ನವದೆಹಲಿ: 2002ರಲ್ಲಿ ಗುಜರಾತ್‌ನಲ್ಲಿ (Gujarat) ನಡೆದಿದ್ದ ಗೋಧ್ರಾ ಗಲಭೆ (Godhra riots) ಪ್ರಕರಣದಲ್ಲಿ (Case) ಸುಪ್ರೀಂ ಕೋರ್ಟ್ (Supreme Court) ನಿನ್ನೆ ಮಹತ್ವದ ತೀರ್ಪು (Judgment) ನೀಡಿತ್ತು. ಈ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಂಸದ (Congress Ex MP) ಎಹ್ಸಾನ್ ಜಾಫ್ರಿ ಅವರ ವಿಧವಾ ಪತ್ನಿ ಜಾಕಿಯಾ ಜಾಫ್ರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಗೆ (PM Narendra Modi) ಕ್ಲೀನ್ ಚಿಟ್ (Clean Chit) ನೀಡಿತ್ತು. ಇದೀಗ ಇದೇ ಪ್ರಕರಣದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಆಪ್ತರೂ ಆಗಿರುವ ಕೇಂದ್ರ ಗೃಹಸಚಿವ (Central Home Minister) ಅಮಿತ್ ಶಾ (Amit Shah) ಎಎನ್‌ಐ (ANI) ಸಂದರ್ಶನದಲ್ಲಿ (Interview) ಮನಬಿಚ್ಚಿ ಮಾತನಾಡಿದ್ದಾರೆ. “ಒಂದಲ್ಲ, ಎರಡಲ್ಲ ಬರೋಬ್ಬರಿ 19 ವರ್ಷಗಳ ಕಾಲ ನರೇಂದ್ರ ಮೋದಿ ಅವರು ಅಂತಹ ಗಂಭೀರ ಆರೋಪವನ್ನು ಮೌನವಾಗಿ ಸಹಿಸಿಕೊಂಡಿದ್ದರು” ಅಂತ ಪ್ರತಿಕ್ರಿಯೆ ನೀಡಿದ್ದಾರೆ.
“19 ವರ್ಷ ಮೋದಿ ಸುಳ್ಳು ಆರೋಪ ಸಹಿಸಿಕೊಂಡಿದ್ದರು”
ಎಎನ್ಐ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅಮಿತ್ ಶಾ, 2002ರ ಗುಜರಾತ್ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ಸುಳ್ಳು ಆರೋಪಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು 19 ವರ್ಷಗಳ ಕಾಲ ಮೌನವಾಗಿ ಸಹಿಸಿಕೊಂಡಿದ್ದರು" ಅಂತ ಅಮಿತ್ ಶಾ ಹೇಳಿದ್ದಾರೆ.
“ಮೋದಿ ವಿರುದ್ಧ ನಿರಂತರ ಹುನ್ನಾರ”
ಜಾಕಿಯಾ ಜಾಫ್ರಿ ಅವರಿಗೆ ಸಹಾಯ ಮಾಡುತ್ತಿದ್ದ ಎನ್‌ಜಿಒಗಳು ಪ್ರಕರಣವನ್ನು ಮತ್ತಷ್ಟು ಮುಂದುವರೆಸಲು ಕಾರಣ ಹುಡುಕುತ್ತಿದ್ದವು. ಇದರಲ್ಲಿ ಎನ್‌ಜಿಒಗಳು ಮತ್ತು ರಾಜಕೀಯ ಪಕ್ಷಗಳು ಹಣ ನೀಡುತ್ತಿದ್ದವು. ಜೊತೆಗೆ ಈ ಎನ್‌ಜಿಒಗಳನ್ನು ಬೆಂಬಲಿಸುವ ಕೆಲ ಮಾಧ್ಯಮ ಗುಂಪುಗಳು ರಾಜಕೀಯ ಲಾಭವನ್ನು ಬಯಸುತ್ತಿದ್ದವು ಎಂದು ಅವರು ಆರೋಪಿಸಿದ್ರು.
ಇದನ್ನೂ ಓದಿ: Gujarat Riots: ಗುಜರಾತ್ ಗಲಭೆ, ಮೋದಿಗೆ ಸುಪ್ರೀಂ ಕ್ಲೀನ್ ಚಿಟ್! ಜಾಫ್ರಿ ಅರ್ಜಿ ವಜಾ
“ಇದು ರಾಜಕೀಯ ಪಕ್ಷಗಳ ಷಡ್ಯಂತ್ರ”
ಪ್ರಧಾನಿ ಮೋದಿ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದಿರುವ ಅಮಿತ್ ಶಾ, ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ವಿರುದ್ಧ ಆರೋಪಗಳನ್ನು ಹರಡಲು ಮೂವರು ವಿರೋಧ ಪಕ್ಷಗಳು, ಸೈದ್ಧಾಂತಿಕ ಪ್ರೇರಿತ ಅಂಶಗಳು ಮತ್ತು ಕೆಲವು ಎನ್‌ಜಿಒಗಳು ಕಾರಣವಾಗಿವೆ ಎಂದು ಹೇಳಿದರು.
ಕಾಂಗ್ರೆಸ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಅಮಿತ್ ಶಾ
ಮೋದಿ ಜಿ 19 ವರ್ಷಗಳ ಕಾಲ ಮೌನವಾಗಿ ಸುಳ್ಳು ಆರೋಪಗಳನ್ನು ಸಹಿಸಿಕೊಂಡರು. ಆದರೆ ಆ ವೇಳೆ ಯಾರೂ ಧರಣಿ ಮಾಡಲಿಲ್ಲ ಅಂತ ರಾಹುಲ್ ಗಾಂಧಿ ವಿಚಾರಣೆ ವಿರುದ್ಧ ಕಾಂಗ್ರೆಸ್ ಪ್ರತಿಭಟಿಸುತ್ತಿರುವುದಕ್ಕೆ ಪರೋಕ್ಷವಾಗಿ ಟಾಂಗ್ ಕೊಟ್ಟರು. ಮೋದಿ ಅವರು ಎಸ್‌ಐಟಿ ಮುಂದೆ ಹಾಜರಾಗಲು ಯಾವುದೇ ನಾಟಕ ಮಾಡಲಿಲ್ಲ. ಯಾಕೆಂದರೆ ಮೋದಿಯವರಿಗೆ ಕಾನೂನಿನ ಮೇಲೆ ಸಂಪೂರ್ಣ ನಂಬಿಕೆ ಇತ್ತು. ಜೊತೆಗೆ ಮೋದಿ ಅವರು ಸಂವಿಧಾನದ ಆಶಯಗಳಿಗೆ ಬದ್ಧರಾಗಿದ್ದಾರೆ ಅಂತ ಅಮಿತ್ ಶಾ ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ಅಮಿತ್ ಶಾ ಆಕ್ರೋಶ
“ಕಾಂಗ್ರೆಸ್ ಮತ್ತು ಬಿಜೆಪಿ ಅಡಿಯಲ್ಲಿ ಯಾವುದೇ ಐದು ವರ್ಷಗಳ ಆಡಳಿತವನ್ನು ತೆಗೆದುಕೊಳ್ಳಿ ಮತ್ತು ಎಷ್ಟು ಗಂಟೆ ಕರ್ಫ್ಯೂ ಇತ್ತು, ಎಷ್ಟು ಜನರು ಸತ್ತರು, ಎಷ್ಟು ಗಲಭೆಗಳು ನಡೆದವು ಮತ್ತು ಗಲಭೆಗಳ ಅವಧಿ ಎಷ್ಟು ಅಂತ ತಿಳಿದರೆ ಯಾವ ಸರ್ಕಾರ ಹೇಗಿತ್ತು, ಯಾವ ಆಡಳಿತ ಹೇಗಿತ್ತು ಅಂತ ನಿಮಗೇ ತಿಳಿಯುತ್ತದೆ ಅಂತ ಅಮಿತ್ ಶಾ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ