2019ರಲ್ಲಿ ಸ್ವತಂತ್ರವಾಗಿ ಸ್ಪರ್ಧೆ: ಅಮಿತ್ ಷಾ ಪ್ರಯತ್ನಕ್ಕೆ ಮತ್ತೊಮ್ಮೆ ತಣ್ಣೀರೆರಚಿದ ಶಿವಸೇನೆ


Updated:June 6, 2018, 4:23 PM IST
2019ರಲ್ಲಿ ಸ್ವತಂತ್ರವಾಗಿ ಸ್ಪರ್ಧೆ: ಅಮಿತ್ ಷಾ ಪ್ರಯತ್ನಕ್ಕೆ ಮತ್ತೊಮ್ಮೆ ತಣ್ಣೀರೆರಚಿದ ಶಿವಸೇನೆ
ಶಿವಸೇನಾ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ

Updated: June 6, 2018, 4:23 PM IST
ನ್ಯೂಸ್ 18 ಕನ್ನಡ

ಮುಂಬೈ(ಜೂ.06): 2019ರ ಲೋಕಸಭೆ ಚುನಾವಣೆಗೂ ಮೊದಲೇ ಬಿಜೆಪಿಯು ತಮ್ಮಿಂದ ಅಸಮಾಧಾನಗೊಂಡ ಸಹಯೋಗಿಗಳನ್ನು ಮನವೊಲಿಸುವ ಯತ್ನ ಮಾಡುತ್ತಿದ್ದಾರೆ. ಇದೇ ಕಾರಣದಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬುಧವಾರದಂದು ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆಯನ್ನು ಭೇಟಿಯಾಗಲಿದ್ದರು. ಆದರೆ ಈ ಭೇಟಿಗೂ ಮೊದಲೇ ಶಿವಸೇನೆಯು 2019ರಲ್ಲಿ ನಾವು ಸ್ವತಂತ್ರವಾಗಿ ಚುನಾವಣೆ ಎದುರಿಸುತ್ತೇವೆಂಬ ಮಹತ್ವದ ಹೇಳಿಕೆ ನೀಡುವ ಮೂಲಕ ಬಿಜೆಪಿಯ ಕನಸಿಗೆ ತಣ್ಣೀರೆರಚಿದೆ. ಹೀಗಿದ್ದರೂ ಅಮಿತ್ ಷಾ ಉದ್ಧವ್ ಠಾಕ್ರೆಯನ್ನು ಭೇಟಿಯಾಗಿ ಮನವೊಲಿಸುವ ಯತ್ನ ನಡೆಸಲಿದ್ದಾರೆ. ಅದೇನಿದ್ದರೂ ಶಿವಸೇನೆಯು ಈ ಮಹತ್ವದ ಭೇಟಿಗೂ ಮೊದಲೇ 'ಮೋದಿ-ಷಾ'ರನ್ನು ಗುರಿಯಾಗಿಸಿಕೊಂಡು ಸದ್ಯ ಯಾವುದೇ ಒಪ್ಪಂದಕ್ಕೆ ತಯಾರಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದೆ.

ಭೇಟಿಗೂ ಮೊದಲು ಶಿವಸೇನೆಯು ತನ್ನ ಮುಖವಾಣಿ 'ಸಾಮ್​ನಾ' ಮೂಲಕ ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಷಾರನ್ನು ಗುರಿಯಾಗಿಸಿಕೊಂಡು ಮಹತ್ವದ ನಿರ್ಧಾರಗಳನ್ನು ಬಹಿರಂಗಪಡಿಸಿದ್ದಾರೆ. ತನ್ನ ಮುಖಪತ್ರದಲ್ಲಿ 'ತೈಲ ಬೆಲೆ ಏರಿಕೆಯಿಂದ ದೇಶದ ಜನತೆ ಅಸಮಾಧಾನ ಹೊಂದಿದ್ದಾರೆ, ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ, ಸರ್ಕಾರವು ಸಾಮ ದಾನ ಭೇದ ದಂಡ ಪ್ರಯೋಗಿಸಿದ ಬಳಿಕವೂ ರೈತರ ಬಳಿ ಮಾತುಕತೆ ನಡೆಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮೋದಿ ಹಾಗೂ ಅಮಿತ್ ಷಾ ಬರಲಿರುವ ಲೋಕಸಭಾ ಚುನಾವಣೆಯಲ್ಲಿ 350 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಕನಸು ಕಾಣುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಅಭಿಯಾನ ನಡೆಸುತ್ತಿದ್ದು, ಅವರ ಕೌಶಲ್ಯಕ್ಕೆ ಭೇಷ್​ ಎನ್ನಬೇಕು ಎಂದು ಲೇವಡಿ ಮಾಡಿದ್ದಾರೆ.

ಅಲ್ಲದೇ 2019ರ ಲೋಕಸಭಾ ಚುನಾವಣೆಯಲ್ಲಿ ಶಿವಸೇನೆಯು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು 'ಸಾಮ್​ನಾ'ದಲ್ಲಿ ಸ್ಪಷ್ಟಪಡಿಸಲಾಗಿದೆ. ಬಿಜೆಪಿಯ ಸಂಪರ್ಕ ಅಭಿಉಯಾನವನ್ನು ಗುರಿಯಾಗಿಸಿಕೊಮಡು ಬರೆದಿರುವ ಶಿವಸೇನೆ 'ಬಿಜೆಪಿ ಸಂಪರ್ಕ ಅಭಿಯಾನ ನಡೆಸುತ್ತಿರುವುದು ನಿಜ, ಆದರೆ ಜನರೊಂದಿಗೆ ಅವರು ದಿನೇ ದಿನೇ ಸಂಪರ್ಕ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಬಿಹಾರದಲ್ಲಿ ಮಹಾಮೈತ್ರಿ ಮಾಡಿಕೊಳ್ಳಲು ನಿತೀಶ್​ ಕುಮಾರ್​ರನ್ನು ಮುಂಚೂಣಿಯಲ್ಲಿಟ್ಟಿಡುವುದರ ಕುರಿತಾಗಿ ಬರೆದುಕೊಂಡಿರುವ ಶಿವಸೇನೆ ನಿತೀಶ್​ ಕುಮಾರ್​ರಿಂದ ಬಿಜೆಪಿಗೇನೂ ಉಪಯೋಗವಿಲ್ಲ ಎಂದಿದ್ದಾರೆ. ಒಂದು ವೇಳೆ ಬಿಜೆಪಿ ರಾಮಮಂದಿತರ ನಿರ್ಮಾಣ ಮಾಡಿದ್ದರೆ 350 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇತ್ತು ಎಂದೂ ಇಲ್ಲಿ ಉಲ್ಲೇಖಿಸಲಾಗಿದೆ.
First published:June 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...