ಚಿತ್ರೀಕರಣದ ವೇಳೆ ಕುಸಿದು ಬಿದ್ದ ಬಿಗ್​ ಬಿ ಅಮಿತಾಭ್​: ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡ

news18
Updated:March 14, 2018, 6:30 PM IST
ಚಿತ್ರೀಕರಣದ ವೇಳೆ ಕುಸಿದು ಬಿದ್ದ ಬಿಗ್​ ಬಿ ಅಮಿತಾಭ್​: ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡ
news18
Updated: March 14, 2018, 6:30 PM IST
ನ್ಯೂಸ್ 18 ಕನ್ನಡ

ಬಾಲಿವುಡ್​ನ ಬಿಗ್​ ಬಿ ಅಮಿತಾಭ್​ ಬಚ್ಚನ್​ ಸಿನಿಮಾವೊಂದರ ಚಿತ್ರೀಕರಣದಲ್ಲಿದ್ದಾಗ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ಜೋಧ್​ಪುರದಲ್ಲಿ ನಡೆಯುತ್ತಿದ್ದ ಸಿನಿಮಾದ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ.

ಅಮಿತಾಭ್​ ಅವರಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಮುಂಬೈಗೆ ಚಾರ್ಟರ್​ ವಿಮಾನವನ್ನು ಕಳುಹಿಸಿ, ಅಲ್ಲಿಂದ ವೈದ್ಯರನ್ನು ಜೋಧ್​ಪುರಕ್ಕೆ ಕರೆತರಲಾಗಿದೆ. ಸದ್ಯ ಅಮಿತಾಭ್​ ಅವರು ಉಳಿದುಕೊಂಡಿರುವ ಸ್ಥಿತ್​ ಹೋಟೆಲ್​ನಲ್ಲಿ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

'ಠಗ್ಸ್​ ಆಫ್​ ಹಿಂದೂಸ್ಥಾನಿ' ಸಿನಿಮಾದ ಚಿತ್ರೀಕರಣದ ವೇಳೆ ಅಮಿತಾಭ್​ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡು, ಅಲ್ಲೇ ಕುಸಿದು ಬಿದ್ದಿದ್ದಾರೆ. 75 ವರ್ಷದ ಬಚ್ಚನ್​ ಈ ಸಿನಿಮಾದಲ್ಲಿ ಅಮೀರ್​ ಖಾನ್​, ಕತ್ರಿನಾ ಕೈಫ್​ ಹಾಗೂ ಫಾತಿಮಾ ಸನಾ ಅವರ ಜತೆ ತೆರೆ ಹಂಚಿಕೊಳ್ಳಲಿದ್ದಾರೆ.

ಯಶ್​ರಾಜ್​ ಫಿಲ್ಮ್ಸ್​ನ ಬ್ಯಾನರ್​ ಅಡಿ ಈ ಸಿನಿಮಾ ನಿರ್ಮಾಣಗೊಳ್ಳುತ್ತಿದ್ದು, 'ಧೂಮ್​ 3' ಸಿನಿಮಾದ ನಿರ್ದೇಶಕ ವಿಜಯ್​ ಕೃಷ್ಣ ಆಚಾರ್ಯ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಈಗಾಗಲೇ ಥೈಲೆಂಡ್​ನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಅಮಿತಾಭ್​ ಇದು ನನ್ನ ವೃತ್ತಿ ಜೀವನದಲ್ಲೇ ಅತ್ಯಂತ ಕಷ್ಟಕರವಾದ ಚಿತ್ರೀಕರಣ ಎಂದಿದ್ದರು.

ಈ ಚಿತ್ರದಲ್ಲಿ ಅನೇಕ ಸಾಹಸ ದೃಶ್ಯಗಳಿದ್ದು ಅದಕ್ಕಾಗಿ ಕತ್ರಿನಾ ಕೈಫ್ ಕೂಡ ಸಾಕಷ್ಟು ತಾಲೀಮಿನಲ್ಲಿ ತೊಡಗಿಕೊಂಡಿದ್ದಾರೆ.

 
Loading...
Rewind and repeat ..... #thugslife 🌟💃🦄


A post shared by Katrina Kaif (@katrinakaif) on
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ