Howdy Modi: ಜಾಗತಿಕ ಇತಿಹಾಸದಲ್ಲೇ ಐತಿಹಾಸಿಕ ದಿನ ಎಂದ ಕೇಂದ್ರ ಗೃಹ ಸಚಿವ ಅಮಿತ್​​ ಶಾ

2020ರಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ಚುನಾವಣೆಯ ಪ್ರಕ್ರಿಯೆ ಗೆಲ್ಲಲು ಈಗಾಗಲೇ ಟ್ರಂಪ್​​ ರಣತಂತ್ರ ಹೆಣೆದಿದ್ದಾರೆ. ಹೀಗಾಗಿಯೇ ಟೆಕ್ಸಾಸ್‌ನಲ್ಲಿನ ಭಾರತೀಯ ಅಮೆರಿಕನ್ನರ ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಟ್ರಂಪ್‌ ಭಾಗವಹಿಸಿದ್ದರು ಎನ್ನುತ್ತಿವೆ ಮೂಲಗಳು.

news18
Updated:September 23, 2019, 9:38 AM IST
Howdy Modi: ಜಾಗತಿಕ ಇತಿಹಾಸದಲ್ಲೇ ಐತಿಹಾಸಿಕ ದಿನ ಎಂದ ಕೇಂದ್ರ ಗೃಹ ಸಚಿವ ಅಮಿತ್​​ ಶಾ
ಮೋದಿ-ಟ್ರಂಪ್​
news18
Updated: September 23, 2019, 9:38 AM IST
ನವದೆಹಲಿ(ಸೆ.23): ಅಮೆರಿಕದ ಹ್ಯೂಸ್ಟನ್‌ ನಗರದ ಎನ್‌ಆರ್'ಜಿ ಕ್ರೀಡಾಂಗಣದಲ್ಲಿ ನಡೆದ "ಹೌಡಿ ಮೋದಿ" ಕಾರ್ಯಕ್ರಮವೂ ಜಾಗತಿಕ ಇತಿಹಾಸದಲ್ಲೇ ಐತಿಹಾಸಿಕ ದಿನ ಎಂದು ಕೇಂದ್ರ ಗೃಹ ಸಚಿವ ಅಮಿತ್​​ ಶಾ ಅಭಿಪ್ರಾಯಪಟ್ಟಿದ್ದಾರೆ.ವಿಶ್ವದ ಎರಡು ಬಲಿಷ್ಠ ದೇಶಗಳಾದ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಕಾರ್ಯಕ್ರಮ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರಿಗೆ 'ಹೌಡಿ ಮೋದಿ' ಕಾರ್ಯಕ್ರಮ ರಾಜಕೀಯವಾಗಿ ಅತ್ಯಂತ ಮಹತ್ವವಾದುದು. ಉಭಯ ದೇಶಗಳು ಜಾಗತಿಕ ಅಭಿವೃದ್ಧಿ ಪಥದಲ್ಲಿ ಹೇಗೆ ಸಾಗಬೇಕು ಎಂಬುದರ ಸುತ್ತ ಚರ್ಚಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್​​ ಶಾ ಟ್ವೀಟ್​​ ಮಾಡಿದ್ದಾರೆ.
Loading...
ಟೆಕ್ಸಾಸ್‌ನಲ್ಲಿನ ಭಾರತೀಯ ಅಮೆರಿಕನ್ನರು 'ಹೌಡಿ ಮೋದಿ' ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅಮೆರಿಕದ ಹ್ಯೂಸ್ಟನ್‌ ಎನ್‌ಆರ್'ಜಿ ಸ್ಟೇಡಿಯಂನಲ್ಲಿ ಅನಿವಾಸಿ ಭಾರತೀಯರು ಆಯೋಜಿಸಿದ್ದ ಸಮಾವೇಶದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Howdy Modi: ಹೌಡಿ ಮೋದಿ ಕಾರ್ಯಕ್ರಮದಲ್ಲಿ ಕನ್ನಡಾಭಿಮಾನ ತೋರಿದ ಭಾರತ ಪ್ರಧಾನಿ

ಮೋದಿಯವರು ವೇದಿಕೆ ಮೇಲೆ ಬರುತ್ತಿದ್ದಂತೆಯೇ ಅನಿವಾಸಿ ಭಾರತೀಯರು ಹುಚ್ಚೆದ್ದು ಕುಣಿದಿದ್ದರು. ಮೋದಿ ಎಂದು ಘೋಷಣೆಗಳನ್ನು ಕೂಗಿ ಹುರಿದುಂಬಿಸಿದರು. ಖುದ್ದು ಡೊನಾಲ್ಡ್ ಟ್ರಂಪ್ ಅವರೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾರತ-ಅಮೆರಿಕಾ ಬಾಂಧವ್ಯ ಬಗ್ಗೆ ಮಾತಾಡಿದರು. ನಂತರ 45 ನಿಮಿಷಗಳ ಸುದೀರ್ಘ ಭಾಷಣ ಮಾಡಿದ ಮೋದಿ, ಉಭಯ ದೇಶಗಳ ನಡುವಿನ ಬಾಂಧವ್ಯವೃದ್ದಿಯನ್ನು ಸಾರಿ ಹೇಳಿದರು.

2020ರಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ಚುನಾವಣೆಯ ಪ್ರಕ್ರಿಯೆ ಗೆಲ್ಲಲು ಈಗಾಗಲೇ ಟ್ರಂಪ್​​ ರಣತಂತ್ರ ಹೆಣೆದಿದ್ದಾರೆ. ಹೀಗಾಗಿಯೇ ಟೆಕ್ಸಾಸ್‌ನಲ್ಲಿನ ಭಾರತೀಯ ಅಮೆರಿಕನ್ನರ ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಟ್ರಂಪ್‌ ಭಾಗವಹಿಸಿದ್ದರು ಎನ್ನುತ್ತಿವೆ ಮೂಲಗಳು.
-------------
First published:September 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...