓದಿ: Drugs Mafia: ಡ್ರಗ್ಸ್‌ ಮಾಫಿಯಾದಲ್ಲಿ ತಗ್ಲಾಕ್ಕೊಂಡ 2 ವೈದ್ಯರು ಸೇರಿ 7 ಮೆಡಿಕಲ್ ವಿದ್ಯಾರ್ಥಿಗಳ ಅಮಾನತು


2022 ರ ಡಿಸೆಂಬರ್ ತಿಂಗಳಿನಲ್ಲಿ ಕೋಝಿಕ್ಕೋಡ್‌ನ ಅಬಕಾರಿ ನಿರೀಕ್ಷಕರು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್, 1985 (ಎನ್‌ಡಿಪಿಎಸ್ ಆಕ್ಟ್) ಸೆಕ್ಷನ್ 27 ಮತ್ತು 29 ರ ಅಡಿಯಲ್ಲಿ ಕೇಸ್ ದಾಖಲಿಸಿದ್ದರು. ಇದು ಕ್ರಮವಾಗಿ ಮಾದಕ ದ್ರವ್ಯಗಳು ಅಥವಾ ಸೈಕೋಟ್ರೋಪಿಕ್ ಪದಾರ್ಥಗಳ ಸೇವನೆಗೆ ಶಿಕ್ಷೆ ಮತ್ತು ಪ್ರಚೋದನೆ ಮತ್ತು ಪಿತೂರಿ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಶಿಕ್ಷೆ ವಿಧಿಸಿದ್ದರು.


ಪ್ರಕರಣದ ವಿಚಾರಣೆಯನ್ನು ನಡೆಸಿದ ಹೈಕೋರ್ಟ್‌, 'ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 27, ಮಾದಕ ದ್ರವ್ಯ ಅಥವಾ ಸೈಕೋಟ್ರೋಪಿಕ್ ಪದಾರ್ಥಗಳ ಸೇವನೆಗೆ ಶಿಕ್ಷೆಯನ್ನು ಒದಗಿಸುತ್ತದೆ. ಅರ್ಜಿದಾರರು ಪೋಸ್ಟ್‌ ಮಾಡಿರುವ ಸಿನಿಮಾದ ಟ್ರೇಲರ್‌ನಲ್ಲಿ ಕೆಲವು ಪಾತ್ರಗಳು ಡ್ರಗ್ಸ್ ಸೇವಿಸುತ್ತಿರುವುದು ಕಂಡುಬಂದಿದೆ ಎಂಬುದು ಪ್ರಾಸಿಕ್ಯೂಷನ್ ವಾದ. ಆದರೆ ಇದಕ್ಕೆ ಸೆಕ್ಷನ್ 27 ಅನ್ವಯವಾಗುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಏಕೆಂದರೆ ಚಲನಚಿತ್ರದಲ್ಲಿನ ದೃಶ್ಯಗಳಲ್ಲಿ ನಟರು ತಾವು ನಟಿಸಿದ್ದನ್ನು ನಿಜವಾಗಿ ಮಾಡಿದ್ದಾರೆ ಎಂದು ಊಹೆ ಮಾಡುವುದು ಸರಿಯಲ್ಲ. ಆ ತರ್ಕದ ಮೇಲೆ ನಿಂತರೆ ಖಳನಾಯಕನ ಪಾತ್ರಗಳಲ್ಲಿನ ನಟರು ಕೊಲೆ, ಬೆಂಕಿ ಹಚ್ಚುವಿಕೆ ಮತ್ತು ಅತ್ಯಾಚಾರಕ್ಕಾಗಿ ವಿಚಾರಣೆಗೆ ಒಳಗಾಗುವ ಮತ್ತು ಶಿಕ್ಷೆಗೆ ಗುರಿಯಾಗುವ ಅಪಾಯವನ್ನು ಎದುರಿಸುತ್ತಾರೆ’ ಎಂದು ಕೋರ್ಟ್ ಹೇಳಿದೆ.


ಒಮರ್ ಲುಲು ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಚಲನಚಿತ್ರದ ಟ್ರೇಲರ್‌ನ ಯೂಟ್ಯೂಬ್ ವೀಡಿಯೊದಲ್ಲಿ ಕೆಲವು ಪಾತ್ರಗಳು ಡ್ರಗ್ಸ್ ಬಳಸುತ್ತಿರುವುದನ್ನು ತೋರಿಸಿತ್ತು. ಇದರ ವಿರುದ್ಧ 2022 ರ ಡಿಸೆಂಬರ್‌ನಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರಿಗೆ ನೀಡಿದ ದೂರಿನಲ್ಲಿ ‘ಎಂಡಿಎಂಎ ಮಾದಕ ವಸ್ತು ಬಳಕೆದಾರರಿಗೆ ಶಕ್ತಿ ಮತ್ತು ಸಂತೋಷವನ್ನು ನೀಡುತ್ತದೆ ಎಂದು ಹೇಳಲಾಗಿದೆ. ಅಂತಹ ದೃಶ್ಯಗಳನ್ನು ಸಿನಿಮಾದಲ್ಲಿ ಸೇರಿಸುವ ಮೂಲಕ ಅರ್ಜಿದಾರರು ಸಮಾಜಕ್ಕೆ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆ ಮತ್ತು ಸರ್ಕಾರದ ಮಾದಕ ದ್ರವ್ಯ ವಿರೋಧಿ ಉಪಕ್ರಮದ ವಿರುದ್ಧ ವರ್ತಿಸುತ್ತಿದ್ದಾರೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿತ್ತು.


ಇದನ್ನೂ ಓದಿ: Kalaburagi: ಮಾದಕ ವ್ಯಸನ ಬಿಡಿಸೋಕೆ ಪಾದಯಾತ್ರೆ ಹೊರಟ ಸ್ವಾಮೀಜಿ!


ಈ ವಾದಕ್ಕೆ ಉತ್ತರಿಸಿದ ಕೋರ್ಟ್‌, 'ಸೆಕ್ಷನ್ 29 ಪ್ರಚೋದನೆ ಮತ್ತು ಪಿತೂರಿಗಾಗಿ ಶಿಕ್ಷೆಗೆ ಸಂಬಂಧಿಸಿದೆ. ಹೇಳಲಾದ ನಿಬಂಧನೆಯನ್ನು ಆಕರ್ಷಿಸಲು, ಆರೋಪಿಯು ಕಾಯಿದೆಯಡಿಯಲ್ಲಿ ಶಿಕ್ಷಾರ್ಹ ಅಪರಾಧವನ್ನು ಮಾಡಲು ಕುಮ್ಮಕ್ಕು ನೀಡಿರಬೇಕು ಅಥವಾ ಸಂಚು ರೂಪಿಸಿರಬೇಕು. ನಾನು ಈಗಾಗಲೇ ಕಂಡುಕೊಂಡಂತೆ ಮುಖ್ಯ ನಿಬಂಧನೆ, ಅಂದರೆ; ಸೆಕ್ಷನ್ 27, ಆಕರ್ಷಿತವಾಗಿಲ್ಲ, ಯಾವುದೇ ಕುಮ್ಮಕ್ಕು ಅಥವಾ ಪಿತೂರಿಯ ಪ್ರಶ್ನೆ ಉದ್ಭವಿಸುವುದಿಲ್ಲ,' ಎಂದು ನ್ಯಾಯಾಲಯವು ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿತು.

top videos


  ಥಿಯೇಟರ್‌ಗಳಿಂದ ತಮ್ಮ ಚಲನಚಿತ್ರವನ್ನು ಹಿಂತೆಗೆದುಕೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಒಮರ್ ಲುಲು, ಡಿಸೆಂಬರ್ 2022 ರಲ್ಲಿ ನಿಷೇಧಿತ ಡ್ರಗ್ಸ್ ಬಳಕೆಯನ್ನು ತೋರಿಸಿರುವ 'ಭೀಷ್ಮ ಪರ್ವಂ' ನಂತಹ ಇತರ ಚಲನಚಿತ್ರಗಳು ಇರುವುದರಿಂದ ತಮ್ಮ ಚಿತ್ರಕ್ಕೆ ಅನ್ಯಾಯವಾಗಿದೆ ಎಂದು ಹೇಳಿದರು. ಅಲ್ಲದೇ, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ಸಿನಿಮಾವನ್ನು ‘ಎ’ ಪ್ರಮಾಣಪತ್ರದೊಂದಿಗೆ ಸೆನ್ಸಾರ್ ಮಾಡಿದೆ, ಇದು ಚಲನಚಿತ್ರವು ವಯಸ್ಕರಿಗೆ ಮಾತ್ರ ಎಂದು ಸ್ಪಷ್ಟವಾಗಿ ಹೇಳುತ್ತದೆ ಎಂದು ಅವರು ಹೇಳಿದರು.

  First published: