ಗಡಿಯಲ್ಲಿ ಕಪಿಚೇಷ್ಠೆ ಮಾಡಿದ್ರೆ ಸರ್ಜಿಕಲ್ ಸ್ಟ್ರೈಕ್; ಪಾಕ್​​ಗೆ Amit Shah ಎಚ್ಚರಿಕೆ

ಭಾರತದ ಗಡಿಯಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆಗಳಿಗೆ ಮುಂದಾದ್ರೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ (Surgical Strike) ನಡೆಸಲು ನಾವು ಹಿಂದೇಟು ಹಾಕಲ್ಲ ಎಂದು ಅಮಿತ್ ಶಾ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಅಮಿತ್ ಶಾ

ಅಮಿತ್ ಶಾ

 • Share this:
  ಪಣಜಿ: ಗೋವಾ (Goa) ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ(Union Home Minister Amit Shah) ವೈರಿ ಪಾಕಿಸ್ತಾ(Pakistan)ನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಗಡಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳ ಕುರಿತು ಪ್ರತಿಕ್ರಿಯಿಸಿರುವ ಅಮಿತ್ ಶಾ, ಜಮ್ಮು-ಕಾಶ್ಮೀರ ಆಂತರಿಕ ವಿಷಯಗಳಲ್ಲಿ ಪಾಕಿಸ್ತಾನ ಮೂಗು ತೂರಿಸುವ ತಪ್ಪು ಮಾಡೋದು ಬೇಡ. ನೀವು ನಿಮ್ಮ ಮಿತಿಯಲ್ಲಿದ್ರೆ ಒಳಿತು. ಭಾರತದ ಗಡಿಯಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆಗಳಿಗೆ ಮುಂದಾದ್ರೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ (Surgical Strike) ನಡೆಸಲು ನಾವು ಹಿಂದೇಟು ಹಾಕಲ್ಲ ಎಂದು ಅಮಿತ್ ಶಾ ಎಚ್ಚರಿಕೆ ಸಂದೇಶ ನೀಡಿದ್ದಾರೆ.

  ಗಡಿಯಲ್ಲಿ ದಾಳಿ ಸಹಿಸಲ್ಲ  

  ದಕ್ಷಿಣ ಗೋವಾದ ದರ್ಬಂಡೋದಾದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ (ಎನ್‍ಎಫ್‍ಎಸ್‍ಯು NFSU) ಅಡಿಪಾಯ ಹಾಕಿದರು. ನಂತರ ಕಾರ್ಯಕ್ರಮ ಉದ್ದೇಶಿಸಿ ಅಮಿತ್ ಶಾ ಮಾತನಾಡಿದರು. ದೇಶದ ಗಡಿಯಲ್ಲಿ ನಡೆಯುತ್ತಿರುವ ದಾಳಿಯನ್ನು ನಾವು ಸಹಿಸುವದಿಲ್ಲ. ಪೂಂಛ್ ನಲ್ಲಿ ಉಗ್ರರ ದಾಳಿ ನಡೆದಾಗ ಭಾರತ ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ನೀಡಿತ್ತು. ಈ ಮೂಲಕ ಭಾರತ ತನ್ನ ಗಡಿಯನ್ನು ಹೇಗೆ ರಕ್ಷಿಸಿಕೊಳ್ಳುತ್ತೆ ಎಂಬುದನ್ನು ಜಗತ್ತಿಗೆ ತೋರಿಸಿತ್ತು. ಮೊದಲ ಬಾರಿಗೆ ನರೇಂದ್ರ ಮೋದಿ ಮತ್ತ ಮನೋಹರ್ ಪರಿಕ್ಕರ್ ನೇತೃತ್ವದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸುವ ಮೂಲಕ ಭಾರತದ ಗಡಿಗಳ ರಕ್ಷಣೆ ಮತ್ತು ದೇಶದ ಗೌರವವನ್ನು ಸಾಬೀತು ಮಾಡಿದ್ದರು ಎಂದು ಹೇಳಿದರು.

  ಮನೋಹರ್ ಪರಿಕ್ಕರ್ ಸ್ಮರಣೆ

  ಇದೇ ವೇಳೆ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನು ಅಮಿತ್ ಶಾ ನೆನನಪು ಮಾಡಿಕೊಂಡರು. ಇಡೀ ದೇಶ ಮನೋಹರ್ ಪರಿಕ್ಕರ್ ಅವರ ಎರಡು ಕೆಲಸಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಪರಿಕ್ಕರ್ ಅವರು ಗೋವಾದ ಖ್ಯಾತಿಯನ್ನು ಹೆಚ್ಚಿಸಿದ್ದರು. ಎರಡನೇಯದಾಗಿ ಮೂರು ಸೇನೆಗಳಿಗೆ ಒನ್ ರ್ಯಾಂಕ್, ಒನ್ ಪೆನ್ಷನ್ ನೀಡಿದರು. ಇದರ ಜೊತೆಗೆ ಗೋವಾದಲ್ಲಿ ನೀಡಿದ ಆಡಳಿತವನ್ನು ಇಲ್ಲಿನ ಜನರು ಸ್ಮರಿಸಿಕೊಳ್ಳುತ್ತಾರೆ ಎಂದರು.

  ಚುನಾವಣೆ ತಯಾರಿಯಲ್ಲಿ ಅಮಿತ್ ಶಾ

  ಮುಂದಿನ ವರ್ಷವೇ ಚುನಾವಣೆ ಇರೋದರಿಂದ ಸ್ಥಳೀಯ ಹಿರಿಯ ಮುಖಂಡರ ಜೊತೆ ಅಮಿತ್ ಶಾ ಸಭೆ ನಡೆಸಲಿದ್ದಾರೆ. ಗೋವಾ ರಾಜ್ಯ ಬಿಜೆಪಿ ಕಮೀಟಿ, ಶಾಸಕರು, ಪದಾಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರ ಜೊತೆಯಲ್ಲಿ ಅಮಿತ್ ಶಾ  ಚರ್ಚೆ ನಡೆಸಲಿದ್ದಾರೆ. ಈ ಬೈಠಕ್ ನಲ್ಲಿ ರಾಜ್ಯ ಚುನಾವಣೆ ಬಿಜೆಪಿ ಉಸ್ತುವಾರಿ, ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಈ ಬೈಠಕ್ ನಲ್ಲಿ ಭಾಗಿಯಾಗಲಿದ್ದಾರೆ.

  ಗೋವಾ ಪ್ರವೇಶಕ್ಕೆ ಟಿಎಂಸಿ, ಎಎಪಿ ತಯಾರಿ

  ಗೋವಾದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ (Goa Assembly Election) ನಡೆಯಲಿದೆ. ಆದ್ರೆ ಈ ಬಾರಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ- TMC) ಮತ್ತು ದೆಹಲಿ  ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ-AAP) ಗೋವಾ ಅಖಾಡಕ್ಕೆ ಧುಮಕಲಿವೆ. ಈಗಾಗಲೇ ಕಾಂಗ್ರೆಸ್ ನಿಂದ ಹೊರ ಬಂದಿದ್ದ ಮಾಜಿ ಸಿಎಂ ಲುಯಿಜಿನೋ ಫಲೆರೋ (Luizinho Faleiro) ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಮೂಲಕ ಗೋವಾ ಚುನಾವಣೆಗೆ ಸ್ಪರ್ಧಿಸುವ ಸುಳಿವನ್ನು ಮಮತಾ ಬ್ಯಾನರ್ಜಿ ನೀಡಿದ್ದಾರೆ.  ಮಮತಾ ಬ್ಯಾನರ್ಜಿ (Mamata Banerjee) ಅವರೇ ಗೋವಾ ಚುನಾವಣೆಯಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

  ಇದನ್ನೂ ಓದಿ: Goons Attack Hindu Temples: ದುರ್ಗಾ ಪೂಜೆ ವೇಳೆಯೇ ಹಿಂದೂ ದೇಗುಲದ ಮೇಲೆ ದಾಳಿ; ಮೂವರು ಬಲಿ

  ಇತ್ತ ದಕ್ಷಿಣ ಭಾರತದಲ್ಲಿ ಅಧಿಕಾರ ಹಿಡಿಯುವ ಪ್ರಯತ್ನಕ್ಕೆ ಸಿಎಂ ಕೇಜ್ರಿವಾಲ್ (CM Arvind Kejriwal ಸಹ ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಚುನಾವಣೆ ಪ್ರಣಾಳಿಕೆ ರೂಪದಲ್ಲಿ ಜನರ ಮುಂದೆ ಕೆಲ ಆಶ್ವಾಸನೆಗಳನ್ನು ಎಎಪಿ ನೀಡುತ್ತಿದೆ. ಎಎಪಿ ಅಧಿಕಾರಕ್ಕೆ ಬಂದ್ರೆ ಖಾಸಗಿ ವಲಯದಲ್ಲಿ ಶೇ.80 ರಷ್ಟು ಉದ್ಯೋಗ, ಉಚಿತ ವಿದ್ಯುತ್ ಮತ್ತು ನೀ ರು ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ತರೋದಾಗಿ ಆಪ್ ಹೇಳಿಕೊಂಡಿದೆ. ಕಳೆದ ಬಾರಿ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್ ಸರ್ಕಾರ ರಚನೆ ಮಾಡುವಲ್ಲಿ ವಿಫಲವಾಗಿತ್ತು. ಈ ಬಾರಿ ಗೋವಾ ಕಾಂಗ್ರೆಸ್ ಉಸ್ತುವಾರಿಯಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರಿಗೆ ನೀಡಲಾಗಿದೆ.

  ವರದಿ: ಮೊಹ್ಮದ್​ ರಫೀಕ್​ ಕೆ 
  Published by:Kavya V
  First published: