ನವದೆಹಲಿ (ಅ.17): ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ರಾಜ್ಯಪಾಲರಾದ ಭಗತ್ ಸಿಂಗ್ ಕೋಶ್ಯಾರಿ ನಡುವೆ ಜಾತ್ಯಾತೀತತೆಗೆ ಸಂಬಂಧಿಸಿದಂತೆ ಪತ್ರ ವಾಗ್ವಾದ ನಡೆದಿತ್ತು. ಈ ಕುರಿತು ಮಾತನಾಡಿರುವ ಕೇಂದ್ರ ಗೃಹ ಸಚಿವರು, ಕೋಶ್ಯಾರಿ ಅವರು ಉತ್ತಮ ಪದ ಬಳಕೆ ಮಾಡಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನ್ಯೂಸ್18 ವಾಹಿನಿ ಪ್ರಧಾನ ಸಂಪಾದಕ ರಾಹುಲ್ ಜೋಷಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ತನ್ನ ಹಳೆಯ ಮಿತ್ರಪಕ್ಷವಾದ ಶಿವಸೇನೆಯೊಂದಿಗಿನ ರಾಜಕೀಯ ಸಂಬಂಧ ಸೇರಿದಂತೆ ಹಲವಾರು ವಿಷಯಗಳನ್ನು ಅವರು ಮಾತನಾಡಿದ್ದಾರೆ.
ದೇವಾಸ್ಥಾನಗಳ ತೆರೆಯುವ ಕುರಿತು ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದದ್ದರು. ಈ ವೇಳೆ ರಾಜ್ಯದ ಸಿಎಂ ಆದ ಬಳಿಕ ಅಯೋಧ್ಯ ರಾಮ ಮಂದಿರ, ಪಂಡ್ರಾಪುರದ ವಿಠ್ಠಲ ರುಕ್ಷಿಣಿ ದೇವಾಲಯದ ಭೇಟಿ ಹಾಗೂ ಆಶಾಡಿ ಏಕಾದಶಿಯ ಪೂಜೆಯಲ್ಲಿ ಭಾಗಿಯಾಗಿದ್ದನ್ನು ನೆನಪು ಮಾಡಿದ್ದರು. ಅಲ್ಲದೇ ದೇವಾಲಯವನ್ನು ತೆರೆಯುವಂತೆ ಮನವಿ ಪತ್ರ ಬಂದಿರುವುದಾಗಿ ತಿಳಿಸಿದ್ದರು.
#AmitShahToNews18 - Could have avoided selection of those words: Home Minister @AmitShah on Maharashtra Governor's 'have you turned secular' letter to CM. @vinivdvc with details
Watch the full interview with @Network18Group Editor-in-Chief @18RahulJoshi at 9 PM. pic.twitter.com/WbIGzwItZa
— CNNNews18 (@CNNnews18) October 17, 2020
ಕೋಶ್ಯರಿ ಅವರ ಹೇಳಿಕೆಗಳನ್ನು ಪಕ್ಷ ಹೇಗೆ ನೋಡಿದೆ ಎಂದು ಕೇಳಲಾಯಿತು. ಅಲ್ಲದೇ, ರಾಜ್ಯಪಾಲರು ಬರೆದ ಪತ್ರಗಳನ್ನು ಗೃಹ ಸಚಿವರು ಓದಿದರೇ ಎಂಬ ಪ್ರಶ್ನೆಗೆ ಅಮಿತ್ ಶಾ ಹೌದು ಎಂದು ಉತ್ತರಿಸಿದ್ದಾರೆ.
ಅವರು ಕೆಲವು ನಡೆದ ಘಟನೆಗಳನ್ನು ಉಲ್ಲೇಖ ಮಾಡಿ ಪತ್ರ ಬರೆದಿದ್ದಾರೆ. ಆದರೆ, ರಾಜ್ಯಪಾಲರು ಪತ್ರದಲ್ಲಿ ಕೆಲವು ಪದಗಳ ಬಳಕೆಯನ್ನು ತಪ್ಪಿಸಬಹುದಿತ್ತು ಎಂಬುದು ನನ್ನ ಭಾವನೆ ಎಂದರು.
ಕೊರೋನಾ ವೈರಸ್ ಭಯದಿಂದಾಗಿ ರಾಜ್ಯದ ದೇವಾಲಯಗಳನ್ನು ತೆರೆಯಬಾರದು ಎಂದು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿಗಳ ಭಾಷಣದ ಮೇಲೆ ಕೋಶ್ಯಾರಿ ಪತ್ರ ಬರೆದಿದ್ದರು.
ಅಮಿತ್ ಶಾ ಜೊತೆಗೆ ವಾಹಿನಿಯ ಪ್ರಧಾನ ಸಂಪಾದಕ ರಾಹುಲ್ ಜೋಷಿ ನೇರಾನೇರ ಸಂದರ್ಶನ ನಡೆಸಿದ್ದಾರೆ. ದೇಶದ ಹಲವು ಪ್ರಮುಖ ವಿಷಯಗಳ ಕುರಿತು ಇದೇ ವೇಳೆ ಅಮಿತ್ ಶಾ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ ಈ ಸಂದರ್ಶನ ಇಂದು ರಾತ್ರಿ 9ಕ್ಕೆ ನ್ಯೂಸ್ 18 ಕನ್ನಡದಲ್ಲಿಯೂ ಪ್ರಸಾರವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ