Amit Shah Interview: "CAA ಇಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ" ಅಮಿತ್‌ ಶಾ Exclusive ಮಾತು

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಶಾ ನ್ಯೂಸ್18 ಜೊತೆ ಮಾತನ್ನಾಡಿದ್ದಾರೆ. ಹಾಗಿದ್ರೆ ಸಿಎಎ ಬಗ್ಗೆ ಅಮಿತ್ ಶಾ ಹೇಳಿದ್ದೇನು? ಸಿಎಎ ಜಾರಿ ಯಾವಾಗ? ಈ ಬಗ್ಗೆ Exclusive ಮಾಹಿತಿ ಇಲ್ಲಿದೆ...

ಕೇಂದ್ರ ಗೃಹಸಚಿವ ಅಮಿತ್ ಶಾ

ಕೇಂದ್ರ ಗೃಹಸಚಿವ ಅಮಿತ್ ಶಾ

  • Share this:
ನ್ಯೂಸ್18 (News18) ಇಂಟರ್‌ವ್ಯೂನಲ್ಲಿ (Interview) ಕೇಂದ್ರ ಗೃಹ ಸಚಿವ (Home Minister) ಅಮಿತ್ ಶಾ (Amit Shah) ಹಲವು ವಿಚಾರಗಳ ಬಗ್ಗೆ ಎಕ್ಸ್‌ಕ್ಲೂಸಿವ್ (Exclusive) ಮಾತುಗಳನ್ನಾಡಿದ್ದಾರೆ. ಉತ್ತರ ಪ್ರದೇಶ ಚುನಾವಣೆ (Uttara Pradesh Election),  ಪಂಚರಾಜ್ಯಗಳ ವಿಧಾನಸಭಾ ಚುನಾವಣೆ (5 State Assembly Election), ಕರ್ನಾಟಕದಲ್ಲಿ ಶುರುವಾಗಿರುವ ಹಿಜಾಬ್ ವಿವಾದ (Hijab Controversy), ರಾಜಕೀಯ ಧ್ರುವೀಕರಣ, ಕೊರೋನಾ (Corona) ಬಗ್ಗೆ ಅಮಿತ್ ಶಾ ಮಾತನಾಡಿದ್ದಾರೆ. ಮುಖ್ಯವಾಗಿ ಸಿಎಎ (CAA) ಅಥವಾ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅಮಿತ್ ಶಾ ಖಡಕ್ ಮಾತುಗಳನ್ನು ಆಡಿದ್ದಾರೆ. “ಯಾವುದೇ ಕಾರಣಕ್ಕೂ ಸಿಎಎಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ” ಅಂತ ಅವರು ಸ್ಪಷ್ಟವಾಗಿ ಹೇಳಿದ್ದಾರೆ. “ಯಾವುದೇ ಸಂದರ್ಭದಲ್ಲಿ ನಾವು ಸಿಎಎ ಜಾರಿಗೊಳಿಸುತ್ತೇವೆ. ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ” ಅಂತ ಅಮಿತ್ ಶಾ ಈ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. ಹಾಗಾದರೆ ಸಿಎಎ ಬಗ್ಗೆ ಅಮಿತ್ ಶಾ ಹೇಳಿದ್ದೇನು ಅಂತ ತಿಳಿದುಕೊಳ್ಳಲು ಮುಂದೆ ಓದಿ…

 “ಸಿಎಎ ಹಿಂಪಡೆಯುವ ಪ್ರಶ್ನೆಗಳೇ ಇಲ್ಲ”

ನ್ಯೂಸ್18 ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಹಲವು ವಿಚಾರಗಳ ಬಗ್ಗೆ ಮಾತನ್ನಾಡಿದ್ದಾರೆ. ಮುಖ್ಯವಾಗಿ ಸಿಎಎ ವಿಚಾರದ ಬಗ್ಗೆಯೂ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಯಾವಾಗ ಜಾರಿಗೆ ತರುತ್ತದೆ?” ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಸಿಎಎ ಕಾಯ್ದೆಯನ್ನು ಹಿಂದಕ್ಕೆ ತೆಗೆದುಕೊಳ್ಳುವ ಮಾತೇ ಇಲ್ಲ. ಅಗತ್ಯವಾಗಿ ಅದನ್ನು ಕೇಂದ್ರ ಸರ್ಕಾರ ಜಾರಿಗೆ ತಂದೇ ತರುತ್ತದೆ” ಅಂತ ಸ್ಪಷ್ಟವಾಗಿ ಹೇಳಿದರು.

 “ಕೊರೋನಾ ತಗ್ಗಿದ ಬಳಿಕ ಸಿಎಎ ಜಾರಿ”

“ಸದ್ಯ ದೇಶದಲ್ಲಿ ಕೊರೋನಾ ಹಾವಳಿ ಕಡಿಮೆಯಾಗಿಲ್ಲ. ಹೀಗಾಗಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ ಸಿಎಎ ಜಾರಿಗೆ ತರುವ ಬಗ್ಗೆ ಯೋಚಿಸುತ್ತೇವೆ. ಕೊರೋನಾ ಕಂಟ್ರೋಲ್ ಆದ ಬಳಿಕ ಯಾವುದೇ ಸಂದರ್ಭದಲ್ಲೂ ಸಿಎಎ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಬಹುದು” ಅಂತ ಅಮಿತ್ ಶಾ ಸ್ಪಷ್ಟಪಡಿಸಿದರು.

ಇದನ್ನೂ ಓದಿ: Amit Shah Interview: ಪಂಚರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾ? ಸಂದರ್ಶನದಲ್ಲಿ ಅಮಿತ್​ ಶಾ ಮಾತು

“ಕೊರೋನಾ ನಿಯಂತ್ರಿಸುವುದು ನಮ್ಮ ಮೊದಲ ಆದ್ಯತೆ”

ಕೊರೋನಾ ಸೋಂಕಿನ ನಿಯಂತ್ರಣದ ಬಗ್ಗೆಯೂ ಅಮಿತ್ ಶಾ ಮಾತನಾಡಿದರು. ದೇಶದಲ್ಲಿ ಕೊರೋನಾ ಸೋಂಕು ಇನ್ನೂ ಸಂಪೂರ್ಣವಾಗಿ ಹೋಗಿಲ್ಲ. ಹೀಗಾಗಿ ಈ ಸಮಯದಲ್ಲಿ ಕೊರೋನಾವನ್ನು ಎದುರಿಸುವುದು ಕೇಂದ್ರ ಸರ್ಕಾರದ ಮೊದಲ ಆದ್ಯತೆಯಾಗಿದೆ” ಎಂದಿದ್ದಾರೆ.

“ಕೋವಿಡ್ ಕಂಟ್ರೋಲ್ ಆದ ಬಳಿಕ ಸಿಎಎ ಜಾರಿ”

“ಸಿಎಎ ಇಂದ ಹಿಂದೆ ಸರಿಯುವು ಪ್ರಶ್ನೆಯೇ ಇಲ್ಲ” ಅಂತ ಸಂದರ್ಶನದಲ್ಲಿ ಅಮಿತ್ ಶಾ ಹೇಳಿದ್ದಾರೆ. “ದೇಶಾದ್ಯಂತ ಈಗ ನಿಧಾನಕ್ಕೆ ಕೊರೋನಾ ಹಾವಳಿ ಕಡಿಮೆಯಾಗುತ್ತಿದೆ. ಮುಂದೆ ಇದು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುತ್ತಿದ್ದಂತೆ ಸಿಎಎ ಜಾರಿ ಬಗ್ಗೆ ಯೋಚಿಸುತ್ತೇವೆ” ಅಂತ ಅವರು ಸ್ಪಷ್ಟಪಡಿಸಿದ್ದಾರೆ.

“ಪಂಚರಾಜ್ಯಗಳಲ್ಲಿ ಬಿಜೆಪಿಗೆ ಗೆಲುವು”

ನ್ಯೂಸ್18 ವಿಶೇಷ ಸಂದರ್ಶನದಲ್ಲಿ ಅಮಿತ್ ಶಾ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಬಗ್ಗೆಯೂ ಮಾತನಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Amit Shah Interview: ಯುಪಿ ಚುನಾವಣೆ ಬಿಜೆಪಿಗೆ ಎಷ್ಟು ನಿರ್ಣಾಯಕ? ಅಮಿತ್​ ಶಾ Exclusive ಸಂದರ್ಶನ

ಭರ್ಜರಿ ಬಹುಮತದೊಂದಿಗೆ ಬಿಜೆಪಿಗೆ ಅಧಿಕಾರ

ಉತ್ತರ ಪ್ರದೇಶದಲ್ಲಿ ಜನರು ಬಿಜೆಪಿಗೆ ಮತ್ತೊಮ್ಮೆ ಆಶೀರ್ವಾದ ಮಾಡುತ್ತಾರೆ. 2017ರ ಚುನಾವಣೆಯಲ್ಲಿ ಬಿಜೆಪಿಗೆ ಸುಮಾರು 230 ಸ್ಥಾನಗಳು ಬಂದಿದ್ದವು. ಆದರೆ ಈ ಬಾರಿ ನಾವು 300ಕ್ಕೂ ಹೆಚ್ಚು ಸ್ಥಾನಗಳಿಂದ ಗೆದ್ದು, ಅಧಿಕಾರಕ್ಕೆ ಬರುತ್ತೇವೆ ಅಂತ ಅಮಿತ್ ಶಾ ಹೇಳಿದರು. ಇನ್ನೂ ಹಲವು ವಿಚಾರಗಳ ಬಗ್ಗೆ ಅಮಿತ್ ಶಾ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
Published by:Annappa Achari
First published: