Biggest Banyan Tree - ವಿಶ್ವದ ಅತಿದೊಡ್ಡ ಆಲದ ಮರಕ್ಕೆ ಚಂಡಮಾರುತದಿಂದ ಧಕ್ಕೆ
Amphan Cyclone damages Biggest Banyan Tree - ಇದು ವಿಶ್ವದಲ್ಲೇ ಅತೀ ದೊಡ್ಡದು ಎಂಬ ದಾಖಲೆ ಹೊಂದಿದೆ. ಭಾರತೀಯ ಸಸ್ಯ ಸರ್ವೇಕ್ಷಣಾ ಇಲಾಖೆಯ ಲೋಗೋದಲ್ಲಿ ಈ ಆಲದ ಮರವನ್ನು ಬಳಸಲಾಗಿದೆ ಎಂದರೆ ಇದು ಎಂಥ ಹೆಮ್ಮರ ಇರಬಹುದು.
news18 Updated:May 23, 2020, 8:56 AM IST

ಕೋಲ್ಕತಾದಲ್ಲಿರುವ ಬೃಹತ್ ಆಲದ ಮರ
- News18
- Last Updated: May 23, 2020, 8:56 AM IST
ಕೋಲ್ಕತಾ: ಮೊನ್ನೆಮೊನ್ನೆ ಅಪ್ಪಳಿಸಿ ಹೋದ ಅಂಪನ್ ಚಂಡಮಾರುತ ಮಾಡಿರುವ ಘಾಸಿ ಅಷ್ಟಿಷ್ಟಲ್ಲ. ಎರಡು ರಾಜ್ಯಗಳ ಲಕ್ಷಾಂತರ ಜನಜೀವನವನ್ನೇ ತಲ್ಲಣಗೊಳಿಸಿಹೋಗಿದೆ. ಇನ್ನೂ ಅನೇಕ ಪ್ರಾಣಿ ಪಕ್ಷಗಳು ನೆಲೆ ಕಳೆದುಕೊಂಡಿವೆ. ವೃಕ್ಷ ಸಂಪತ್ತೂ ಸಾಕಷ್ಟು ನಷ್ಟವಾಗಿವೆ. ವಿಶ್ವದ ಅತಿ ದೊಡ್ಡ ಆಲದ ಮರಕ್ಕೂ ಕೂಡ ಧಕ್ಕೆಯಾಗಿದೆ. ಕೋಲ್ಕತಾದ ಹೌರಾ ಉದ್ಯಾನವನದಲ್ಲಿರುವ 342 ವರ್ಷದಷ್ಟು ಪುರಾತನವಾದ ಆಲದ ಮರಕ್ಕೆ ಘಾಸಿಯಾಗಿದೆ.
ಬೆಂಗಳೂರಿನಲ್ಲಿರುವ ದೊಡ್ಡ ಆಲದ ಮರಕ್ಕಿಂತಲೂ ಬೃಹತ್ ಆದುದು ಹೌರಾದಲ್ಲಿರುವ ಆಲದ ಮರ. ಇದು ವಿಶ್ವದಲ್ಲೇ ಅತೀ ದೊಡ್ಡದು ಎಂಬ ದಾಖಲೆ ಹೊಂದಿದೆ. ಭಾರತೀಯ ಸಸ್ಯ ಸರ್ವೇಕ್ಷಣಾ ಇಲಾಖೆಯ (ಬೋಟೋನಿಕಲ್ ಸರ್ವೇ ಆಫ್ ಇಂಡಿಯಾ) ಲೋಗೋದಲ್ಲಿ ಈ ಆಲದ ಮರವನ್ನು ಬಳಸಲಾಗಿದೆ ಎಂದರೆ ಇದು ಎಂಥ ಹೆಮ್ಮರ ಇರಬಹುದು. ಇದನ್ನೂ ಓದಿ: ಬಿಸಿ ಚಪಾತಿ ಕೊಡಲಿಲ್ಲ ಎಂದು ನಡುರಾತ್ರಿ ಅತ್ತೆಯನ್ನೇ ಕೊಂದ ಅಳಿಯ
1925ರಲ್ಲಿ ಇದರ ಮುಖ್ಯ ಕಾಂಡವನ್ನು ತೆಗೆದುಹಾಕಲಾಗಿತ್ತು. ಆಗ ಈ ಕಾಂಡದ ಸುತ್ತಳತೆಯೇ 15 ಮೀಟರ್ ಇತ್ತು. ಚಾಚಿಕೊಂಡಿರುವ ಇದರ ಒಂದು ಕಾಂಡ ಬರೋಬ್ಬರಿ 1.08 ಕಿಮೀ ಇದೆ. ಮುಖ್ಯಕಾಂಡ ಇಲ್ಲದೇ ಹೋದರೂ ರೆಂಬೆ ಕೊಂಬೆಗಳಿಂದ ಇಳಿಬಿದ್ದ ಬೇರುಗಳಿಂದಲೇ ಈ ಹೌರಾ ಆಲದ ಮರ ನಿಂತಿದೆ. ಗುರುವಾರದ ಅಂಪನ್ ಚಂಡಮಾರುತದ ಅಬ್ಬರಕ್ಕೆ ಇದರ ಕಾಂಡಗಳಿಗೆ ಹಾನಿಯಾಗಿದೆಯಂತೆ. ತಜ್ಞರು ಇದರ ಪರಿಶೀಲನೆ ನಡೆಸುತ್ತಿದ್ದಾರೆ.
ಹೌರಾದಲ್ಲಿರುವ ಈ ಆಲದ ಮರ ವಿಶ್ವದಲ್ಲೇ ಅತಿದೊಡ್ಡದಾಗಿದೆ. ಬೆಂಗಳೂರಿನಲ್ಲಿರುವ ದೊಡ್ಡ ಆಲದ ಮರ ಭಾರತದಲ್ಲಿ ನಾಲ್ಕನೇ ಸ್ಥಾನ ಹೊಂದಿದೆ. ಆಂಧ್ರ ಮತ್ತು ಚೆನ್ನೈನಲ್ಲಿ ಇನ್ನೂ ದೊಡ್ಡದ ಆಲದ ಮರಗಳಿವೆ.
ಬೆಂಗಳೂರಿನಲ್ಲಿರುವ ದೊಡ್ಡ ಆಲದ ಮರಕ್ಕಿಂತಲೂ ಬೃಹತ್ ಆದುದು ಹೌರಾದಲ್ಲಿರುವ ಆಲದ ಮರ. ಇದು ವಿಶ್ವದಲ್ಲೇ ಅತೀ ದೊಡ್ಡದು ಎಂಬ ದಾಖಲೆ ಹೊಂದಿದೆ. ಭಾರತೀಯ ಸಸ್ಯ ಸರ್ವೇಕ್ಷಣಾ ಇಲಾಖೆಯ (ಬೋಟೋನಿಕಲ್ ಸರ್ವೇ ಆಫ್ ಇಂಡಿಯಾ) ಲೋಗೋದಲ್ಲಿ ಈ ಆಲದ ಮರವನ್ನು ಬಳಸಲಾಗಿದೆ ಎಂದರೆ ಇದು ಎಂಥ ಹೆಮ್ಮರ ಇರಬಹುದು.