'ಶಾ' ಪರ್ಶಿಯನ್ ಪದ​, ಬಿಜೆಪಿ ಮೊದಲು ತನ್ನ ಪಕ್ಷದ ಅಧ್ಯಕ್ಷನ ಹೆಸರು ಬದಲಿಸಲಿ; ಇತಿಹಾಸಕಾರ ಇರ್ಫಾನ್ ಹಬೀಬ್

'ಶಾ' ಎಂಬ ಪದ ಪರ್ಶಿಯನ್ ಮೂಲದ್ದು, ಗುಜರಾತಿನದ್ದಲ್ಲ, ಹೀಗಾಗಿ ನಿಮ್ಮ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೆಸರನ್ನು ಬದಲಾಯಿಸಿ ಎಂದು ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾಗಿರುವ, ಇತಿಹಾಸಕಾರ ಹಬೀಬ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

HR Ramesh | news18
Updated:November 11, 2018, 6:18 PM IST
'ಶಾ' ಪರ್ಶಿಯನ್ ಪದ​, ಬಿಜೆಪಿ ಮೊದಲು ತನ್ನ ಪಕ್ಷದ ಅಧ್ಯಕ್ಷನ ಹೆಸರು ಬದಲಿಸಲಿ; ಇತಿಹಾಸಕಾರ ಇರ್ಫಾನ್ ಹಬೀಬ್
'ಶಾ' ಎಂಬ ಪದ ಪರ್ಶಿಯನ್ ಮೂಲದ್ದು, ಗುಜರಾತಿನದ್ದಲ್ಲ, ಹೀಗಾಗಿ ನಿಮ್ಮ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೆಸರನ್ನು ಬದಲಾಯಿಸಿ ಎಂದು ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾಗಿರುವ, ಇತಿಹಾಸಕಾರ ಹಬೀಬ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
HR Ramesh | news18
Updated: November 11, 2018, 6:18 PM IST
ನ್ಯೂಸ್ 18 ಕನ್ನಡ

ಆಗ್ರಾ (ನ.11): ಬಿಜೆಪಿ ಮೊದಲು ತನ್ನ ಪಕ್ಷದ ಮುಖಂಡರ ಹೆಸರನ್ನು ಬದಲಿಸಿಕೊಳ್ಳಲಿ ಎಂದು ಹೇಳುವ ಮೂಲಕ ಇತಿಹಾಸಕಾರ ಇರ್ಫಾನ್ ಹಬೀಬ್​, ಬಿಜೆಪಿ ತನ್ನ ಆಡಳಿತವಿರುವ ರಾಜ್ಯಗಳಲ್ಲಿ ವಿವಿಧ ಪ್ರದೇಶಗಳ ಹೆಸರು ಬದಲಾವಣೆ ಬಗ್ಗೆ ವ್ಯಂಗ್ಯವಾಡಿದರು.

'ಶಾ' ಎಂಬ ಪದ ಪರ್ಶಿಯನ್ ಮೂಲದ್ದು, ಗುಜರಾತಿನದ್ದಲ್ಲ, ಹೀಗಾಗಿ ನಿಮ್ಮ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೆಸರನ್ನು ಬದಲಾಯಿಸಿ ಎಂದು ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾಗಿರುವ, ಇತಿಹಾಸಕಾರ ಹಬೀಬ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲ 'ಗುಜರಾತ್' ಕೂಡ ಪರ್ಶಿಯನ್ ಮೂಲದ ಹೆಸರು. ಮೊದಲಿದು ಗುರ್ಜರಾತ್ರ ಎಂದು ಕರೆಯಲ್ಪಡುತ್ತಿತ್ತು. ಹೀಗಾಗಿ ರಾಜ್ಯಕ್ಕೂ ಮರುನಾಮಕರಣ ಮಾಡಿ ಎಂದು ಹೇಳಿದ್ದಾರೆ.

"ಆರ್‌ಎಸ್ಎಸ್ ಹಿಂದುತ್ವ ನೀತಿಗೆ ಅನುಗುಣವಾಗಿ ಬಿಜೆಪಿ ಸರ್ಕಾರ, ಉಚ್ಚಾರಣೆ, ಅರ್ಥದಲ್ಲಿ ಮುಸ್ಲಿಂ ಪದವಿರುವ ಊರುಗಳ ಹೆಸರನ್ನು ಮರುನಾಮಕರಣ ಮಾಡುತ್ತಲೇ ಇದೆ. ನೆರೆಯ ದೇಶ ಪಾಕಿಸ್ತಾನದ ಇಸ್ಲಾಮಿಕ್ ಅಲ್ಲದೆ ಹೆಸರನ್ನು ಬದಲಾಯಿಸಿದಂತೆ, ಬಿಜೆಪಿ ಮತ್ತು ಬಲಪಂಥೀಯ ಬೆಂಬಲಿಗರು ಹಿಂದುಯೇತರವಾದ ಎಲ್ಲವನ್ನು ವಿಶೇಷವಾಗಿ ಇಸ್ಲಾಮಿಕ್ ಮೂಲದ ಹೆಸರನ್ನು ಬದಲಿಸಲು ಬಯಸುತ್ತಿದ್ದಾರೆ," ಎಂದು ಟೀಕಿಸಿದರು.

ಇದನ್ನು ಓದಿ: ಒಂದು ವರ್ಷದಲ್ಲಿ 25 ಸ್ಥಳಗಳ ಹೆಸರು ಬದಲಿಸಿದ ಕೇಂದ್ರ ಸರ್ಕಾರ; ಮರುನಾಮಕರಣ ಪಟ್ಟಿಯಲ್ಲಿ ಪಶ್ಚಿಮ ಬಂಗಾಳ, ಅಲಹಾಬಾದ್

ಆಗ್ರಾ ನಗರವನ್ನು ಆಗ್ರಾವನ ಎಂದು ಮರು ನಾಮಕರಣ ಮಾಡಬೇಕು ಎಂದು ಬಿಜೆಪಿಯಿಂದ ಐದು ಬಾರಿ ಶಾಸಕರಾಗಿರುವ ಜಗನ್ ಪ್ರಸಾದ್ ಗರ್ಗ್, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಇರ್ಫಾನ್ ಈ ಹೇಳಿಕೆಗಳನ್ನು ಹೇಳಿದ್ದಾರೆ. ಆಗ್ರಾವನ ಮಹಾಭಾರತದ ಹೆಸರು. ಅದನ್ನು ಮೊಗಲ್ ಅರಸ ಅಕ್ಬರ್ ಬಲಾಯಿಸಿ ಆಗ್ರಾ ಎಂದು ಕರೆಯುವಂತೆ ಸೂಚಿಸಿದ್ದ. ಹೀಗಾಗಿ ಆಗ್ರಾ ನಗರಕ್ಕೆ ಮೂಲ ಹೆಸರನ್ನು ಇಡಿ ಎಂದು ಸಚಿವರು ಪತ್ರ ಮುಖೇನ ಮನವಿ ಮಾಡಿದ್ದರು.
First published:November 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ