ಚಾಂದನಿ ಚೌಕ್​ ಬಳಿಯ ಕೋಮು-ಸಂಘರ್ಷ ಸಂಬಂಧ ದೆಹಲಿ ಪೊಲೀಸ್ ಕಮಿಷನರ್​ಗೆ ಸಮನ್ಸ್​ ನೀಡಿದ ಗೃಹ ಸಚಿವ ಅಮಿತ್ ಶಾ

ಕಳೆದ ಭಾನುವಾರ ಅದೇ ಪ್ರದೇಶದಲ್ಲಿ 20 ವರ್ಷದಿಂದ ವಾಸವಾಗಿರುವ ವ್ಯಕ್ತಿಯೊಬ್ಬ ಕಟ್ಟಡವೊಂದರ ಮುಂದೆ ತನ್ನ ಸ್ಕೂಟರ್​ ನಿಲ್ಲಿಸುತ್ತಾನೆ. ಆಗ ಅದೇ ಕಟ್ಟಡದಲ್ಲಿ ಉಪಾಹಾರ ಗೃಹ ನಡೆಸುತ್ತಿರುವ ವ್ಯಕ್ತಿ ಪಾರ್ಕಿಂಗ್ ಮಾಡಲು ಆಕ್ಷೇಪ ವ್ಯಕ್ತಪಡಿಸುತ್ತಾನೆ. ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ.

HR Ramesh | news18
Updated:July 3, 2019, 3:35 PM IST
ಚಾಂದನಿ ಚೌಕ್​ ಬಳಿಯ ಕೋಮು-ಸಂಘರ್ಷ ಸಂಬಂಧ ದೆಹಲಿ ಪೊಲೀಸ್ ಕಮಿಷನರ್​ಗೆ ಸಮನ್ಸ್​ ನೀಡಿದ ಗೃಹ ಸಚಿವ ಅಮಿತ್ ಶಾ
ಅಮಿತ್ ಶಾ
HR Ramesh | news18
Updated: July 3, 2019, 3:35 PM IST
ನವದೆಹಲಿ: ದೆಹಲಿಯ ಚಾಂದನಿ ಚೌಕ್​ನಲ್ಲಿ ನಡೆದ ಕೋಮು ಸಂಘರ್ಷ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದೆಹಲಿ ಪೊಲೀಸ್​ ಕಮಿಷನರ್ ಅಮೂಲ್ಯಾ ಪಾಟ್ನಾಯಕ್​ ಬುಧವಾರ ಚರ್ಚೆ ನಡೆಸಿದರು. ಘಟನೆ ಸಂಬಂಧ ವಿವರಣೆ ನೀಡುವಂತೆ ಅಮಿತ್ ಶಾ ಅವರು ಪೊಲೀಸ್​ ಕಮಿಷನರ್​ಗೆ ಸಮನ್ಸ್​ ನೀಡಿದ್ದರು.

ಚಾಂದನಿ ಚೌಕ್​ ಬಳಿಯ ಪಾರ್ಕಿಂಗ್​ ಪ್ರದೇಶದಲ್ಲಿ ಭಾನುವಾರ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟಿತ್ತು.

ಪರಿಸ್ಥಿತಿ ಕುರಿತು ಅವರಿಗೆ ವಿವರಣೆ ನೀಡಿದ್ದೇವೆ. ಹೌಜ್​ ಕ್ವಾಜಿ ಪ್ರದೇಶ ಈಗ ಶಾಂತವಾಗಿದೆ ಎಂದು ಅಮಿತ್ ಶಾ ಭೇಟಿ ಬಳಿಕ ಪೊಲೀಸ್​ ಕಮಿಷನರ್ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ಸಂಬಂಧ ಓರ್ವ ಅಪ್ರಾಪ್ತ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಗಲಭೆ ಸಂಬಂಧ ಅಮಿತ್ ಶಾ ಅವರು ಪೊಲೀಸ್​ ಕಮಿಷನರ್​ ಅವರನ್ನು ತರಾಟೆಗೆ ತೆಗೆದುಕೊಂಡರು ಎಂದು ಎಎನ್​ಐ ವರದಿ ಮಾಡಿದೆ.

ಎರಡು ಸಮುದಾಯಗಳ ನಡುವೆ ಪ್ರಕ್ಷುಬ್ಧ ಪರಿಸ್ಥಿತಿ ಮುಂದುವರೆದಿದೆ. ಎರಡು ಸಮುದಾಯಗಳ ಸ್ಥಳೀಯರನ್ನು ಮಂಗಳವಾರ ಕರೆದು ಶಾಂತಿ ಕಾಪಾಡುವಂತೆ ಮನವಿ ಮಾಡಲಾಗಿದೆ. ಘಟನೆ ವೇಳೆ ನಾಶಮಾಡಲಾಗಿರುವ ಅಂಗಡಿ ಮುಂಗಟ್ಟುಗಳನ್ನು ಶಾಂತಿ ಸಮಿತಿ ಮತ್ತೆ ನಿರ್ಮಿಸಿಕೊಡುವಂತೆ ಸ್ಥಳೀಯರಲ್ಲಿ ಒಬ್ಬರಾದ ಜಮ್​ಶಿದ್​ ಸಿದ್ದಿಖಿ ಆಗ್ರಹಿಸಿದ್ದಾರೆ.

ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡದಿಂದ (ಎಸ್​ಐಟಿ) ತನಿಖೆ ನಡೆಸುವಂತೆ ಮನವಿ ಮಾಡಿ ವಕೀಲರಾದ ಅಲ್ಖಾ ಅಲೋಕ್​ ಅವರು ದೆಹಲಿ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದಾರೆ.

ಇದನ್ನು ಓದಿ: ತಡ ಮಾಡದೆ, ಶೀಘ್ರದಲ್ಲಿ ಕಾಂಗ್ರೆಸ್​ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿ; ರಾಹುಲ್ ಗಾಂಧಿ
Loading...

ಕಳೆದ ಭಾನುವಾರ ಅದೇ ಪ್ರದೇಶದಲ್ಲಿ 20 ವರ್ಷದಿಂದ ವಾಸವಾಗಿರುವ ವ್ಯಕ್ತಿಯೊಬ್ಬ ಕಟ್ಟಡವೊಂದರ ಮುಂದೆ ತನ್ನ ಸ್ಕೂಟರ್​ ನಿಲ್ಲಿಸುತ್ತಾನೆ. ಆಗ ಅದೇ ಕಟ್ಟಡದಲ್ಲಿ ಉಪಾಹಾರ ಗೃಹ ನಡೆಸುತ್ತಿರುವ ವ್ಯಕ್ತಿ ಪಾರ್ಕಿಂಗ್ ಮಾಡಲು ಆಕ್ಷೇಪ ವ್ಯಕ್ತಪಡಿಸುತ್ತಾನೆ. ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಒಬ್ಬ ವ್ಯಕ್ತಿಯನ್ನು ಹಲವು ಮಂದಿ ಸೇರಿ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಘಟನೆ ಸಂಬಂಧ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಸ್ಕೂಟರ್​ ಮಾಲೀಕನ ಹೇಳಿಕೆ ಮೇಲೆ ಒಂದು ಪ್ರಕರಣ, ಕಟ್ಟಡದ ನಿವಾಸಿಯ ಹೇಳಿಕೆ ಆಧಾರದ ಮೇಲೆ ಮತ್ತೊಂದು ಪ್ರಕರಣ ಹಾಗೂ ಮೂರನೇ ಪ್ರಕರಣ ಅನಾಮಿಕ ವ್ಯಕ್ತಿಯೊಬ್ಬ ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡಿದ್ದರ ಸಂಬಂಧ ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.

First published:July 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...