ಕೃಷಿ ಮಸೂದೆ: ರಾಜಕೀಯ ಲಾಭಾಕ್ಕಾಗಿ ರೈತರನ್ನು ಪ್ರಚೋದಿಸಲಾಗುತ್ತಿದೆ; ಅಮಿತ್​ ಶಾ

ವಿರೋಧ ಪಕ್ಷಗಳು ರೈತರ ದಿಕ್ಕು ತಪ್ಪಿಸುತ್ತಿವೆ. ಕೃಷಿ ಮಸೂದೆಯಿಂದ ರೈತರಿಗೆ ಹೆಚ್ಚಿನ ಲಾಭಾ

ನ್ಯೂಸ್​ 18 ವಾಹಿನಿ ಸಂದರ್ಶನದಲ್ಲಿ ಅಮಿತ್​ ಶಾ

ನ್ಯೂಸ್​ 18 ವಾಹಿನಿ ಸಂದರ್ಶನದಲ್ಲಿ ಅಮಿತ್​ ಶಾ

 • Share this:
  ನವದೆಹಲಿ (ಅ.17): ಕೇಂದ್ರದ ಕೃಷಿ ಮಸೂದೆ ಬಗ್ಗೆ ಪ್ರತಿಪಕ್ಷಗಳು ರೈತರಿಗೆ ತಪ್ಪಿ ಮಾಹಿತಿ ನೀಡುತ್ತಿದ್ದು, ರಾಜಕೀಯ ಲಾಭಾಕ್ಕಾಗಿ ಅವರನ್ನು ಪ್ರಚೋದಿಸುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ತಿಳಿಸಿದ್ದಾರೆ. ನ್ಯೂಸ್​ 18 ಪ್ರಧಾನ ಸಂಪಾದಕ ರಾಹುಲ್​ ಜೋಷಿ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳು ರೈತರ ದಿಕ್ಕು ತಪ್ಪಿಸುತ್ತಿವೆ. ಕೃಷಿ ಮಸೂದೆಯಿಂದ ರೈತರಿಗೆ ಹೆಚ್ಚಿನ ಲಾಭಾ. ಅವರು ಮಂಡಿ ಹೊರತಾಗಿ ಕೂಡ ವ್ಯಾಪಾರ ಮಾಡಬಹುದು. ಪಂಜಾಬ್​ ಮತ್ತು ಹರಿಯಾಣದಲ್ಲಿ ಹಿಂಗಾರು ಖರೀದಿ ಆರಂಭವಾಗಿದೆ, ಕನಿಷ್ಠ ಬೆಂಬಲ ಬೆಲೆ ಅಷ್ಟೇ ಇದೆ, ಯಾವುದೇ ಮಸೂದೆಯೂ ಕನಿಷ್ಠ ಬೆಂಬಲ ಬೆಲೆಯನ್ನು ಕಿತ್ತುಕೊಳ್ಳುವುದಿಲ್ಲ ಎಂದಿಲ್ಲ. ಇದನ್ನು ರಾಜಕೀಯ ಪಕ್ಷಗಳು ಲಾಭಾಕ್ಕಾಗಿ ಬಳಸುತ್ತಿದೆ.

  ಯಾವುದೇ ಮಂಡಿಗಳನ್ನು ನಾವು ಮುಚ್ಚುವುದಿಲ್ಲ. ಸ್ವಾಮಿನಾಥನ್​ ವರದಿಯಂತೆ ಶೇ50 ರಷ್ಟು ಲಾಭಾ ನೀಡುವ ಮಾತುಕತೆಗೆ ಬಿಜೆಪಿ ಸರ್ಕಾರ ಬದ್ದವಾಗಿದೆ. ರೈತರು ಯಾಕೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಗುತ್ತಿಗೆ ಕೃಷಿ ಗುತ್ತಿಗೆ ಕಂಪನಿಗಳೊಂದಿಗೆ ಮಾಡಿಕೊಂಡ ಒಪ್ಪಂದವಾಗಿದೆ. ಅದು ರೈತರೊಂದಿಗೆ ಅಲ್ಲ. ಅವರು ಯಾವುದೇ ಸಮಯದಲ್ಲಿ ಈ ಗುತ್ತಿಗೆಯಿಂದ ಹೊರಹೋಗಬಹುದು.

  ಬಿಗಿ ನಿಯಂತ್ರಿಸಲ್ಪಟ್ಟ ಕೃಷಿ ಕ್ಷೇತ್ರವನ್ನು ಮುಕ್ತ ಮಾರುಕಟ್ಟೆ ಶಕ್ತಿಗಳಿಗೆ ಅವಕಾಶ ನೀಡಿದ ಕೇಂದ್ರದ ಮೂರು ಕೃಷಿ ಮಸೂದೆಗಳಿಗೆ ವಿರೋಧಿಸಿ ಕಳೆದ ತಿಂಗಳು ರೈತರು ಪ್ರತಿಭಟನೆ ನಡೆಸಿದರು.

  ಸೆಪ್ಟೆಂಬರ್​ನಲ್ಲಿ ಸಂಸತ್​ ಅಂಗೀಕರಿಸಿದ ಈ ಕೃಷಿ ಮಸೂದೆಗಳು, ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಖಾಸಗಿ ಖರೀದಿದಾರರಿಗೆ ಮಾರಾಟ ಮಾಡಲು ಸಹಕಾರಿಯಾಗಿದೆ .ಹಾಗೂ  ಖಾಸಗಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸುಲಭವಾಗಿಸುತ್ತದೆ. ಜೊತೆಗೆ ಖಾಸಗಿ ವಲದಯದ ಹೂಡಿಕೆಗಳನ್ನು ಉತ್ತೇಜಿಸುವ ಗುರಿ ಸರ್ಕಾರ ಹೊಂದಿದೆ.

  ಇದನ್ನು ಓದಿ: ಹತ್ರಾಸ್​ ಪ್ರಕರಣದಲ್ಲಿ​​ ಎಸ್​ಐಟಿ ರಚಿಸಿದ ಸಿಎಂ ಯೋಗಿ ಆದಿತ್ಯನಾಥ್ ಕ್ರಮ ಸರಿ; ಅಮಿತ್​ ಶಾ

  ಪ್ರಧಾನ ಮಂತ್ರಿಯವರ ಈ ಕೃಷಿ ಸುಧಾರಣಾ ನಿಯಮದ ಪ್ರಕಾರ, ವ್ಯಾಪಾರಿಗಳು ಆಹಾರವನ್ನು ಸಂಗ್ರಹಿಸಿಡುವ ಅವಕಾಶ ನೀಡುತ್ತದೆ. ಲಾಭಾಗಳಿಸುವ ಉದ್ದೇಶದಿಂದ ಆಹಾರ ಪದಾರ್ಥಗಳನ್ನು ಸಂಗ್ರಹಿಸುವುದು ಕ್ರಿಮಿನಲ್​ ಅಪರಾಧವಾಗಿದೆ.

  ಎಪಿಎಂಸಿ 1964 ಕಾಯ್ದೆ ಪ್ರಕಾರ ರೈತರು ತಮ್ಮ ಉತ್ಪನ್ನಗಳನ್ನು ಸರ್ಕಾರಿ ನಿಯಂತ್ರಿತ ಮಾರುಕಟ್ಟೆಗಳಲ್ಲಿ ಅಥವಾ ಮಂಡಿಗಳಲ್ಲಿ ಮಾರಾಟ ಮಾಡುವುದು ಕಡ್ಡಾಯವಾಗಿತ್ತು. ಇಲ್ಲಿ ಮಧ್ಯವರ್ತಿಗಳು ಸರ್ಕಾರಿ ಕಂಪನಿ ಅಥವಾ ಖಾಸಗಿ ಕಂಪನಿಗೆ ಮಾರಾಟ ಮಾಡಲು ಸಹಾಯ ಮಾಡುತ್ತಿದ್ದರು. ಎಪಿಎಂಸಿ ಮಂಡಿಗಳ ಈ ಏಕಸ್ವಾಮ್ಯ ಮುಗಿಯಲಿದೆ. ಆದರೆ, ಮುಚ್ಚಲಾಗುವುದಿಲ್ಲ. ಕನಿಷ್ಠ ಬೆಂಬಲ ಬೆಲೆ ಕೂಡ ರದ್ದು ಮಾಡುವುದಿಲ್ಲ.
  Published by:Seema R
  First published: