MAshok KumarMAshok Kumar
|
news18-kannada Updated:May 20, 2020, 9:09 PM IST
ಅಂಪನ್ ಚಂಡಮಾರುತ ಅಪ್ಪಳಿಸುವ ಮುನ್ನ ವಾತಾವರಣ
ಪಶ್ಚಿಮ ಬಂಗಾಳ (ಮೇ 20); ಆಂಫಾನ್ ಚಂಡಮಾರುತ ಕೊನೆಗೂ ಪಶ್ಚಿಮ ಬಂಗಾಳದ ಕರಾವಳಿ ತೀರವನ್ನು ಪ್ರವೇಶಿಸಿದೆ. ಪರಿಣಾಮ ಹಲವಾರು ಜಿಲ್ಲೆಗಳಲ್ಲಿ ಭೀಕರ ಮಳೆ ಕಾಣಿಸಿಕೊಂಡಿದ್ದು, 160 ರಿಂದ 170 ಕಿಮೀ ವೇಗದಲ್ಲಿ ಬೀಸುತ್ತಿರುವ ಚಂಡ ಮಾರುತಕ್ಕೆ 3 ಜನ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಭಾರೀ ಮಳೆ ಮತ್ತು ಗಾಳಿಗೆ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಚಂಡಮಾರುತ ಉಂಟು ಮಾಡಿರುವ ಪರಿಸ್ಥಿತಿ ಪಶ್ಚಿಮ ಬಂಗಾಳದಲ್ಲಿ ಭೀಕರವಾಗಿದ್ದು, ಹೌರಾ ಜಿಲ್ಲೆಯ ಮಿನಾಖಾನ್ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ಹಾಗೂ ಬಂಗಾಲದ ಉತ್ತರ ಭಾಗದ 24 ಪರಗಣ ಜಿಲ್ಲೆಯಲ್ಲಿ ಓರ್ವ ಪುರುಷ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚಂಡಮಾರುತದ ಕಾರಣದಿಂದಾಗಿ ಸಮುದ್ರದಲ್ಲಿ ಐದು ಮೀಟರ್ ಎತ್ತರದ ಉಬ್ಬರವಿಳಿತದ ಅಲೆಗಳು ಕಾಣಿಸುತ್ತಿವೆ. ಅಲ್ಲದೆ, ಮಳೆಯಿಂದಾಗಿ ಸಾಕಷ್ಟು ಕಡೆಗಳಲ್ಲಿ ಭೂ ಕುಸಿತ ಉಂಟಾಗಿರುವ ಕುರಿತು ಸಹ ಸಾಕಷ್ಟು ವರದಿಯಾಗಿದೆ. ಅಲ್ಲದೆ, ಮಳೆ ಮುಂದುವರೆಯಲಿದ್ದು, ಕೊರೋನಾ ಭೀತಿಯ ನಡುವೆ ಈ ಪರಿಸ್ಥಿತಿಯನ್ನು ನಿಭಾಯಿಸುವುದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸವಾಲಿನ ಕೆಲಸವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : Amphan Cyclone: ಅಂಫಾನ್ ಚಂಡಮಾರುತ ಅಪ್ಪಳಿಸಲು ಕ್ಷಣಗಣನೆ; ಸಂಜೆ 7 ಗಂಟೆಯೊಳಗೆ ಅಪ್ಪಳಿಸುವ ಸಾಧ್ಯತೆ
First published:
May 20, 2020, 9:09 PM IST