HOME » NEWS » National-international » AMIT SHAH SUMMONED BY BENGAL COURT MAK

Amit Shah: ಮಾನನಷ್ಟ ಮೊಕದ್ದಮೆ: ಸಚಿವ ಅಮಿತ್​ ಶಾಗೆ ಸಮನ್ಸ್​ ಜಾರಿ ಮಾಡಿದ ಪಶ್ಚಿಮ ಬಂಗಾಳದ ನ್ಯಾಯಾಲಯ

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 500 ರ ಅಡಿಯಲ್ಲಿ ಮಾನಹಾನಿ ಆರೋಪಕ್ಕೆ ಉತ್ತರಿಸಲು ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ಅಮಿತ್​ ಶಾ ಅವರ ಹಾಜರಾತಿ ಅಗತ್ಯ ಎಂದು ನ್ಯಾಯಾಧೀಶರು ಒತ್ತಿ ಹೇಳಿದ್ದಾರೆ.

news18-kannada
Updated:February 19, 2021, 7:52 PM IST
Amit Shah: ಮಾನನಷ್ಟ ಮೊಕದ್ದಮೆ: ಸಚಿವ ಅಮಿತ್​ ಶಾಗೆ ಸಮನ್ಸ್​ ಜಾರಿ ಮಾಡಿದ ಪಶ್ಚಿಮ ಬಂಗಾಳದ ನ್ಯಾಯಾಲಯ
ಅಮಿತ್​ ಶಾ.
  • Share this:
ಕೋಲ್ಕತ್ತಾ (ಫೆಬ್ರವರಿ 19); ಕೇಂದ್ರ ಗೃಹ ಸಚಿವ ಅಮಿತ್​ ಶಾ ವಿರುದ್ಧ ತೃಣಮೂಲ ಕಾಂಗ್ರೆಸ್​ ಸಂಸದ ಅಭಿಷೇಕ್​ ಬ್ಯಾನರ್ಜಿ ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಸಚಿವ ಅಮಿತ್​ ಶಾ ಫೆಬ್ರವರಿ. 22 ರಂದು ಬೆಳಗ್ಗೆ 10 ಗಂಟೆಗೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಅಥವಾ ವಕೀಲರ ಮೂಲಕ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸುವಂತೆ ಪಶ್ಚಿಮ ಬಂಗಾಳದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶುಕ್ರವಾರ ಸಮನ್ಸ್ ಜಾರಿಗೊಳಿಸಿದೆ. 

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 500 ರ ಅಡಿಯಲ್ಲಿ ಮಾನಹಾನಿ ಆರೋಪಕ್ಕೆ ಉತ್ತರಿಸಲು ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ಅಮಿತ್​ ಶಾ ಅವರ ಹಾಜರಾತಿ ಅಗತ್ಯ ಎಂದು ನ್ಯಾಯಾಧೀಶರು ಒತ್ತಿ ಹೇಳಿದ್ದಾರೆ.

ಇದನ್ನೂ ಓದಿ: ಕೆಂಪು ಗ್ರಹದಲ್ಲಿ ಮಾರ್ಸ್ ರೋವರ್ ಅನ್ನು ಇಳಿಸಿದ ಭಾರತೀಯ ಮೂಲದ ಮಹಿಳಾ ವಿಜ್ಞಾನಿ ಸ್ವಾತಿ ಮೋಹನ್ ಇವರೇ..!

ಘಟನೆಯ ಬಗ್ಗೆ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಯ ವಕೀಲರಾದ ಸಂಜಯ್‌ ಬಸು ಪತ್ರಿಕಾ ಹೇಳಿಕೆ ನೀಡಿದ್ದು, "ಗೃಹ ಸಚಿವ ಅಮಿತ್‌ ಶಾ 2018 ರ ಆಗಸ್ಟ್‌ 11 ರಂದು ಕೋಲ್ಕತ್ತಾದ ಮಾಯೊ ರಸ್ತೆಯಲ್ಲಿ ನಡೆದ ಬಿಜೆಪಿಯ ಸಮಾವೇಶದಲ್ಲಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದರು. ಇದೇ ಕಾರಣಕ್ಕೆ ಕೇಂದ್ರ ಸಚಿವರ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಲಾಗಿತ್ತು" ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ಎದುರಾಗಲಿದೆ. ಈ ಭಾರಿ ಬಂಗಾಳದಲ್ಲಿ ಕಮಲವನ್ನು ಅರಳಿಸಲೇಬೇಕು ಎಂದು ಪಣ ತೊಟ್ಟಂತೆ ಕೆಲಸ ಮಾಡುತ್ತಿರುವ ಕೇಂದ್ರದ ಬಿಜೆಪಿ ನಾಯಕರು ಈಗಾಗಲೇ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಅಮಿತ್​ ಶಾ ಮೇಲಿನ ಈ ಮಾನಹಾನಿ ಪ್ರಕರಣ ಚುನಾವಣೆಯ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ? ಎಂದು ಕಾದುನೋಡಬೇಕಿದೆ.
Published by: MAshok Kumar
First published: February 19, 2021, 7:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories