ಅಮಿತಾಭ್​ ಬಚ್ಚನ್ ಮನೆ ಜಲ್ಸಾ ಸೀಲ್​​ಡೌನ್ ಮಾಡಿದ ಅಧಿಕಾರಿಗಳು, ಔಷಧ ಸಿಂಪಡನೆ

ಕೊರೋನಾ ಪರೀಕ್ಷೆ ವೇಳೆ ಐಶ್ವರ್ಯಾ ರೈ ಬಚ್ಚನ್​, ಆರಾಧ್ಯಾ ಬಚ್ಚನ್​ ಹಾಗೂ ಜಯಾ ಬಚ್ಚನ್​ಗೆ ಕೊರೋನಾ ನೆಗೆಟಿವ್​ ಬಂದಿದೆ ಎಂದು ಆಸ್ಪತ್ರೆ ಮೂಲಗಳು ನ್ಯೂಸ್​18ಗೆ ತಿಳಿಸಿವೆ ಎನ್ನಲಾಗಿದೆ.

news18-kannada
Updated:July 12, 2020, 12:08 PM IST
ಅಮಿತಾಭ್​ ಬಚ್ಚನ್ ಮನೆ ಜಲ್ಸಾ ಸೀಲ್​​ಡೌನ್ ಮಾಡಿದ ಅಧಿಕಾರಿಗಳು, ಔಷಧ ಸಿಂಪಡನೆ
ಅಮಿತಾಭ್​ ಮನೆ
  • Share this:
ಮುಂಬೈ: ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಹಾಗೂ ಅಭಿಷೇಕ್​ ಬಚ್ಚನ್​ಗೆ ಕೊರೋನಾ ಪಾಸಿಟಿವ್​ ಬಂದಿದೆ. ಈ ಹಿನ್ನೆಲೆಯಲ್ಲಿ ಬಚ್ಚನ್​ ಮನೆ ಜಲ್ಸಾ ಹಾಗೂ ಜನಕ್​ಅನ್ನು ಅಧಿಕಾರಿಗಳು ಸೀಲ್​ಡೌನ್​ ಮಾಡಿದ್ದಾರೆ.

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಮಗ ಅಭಿಷೇಕ್​ ಬಚ್ಚನ್​ ಅವರಿಗೆ ಕೊರೋನಾ ಸೋಂಕು ಇರುವುದು ಶನಿವಾರ ದೃಢಪಟ್ಟಿತ್ತು. "ನನಗೆ ಕೊರೋನಾ ಪಾಸಿಟಿವ್ ಬಂದಿದೆ. ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬದ ಸದಸ್ಯರು ಮತ್ತು ಸಿಬ್ಬಂದಿವರ್ಗದವರ ಪರೀಕ್ಷೆ ನಡೆಯುತ್ತಿದೆ. ಅದರ ಫಲಿತಾಂಶ ಬರಬೇಕಿದೆ. ಕಳೆದ 10 ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ,” ಎಂದು ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿದ್ದರು. ಈ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಅಭಿಷೇಕ್ ಬಚ್ಚನ್​ ತಮಗೂ ಕೊರೋನಾ ವೈರಸ್​ ಇರುವ ವಿಚಾರವನ್ನು ಒಪ್ಪಿಕೊಂಡಿದ್ದರು.

ಕೊರೋನಾ ಪರೀಕ್ಷೆ ವೇಳೆ ಐಶ್ವರ್ಯಾ ರೈ ಬಚ್ಚನ್​, ಆರಾಧ್ಯಾ ಬಚ್ಚನ್​ ಹಾಗೂ ಜಯಾ ಬಚ್ಚನ್​ಗೆ ಕೊರೋನಾ ನೆಗೆಟಿವ್​ ಬಂದಿದೆ ಎಂದು ಆಸ್ಪತ್ರೆ ಮೂಲಗಳು ನ್ಯೂಸ್​18ಗೆ ತಿಳಿಸಿವೆ ಎನ್ನಲಾಗಿದೆ. ಈ ಮಧ್ಯೆ ಅಮಿತಾಬ್​ ಬಚ್ಚನ್​ ಮನೆ ಜಲ್ಸಾ ಹಾಗೂ ಜನಕ್​ಅನ್ನು ಅಧಿಕಾರಿಗಳು ಸೀಲ್​ಡೌನ್​ ಮಾಡಿದ್ದಾರೆ, ಅಮಿತಾಭ್​ ಇರುವ ಮನೆ ಭಾಗವನ್ನು ಕಂಟೆನ್​ಮೆಂಟ್​ ಜೋನ್​ ಎಂದು ಘೋಷಣೆ ಮಾಡಲಾಗಿದೆ.

ಅಮಿತಾಭ್ ಬಚ್ಚನ್ ಅವರ ಕೈಯಲ್ಲಿ ಹಲವು ಪ್ರಾಜೆಕ್ಟ್​ಗಳಿವೆ. ಶೂಜಿತ್ ಸಿರ್ಕಾರ್ ಅವರ ‘ಗುಲಾಬೊ ಸಿಬಾಬೊ’ ಹಾಸ್ಯ ಚಿತ್ರದಲ್ಲಿ ಅಭಿನಯಿಸಿದ್ದು ಇತ್ತೀಚೆಗಷ್ಟೇ ಪ್ರೈಮ್​ನಲ್ಲಿ ರಿಲೀಸ್​ ಆಗಿದೆ. ‘ಚೆಹರೆ’, ‘ಬ್ರಹ್ಮಾಸ್ತ್ರ’, ‘ಝಂಡ್’ ಅವರ ಮುಂಬರುವ ಸಿನಿಮಾಗಳಾಗಿವೆ. ಇದರ ಜೊತೆಗೆ ಬಿಗ್ ಬಿ ಅವರು ಕೌನ್ ಬನೇಗ ಕರೋಡ್​ಪತಿ ರಿಯಾಲಿಟಿ ಶೋನ 12ನೇ ಸೀಸನ್​ನಲ್ಲೂ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿಷೇಕ್​ ಬಚ್ಚನ್​ ನಟೆನೆಯ ‘ಬ್ರೆತ್​: ಇನ್​ ಟು ದಿ ಶ್ಯಾಡೊ’ ವೆಬ್​ ಸಿರೀಸ್​​ ಜುಲೈ 10ರಂದು ಅಮೆಜಾನ್​ ಪ್ರೈಮ್​ ನಲ್ಲಿ ಬಿಡುಗಡೆಯಾಗಿದೆ.
Published by: Rajesh Duggumane
First published: July 12, 2020, 11:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading