ಕೊರೋನಾಗೆ ಲಸಿಕೆ ಸಿಗುವವರೆಗೂ ಮಾಸ್ಕ್ ಬಳಕೆ​, ಸಾಮಾಜಿಕ ಅಂತರವೇ ಉತ್ತಮ ಚಿಕಿತ್ಸೆ; ಅಮಿತ್​ ಶಾ

ನವರಾತ್ರಿ ಹಬ್ಬದ ಆಚರಣೆ ಸಮಯದಲ್ಲಿ ಜನರು ಹೆಚ್ಚು ಜಾಗರೂಕರಾಗಿರಬೇಕು. ಮೊದಲು ನಮ್ಮನ್ನು ನಾವು  ರಕ್ಷಿಸಿಕೊಳ್ಳುವ ಮೂಲಕ ಹಬ್ಬಗಳನ್ನು ಆಚರಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

news18-kannada
Updated:October 17, 2020, 8:13 PM IST
ಕೊರೋನಾಗೆ ಲಸಿಕೆ ಸಿಗುವವರೆಗೂ ಮಾಸ್ಕ್ ಬಳಕೆ​, ಸಾಮಾಜಿಕ ಅಂತರವೇ ಉತ್ತಮ ಚಿಕಿತ್ಸೆ; ಅಮಿತ್​ ಶಾ
ನ್ಯೂಸ್​ 18 ವಾಹಿನಿ ಸಂದರ್ಶನದಲ್ಲಿ ಅಮಿತ್​ ಶಾ
  • Share this:
ನವದೆಹಲಿ (ಅ.17):  ನವರಾತ್ರಿ ಮತ್ತು ದೀಪಾವಳಿಯಂತಹ ಪ್ರಮುಖ ಹಬ್ಬಗಳನ್ನು ದೇಶದ ಮೂಲೆ ಮೂಲೆಗಳಲ್ಲಿಯೂ ಜನರು ಖಂಡಿತವಾಗಿ ಆಚರಿಸಬೇಕು. ಈ ಆಚರಣೆ ವೇಳೆ, ಮಾಸ್ಕ್​ ಧರಿಸಿವುದು. ಸಾಮಾಜಿಕ ಅಂತರ ಕಾಪಾಡುವುದು ಮತ್ತು ಕೈಗಳನ್ನು ಸ್ವಚ್ಛಗೊಳಿಸುವ ಮೂಲಕ ಪ್ರತಿಯೊಬ್ಬರು ರಕ್ಷಣಾತ್ಮಕ ಕ್ರಮಗಳನ್ನು ಅನುಸರಿಸಿ ಕೊರೋನಾ ವೈರಸ್​ ವಿರುದ್ಧ ಹೋರಾಡಬೇಕು ಎಂದು ಕೇಂದ್ರ ಗೃಹ ಸಚಿವರಾದ ಅಮಿತ್​ ಶಾ ತಿಳಿಸಿದ್ದಾರೆ. ಕೊರೋನಾ ಸೋಂಕಿನಿಂದ ಗುಣಮುಖರಾದ ಬಳಿಕ ಇದೇ ಮೊದಲ ಬಾರಿ ನ್ಯೂಸ್​ 18ನ ಪ್ರಧಾನ ಸಂಪಾದಕ ರಾಹುಲ್​ ಜೋಷಿ ಜೊತೆಗಿನ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ ದೇಶದ ಜನರಿಗೆ ಹಬ್ಬದ ಸಂಭ್ರಮದ ನಡುವೆ ಕೋವಿಡ್​ 19 ವಿರುದ್ಧ ರಕ್ಷಣೆಯನ್ನು ಮರೆಯಬಾರದು ಎಂದು ಸಲಹೆ ನೀಡಿದ್ದಾರೆ.

ಕಳೆದ ಆಗಸ್ಟ್​ನಲ್ಲಿ ಕೊರೋನಾ ವೈರಸ್​ ಸೋಂಕು ದೃಢಗೊಂಡಿದ್ದ ಅಮಿತ್​ ಶಾ ಅವರು ಗುರ್​ಗಾಂವ್​ನ ಮೇದಾಂತ್​ ಆಸ್ಪತ್ರೆಗಯಲ್ಲಿ ದಾಖಲಾಗಿದ್ದರು. ಬಳಿಕ ವಅರು ದೆಹಲಿಯ ಏಮ್ಸ್​ಗೆ ದಾಖಲಾಗಿ ಆಗಸ್ಟ್​ ಅಂತ್ಯದಲ್ಲಿ ಗುಣಮುಖರಾಗಿ ಬಿಡುಗಡೆಗೊಂಡಿದ್ದರು. ಸೆಪ್ಟೆಂಬರ್​ನಲ್ಲಿ ಮತ್ತೊಮ್ಮೆ ಏಮ್ಸ್​ಗೆ ದಾಖಲಾಗಿದ್ದ ಅವರು ಸಂಸತ್​​ ಅಧಿವೇಶನಕ್ಕಾಗಿ ಸಂಪೂರ್ಣ ತಪಾಸಣೆಗೆ ಒಳಗಾಗಿದ್ದರು.


ಕೊರೋನಾ ವೈರಸ್​ಗೆ ಇದುವರೆಗೂ ಯಾವುದೇ ಲಸಿಕೆ ಕಂಡು ಹಿಡಿಯಲಾಗಿಲ್ಲ. ಈ ಸೋಂಕಿನಿಂದ ರಕ್ಷಿಸಿಕೊಳ್ಳಲಿರುವ ಏಕೈಕ ಮಾರ್ಗ ಎಂದರೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು. ಇದಕ್ಕಾಗಿ ಮಾಸ್ಕ್​ ಧರಿಸುವುದು, ಕೈ ಸ್ವಚ್ಛತೆ, ಸಾಮಾಜಿಕ ಅಂತರ ಕಡ್ಡಾಯವಾಗಿದೆ ಎಂದು ಪ್ರಧಾನಿಗಳು ತಿಳಿಸಿದ್ದಾರೆ ಎಂದು ಗೃಹ ಸಚಿವರು ತಿಳಿಸಿದರು.

ಪ್ರಧಾನ ಮಂತ್ರಿಗಳ ನಾಯಕತ್ವದಲ್ಲಿ ನಾವು ಕೊರೋವಾ ವಿರುದ್ಧ ಯಶಸ್ವಿಯಾಗಿ ಹೋರಾಡಿದ್ದೇವೆ. ಕೊರೋನಾ ಪ್ರಕರಣಗಳು, ಸಾವಿನ ಸಂಖ್ಯೆ, ಚೇತರಿಕೆ ದರಗಳನ್ನು ಪ್ರತಿ ಮಿಲಿಯನ್​ಗಳಲ್ಲಿ ನೋಡಿದಾಗ  ಭಾರತ ಮೂರನೇ ಸ್ಥಾನದಲ್ಲಿದೆ. ಕೊರೋನಾ ವಿರುದ್ಧ ಸಂಪೂರ್ಣ ಜಯಗಳಿಸಲು  ಪ್ರತಿಯೊಬ್ಬ ಭಾರತೀಯರು ಕ್ರಮಕ್ಕೆ ಮುಂದಾಗಬೇಕು. ಮಾಸ್ಕ್​, ಸ್ವಚ್ಛತೆ, ಅಂತರ ಎಂಬ ಮೂರು ಮಂತ್ರಗಳನ್ನು ಅನುಸರಿಸಿದರೆ ವೈರಸ್​ನಿಂದ ಅನೇಕರ ಜೀವವನ್ನು ಉಳಿಸಬಹುದು ಎಂದರು.

ನವರಾತ್ರಿ ಹಬ್ಬದ ಆಚರಣೆ ಸಮಯದಲ್ಲಿ ಜನರು ಹೆಚ್ಚು ಜಾಗರೂಕರಾಗಿರಬೇಕು. ಮೊದಲು ನಮ್ಮನ್ನು ನಾವು  ರಕ್ಷಿಸಿಕೊಳ್ಳುವ ಮೂಲಕ ಹಬ್ಬಗಳನ್ನು ಆಚರಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಕೊರೋನಾ ವೈರಸ್​ಗೆ ಲಸಿಕೆ ಯಾವಾಗ ಸಿಗಬಹುದು ಎಂಬ ನಿರೀಕ್ಷೆ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದಕ್ಕೆ ಉತ್ತರಿಸುವ ಉತ್ತಮ ವ್ಯಕ್ತಿ ನಾನಲ್ಲ. ಇದು ವೈಜ್ಞಾನಿಕ ಮತ್ತು ಸುರಕ್ಷತೆ ಪ್ರೋಟೋಕಾಲ್​ಗೆ ಒಳಪಟ್ಟ ವಿಷಯ. ಲಸಿಕೆ ಬಗ್ಗೆ ನನ್ನ ಮೌಲ್ಯಮಾಪನದಿಂದ ಪ್ರಯೋಜನವಿಲ್ಲ. ಇದ್ಕೆ ಅಂತರಾಷ್ಟ್ರೀಯ ಮಾನದಂಡವಿದೆ. ಅಂತಹ ಮಾನದಂಡವನ್ನು ಪೂರೈಸುವವರೆಗೂ ಲಸಿಕೆ ಸಿಗುವುದಿಲ್ಲ. ಈ ಬಗ್ಗೆ ಐಸಿಎಂಆರ್​ ನಿರ್ಧರಿಸುತ್ತದೆ ಎಂದರು

ಅಮಿತ್​ ಶಾ ಜೊತೆಗೆ ವಾಹಿನಿಯ ಪ್ರಧಾನ ಸಂಪಾದಕ ರಾಹುಲ್ ಜೋಷಿ  ನೇರಾನೇರ ಸಂದರ್ಶನ ನಡೆಸಿದ್ದಾರೆ. ದೇಶದ ಹಲವು ಪ್ರಮುಖ ವಿಷಯಗಳ ಕುರಿತು ಇದೇ ವೇಳೆ ಅಮಿತ್ ಶಾ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ ಈ ಸಂದರ್ಶನ ಇಂದು ರಾತ್ರಿ 9ಕ್ಕೆ ನ್ಯೂಸ್​ 18 ಕನ್ನಡದಲ್ಲಿಯೂ ಪ್ರಸಾರವಾಗಲಿದೆ.
Published by: Seema R
First published: October 17, 2020, 8:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading