ಹತ್ರಾಸ್​ ಪ್ರಕರಣದಲ್ಲಿ​​ ಎಸ್​ಐಟಿ ರಚಿಸಿದ ಸಿಎಂ ಯೋಗಿ ಆದಿತ್ಯನಾಥ್ ಕ್ರಮ ಸರಿ; ಅಮಿತ್​ ಶಾ

ಪ್ರಕರಣದ ತನಿಖೆಯನ್ನು ಎಸ್​ಐಟಿ ನಡೆಸುತ್ತಿದೆ. ಈ ಸಂಬಂಧ ಕೆಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈಗ ಸಂಪೂರ್ಣ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ)ಗೆ ವರ್ಗಾಯಿಸಲಾಗಿದೆ.

news18-kannada
Updated:October 17, 2020, 8:55 PM IST
ಹತ್ರಾಸ್​ ಪ್ರಕರಣದಲ್ಲಿ​​ ಎಸ್​ಐಟಿ ರಚಿಸಿದ ಸಿಎಂ ಯೋಗಿ ಆದಿತ್ಯನಾಥ್ ಕ್ರಮ ಸರಿ; ಅಮಿತ್​ ಶಾ
ನ್ಯೂಸ್​ 18 ವಾಹಿನಿ ಸಂದರ್ಶನದಲ್ಲಿ ಅಮಿತ್​ ಶಾ
  • Share this:
ಹತ್ರಾಸ್​ ದಲಿತ ಯುವತಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್​ಐಟಿ) ರಚಿಸುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಉತ್ತಮ ಕೆಲಸ ಮಾಡಿದರು ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ತಿಳಿಸಿದರು. ನ್ಯೂಸ್​ 18 ವಾಹಿತಿ ಪ್ರಧಾನ ಸಂಪಾದಕ ರಾಹುಲ್​ ಜೋಶಿ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಹತ್ರಾಸ್​ ಪ್ರಕರಣ ನಿರ್ವಹಣೆಯಲ್ಲಿ ಠಾಣಾ (ಪೊಲೀಸ್​ ಠಾಣೆ) ಮಟ್ಟದಲ್ಲಿ ತಪ್ಪಾಗಿದೆ. ಸರ್ಕಾರದಲ್ಲಿ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ದೇಶದಲ್ಲಿ ದೊಡ್ಡಮಟ್ಟದಲ್ಲಿ ಪೊಲೀಸ್​ ವ್ಯವಸ್ಥೆ ಸುಧಾರಣೆ ತರುವ ಅಗತ್ಯವಿದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದರ ಅವಶ್ಯಕತೆ ಅಲ್ಲಗಳೆಯುವಂತೆ ಇಲ್ಲ. ಆದರೆ, ರಾಜಸ್ಥಾನ ಮತ್ತು ಹತ್ರಾಸ್​ನಲ್ಲಿ ಒಂದೇ ಸಮಯದಲ್ಲಿ ಅತ್ಯಾಚಾರ ನಡೆಯುತ್ತದೆ. ಆದರೆ, ಹತ್ರಾಸ್​ ಘಟನೆ ಮಾತ್ರ ಪ್ರಮುಖವಾಯಿತು? ಇಂತಹ ಘೋರ ಅಪರಾಧ ವಿಚಾರದಲ್ಲಿ ರಾಜಕೀಯ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು. ಹತ್ರಾಸ್​ ಮೂವರು ಆರೋಪಿಗಳನ್ನು ಒಂದೇ ದಿನದಲ್ಲಿ ಬಂಧಿಸಲಾಯಿತು. ಇಂದು ಅವರು ಜೈಲಿನಲ್ಲಿದ್ದಾರೆ ಎಂದರು

ಸಂತ್ರಸ್ತೆಯ ಶವಸಂಸ್ಕಾರವನ್ನು ಮಧ್ಯರಾತ್ರಿ ನಡೆಸಿದ ಕುರಿತು ಮಾತನಾಡಿದ ಅವರು, ಈ ಬಗ್ಗೆ ಎಸ್​ಐಟಿ ತನಿಖೆ ನಡೆಸುತ್ತಿದೆ. ಈ ಸಂಬಂಧ ಕೆಲವು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈಗ ಸಂಪೂರ್ಣ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ)ಗೆ ವರ್ಗಾಯಿಸಲಾಗಿದೆ. ಆದರೆ, ಈ ವಿಷಯದಲ್ಲಿ ಯಾರು ರಾಜಕೀಯ ಮಾಡಬಾರದು ಎಂದರು.
ಪ್ರಕರಣ ನಿರ್ವಹಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಆರೋಪ ತಳ್ಳಿಹಾಕಿದ ಅವರು, ಸರ್ಕಾರ ಪೊಲೀಸ್​ ಠಾಣೆ ಮಟ್ಟದಲ್ಲಿ ಭಾಗಿಯಾಗಿರುವುದಿಲ್ಲ. ಸ್ಥಳೀಯ ಮಟ್ಟದಲ್ಲಿ ಕೆಲವು ಅಧಿಕಾರಿಗಳು ಯೋಗಿ ಅವರು ಎಸ್​ಐಟಿ ರಚಿಸಿ ಉತ್ತಮ ಕೆಲಸ ಮಾಡಿದರು ಎಂದರು. ತಂಡವು ಪ್ರಕರಣಧಲ್ಲಿ ಕೂಲಂಕುಷವಾಗಿ ತನಿಖೆ ನಡೆಸಿ, ವರದಿ ಸಲ್ಲಿಸುತ್ತದೆ. ಈ ವರದಿ ಅನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.ಹತ್ರಾಸ್​ನ ದಲಿತ ಯುವತಿಯನ್ನು ಸೆ.14ರಂದು ಮೇಲ್ಜಾತಿಯ ನಾಲ್ಕು ಜನ ಹುಡುಗರು ಅತ್ಯಾಚಾರ ಎಸಗಿ ಕೊಲೆ ಮಾಡಿದ್ದರು. ತೀವ್ರವಾಗಿ ಹಲ್ಲೆಗೆ ಒಳಗಾಗಿದ್ದ ಯುವತಿ ದೆಹಲಿಯ ಆಸ್ಪತ್ರೆಯಲ್ಲಿ ಹದಿನೈದು ದಿನ ಸಾವು ಬದುಕಿನ ನಡುವೆ ಹೋರಾಟ ಮಾಡಿ ಅಸುನೀಗಿದರು. ಆಕೆಯ ಅತ್ಯಸಂಸ್ಕಾರವನ್ನು  ಜಿಲ್ಲಾಡಳಿತ ತರಾತುರಿಯಲ್ಲಿ ಒತ್ತಾಯಪೂರ್ವಕವಾಗಿ ಮಾಡಿಮುಗಿಸಿತು.

ಇದನ್ನು ಓದಿ: ಕೊರೋನಾಗೆ ಲಸಿಕೆ ಸಿಗುವವರೆಗೂ ಮಾಸ್ಕ್ ಬಳಕೆ​, ಸಾಮಾಜಿಕ ಅಂತರವೇ ಉತ್ತಮ ಚಿಕಿತ್ಸೆ; ಅಮಿತ್​ ಶಾ

ಯುವತಿ ಮೇಲೆ ಆದ ಕ್ರೌರ್ಯ, ಆಕೆ ಅನುಭವಿಸಿದ ನೋವು ಹಾಗೂ ಜಿಲ್ಲಾಡಳಿತದಿಂದ ನಡೆದ ಅತ್ಯಸಂಸ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಈ ಘಟನೆ ರಾಜಕೀಯ ಯುದ್ಧಕ್ಕೆ ಕಾರಣವಾಯಿತು. ಘಟನೆ ಕುರಿತು ಅಲಹಾಬಾದ್​ ಹೈ ಕೋರ್ಟ್​ ಕೂಡ ದಿಗ್ಭ್ರಾಮೆ ವ್ಯಕ್ತಪಡಿಸಿತು.

ಘಟನೆ ಕುರಿತು ನ್ಯಾಯಾಲಯದ ಮುಂದೆ ಸಂತ್ರಸ್ತೆಯ ಕುಟುಂಬ ಹೇಳಿಕೆ ದಾಖಲಿಸಿದ್ದಾರೆ ಮುಂದಿನ ವಿಚಾರಣೆಯನ್ನು ನ.2ಕ್ಕೆ ನಿಗದಿಪಡಿಸಲಾಗಿದೆ, ನ್ಯಾಯಾಮೂರ್ತಿಗಳಾದ ಪಂಕಜ್​ ಮಿಥಾಲ್​ ಮತ್ತು ರಾಜನ್​ ರಾಯ್​ ದ್ವಿಸದಸ್ಯ ಪೀಠ ಸಂತ್ರಸ್ತೆಯ ಪೋಷಕರು ಮತ್ತು ಒಡಹುಟ್ಟಿದವರಿಂದ ಹೇಳಿಕೆ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಅಧಿಕಾರಿ, ಹತ್ರಾಸ್​ ಡಿಸ್ಟ್ರಿಕ್​​ ಮ್ಯಾಜಿಸ್ಟ್ರೇಟರ್​ ಮತ್ತು ಎಸ್ಪಿ ಯನ್ನು ಪದಚ್ಯುತಿಗೊಳಿಸಲಾಗಿದೆ

ಅಮಿತ್​ ಶಾ ಜೊತೆಗೆ ವಾಹಿನಿಯ ಪ್ರಧಾನ ಸಂಪಾದಕ ರಾಹುಲ್ ಜೋಷಿ  ನೇರಾನೇರ ಸಂದರ್ಶನ ನಡೆಸಿದ್ದಾರೆ. ದೇಶದ ಹಲವು ಪ್ರಮುಖ ವಿಷಯಗಳ ಕುರಿತು ಇದೇ ವೇಳೆ ಅಮಿತ್ ಶಾ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ ಈ ಸಂದರ್ಶನ ಇಂದು ರಾತ್ರಿ 9ಕ್ಕೆ ನ್ಯೂಸ್​ 18 ಕನ್ನಡದಲ್ಲಿಯೂ ಪ್ರಸಾರವಾಗಲಿದೆ.
Published by: Seema R
First published: October 17, 2020, 8:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading