ತಾನಿಷ್ಕ್​ನಿಂದ ಬಾಲಿವುಡ್​ವರೆಗೆ ಬಿಸಿಬಿಸಿ ವಿಚಾರಗಳ ಬಗ್ಗೆ ಅಮಿತ್ ಶಾ ಮಾತು: ರಾತ್ರಿ 9ಕ್ಕೆ ಸಂದರ್ಶನ ವೀಕ್ಷಿಸಿ

ಸಿಎನ್ಎನ್-ನ್ಯೂಸ್18 ಮುಖ್ಯ ಸಂಪಾದಕ ರಾಹುಲ್ ಜೋಷಿ ಅವರಿಗೆ ಅಮಿತ್ ಶಾ ನೀಡಿದ ಸಂದರ್ಶನ ನೆಟ್ವರ್ಕ್18 ಗ್ರೂಪ್​ನ ಎಲ್ಲಾ ವಾಹಿನಿಗಳಲ್ಲೂ ಇಂದು ರಾತ್ರಿ 9ಕ್ಕೆ ಪ್ರಸಾರವಾಗಲಿದೆ.

news18
Updated:October 17, 2020, 5:39 PM IST
ತಾನಿಷ್ಕ್​ನಿಂದ ಬಾಲಿವುಡ್​ವರೆಗೆ ಬಿಸಿಬಿಸಿ ವಿಚಾರಗಳ ಬಗ್ಗೆ ಅಮಿತ್ ಶಾ ಮಾತು: ರಾತ್ರಿ 9ಕ್ಕೆ ಸಂದರ್ಶನ ವೀಕ್ಷಿಸಿ
ಅಮಿತ್ ಶಾ ಸಂದರ್ಶನ
  • News18
  • Last Updated: October 17, 2020, 5:39 PM IST
  • Share this:
ನವದೆಹಲಿ(ಅ. 17): ದೇಶದೆಲ್ಲೆಡೆ ಬಿಸಿಬಿಸಿ ಸುದ್ದಿಯಾಗಿರುವ ಅನೇಕ ವಿಚಾರಗಳ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ನ್ಯೂಸ್18 ವಾಹಿನಿಯಲ್ಲಿ ಮಾತನಾಡಲಿದ್ಧಾರೆ. ವಾಹಿನಿಯ ಪ್ರಧಾನ ಸಂಪಾದಕ ರಾಹುಲ್ ಜೋಷಿ ಜೊತೆಗಿನ ನೇರಾನೇರ ಸಂದರ್ಶನದಲ್ಲಿ ಅಮಿತ್ ಶಾ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ. ಇಂದು ರಾತ್ರಿ 9ಕ್ಕೆ ಸಂಪೂರ್ಣ ಸಂದರ್ಶನ ಪ್ರಸಾರವಾಗಲಿದೆ.

ಟಿಆರ್​ಪಿ ಹಗರಣ, ತಾನಿಷ್ಕ್ ಜಾಹೀರಾತು ವಿವಾದ, ಕಾಶ್ಮೀರ ವಿಚಾರ, ಬಾಲಿವುಡ್ ಪ್ರಕರಣಗಳು, ಕೇಂದ್ರದ ಕೃಷಿ ಕಾಯ್ದೆಗಳು, ಬಂಗಾಳದ ಘಟನೆಗಳು, ಬಿಹಾರ ಚುನಾವಣೆ, ಕೊರೋನಾ ವೈರಸ್ ಸಮಸ್ಯೆ ಹೀಗೆ ಹಲವು ಜ್ವಲಂತ ವಿಚಾರಗಳ ಸಂಬಂಧ ಕಠಿಣ ಪ್ರಶ್ನೆಗಳಿಗೆ ಅಮಿತ್ ಶಾ ಉತ್ತರ ಏನು ಎಂಬುದನ್ನು ರಾತ್ರಿ ನಿರೀಕ್ಷಿಸಿ. ಬಿಹಾರ ಚುನಾವಣೆಯಲ್ಲಿ ಮಿತ್ರಪಕ್ಷ ಜೆಡಿಯುಗಿಂತ ಬಿಜೆಪಿ ಹೆಚ್ಚು ಸ್ಥಾನ ಗೆದ್ದರೆ ಸಿಎಂ ಯಾರಾಗುತ್ತಾರೆ ಎಂದು ಕೇಳಲಾದ ಪ್ರಶ್ನೆಗೆ ಅಮಿತ್ ಶಾ, ಅವರು ಯಾರೆಷ್ಟೇ ಗೆದ್ದರೂ ನಿತೀಶ್ ಕುಮಾರ್ ಅವರೇ ಸಿಎಂ ಎಂದು ಸ್ಪಷ್ಟಪಡಿಸಿದ್ದಾರೆ. ಅಮಿತ್ ಶಾ ಈ ಸಂದರ್ಶನದಲ್ಲಿ ಇಂಥ ಹಲವು ಪ್ರಮುಖ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.


ಸರಿಯಾಗಿ ಒಂದು ವರ್ಷದ ಹಿಂದೆ (2019, ಅ. 17) ರಾಹುಲ್ ಜೋಷಿ ಅವರಿಗೆ ಅಮಿತ್ ಶಾ ಸಂದರ್ಶನ ನೀಡಿದ್ದರು. ಆ ಸಂದರ್ಭದಲ್ಲಿ ಬಿಹಾರದ ಬಿಜೆಪಿ-ಜೆಡಿಯು ಮೈತ್ರಿಕೂಟಕ್ಕೆ ನಿತೀಶ್ ಕುಮಾರ್ ಅವರೇ ನಾಯಕರು ಎಂದು ಶಾ ಸ್ಪಷ್ಟಪಡಿಸಿದ್ದರು. ಈಗ ವರ್ಷದ ಬಳಿಕ ಶಾ ಅವರು ನ್ಯೂಸ್18ಗೆ ಮತ್ತೆ ಸಂದರ್ಶನ ನೀಡುತ್ತಿದ್ದಾರೆ. ನ್ಯೂಸ್18 ಕನ್ನಡವೂ ಸೇರಿದಂತೆ ನೆಟ್ವರ್ಕ್ 18 ಗ್ರೂಪ್​ನ ಎಲ್ಲಾ ವಾಹಿನಿಗಳಲ್ಲೂ ಅಮಿತ್ ಶಾ ಅವರ ಸಂದರ್ಶನ ರಾತ್ರಿ 9ರಿಂದ ಪ್ರಸಾರವಾಗಲಿದೆ.
Published by: Vijayasarthy SN
First published: October 17, 2020, 5:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading