Mission Paani: ಮಿಷನ್​ ಪಾನಿ ಅಭಿಯಾನ ಒಂದು ಐತಿಹಾಸಿಕ ಹೆಜ್ಜೆ; ಅಮಿತಾಭ್​ ಬಚ್ಚನ್​

ಜಲಜಾಗೃತಿಯಿಂದ ದೇಶದ ಅಭಿವೃದ್ಧಿಯಾಗುತ್ತದೆ. ದೇಶದ ಪ್ರಗತಿಗಾಗಿ ಇಂತಹ ಅಭಿಯಾನಗಳು ಬೇಕು- ಅಮಿತಾಭ್​ ಬಚ್ಚನ್​

Latha CG | news18
Updated:August 27, 2019, 3:17 PM IST
Mission Paani: ಮಿಷನ್​ ಪಾನಿ ಅಭಿಯಾನ ಒಂದು ಐತಿಹಾಸಿಕ ಹೆಜ್ಜೆ; ಅಮಿತಾಭ್​ ಬಚ್ಚನ್​
ಮಿಷನ್​ ಪಾನಿ ಅಭಿಯಾನ
Latha CG | news18
Updated: August 27, 2019, 3:17 PM IST
ಮುಂಬೈ(ಆ.27):  ಹಾರ್ಪಿಕ್‌ ಹಾಗೂ ನ್ಯೂಸ್ 18 ಕನ್ನಡ ಸಹಯೋಗದಲ್ಲಿ ಮಿಷನ್ ಪಾನಿ ಮೆಗಾ ಅಭಿಯಾನ ನಡೆಯುತ್ತಿದೆ. ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಅಭಿಯಾನದ ಮೂಲ ಉದ್ದೇಶ ಜಲ ಸಂರಕ್ಷಣೆ. ಈಗಾಗಲೇ ಹಲವು ಬಾಲಿವುಡ್‌ ಸ್ಟಾರ್‌ಗಳು ಮಿಷನ್ ಪಾನಿ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

ಮಿಷನ್​ ಪಾನಿ ಅಭಿಯಾನ ಉದ್ಘಾಟಿಸಿ ಬಿಗ್​ ಬಿ ಅಮಿತಾಭ್​ ಬಚ್ಚನ್​ ಮಾತನಾಡಿದರು. ನ್ಯೂಸ್​18 ಒಂದು ಉತ್ತಮ ಕಾರ್ಯಕ್ರಮ ಆರಂಭಿಸಿದೆ. ಅದಕ್ಕೆ ನನ್ನ ಕಡೆಯಿಂದ ಧನ್ಯವಾದ. 'ಮಿಷನ್​ ಪಾನಿ' ನ್ಯೂಸ್​ 18 ಮೆಗಾ ಕ್ಯಾಂಪೇನ್​. ಜಲಜಾಗೃತಿಯಿಂದ ದೇಶದ ಅಭಿವೃದ್ಧಿಯಾಗುತ್ತದೆ. ದೇಶದ ಪ್ರಗತಿಗಾಗಿ ಇಂತಹ ಅಭಿಯಾನಗಳು ಬೇಕು. ಜಲಜಾಗೃತಿಗಾಗಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ನ್ಯೂಸ್​ 18 ಆರಂಭಿಸಿರುವ ಈ ಅಭಿಯಾನಕ್ಕೆ ಧನ್ಯವಾದಗಳು ಎಂದು ಹೇಳಿದರು.

Mission Paani | ಮಕ್ಕಳಿಗೆ ನೀರಿನ ಉಳಿತಾಯದ ಪಾಠ ಹೇಳಿಕೊಡಿ: ಶಾಲೆಗಳಿಗೆ ಸಿಬಿಎಸ್ಇ ನಿರ್ದೇಶನ

ನ್ಯೂಸ್​18ಗೆ ಕೇಂದ್ರ ಜಲ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಅಭಿನಂದನೆ ಸಲ್ಲಿಸಿದರು. ಮಿಷನ್​ ಪಾನಿ ಅಭಿಯಾನ ಉತ್ತಮ ಜಾಗೃತಿ ಅಭಿಯಾನ. ನೀರು ಬಳಕೆ ಬಗ್ಗೆ ಜನರಲ್ಲಿ ಅರಿವು ಮೂಡಬೇಕಿದೆ. ಗ್ರಾಮೀಣ ಭಾರತದಲ್ಲಿ ನೀರನ್ನು ಉಳಿಸುವ ಕುರಿತು ಅರಿವು ಮೂಡಿಸಬೇಕು. ಕೃಷಿ ಪದ್ಧತಿಯಲ್ಲಿ ಸುಧಾರಣೆಯಾಗಬೇಕು. ಈ ಪ್ರಯತ್ನದಲ್ಲಿ ಸರ್ಕಾರ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

First published:August 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...