Conjoined Twins: ಸರ್ಕಾರಿ ಕೆಲಸ ಗಿಟ್ಟಿಸಿಕೊಂಡ ಸಯಾಮಿ ಅವಳಿಗಳು, ಇದು ನಮ್ಮ ದೇಶದ್ದೇ ಘಟನೆ!

ಸಯಾಮಿ ಅವಳಿಗಳು

ಸಯಾಮಿ ಅವಳಿಗಳು

ಈ ಅವಳಿ ಈಗ ಸಮಾಜದಲ್ಲಿ ಸ್ವಾವಲಂಬಿಯಾಗಿರುವುದು ನಿಜಕ್ಕೂ ಪ್ರೇರಣೆಯ ವಿಷಯವಾಗಿದೆ. ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯು ಈ ಅವಳಿಯನ್ನು ದಿನನಿತ್ಯದ ಸಂಚಾರದ ಜವಾಬ್ದಾರಿ ಹೊತ್ತಿದೆ.

  • Share this:

ಹುಟ್ಟಿನಿಂದಲೇ ಬೇರ್ಪಡಿಸಲಾಗದಂತೆ ಸಂಯೋಜಿತವಾಗಿ ಹುಟ್ಟಿದ್ದ ಸೋಹ್ನಾ ಹಾಗೂ ಮೋಹ್ನಾ (Sohna and Mohna) ಸಯಾಮಿ (Siamese twins) ಅವಳಿಗಳಿಬ್ಬರಿಗೂ ಈಗ ಎಲ್ಲಿಲ್ಲದ ಸಂತಸ. ತಮ್ಮ ಕಾಲ ಮೇಲೆ ತಾವು ನಿಲ್ಲಬೇಕೆಂಬ ಅವರ ತೀವ್ರವಾದ ಇಚ್ಛೆಯು ಈಗ ಈಡೇರಿಸಲ್ಪಟ್ಟಿದೆ. ಈ ಸಯಾಮಿ ಅವಳಿಗಳು ಈಗ ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ (Punjab State Power Corporation) ಲಿಮಿಟೆಡ್ ನಲ್ಲಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.19ರ ಪ್ರಾಯದ ಈ ಸಯಾಮಿ ಅವಳಿ ಐಟಿಐನಿಂದ ಡಿಪ್ಲೋಮಾ (ಎಲೆಕ್ಟ್ರಿಷಿಯನ್) ಶಿಕ್ಷಣ ಪಡೆದಿದ್ದರು. ಪಿಂಗಲ್ವಾರಾದಲ್ಲಿ ನೆಲೆಸಿರುವ ಈ ಅವಳಿ ಕಳೆದ ಬುಧವಾರದಂದು ಅಧಿಕೃತವಾಗಿ ತಮ್ಮ ಕೆಲಸಕ್ಕೆ ಸೇರಿಕೊಂಡು ಅಮೃತಸರದ (Amritsar) ಡೆಂಟಲ್ ಕಾಲೇಜಿನ ( Dental College) ಬಳಿ ಇರುವ 66ಕೆವಿ ಸಾಮರ್ಥ್ಯದ ಪಿಎಸ್ಪಿಸಿಎಲ್ ಕಚೇರಿಯಲ್ಲಿ ರೆಗ್ಯೂಲರ್ ಟಿ ಮೇಟ್ ಆಗಿ ತಮ್ಮ ಜವಾಬ್ದಾರಿ ತೆಗೆದುಕೊಂಡರು. ಮೇಲಾಧಿಕಾರಿಗಳುಹೇಳುವಂತೆ ಈ ಅವಳಿ ನಿಯಂತ್ರಣ ಕೊಠಡಿಯಲ್ಲಿ ತಮ್ಮ ಕೆಲಸ ನಿರ್ವಹಿಸಲಿದ್ದಾರೆ.


ಅವಳಿಗಳಿಗೆ ವಿದ್ಯುತ್ ವಿಷಯದಲ್ಲಿ ಜ್ಞಾನ
ಸದ್ಯಕ್ಕೆ 20,000 ರೂ. ಮಾಸಿಕ ವೇತನವನ್ನು ಈ ಸಯಾಮಿ ಅವಳಿ ಪಡೆಯುತ್ತಿದ್ದಾರೆ. ಇವರ ನೇಮಕಾತಿಗೆ ಸಂಬಂಧಿಸಿದಂತೆ ವಿದ್ಯುತ್ ನಿಗಮದ ಸಿಎಂಡಿ ಅಗಿರುವ ವೇಣು ಪ್ರಸಾದ ಹೀಗೆ ಹೇಳುತ್ತಾರೆ. "ಅತಿ ವಿರಳಾತಿ ವಿರಳ ವೈಕಲ್ಯತೆ ಹೊಂದಿರುವ ಜನರೂ ಸಹ ಐಟಿಐನಲ್ಲಿ ಡಿಪ್ಲೋಮಾ ಶಿಕ್ಷಣ ಪಡೆದು ಎಲೆಕ್ಟ್ರಿಷಿಯನ್ ಆಗಿ ತಮ್ಮ ಭವಿಷ್ಯ ನಿರ್ಮಿಸಿಕೊಳ್ಳುತ್ತಿದ್ದಾರೆಂಬುದರ ಬಗ್ಗೆ ನಮಗೆ ತಿಳಿಯಿತು. ಆಗ ನಾವು ಇವರನ್ನು ಸ್ವಯಂ ಆಗಿ ನೋಡಿದಾಗ ಈ ಅವಳಿ ತುಂಬ ಸಕ್ರಿಯವಾಗಿರುವುದನ್ನು ನಾವು ಗಮನಿಸಿದೆವು. ಅಲ್ಲದೆ ಈ ಅವಳಿ ವಿದ್ಯುತ್ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಜ್ಞಾನ ಹೊಂದಿದ್ದಾರೆ. ಹಾಗಾಗಿ ಅಂಗವೈಕಲ್ಯ ಕೋಟಾದಡಿ ಈ ಅವಳಿಯನ್ನು ನಾವು ನೇಮಕ ಮಾಡಿಕೊಂಡೆವು" ಎಂದು ಹೇಳುತ್ತಾರೆ.


ಇದನ್ನೂ ಓದಿ: ಅಮೃತಸರದ ಸ್ವರ್ಣಮಂದಿರ ಅಪವಿತ್ರಗೊಳಿಸಿದ ಆರೋಪ; ವ್ಯಕ್ತಿಯನ್ನು ಥಳಿಸಿ ಹತ್ಯೆ ಮಾಡಿದ ಜನರ ಗುಂಪು, ತನಿಖೆಗೆ ಆದೇಶಿಸಿದ ಸಿಎಂ


ಸಂತಸದಲ್ಲಿ ಅವಳಿಗಳು
ಕೆಲಸ ದೊರೆತಿದ್ದಕ್ಕೆ ಸಂಬಂಧಿಸಿದಂತೆ ಹರ್ಷ ವ್ಯಕ್ತಪಡಿಸುವ ಸೋಹ್ನಾ "ನಮಗೆ ಈ ಅವಕಾಶ ನೀಡಿದ ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್‌ಗೆ ನಾವು ಧನ್ಯವಾದಗಳನ್ನು ಹೇಳಬಯಸುತ್ತೇವೆ ಹಾಗೂ ನಾವಿಬ್ಬರೂ ಅತಿ ಪ್ರಾಮಾಣಿಕತೆ ಮತ್ತು ಶೃದ್ಧೆಯಿಂದ ನಮ್ಮ ಕೆಲಸ ನಿರ್ವಹಿಸುತ್ತೇವೆ" ಎನ್ನುತ್ತಾರೆ. ಇದೇ ಸಂದರ್ಭದಲ್ಲಿ ಈ ಅವಳಿ ತಮ್ಮನ್ನು ಬೆಳೆಸಿ ಶಿಕ್ಷಣ ದೊರಕಿಸುವಂತೆ ಮಾಡಿರುವ ಪಿಂಗಲ್ವಾರಾ ಇನ್ಸ್ಟಿಟ್ಯೂಷನ್‌ಗೆ ಆಭಾರಿಯಾಗಿರುವುದಾಗಿ ಹೇಳಲು ಮರೆಯುವುದಿಲ್ಲ.


ಈ ಕುರಿತು ಪಿಂಗಲ್ವಾರಾ ಸಂಸ್ಥೆಯ ಮುಖ್ಯಸ್ಥರಾಗಿರುವ ಇಂದ್ರಜೀತ್ ಕೌರ್ ಸಹ ಹರ್ಷ ವ್ಯಕ್ತಪಡಿಸುತ್ತಾರೆ. "ಸೋಹ್ನಾ ಹಾಗೂ ಮೋಹ್ನಾ ಅವಳಿ ಇಂದು ಸರ್ಕಾರಿ ಉದ್ಯೋಗ ಪಡೆದಿದ್ದು ಬಹು ಸಂತಸದ ವಿಷಯವಾಗಿದ್ದು ಇದು ನಮಗೆ ಹಾಗೂ ನಮ್ಮ ಸಂಸ್ಥೆ ಹೆಮ್ಮೆ ಪಡುವಂತಹ ವಿಷಯವಾಗಿದೆ" ಎಂದು ಹೇಳುತ್ತಾರೆ.


2003 ರಲ್ಲಿ ಜನನ
ಈ ಸಯಾಮಿ ಅವಳಿಗಳು ಎರಡು ಜೊತೆ ಕೈ, ಕಿಡ್ನಿ ಹಾಗೂ ಸ್ಪೈನಲ್ ಕಾರ್ಡ್ ಮತ್ತು ಎರಡು ಹೃದಯಗಳನ್ನು ಹೊಂದಿದ್ದು ಕೇವಲ ಒಂದು ಲಿವರ್ಗಾಲ್ ಬ್ಲ್ಯಾಡರ್, ಸ್ಪೀನ್ ಹಾಗೂ ಕಾಲುಗಳನ್ನು ಹೊಂದಿದ್ದಾರೆ. ದೆಹಲಿಯ ಸುಚೇತಾ ಕ್ರಿಪಲಾನಿ ಆಸ್ಪತ್ರೆಯಲ್ಲಿ ಜೂನ್14, 2003 ರಂದು ಹುಟ್ಟಿದ್ದ ಈ ಸಯಾಮಿ ಅವಳಿಯನ್ನು ಅವರ ಪೋಷಕರು ತ್ಯಜಿಸಿದ್ದರು. ತದನಂತರ ಆ ಅವಳಿಯನ್ನು ದೆಹಲಿ ಏಮ್ಸ್‌ಗೆ ದಾಖಲಿಸಲಾಯಿತು. ಮೊದಲಿಗೆ ವೈದ್ಯರು ಇಬ್ಬರನ್ನು ಬೇರ್ಪಡಿಸುವ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ದರು. ಆದರೆ, ಇದರಿಂದ ಒಂದು ಜೀವ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದರಿಂದ ಆ ನಿರ್ಧಾರ ಕೈಬಿಟ್ಟಿದ್ದರು.


ಇದನ್ನೂ ಓದಿ: Mystery Behind Identical Twins| ಒಂದೇ ರೀತಿ ಇರುವ ಅವಳಿಗಳ ಹಿಂದಿನ ರಹಸ್ಯ ಪರಿಹರಿಸಿದ ವಿಜ್ಞಾನಿಗಳು..!


ತದನಂತರ ಏಮ್ಸ್ ವೈದ್ಯರು ಪಿಂಗಲ್ವಾರಾ ಸಂಸ್ಥೆಯನ್ನು ಸಂಪರ್ಕಿಸಿ ಈ ಅವಳಿಯನ್ನು ಅಲ್ಲಿಗೆ ಸ್ಥಳಾಂತರಿಸಿದರು. ನಂತರ ಈ ಸಾಮಾಜಿಕ ಸಂಸ್ಥೆಯು ಈ ಸಯಾಮಿ ಅವಳಿಯ ಜವಾಬ್ದಾರಿ ಹೊತ್ತು ಅವರನ್ನು ಬೆಳೆಸಿ ಶಿಕ್ಷಣವನ್ನೂ ದೊರಕಿಸಿದ್ದರು. ಅದರ ಫಲಶೃತಿಯಿಂದಾಗಿ ಈ ಅವಳಿ ಈಗ ಸಮಾಜದಲ್ಲಿ ಸ್ವಾವಲಂಬಿಯಾಗಿರುವುದು ನಿಜಕ್ಕೂ ಪ್ರೇರಣೆಯ ವಿಷಯವಾಗಿದೆ. ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯು ಈ ಅವಳಿಯನ್ನು ದಿನನಿತ್ಯದ ಸಂಚಾರದ ಜವಾಬ್ದಾರಿ ಹೊತ್ತಿದೆ.

Published by:vanithasanjevani vanithasanjevani
First published: