ನವದೆಹಲಿ (ಡಿ. 30): ಭಾರತದ ಪ್ರಮುಖ ಮತ್ತು ಬೃಹತ್ ಹಾಲು ಸಂಸ್ಕರಣಾ ಘಟಕವಾದ ಅಮುಲ್ ಇಡೀ ವಿಶ್ವದ 8ನೇ ಅತಿದೊಡ್ಡ ಹಾಲು ಸಂಸ್ಕರಣಾ ಘಟಕವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. IFCN (ಇಂಟರ್ನ್ಯಾಷನಲ್ ಫಾರ್ಮ್ ಕಂಪೇರಿಷನ್ ನೆಟ್ವರ್ಕ್) ವಿಶ್ವದ ಅಗ್ರ ಹಾಲು ಸಂಸ್ಕರಣಾ ಕೇಂದ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ Amul 8ನೇ ಸ್ಥಾನ ಪಡೆದಿದೆ.
ಕಳೆದ ವರ್ಷ 9ನೇ ಸ್ಥಾನದಲ್ಲಿದ್ದ ಅಮುಲ್ ಈ ವರ್ಷ 1 ಸ್ಥಾನ ಮೇಲೇರಿದೆ. 2018ರಲ್ಲಿ ವಿಶ್ವದ ಹಾಲು ಸಂಸ್ಕರಣಾ ಕೇಂದ್ರಗಳ ಪಟ್ಟಿಯಲ್ಲಿ ಅಮುಲ್ 9ನೇ ಸ್ಥಾನದಲ್ಲಿತ್ತು. ಕಳೆದ 8 ವರ್ಷಗಳಲ್ಲಿ 10 ಸ್ಥಾನ ಮೇಲೇರಿರುವ ಅಮುಲ್ 8ನೇ ರ್ಯಾಂಕಿಂಗ್ನಲ್ಲಿದೆ. 2012ರಲ್ಲಿ ಅಮುಲ್ 18ನೇ ಸ್ಥಾನದಲ್ಲಿತ್ತು. ಕಳೆದ 8 ವರ್ಷಗಳಲ್ಲಿ 10 ಸ್ಥಾನ ಮೇಲಕ್ಕೇರುವ ಮೂಲಕ ಅಮುಲ್ ಭಾರತಕ್ಕೆ ಹೆಮ್ಮೆ ತಂದುಕೊಟ್ಟಿದೆ.
ಇದನ್ನೂ ಓದಿ: Bangalore Coronavirus: ಕೊರೋನಾ ಭೀತಿ; ಬೆಂಗಳೂರಿನ ಬೊಮ್ಮನಹಳ್ಳಿಯ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ಸೀಲ್ಡೌನ್
ಅಮುಲ್ ಜೊತೆಗೆ ವಿಶ್ವದ ಇತರೆ ಪ್ರಮುಖ ಹಾಲು ಸಂಸ್ಕರಣಾ ಘಟಕಗಳಾದ ನ್ಯೂಜಿಲೆಂಡ್ನ ಫಾಂಟೆರಾ, ಸ್ವಿಜರ್ಲೆಂಡ್ನ ನೆಸ್ಟಲ್ ಡೈರಿ, ಕೆನಡಾದ ಸಪುಟೋ, ಅಮೆರಿಕದ ಡೈರಿ ಫಾರ್ಮರ್ಸ್ ಆಫ್ ಅಮೆರಿಕ, ಫ್ರಾನ್ಸ್ನ ಗ್ರೂಪ್ ಲಾಕ್ಟಾಲಿಸ್, ನೆದರ್ಲೆಂಡ್ನ ಫ್ರೀಸ್ಲ್ಯಾಂಡ್ ಕ್ಯಾಂಪಿನಾ, ಡೆನ್ಮಾರ್ಕ್ನ ಅರ್ಲ ಫುಡ್ಸ್ ವಿಶ್ವದ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ