ರವಿಂದ್ರನಾಥ್​ ಟ್ಯಾಗೋರ್ ಖರ್ಚಿಯಲ್ಲಿ ಕುಳಿತಿಲ್ಲ; ಅಮಿತ್​ ಶಾ ಸ್ಪಷ್ಟನೆ

ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅಮಿತ್​ ಶಾ ಅವರು ಇತ್ತೀಚೆಗಷ್ಟೇ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಮನೆ ಸೇರಿದ್ದರು. ಈಗ ಅವರಿಗೆ ಜ್ವರ ಹಾಗೂ ಮೈಕೈ ನೋವು ಕಾಣಿಸಿಕೊಂಡಿದ್ದು, ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅಮಿತ್​ ಶಾ ಅವರು ಇತ್ತೀಚೆಗಷ್ಟೇ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಮನೆ ಸೇರಿದ್ದರು. ಈಗ ಅವರಿಗೆ ಜ್ವರ ಹಾಗೂ ಮೈಕೈ ನೋವು ಕಾಣಿಸಿಕೊಂಡಿದ್ದು, ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಾಂತಿನಿಕೇತನಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಣಬ್​ ಮುಖರ್ಜಿ ಮತ್ತು ರಾಜೀವ್​ ಗಾಂಧಿ ಮತ್ತಿತ್ತರ ನಾಯಕರು ಕಿಟಿಕಿ ಪಕ್ಕದಲ್ಲಿ ಕುಳಿತು ವಿಸಿಟರ್​ ಬುಕ್​ಗೆ ಸಹಿ ಮಾಡುತ್ತಿರುವ ಪೋಟೋವನ್ನು ತೋರಿಸಿದರು.

  • Share this:

ಖ್ಯಾತ ಕವಿ ರವಿಂದ್ರನಾಥ್​ ಟ್ಯಾಗೋರ್​ ಅವರ ಆಸನ ಮೇಲೆ ಕುಳಿತು ಕೊಳ್ಳುವ ಮೂಲಕ ಕೇಂದ್ರ ಗೃಹ ಸಚಿವರು ಶಾಂತಿನಿಕೇತನದ ಘನತೆ ಉಲ್ಲಂಘನೆ ಮಾಡಿದ್ದಾರೆ ಎಂಬ ಕಾಂಗ್ರೆಸ್​ ನಾಯಕ ಅಧೀರ್​ ರಂಜನ್​ ಚೌದರಿ ಹೇಳಿಕೆಗೆ ಅಮಿತ್​ ಶಾ ತಿರುಗೇಟು ನೀಡಿದ್ದಾರೆ. ಈ ಕುರಿತು ಲೋಕಸಭೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ ಅವರು, ಇದೇ ವೇಳೆ ಶಾಂತಿನಿಕೇತನದ ವೈಸ್​ಚಾನ್ಸಲರ್​ ಪತ್ರವನ್ನು ಕೂಡ ತೋರಿಸಿದರು. ಇತ್ತೀಚಿಗೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ವೇಳೆ ಶಾಂತಿ ನಿಕೇತನಕ್ಕೆ ಭೇಟಿ ನೀಡಿದೆ. ಆದರೆ, ತಾವು ಟ್ಯಾಗೋರ್​ ಅವರ ಆಸನದ ಮೇಲೆ ಕುಳಿತಿರಲಿಲ್ಲ ಎಂದಿದ್ದಾರೆ. ನಾನು ರವಿಂದ್ರನಾಥ ಟ್ಯಾಗೋರ್​ ಅವರ ಖುರ್ಚಿಯ ಮೇಲೆ ಕುಳಿತಿರಲಿಲ್ಲ. ಈ ಮೂಲಕ ಯಾರ ಭಾವನೆಗೂ ಧಕ್ಕೆ ತಂದಿಲ್ಲ ಎಂದು ಸದನಕ್ಕೆ ಸ್ಪಷ್ಟಪಡಿಸುವುದಾಗಿ ತಿಳಿಸಿದರು.


ಇದೇ ವೇಳೆ ಅವರು ಶಾಂತಿನಿಕೇತನಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಣಬ್​ ಮುಖರ್ಜಿ ಮತ್ತು ರಾಜೀವ್​ ಗಾಂಧಿ ಮತ್ತಿತ್ತರ ನಾಯಕರು ಕಿಟಿಕಿ ಪಕ್ಕದಲ್ಲಿ ಕುಳಿತು ವಿಸಿಟರ್​ ಬುಕ್​ಗೆ ಸಹಿ ಮಾಡುತ್ತಿರುವ ಪೋಟೋವನ್ನು ತೋರಿಸಿದರು.


ಇದನ್ನು ಓದಿ: ಸೆಪ್ಟೆಂಬರ್​ನಿಂದ ವೇಗ ಪಡೆಯಲಿದೆ ಚೆಕ್ ಕ್ಲಿಯರೆನ್ಸ್ ಪ್ರಕ್ರಿಯೆ..! ಇಲ್ಲಿದೆ ಸಂಪೂರ್ಣ ಮಾಹಿತಿ


ಇದೇ ವೇಳೆ ಕಾಂಗ್ರೆಸ್​ ನಾಯಕರ ವಿರುದ್ಧ ಹರಿಹಾಯ್ದ ಅವರು, ಕಾಂಗ್ರೆಸ್​ ಜನರನ್ನು ತಪ್ಪು ದಾರಿಗೆ ಎಳೆಯುವ ಯತ್ನ ನಡೆಸುತ್ತಿದೆ ಎಂದು ಟೀಕಿಸಿದರು. ಈ ಹಿಂದೆ ಶಾಂತಿನಿಕೇತನಕ್ಕೆ ಗೃಹ ಸಚಿವರ ಭೇಟಿ ಕುರಿತು ಟೀಕಿಸಿದ ಕಾಂಗ್ರೆಸ್​ ನಾಯಕ, ನೀವು ಶಾಂತಿನಿಕೇತನದಲ್ಲಿ ಟ್ಯಾಗೋರ್​ ಹುಟ್ಟಿದರು ಎಂದು ಹೇಳಿಕೆ ನೀಡುವ ಅಮಿತ್​ ಶಾ, ಇದಕ್ಕೂ ಮುನ್ನ ಕೊಂಚ ಈ ಬಗ್ಗೆ ಅಧ್ಯಯನ ಮಾಡುವುದು ಒಳಿತು. ಅವರ ಆಸನದ ಮೇಲೆ ಕುಳಿತು ಕೊಳ್ಳುವ ಮೂಲಕ ಅವರಿಗೆ ಅಪಮಾನ ಎಸಗಿದ್ದಾರೆ ಎಂದು ಹರಿಹಾಯ್ದಿದ್ದರು.


ಡಿ. 20ರಂದು ಶಾಂತಿ ನಿಕೇತನದ ವಿಶ್ವ ಭಾರ್ತಿ ವಿಶ್ವವಿದ್ಯಾಲಯಕ್ಕೆ ಶಾ ಭೇಟಿ ನೀಡಿ ರಾಷ್ಟ್ರಕವಿಗೆ ಗೌರವ ನಮನ ಸಲ್ಲಿಸಿದ್ದರು.

top videos
    First published: