HOME » NEWS » National-international » AMONG EXIT POLLS C VOTER COME CLOSEST TO FINAL RESULTS AS AAP SWEEPS DELHI ELECTIONS SNVS

Delhi Elections: ಮತಗಟ್ಟೆ ಸಮೀಕ್ಷೆಗಳ ಪೈಕಿ ನಿಖರ ಭವಿಷ್ಯ ನೀಡಿದ್ದು ಯಾವುದು? ದೂರ ಉಳಿದಿದ್ದು ಯಾವುದು?

ಎಬಿಪಿ ನ್ಯೂಸ್-ಸಿ ವೋಟರ್ ಸಮೀಕ್ಷೆಯ ಪ್ರಕಾರ ಎಎಪಿ 49-63 ಸ್ಥಾನಗಳನ್ನು ಗೆಲ್ಲಬಹುದೆನ್ನಲಾಗಿತ್ತು. ಅಂತಿಮ ಫಲಿತಾಂಶಕ್ಕೆ ಇದು ಹೆಚ್ಚು ಸಾಮೀಪ್ಯ ಹೊಂದಿದೆ. ಟೈಮ್ಸ್ ನೌ ನಡೆಸಿದ ಸಮೀಕ್ಷೆ ಎಎಪಿಗೆ 44 ಸ್ಥಾನ ಸಿಗಬಹುದು ಎಂದು ಅಂದಾಜಿಸಿತ್ತು.

news18
Updated:February 11, 2020, 3:36 PM IST
Delhi Elections: ಮತಗಟ್ಟೆ ಸಮೀಕ್ಷೆಗಳ ಪೈಕಿ ನಿಖರ ಭವಿಷ್ಯ ನೀಡಿದ್ದು ಯಾವುದು? ದೂರ ಉಳಿದಿದ್ದು ಯಾವುದು?
ಅರವಿಂದ್ ಕೇಜ್ರಿವಾಲ್
  • News18
  • Last Updated: February 11, 2020, 3:36 PM IST
  • Share this:
ಬೆಂಗಳೂರು: ದೆಹಲಿ ವಿಧಾನಸಭಾ ಚುನಾವಣೆಯ ಬೆನ್ನಲ್ಲೇ ನಡೆದ ಹೊರಬಂದ ಮತಗಟ್ಟೆ ಸಮೀಕ್ಷೆಗಳು ಆಪ್ ಗೆಲುವನ್ನೇ ಸೂಚಿಸಿದ್ದವು. ಈ ಸಮೀಕ್ಷೆಗಳ ಪ್ರಕಾರ ಆಮ್ ಆದ್ಮಿ ಪಕ್ಷ 44-63 ಸ್ಥಾನಗಳನ್ನು ಗೆಲ್ಲಬಹುದೆಂದು ಅಂದಾಜಿಸಲಾಗಿತ್ತು. ಹಾಗೆಯೇ, 5-26 ಸ್ಥಾನಗಳು ಬಿಜೆಪಿ ಪಾಲಾಗಬಹುದೆನ್ನಲಾಗಿತ್ತು. ಈಗ ಬಹುತೇಕ ಫಲಿತಾಂಶ ಪ್ರಕಟವಾಗಿದ್ದು ಆಮ್ ಆದ್ಮಿ ಪಕ್ಷ ಅಂತಿಮವಾಗಿ 63 ಸ್ಥಾನಗಳನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ ಕೇವಲ 7 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಕಳೆದ ಬಾರಿಗಿಂತ ಈ ಬಾರಿ 4 ಸ್ಥಾನ ಹೆಚ್ಚು ಸಿಕ್ಕಿದೆ ಎನ್ನುವುದಷ್ಟೇ ಬಿಜೆಪಿ ಸಿಕ್ಕ ಒಂದೇ ಸಣ್ಣ ಸಮಾಧಾನ.

ಎಬಿಪಿ ನ್ಯೂಸ್ ಮತ್ತು ಸಿ ವೋಟರ್ ಸಂಸ್ಥೆ ಜಂಟಿಯಾಗಿ ನಡೆಸಿದ ಸಮೀಕ್ಷೆ ಹೆಚ್ಚು ನಿಖರತೆ ತೋರಿದೆ. ಈ ಸಮೀಕ್ಷೆ ಪ್ರಕಾರ ಎಎಪಿ 49-63 ಸ್ಥಾನ ಗೆಲ್ಲಬಹುದೆಂಬ ಸಾಧ್ಯತೆ ತೋರಿತ್ತು. ಬಿಜೆಪಿ 9-21 ಸ್ಥಾನಗಳು ಸಿಗಬಹುದೆಂದು ಈ ಸಮೀಕ್ಷೆ ಹೇಳಿತ್ತು. ಇದು ಬಿಟ್ಟರೆ ಬೇರೆ ಯಾವ ಸಮೀಕ್ಷೆಯೂ 61ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಎಎಪಿಗೆ ನೀಡಿರಲಿಲ್ಲ. ರಿಪಬ್ಲಿಕ್ ಟಿವಿ ಮತ್ತು ಜನ್ ಕೀ ಬಾತ್ ಜಂಟಿಯಾಗಿ ನಡೆಸಿದ ಸಮೀಕ್ಷೆ ಎಎಪಿಗೆ 48-61 ಸ್ಥಾನಗಳನ್ನು ನೀಡಿ ಅಂತಿಮ ಫಲಿತಾಂಶಕ್ಕೆ ತುಸು ಸಮೀಪ ಬಂದಿದೆ.

ಇದನ್ನೂ ಓದಿ: ಅಮಿತ್ ಶಾ - ಅರವಿಂದ ಕೇಜ್ರಿವಾಲ್; ಇಬ್ಬರಲ್ಲಿ ಯಾರು ನಿಜವಾದ ಚಾಣಕ್ಯ?

ಸಮೀಕ್ಷೆಗಳ ಪೈಕಿ ನಿಖರತೆಯಲ್ಲಿ ಹೆಚ್ಚು ದೂರ ಉಳಿದಿದ್ದು ಇಪ್ಸೋಸ್ ಸಮೀಕ್ಷೆ. ಟೈಮ್ಸ್ ನೌ ವಾಹಿನಿ ಜೊತೆ IPSOS ಸಂಸ್ಥೆ ಸೇರಿ ನಡೆಸಿದ ಸಮೀಕ್ಷೆಯಲ್ಲಿ ಎಎಪಿ 44 ಸ್ಥಾನ ಸಿಗಬಹುದು ಎಂದು ಹೇಳಲಾಗಿತ್ತು. ಬಿಜೆಪಿಗೆ 26 ಸ್ಥಾನಗಳು ದಕ್ಕುವ ನಿರೀಕ್ಷೆ ಇತ್ತು. ಆದರೆ, ಅಂತಿಮ ಫಲಿತಾಂಶ ತುಸು ವ್ಯತ್ಯಾಸವಾಗಿ ಬಂದಿದೆ.

ಮತಗಟ್ಟೆ ಸಮೀಕ್ಷೆಗಳ ವಿವರ:

ನ್ಯೂಸ್ ಎಕ್ಸ್ – PollStrat
ಎಎಪಿ: 50-56ಬಿಜೆಪಿ: 10-14
ಕಾಂಗ್ರೆಸ್: 0

ರಿಪಬ್ಲಿಕ್ ಟಿವಿ – ಜನ್ ಕೀ ಬಾತ್
ಎಎಪಿ: 48-61
ಬಿಜೆಪಿ: 9-21
ಕಾಂಗ್ರೆಸ್: 0-1

ಎಬಿಪಿ ನ್ಯೂಸ್ – ಸಿ ವೋಟರ್
ಎಎಪಿ: 49-63
ಬಿಜೆಪಿ: 5-19
ಕಾಂಗ್ರೆಸ್: 0-4

ಟೈಮ್ಸ್ ನೌ – IPSOS
ಎಎಪಿ: 44
ಬಿಜೆಪಿ: 26
ಕಾಂಗ್ರೆಸ್: 0

ಟಿವಿ9 – ಸಿಸೇರೋ
ಎಎಪಿ: 54
ಬಿಜೆಪಿ: 15
ಕಾಂಗ್ರೆಸ್: 1

ನ್ಯೂಸ್24 – ಜನ್ ಕೀ ಬಾತ್
ಎಎಪಿ: 54
ಬಿಜೆಪಿ: 15
ಕಾಂಗ್ರೆಸ್: 1

ಇದನ್ನೂ ಓದಿ: ದ್ವೇಷ ರಾಜಕಾರಣ vs ಅಭಿವೃದ್ಧಿ; ದೆಹಲಿಯಲ್ಲಿ ಆಮ್ ಆದ್ಮಿ ಮತ್ತೊಮ್ಮೆ ಗೆಲುವು ಸಾಧಿಸಲು ಈ ಎಲ್ಲಾ ವಿಚಾರಗಳು ಕಾರಣ!

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: February 11, 2020, 3:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories