ಅಕ್ರಮ ಬಾಂಗ್ಲಾ ವಲಸಿಗರ ವಿವಾದ: ಅಸ್ಸಾಂ ಎನ್​ಆರ್​ಸಿ ಕರಡು ಬಗ್ಗೆ ರಾಹುಲ್​ ಅಭಿಪ್ರಾಯ ಕೇಳಿದ ಅಮಿತ್​ ಶಾ..!


Updated:August 5, 2018, 9:43 PM IST
ಅಕ್ರಮ ಬಾಂಗ್ಲಾ ವಲಸಿಗರ ವಿವಾದ: ಅಸ್ಸಾಂ ಎನ್​ಆರ್​ಸಿ ಕರಡು ಬಗ್ಗೆ ರಾಹುಲ್​ ಅಭಿಪ್ರಾಯ ಕೇಳಿದ ಅಮಿತ್​ ಶಾ..!

Updated: August 5, 2018, 9:43 PM IST
ನ್ಯೂಸ್​-18 ಕನ್ನಡ

ನವದೆಹಲಿ(ಆಗಸ್ಟ್​.05): ಅಸ್ಸಾಂನಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಹೆಚ್ಚಾಗಿರುವ ಹಿನ್ನಲ್ಲೆಯಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್​ಆರ್​ಸಿ) ಕರಡನ್ನು ಕೇಂದ್ರ ಸರ್ಕಾರ ರಚಿಸಿದ್ದು, ಇದರ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು  ತಮ್ಮ ನಿಲುವು ಸ್ಪಷ್ಟಪಡಿಸಿಲ್ಲ ಎಂದು   ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗಂಭೀರವಾಗಿ ಆರೋಪಿಸಿದ್ದಾರೆ.

ಉತ್ತರ ಪ್ರದೇಶದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್​ ಶಾ ಅವರು, ದೇಶದಲ್ಲಿ ಬಾಂಗ್ಲಾ ವಲಸಿಗರ ಸಂಖ್ಯೆ ಹೆಚ್ಚಾಗಿದೆ. ಇದೆ ರೀತಿಯಲ್ಲಿ ಅಸ್ಸಾಂನಲ್ಲಿಯೂ ಬಾಂಗ್ಲಾ ದೇಶಿಗರು ಆಗಮಿಸಿ ರಾಜಯವನ್ನು ಹತೋಟಿಗೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ಧಾರೆ.

ಹೀಗಾಗಿ, ಸುಪ್ರೀಂಕೋರ್ಟ್ ಆದೇಶದಂತೆ  ಕೇಂದ್ರಸರ್ಕಾರ ಎನ್​ಆರ್​ಸಿ ಕರಡು ಸಿದ್ಧಪಡಿಸಿದೆ. ಆದರೆ, ಪ್ರತಿಪಕ್ಷ ನಾಯಕರು ಕರಡು ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸದೆ, ವಲಸಿಗರಿಗೆ ಬೆಂಬಲ ನೀಡುತ್ತಿದ್ಧಾರೆ. ಈ ಮೂಲಕ ದೇಶವನ್ನು ವಿಭಜಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದೆ ವೇಳೆ ಅಸ್ಸಾಂಗೆ ಅಕ್ರಮವಾಗಿ ವಲಸೆ ಬಂದಿರುವ ಬಾಂಗ್ಲಾದೇಶಿಯರನ್ನು ಓಡಿಸಬೇಕೆಂಬುದು ಕರಡಿನ ಉದ್ದೇಶವಾಗಿದೆ. ಇನ್ನು ಎನ್​ಆರ್​ಸಿಯನ್ನು ಅನುಷ್ಠಾನಗೊಳಿಸದಂತೆ  ಮಮತಾ ಬ್ಯಾನರ್ಜಿ ಹೇಳುತ್ತಿದ್ಧಾರೆ. ಕಾಂಗ್ರೆಸ್ ಕೂಡಾ ಅದೇ ನಂಬಿಕೆ ಹೊಂದಿದ್ದು, ಅಧಿಕೃತವಾಗಿ ಕರಡಿನ ಬಗ್ಗೆ ರಾಹುಲ್ ಗಾಂಧಿ ಏನು ಪ್ರತಿಕ್ರಿಯಿಸುತ್ತಿಲ್ಲ  ಎಂದು ಹೇಳಿದರು.

ಅಕ್ರಮವಾಗಿ ಭಾರತಕ್ಕೆ ಬಂದು ನೆಲಸಿರುವ ಬಾಂಗ್ಲಾ ದೇಶಿಗರನ್ನು ಓಡಿಸಬೇಕೋ, ಬೇಡವೂ ಎಂಬುದರ ಬಗ್ಗೆ ಎಲ್ಲಾ ಪ್ರತಿಪಕ್ಷಗಳಿಗೂ ಪ್ರಶ್ನೆ ಕೇಳುತ್ತಿರುವೆ. ಎಸ್​ಪಿ, ಬಿಎಸ್ ಪಿ, ಕಾಂಗ್ರೆಸ್  ಪಕ್ಷ ಕೂಡಲೇ ತಮ್ಮ ಅಭಿಪ್ರಾಯನ್ನು ವ್ಯಕ್ತಪಡಿಸಲಿ ಎಂದು ಅಮಿತ್ ಶಾ ಕಿಡಿಕಾರಿದರು.

ಎನ್​ಆರ್​ಸಿ ಕರಡಿನಲ್ಲಿ ಏನಿದೆ?: ರಾಷ್ಟ್ರೀಯ ನಾಗರಿಕ ನೋಂದಣಿ ಪಟ್ಟಿ ವ್ಯವಸ್ಥೆ ಹೊಂದಿರುವ ಏಕೈಕ ರಾಜ್ಯ ಅಸ್ಸಾಂ. ರಾಜ್ಯದಲ್ಲಿರುವ ನೈಜ ಅಸ್ಸಾಂ ಪ್ರಜೆಗಳ ನೋಂದಣಿಯೇ ಎನ್​ಆರ್​ಸಿ ಕರಡು. 1951ರ ಗಣತಿಯಲ್ಲಿ ಮೊಟ್ಟಮೊದಲ ಬಾರಿಗೆ ಇದನ್ನು ಸಿದ್ಧಪಡಿಸಲಾಗಿತ್ತು. ನಾಗರಿಕರ ಹೆಸರು, ಕುಟುಂಬದವರ ಸಂಖ್ಯೆ, ಅವರ ಆಸ್ತಿ-ಪಾಸ್ತಿ ಮತ್ತಿತರ ದಾಖಲೆಗಳನ್ನು ಕರಡು ಒಳಗೊಂಡಿರುತ್ತದೆ.
Loading...

ಅಕ್ರಮ ವಲಸಿಗರನ್ನು ಗುರುತಿಸಲು ಪ್ರತ್ಯೇಕ ರಿಜಿಸ್ಟ್ರಿ ರಚಿಸಲು ಸರ್ಕಾರ ನಿರ್ಧರಿಸಿತ್ತು. 1971ಕ್ಕೂ ಮುನ್ನ ಬಾಂಗ್ಲಾದೇಶದಿಂದ ಅಸ್ಸಾಂಗೆ ಬಂದವರನ್ನು ಸ್ಥಳೀಯರೆಂದು ಗುರುತಿಸಿ ಪೌರತ್ವ ನೀಡಲು ಒಪ್ಪಲಾಗಿತ್ತು. ಅದರ ಅನ್ವಯ 2015 ರಲ್ಲಿ ಅರ್ಜಿ ಸ್ವೀಕಾರ ಆರಂಭವಾಗಿ 2012 ರಲ್ಲಿ ಮೊದಲ ಪಟ್ಟಿ ಪ್ರಕಟಗೊಂಡಿತ್ತು.

ಇದಕ್ಕಾಗಿ ಒಂದೋ ಅಲ್ಲಿನ ನಾಗರಿಕರ ಹೆಸರು 1951ರ ಎನ್‌ಆರ್‌ಸಿ ಪಟ್ಟಿಯಲ್ಲಿರಬೇಕು ಅಥವಾ 1971ರ ಮಾರ್ಚ್ 24ರ ಒಳಗಾಗಿ ಮತದಾರರ ಗುರುತಿನ ಚೀಟಿಯಲ್ಲಿ ಹೆಸರು ನೋಂದಣಿಯಾಗಿರಬೇಕು. ಇಲ್ಲವಾದರೆ ಭೂಹಿಡುವಳಿ ದಾಖಲೆ, ಪಾಸ್‌ಪೋರ್ಟ್, ಶಾಶ್ವತ ವಾಸ್ತವ್ಯ ಪ್ರಮಾಣಪತ್ರ ಇವುಗಳಲ್ಲಿ ಯಾವುದಾದರೊಂದನ್ನು ಒದಗಿಸಿ ತಾವು ಅಕ್ರಮ ವಲಸಿಗರಲ್ಲ ಎಂದು ಸಾಬೀತು ಮಾಡಬೇಕಿತ್ತು.

2017ರಲ್ಲಿ ಮೊದಲ ಬಾರಿಗೆ ಎನ್‌ಆರ್‌ಸಿ ವರದಿ ಬಿಡುಗಡೆ ಮಾಡಿದಾಗ 1.9 ಕೋಟಿ ಜನರ ಹೆಸರು ರಿಜಿಸ್ಟ್ರಿಯಲ್ಲಿ ಸೇರಿತ್ತು. ಆಗ ಹೆಸರು ಸೇರದೇ ಇದ್ದವರಿಗೆ ಮತ್ತೊಂದು ಅವಕಾಶ ನೀಡಲಾಗಿತ್ತು. ಅದರನ್ವಯ 3.29 ಕೋಟಿ ಜನ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಸಂಬಂಧಿಸಿದ ಕರಡು ಪಟ್ಟಿ ಬಿಡುಗಡೆ ಆಗಿದೆ. ಇದರಲ್ಲಿ ಸೂಕ್ತ ದಾಖಲೆ ಸಲ್ಲಿಸದ 40 ಲಕ್ಷ ಜನರನ್ನು ಪಟ್ಟಿಯಿಂದ ಹೊರಗಿಡಲಾಗಿದೆ
First published:August 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...