Amit Shah: ಸಹಕಾರಿ ಸಚಿವ ಸ್ಥಾನ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ 8 ಕೋಟಿ ಜನರನ್ನು ಉದ್ದೇಶಿಸಿ ಅಮಿತ್ ಶಾ ಭಾಷಣ

ಪ್ರೆಸ್ ಇನ್​ಫರ್ಮೆಷನ್ ಬ್ಯೂರೋ (ಪಿಐಬಿ) ಮೂಲಕ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ದೇಶದಲ್ಲಿ ಸಹಕಾರಿ ವಲಯದಲ್ಲಿ ಹೊಸ ಕ್ರಾಂತಿ ಉಂಟು ಮಾಡಲು ಪ್ರತ್ಯೇಕ ಆಡಳಿತಾತ್ಮಕ, ಕಾನೂನು ಮತ್ತು ನೀತಿ ಚೌಕಟ್ಟನ್ನು ಒದಗಿಸಲಾಗುವುದು ಎಂದು ಹೇಳಲಾಗಿದೆ.

ಅಮಿತ್ ಶಾ.

ಅಮಿತ್ ಶಾ.

 • Share this:
  ನವದೆಹಲಿ: ಸಹಕಾರ ಸಚಿವಾಲಯದ (Cooperation Ministry) ಉಸ್ತುವಾರಿ ವಹಿಸಿಕೊಂಡಿರುವ ಗೃಹ ಸಚಿವ ಅವಿತ್ ಶಾ (Amit Shah) ಅವರು  ಸಹಕಾರಿ ಕ್ಷೇತ್ರ ಸಂಬಂಧ ಮೊದಲ ಭಾಷಣ ಮಾಡಲಿದ್ದಾರೆ. ಅಮಿತ್ ಶಾ ಅವರು ಶನಿವಾರ ದೇಶಾದ್ಯಂತ ವಿವಿಧ ಸಹಕಾರಿ ಸಂಘಗಳ 8 ಕೋಟಿ ಸದಸ್ಯರೊಂದಿಗೆ ಮಾತನಾಡಲಿದ್ದಾರೆ. ದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಸೆಖರಿತಾ ಸಮ್ಮೇಳನ, ಅಥವಾ ರಾಷ್ಟ್ರೀಯ ಸಹಕಾರಿ ಸಮಾವೇಶದಲ್ಲಿ 2,000 ಜನರು ವೈಯಕ್ತಿಕವಾಗಿ ಹಾಜರಾಗಲಿದ್ದು, 8 ಕೋಟಿ ಜನರು ವರ್ಚ್ಯುವಲ್ ಮೂಲಕ ಸಮಾವೇಶ ವೀಕ್ಷಿಸಲಿದ್ದಾರೆ.

  "ಸಹಕಾರಿ ವಲಯದಲ್ಲಿ ಪ್ರಧಾನ ಮಂತ್ರಿ ಮತ್ತು ಸಹಕಾರ ಸಚಿವಾಲಯದ ದೃಷ್ಟಿಕೋನವನ್ನು ಪ್ರದರ್ಶಿಸುವ ಮೊದಲ ಕಾರ್ಯಕ್ರಮ ಇದಾಗಿದೆ" ಎಂದು ಕಾರ್ಯಕ್ರಮ ಆಯೋಜಕ ಅಧಿಕಾರಿಯೊಬ್ಬರು ನ್ಯೂಸ್ 18 ಗೆ ತಿಳಿಸಿದರು.

  ಗೃಹ ಸಚಿವ ಅಮಿತ್ ಶಾ ಅವರು ಈ ವರ್ಷದ ಆರಂಭದಲ್ಲಿ ನಡೆದ ಸಂಪುಟ ಪುನಾರಚನೆಯಲ್ಲಿ ಸಹಕಾರ ಸಚಿವ ಉಸ್ತುವಾರಿ ವಹಿಸಿಕೊಂಡರು. ಇದುವರೆಗೆ ಸಹಕಾರಿ ಇಲಾಖೆಯು ಕೃಷಿ ಸಚಿವಾಲಯದ ಅಡಿಯಲ್ಲಿ ಇತ್ತು. ಆನಂತರ ಅದನ್ನು ಅಮಿತ್ ಶಾ ಅವರ ಉಸ್ತುವಾರಿಯೊಂದಿಗೆ ಪ್ರತ್ಯೇಕ ಸಚಿವಾಲಯವಾಗಿ ಪರಿವರ್ತಿಸಲಾಯಿತು. ಕೇರಳ-ಕೇಡರ್ ಅಧಿಕಾರಿ ದೇವೇಂದ್ರ ಕುಮಾರ್ ಸಿಂಗ್ ಅವರನ್ನು ಬುಧವಾರ ಸಚಿವಾಲಯದ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

  ಇಂಡಿಯನ್ ಫಾರ್ಮರ್ಸ್ ಫರ್ಟಿಲೈಜರ್ ಕೋ ಆಪರೇಟಿವ್ ಲಿಮಿಟೆಡ್ (ಐಎಫ್‌ಎಫ್‌ಸಿಒ) ನಂತಹ ಸಂಸ್ಥೆಗಳಿಂದ ನಡೆಸಲ್ಪಡುತ್ತಿರುವ ಸೆಖರಿತಾ ಸಮ್ಮೇಳನದಲ್ಲಿ ಈ ವಲಯದ ಸರ್ಕಾರಿ ಯೋಜನೆಗಳ ಬಗ್ಗೆ ನೇರವಾಗಿ ಮಂತ್ರಿಯಿಂದ ಕೇಳುವ ಮೊದಲ ಅವಕಾಶ ಸಿಗಲಿದೆ.

  ಸಹರ್ಕಾರಿ ವಲಯದ ಏಳಿಗೆಗೆ ತೆಗೆದುಕೊಳ್ಳುತ್ತಿರುವ ಮೊದಲ ಹೆಜ್ಜೆ ಎಂದು IFFCO ಹೇಳಿಕೆಯಲ್ಲಿ ಹೇಳಿದೆ. ಸಹಕಾರ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ, ಅಮಿತ್ ಶಾ ಅವರು ವಿವಿಧ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳನ್ನು ಭೇಟಿಯಾಗಿದ್ದರು. "ಮೋದಿ ಜೀ ನೇತೃತ್ವದಲ್ಲಿ, ನಾವು ಸಹಕಾರಿ ಸಂಸ್ಥೆಗಳು ಮತ್ತು ಎಲ್ಲಾ ಸಹಕಾರಿ ಸಂಸ್ಥೆಗಳನ್ನು ಹೆಚ್ಚು ಸಬಲೀಕರಣಗೊಳಿಸಲು ತೀರ್ಮಾನಿಸಿದ್ದೇವೆ." ಎಂದು  ಟ್ವೀಟ್ ಮಾಡಿದ್ದರು.

  ಪ್ರೆಸ್ ಇನ್​ಫರ್ಮೆಷನ್ ಬ್ಯೂರೋ (ಪಿಐಬಿ) ಮೂಲಕ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ದೇಶದಲ್ಲಿ ಸಹಕಾರಿ ವಲಯದಲ್ಲಿ ಹೊಸ ಕ್ರಾಂತಿ ಉಂಟು ಮಾಡಲು ಪ್ರತ್ಯೇಕ ಆಡಳಿತಾತ್ಮಕ, ಕಾನೂನು ಮತ್ತು ನೀತಿ ಚೌಕಟ್ಟನ್ನು ಒದಗಿಸಲಾಗುವುದು ಎಂದು ಹೇಳಲಾಗಿದೆ.

  ಮಲ್ಟಿ ಸ್ಟೇಟ್ ಕೋ-ಆಪರೇಟಿವ್ ಸೊಸೈಟಿಗಳ (ಎಂಎಸ್‌ಸಿಎಸ್) ಅಭಿವೃದ್ಧಿಯನ್ನು ಸಕ್ರಿಯಗೊಳಿಸಲು ಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸುವ ಮೂಲಕ ಸಹಕಾರಿಗಳಿಗೆ ಸುಲಭವಾಗಿ ವ್ಯಾಪಾರ ಮಾಡುವ ಸಮಸ್ಯೆಗಳನ್ನು ಸಹಕಾರಿ ಸಮ್ಮೇಳನವು ಮುಟ್ಟಬಹುದು. ಗ್ರಾಮೀಣ ಆರ್ಥಿಕತೆಯನ್ನು ಸುಧಾರಿಸುವಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರವನ್ನು ಪ್ರಮುಖ ಮಾಡಬಹುದಾದ ಇನ್ನೊಂದು ಕ್ಷೇತ್ರವಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಆಂದೋಲನದ ಬಗ್ಗೆ ಅಮಿತ್ ಶಾ ಅವರು ಮಾತನಾಡುವ ಸಾಧ್ಯತೆ ಇದೆ.


  ಇದನ್ನು ಓದಿ: Siddaramaiah: ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯ ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ; ಸಿಎಂಗೆ ಸಿದ್ದರಾಮಯ್ಯ ಆರ್ಥಿಕ ಸಲಹೆ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: